ನಮಸ್ತೇ ಸ್ನೇಹಿತರೇ, ಲಾಕ್ ಡೌನ್ ವೇಳೆ ಎಲ್ಲಾ ಧಾರಾವಾಹಿಗಳು ಹಾಗೂ ಸಿನಿಮಾಗಳ ಚಿತ್ರೀಕರಣ ನಿಂತುಹೋಗಿತ್ತು. ಇದೇ ವೇಳೆ ಹಿಂದಿಯಿಂದ ಕನ್ನಡಕ್ಕೆ ಧಾರಾವಾಹಿಗಳನ್ನ ಡಬ್ ಮಾಡಲಾಯಿತು. ಅದರಲ್ಲಿಯೂ ಪೌರಾಣಿಕ ಧಾರಾವಾಹಿಯಾದ ಮಹಾಭಾರತವನ್ನ ಕನ್ನಡಕ್ಕೆ ಡಬ್ ಮಾಡಿದ್ದೇ ಮಾಡಿದ್ದು ಕನ್ನಡ ಕಿರುತೆರೆಯಲ್ಲಿ ದೊಡ್ಡ ಸಂಚಲವನ್ನೇ ಕ್ರಿಯೇಟ್ ಮಾಡಿತು. ಎಷ್ಟರ ಮಟ್ಟಿಗೆ ಎಂದರೆ ಡಬ್ಬಿಂಗ್ ಧಾರಾವಾಹಿಯಾದರೂ ಟಿಆರ್ಪಿ ಯಲ್ಲಿ ಅತ್ತ್ಯತ್ತಮ ರೇಟಿಂಗ್ ನ್ನ ಪಡೆದುಕೊಂಡಿತ್ತು.

ಇನ್ನು ಇಂತಹ ಮಹಾನ್ ದೃಶ್ಯಕಾವ್ಯವನ್ನ ಹಿಂದಿಯಿಂದ ತಂದ ಸುವರ್ಣ ವಾಹಿನಿಗೆ ದಿನೇ ದಿನೇ ವೀಕ್ಷಕರ ಸಂಖ್ಯೆ ಹೆಚ್ಚಾಯಿತು. ಅತ್ಯುದ್ಭುತವಾಗಿ ತಯಾರಾಗಿದ್ದ ಮಹಾಭಾರತ ಧಾರಾವಾಹಿಗೆ ಅಷ್ಟೇ ಅದ್ಭುತವಾಗಿ ಕನ್ನಡದಲ್ಲಿ ಅನುವಾದ ಮಾಡಲಾಯಿತು. ಹೀಗಾಗಿ ವೀಕ್ಷಕರು ಮಹಾಭಾರತ ಧಾರಾವಾಹಿಗೆ ಫಿದಾ ಆಗಿಬಿಟ್ಟರು. ಒಂದೂವರೆ ಗಂಟೆ ಪ್ರಸಾರ ಮಾಡುತ್ತಿದ್ದ ಮಹಾಭಾರತ ಧಾರಾವಾಹಿಯ ಪ್ರಸಾರದ ಸಮಯವನ್ನ ಒಂದು ಗಂಟೆಗೆ, ಬಳಿಕ ಕೇವಲ ಅರ್ಧ ಗಂಟೆಗೆ ವಾಹಿನಿಯವರು ಪ್ರಸಾರ ಮಾಡಲು ಶುರುಮಾಡಿದಾಗ ವೀಕ್ಷಕರು ದಯವಿಟ್ಟು ಒಂದು ಗಂಟೆ ಪ್ರಸಾರ ಮಾಡಿ ಎಂದು ಕೇಳಿಕೊಂಡಿದ್ದರು.

ಇಷ್ಟೆಲ್ಲಾ ಸಂಚಲನ ಕ್ರಿಯೇಟ್ ಮಾಡಿದ್ದ ಮಹಾಭಾರತ ಧಾರಾವಾಹಿಯಿಂದ ಪ್ರೇರೇಪಣೆಗೊಂಡ ಕನ್ನಡದ ವಾಹಿನಿಗಳು ಮತ್ತಷ್ಟು ಪೌರಾಣಿಕ ಧಾರಾವಾಹಿಗಳನ್ನ ಕನ್ನಡಕ್ಕೆ ಡಬ್ ಮಾಡಿದ್ರು. ಇದೇ ಸುವರ್ಣ ವಾಹಿನಿಯವರು ರಾಧಾ ಕೃಷ್ಣ, ಸೀತೆಯ ರಾಮ ಹಾಗೂ ಜೀ ಕನ್ನಡದವರಿಂದ ಪರಮಾವತಾರಿ ಕೃಷ್ಣ, ರಾಮಭಕ್ತ ಹನುಮಂತ, ಉದಯ ಟಿವಿಯವರು ಜೈ ಭಜರಂಗಿ, ಗಣೇಶ ಸೇರಿದಂತೆ ಅನೇಕ ಹಿಂದಿ ಧಾರಾವಾಹಿಗಳು ಕನ್ನಡಕ್ಕೆ ಡಬ್ ಆದವು. ಇನ್ನು ಮಹಾಭಾರತ ಧಾರಾವಾಹಿಯಂತೂ ನಿರೀಕ್ಷೆಗೆ ಮೀರಿದ ಮಟ್ಟಕ್ಕೆ ಸಂಚಲ ಮೂಡಿಸಿ ಮುಕ್ತಾಯಗೊಂಡಿತು.

ಆದರೆ ಇನ್ನು ಮಹಾಭಾರತದ ಗುಂಗಿನಲ್ಲೇ ಇರುವ ವೀಕ್ಷಕರು ಮತ್ತೆ ಮಹಾಭಾರತವನ್ನ ಮರುಪ್ರಸಾರ ಮಾಡಿ ಎಂದು ವಾಹಿನಿಯವರ ಬಳಿ ಕೇಳಿಕೊಂಡಿದ್ದರು. ಕಡೆಗೂ ಪ್ರೇಕ್ಷಕರ ಒತ್ತಾಯಕ್ಕೆ ಮಣಿದಿರುವ ವಾಹಿನಿಯವರು ಮಹಾಭಾರತವನ್ನ ಮತ್ತೆ ಮರು ಪ್ರಸಾರ ಮಾಡುತ್ತಿದ್ದಾರೆ. ಹೌದು, ಈಗಗಾಲೇ ಎರಡು ದಿನಗಳಿಂದ ಮಹಾಭಾರತ ಧಾರಾವಾಹಿಯನ್ನ ಸುವರ್ಣ ವಾಹಿನಿಯವರು ಮಧ್ಯಾಹ್ನ 1.30 ಕ್ಕೆ ಮರು ಪ್ರಸಾರ ಮಾಡುತ್ತಿದ್ದಾರೆ. ಮತ್ತೆ ಮತ್ತೆ ಮಹಾಭಾರತವನ್ನ ನೋಡಲಿಚ್ಚಿಸುವವರು ಹಾಗೂ ಸಂಚಿಕೆಗಳನ್ನ ಮಿಸ್ ಮಾಡಿಕೊಂಡವರು ಈಗ ಮತ್ತೆ ನೋಡಬಹುದಾಗಿದೆ.