Advertisements

ಮಹಾಭಾರತಕ್ಕೆ ಸಂಬಂಧಪಟ್ಟ ಊರುಗಳು ಈಗ ಎಲ್ಲೆಲ್ಲಿವೆ ಗೊತ್ತಾ?

Adyathma

ಮಹಾಭಾರತದಲ್ಲಿ ನಾವು ಕೇಳಿರುವ ಹಲವಾರು ನಗರಗಳು ಎಲ್ಲೆಲ್ಲಿ ಅಬ್ಬಿದೆ ಎಂದರೆ ನಿಮಗೆ ಆಶ್ಚರ್ಯವಾಗುತ್ತದೆ. ಹೌದು ಪಾಕಿಸ್ತಾನದಿಂದ ಹಿಡಿದು, ಪಂಜಾಬ್ ವರೆಗೆ ಹಾಗೂ ಉತ್ತರಪ್ರದೇಶದಿಂದ ಅಸ್ಸಾಂವರೆಗೂ ಅಬ್ಬಿದೆ.

Advertisements

ಮಹಾಭಾರತದಲ್ಲಿ ಹಲವಾರು ನಗರಗಳ ಹೆಸರುಗಳು ಕೇಳಿ ಬರುತ್ತವೆ. ಕುರುಕ್ಷೇತ್ರ, ಗಾಂಧಾರ, ಮತ್ಸ್ಯ, ತಕ್ಷಶಿಲಾ, ಮಾದ್ರಾ, ಹಸ್ತಿನಾಪುರಾ, ಈ ಹೆಸರುಗಳನ್ನು ನೀವು ಕೇಳಿರುತ್ತೀರಾ ಆದರೆ ನಿಮಗೆ ಇವೆಲ್ಲಾ ನಿಜವಾಗಿಯೂ ಇರುವ ನಗರಗಳ ಹೆಸರೇ ಅಥವಾ ಕಾಲ್ಪನಿಕ ಮಾತ್ರವೇ ಎಂದು ನೀವು ಯೋಚಿಸಿರಬಹುದು‌‌. ಆದರೆ, ಈ ಎಲ್ಲಾ ನಗರಗಳೂ ಉತ್ತರ ಭಾರತದಿಂದ ಹಿಡಿದು ಪಾಕಿಸ್ತಾನದವರೆಗೆ ಹಬ್ಬಿ ಹರಡಿದೆ.

ತಕ್ಷಶಿಲಾ : ತಕ್ಷಶಿಲೆಯ ಹೆಸರು ಗಾಂಧಾರ ದೇಶದ ರಾಜಧಾನಿಯಾಗಿ ಮಹಾಭಾರತದಲ್ಲಿ ಕೇಳಿಬರುತ್ತದೆ. ಇಂದು ಪಾಕಿಸ್ತಾನದಲ್ಲಿರುವ‌ ರಾವಲ್ಪಿಂಡಿಯೇ ತಕ್ಷಶಿಲೆ‌. ಮಹಾಭಾರತ ಯುದ್ಧದ ನಂತರ ಪಾಂಡವರೆಲ್ಲರೂ ಹಿಮಾಲಯಕ್ಕೆ ಹೊರಟು ಹೋಗುತ್ತಾರೆ‌‌. ಈ ಸಂದರ್ಭದಲ್ಲಿ ಪರೀಕ್ಷಿತನನ್ನು ರಾಜನನ್ನಾಗಿ ಮಾಡುತ್ತಾರೆ. ಆದರೆ ಪರೀಕ್ಷಿತನಿಗೆ ಹಾವು ಕಚ್ಚಿದ ಕಾರಣ ಮರಣ ಹೊಂದುತ್ತಾನೆ‌. ಆಗ ಪರೀಕ್ಷೀತನ ಪುತ್ರನಾದ ಜನಮೇಜಯ ನಾಗಯಜ್ಞವನ್ನು ಮಾಡಿ, ತಕ್ಷಶಿಲೆಯಲ್ಲಿರುವ ಒಂದು ಹಾವುಗಳನ್ನು ಬಿಡದೇ ನಿರ್ನಾಮ ಮಾಡುತ್ತಾನೆ.

ಗಾಂಧಾರ : ಕುರುವಂಶದ ದೃತರಾಷ್ಟ್ರನ ಪತ್ನಿ ಗಾಂಧಾರಿಯ ತವರೂರಾಗಿದ್ದ ಗಾಂಧಾರ ಇದು ರಾಜನಾದ ಸುಬಲನ ಆಡಳಿತ ಕ್ಷೇತ್ರವಾಗಿತ್ತು. ಸುಬಲ ಮಹಾಭಾರತ ಯುದ್ಧವನ್ನು ಸಾಧಿಸಿದ ಶಕುನಿಯ ತಂದೆಯಾಗಿದ್ದರೂ. ತಾಯಿಯ ಕಡೆಯಿಂದ ದುರ್ಯೋಧನನಿಗೆ ಶಕುನಿ ಮಾವನಾಗಬೇಕು. ಇಂದು ಗಾಂಧಾರ ದೇಶ ಪಾಕಿಸ್ತಾನದ ರಾವಲ್ಪಿಂಡಿಯ ಸಿಂಧ್ ಪ್ರದೇಶದಲ್ಲಿ ಕಾಣಬಹುದು.

ಕುರುಕ್ಷೇತ್ರ : ಕುರುಕ್ಷೇತ್ರ ಎಂಬುದು ಮಹಾಭಾರತದಲ್ಲಿ ಯುದ್ದದ ಭೂಮಿಯಾಗಿತ್ತು. ಹೀಗಾಗಿ ಈ ಧರ್ಮಯುದ್ಧಕ್ಕೆ ಕುರುಕ್ಷೇತ್ರ ಯುದ್ದ ಎಂದೇ ಹೆಸರನ್ನು ಇಡಲಾಗಿದೆ. ಈ ಕುರುಕ್ಷೇತ್ರ ಸ್ಥಳ ಈಗ ಹರಿಯಾಣದ ಅಂಬಾಲದಿಂದ 40 ಕಿಲೋಮೀಟರ್ ದೂರದಲ್ಲಿ ಕಾಣಬಹುದು. ಭಗವಾನ್ ಶ್ರೀ ಕೃಷ್ಣ ಭಗವದ್ಗೀತೆಯ ಬೋಧನೆ ಮಾಡಿದ್ದು ಇದೇ ಸ್ಥಳದಲ್ಲಿ. ಇಂದು ಇಲ್ಲಿರುವ ಬ್ರಹ್ಮ ಸರೋವರ ಬಹಳ ಜನಪ್ರಿಯವಾಗಿದೆ‌. ಇನ್ನೂ ಸೂರ್ಯ ಗ್ರಹಣದ ಸಮಯದಲ್ಲಿ ಯಾತ್ರಾರ್ಥಿಗಳು ಇಲ್ಲಿಗೆ ಆಗಮಿಸಿ ಕೆರೆಯಲ್ಲಿ ಮುಳುಗಿ ಎಳುತ್ತಾರೆ. ಮಹಾಭಾರತ ಯುದ್ದಕ್ಕೂ ಮುನ್ನ ಕೃಷ್ಣ ಹಾಗೂ ಯಾದವರು ಬಂದು ಇದೇ ಬ್ರಹ್ಮಕುಂಡದಲ್ಲಿ ಮುಳುಗೆದ್ದಿದ್ದರು ಎನ್ನಲಾಗಿದೆ‌.

ಹಸ್ತಿನಾಪುರ : ಮಹಾಭಾರತ ಕಾಲದ ಹಸ್ತಿನಾಪುರ ಇಂದು ಮೀರತ್ ನಲ್ಲಿ ನೋಡಬಹುದು. ಬೀಷ್ಮ ವಿವಾಹ ಆಗುವುದಿಲ್ಲವೆಂದು ಪ್ರತಿಜ್ಞೆ ಮಾಡಿದ್ದು ಇಲ್ಲಿಯೇ. ಕೌರವರು ಹಾಗೂ ಪಾಂಡವರ ರಾಜದಾನಿ ಇದೇ ಹಾಗಿತ್ತು. ದ್ಯೂತದಲ್ಲಿ ಪಾಂಡವರು ಸೋತದ್ದು ಕೂಡ ಇಲ್ಲಿಯೇ.

ಮಾದ್ರಾ : ಜಮ್ಮುಕಾಶ್ಮೀರ ಒಂದು ಬದಿಯ ಹಿಮಾಚಲ ಪ್ರದೇಶದ ವೇದಗಳ ಸಮಯದಲ್ಲಿ ಮಾದ್ರಾ ದೇಶ ಪಖ್ಯಾತವಾಗಿರುತ್ತದೆ. ಮಾದ್ರಾ ಹಿಮಾಲಯದ ಒಂದು ಭಾಗವಾಗಿದೆ. ಇದನ್ನು ಉತ್ತರಕುರು ಎಂದು ಕರೆಯಲಾಗುತ್ತದೆ. ಮಹಾಭಾರತ ಸಮಯದಲ್ಲಿ ಮಾದ್ರಾ ಶಲ್ಯನ ರಾಜ್ಯವಾಗಿತ್ತು. ಶಲ್ಯನ ಸಹೋದರಿಯಾದ ಮಾದ್ರಿಯನ್ನು ಪಾಂಡುವಿಗೆ ವಿವಾಹ ಮಾಡಿಕೊಡಲಾಗುತ್ತದೆ. ಈ ಮಾದ್ರಿಯ ಮಕ್ಕಳೇ ನಕುಲ ಸಹದೇವರು.