Advertisements

ಮಹಾಭಾರತ ಯು’ದ್ಧದಲ್ಲಿ ಭಾಗವಹಿಸಿದ್ದ ಲಕ್ಷಾಂತರ ಸೈನಿಕರಿಗೆ ಪ್ರತೀ ದಿನ ಊಟದ ವ್ಯವಸ್ಥೆ ಹೇಗೆ ನಡೆಯುತಿತ್ತು ಗೊತ್ತಾ ? ಇದರ ಹಿಂದೆ ಇದೆ ಆ ರಹಸ್ಯ !

Adyathma

ನಮಸ್ತೇ ಸ್ನೇಹಿತರೇ, ಮಹಾಭಾರತ ಎಂದರೆ ಒಂದು ರೀತಿ ರೋಮಾಂಚನ. ಇನ್ನು ಹದಿನೆಂಟು ದಿನಗಳ ಕುರುಕ್ಷೇತ್ರ ಮಹಾಸಂ’ಗ್ರಾಮ ಎಂದರೆ ಅದನ್ನ ನಾವು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಧರ್ಮ ಅಧರ್ಮಗಳ ಮಧ್ಯೆ ನಡೆದ ಈ ಯು’ದ್ದದಲ್ಲಿ ಧರ್ಮಾತ್ಮರಾದ ಪಾಂಡವರ ಕಡೆ ೭ ಅಕ್ಷೋಹಿಣಿ ಸೈನ್ಯ ಹಾಗೂ ಕೌರವರ ಕಡೆ ೧೧ ಅಕ್ಷೋಹಿಣಿ ಸೈನ್ಯ ಕುರುಕ್ಷೇತ್ರದ ಯು’ದ್ಧದಲ್ಲಿ ಭಾಗಿಯಾಗಿತ್ತು. ಆದರೆ ಇಷ್ಟೆಲ್ಲಾ ಸಹಸ್ರಾರು ಸೈನಿಕರಿಗೆ ಪ್ರತೀ ದಿನದ ಊಟದ ವ್ಯವಸ್ಥೆಗಳೆಲ್ಲಾ ಹೇಗೆ ನಡೆಯುತ್ತಿದ್ದವು ಎಂಬುದೇ ಕುತೂಹಲಕಾರಿಯಾದ ವಿಷಯವಾಗಿದೆ. ಹೌದು, ಆಗಿನ ಪ್ರಾಂತ್ಯದ ರಾಜರುಗಳೆಲ್ಲಾ ತಮಗೆ ಇಷ್ಟವಾದವರ ಕಡೆ ಸೇರಿಕೊಳ್ಳುವುದರ ಮೂಲಕ ಈ ಮಹಾ ಕದನದಲ್ಲಿ ಭಾಗಿಯಾಗಿದ್ದರು.

ಆದರೆ ಮಾಹಿತಿಗಳ ಪ್ರಕಾರ ಆಗಿನ ಉಡುಪಿಯ ನರೇಶನೆಂಬ ಮಹಾರಾಜ ಮಾತ್ರ ಪಾಂಡವರು ಹಾಗೂ ಕೌರವರು ಎರಡು ಕಡೆ ಕೂಡ ಹೋಗದೆ ತಟಸ್ಥರಾಗಿದ್ದರಂತೆ. ತಾನು ಯಾರ ಕಡೆಯೂ ಹೋಗದಿದ್ದರೂ ಸಹ ಯು’ದ್ದದಲ್ಲಿ ಭಾಗಿಯಾಗಿರುವ ಸಹಸ್ರಾರು ಸೈನಿಕರ ಊಟದ ಬಗ್ಗೆ ಅವರನ್ನ ಚಿಂತೆಗೀಡು ಮಾಡಿದೆ. ಇನ್ನು ಇದರ ಬಗ್ಗೆ ಮಾತನಾಡುವ ಸಲುವಾಗಿ ವಾಸುದೇವ ಶ್ರೀಕೃಷ್ಣನ ಬಳಿ ಹೋದ ನರೇಶ ಮಹಾರಾಜ, ಯಾರೂ ಕೂಡ ಸೈನಿಕರ ಊಟದ ಬಗ್ಗೆ ಯೋಚನೆ ಮಾಡುತ್ತಿಲ್ಲ. ನೀವು ಅನುಮತಿ ನೀಡಿದ್ರೆ ನಾನು ಕೌರವ ಪಾಂಡವರ ಕಡೆಯ ಸೈನಿಕರಿಗೆ ಊಟದ ವ್ಯವಸ್ಥೆ ಮಾಡುವೆ ಎಂದು ಕೃಷ್ಣನ ಬಳಿ ಕೇಳಿದ್ದಾರೆ.

Advertisements

ಮಹಾರಾಜನ ಈ ಮಾತಿಗೆ ಒಪ್ಪಿದ ವಾಸುದೇವ ಕೃಷ್ಣ, ಪ್ರತೀ ದಿನ ಈ ಕುರುಕ್ಷೇತ್ರ ಮಹಾ ಸಂ’ಗ್ರಾಮದಲ್ಲಿ ೫೦ ಲಕ್ಷಕ್ಕೂ ಹೆಚ್ಚು ಸೈನಿಕರು ಭಾಗವಹಿಸಲಿದ್ದಾರೆ. ಯಾವ ಸೈನಿಕನಿಗೂ ಕೂಡ ಸ್ವಲ್ಪವೂ ಕೂಡ ತೊಂದರೆಯಾಗದಂತೆ ಊಟದ ವ್ಯವಸ್ಥೆ ಮಾಡಿ ಎಂದು ಕೃಷ್ಣ ಮಹಾರಾಜನಿಗೆ ಸೂಚನೆ ನೀಡುತ್ತಾನೆ. ಇನ್ನು ಅಂದಿನಿಂದಲೇ ನರೇಶ ಮಹಾರಾಜ ಎಲ್ಲಾ ಸೈನಿಕರಿಗೆ ಊಟದ ವ್ಯವಸ್ಥೆ ಮಾಡುವ ಜವಾಬ್ದಾರಿ ವಹಿಸಿಕೊಳ್ಳುತ್ತಾನೆ. ಇನ್ನು ಯು’ದ್ಧ ಶುರುವಾಗಿ ದಿನ ಕಳೆದಂತೆ ಸೈನಿಕರ ಸಂಖ್ಯೆ ಕಡಿಮೆಯಾಗುತ್ತಾ ಬರುತ್ತದೆ. ಆದರೂ ಕೂಡ ಉಡುಪಿ ನರೇಶ ಮಾಡುತ್ತಿದ್ದ ಊಟದ ವ್ಯವಸ್ಥೆಯಲ್ಲಿ ಸ್ವಲ್ಪವೂ ಕೂಡ ವ್ಯತ್ಯಾಸ ಕಾಣುವುದಿಲ್ಲ. ಇದು ಸ್ವತಃ ಪಾಂಡವರು ಹಾಗೂ ಕೌರವರ ಅಚ್ಚರಿಗೆ ಕಾರಣವಾಗುತ್ತದೆ.

ಕೊನೆಗೆ ದುರ್ಯೋಧನನ ವ’ಧೆಯನ್ನ ಭೀಮಸೇನ ಮಾಡಿದ ಎಂಬಲ್ಲಿಗೆ ೧೮ ದಿನಗಳ ಕುರುಕ್ಷೇತ್ರ ಮಹಾಯು’ದ್ಧ ಮುಗಿಯುತ್ತದೆ. ಬಳಿಕ ಪಾಂಡವರ ಜೇಷ್ಠ ಯುಧಿಷ್ಠಿರನ ರಾಜ್ಯಾಭಿಷೇಕಕ್ಕೆ ಎಲ್ಲಾ ರೀತಿಯ ತಯಾರಿಗಳು ಆರಂಭವಾಗುತ್ತವೆ. ಇನ್ನು ಇದೆ ವೇಳೆ ಉಡುಪಿಯ ಮಹಾರಾಜ ನರೇಶನ ಬಳಿ ತೆರಳಿದ ಯುದಿಷ್ಠಿರ ಯುದ್ಧದ ಸಮಯದಲ್ಲಿ ಎಲ್ಲಾ ಸೈನಿಕರಿಗೂ ಕಿಂಚಿತ್ತೂ ಕೂಡ ಊಟದಲ್ಲಿ ವ್ಯತ್ಯಾಸವಾಗದಂತೆ ಹೇಗೆ ವ್ಯವಸ್ಥೆ ಮಾಡಿದ್ರಿ ಎಂದು ಪ್ರಶ್ನೆ ಮಾಡುತ್ತಾನೆ. ಆಗ ಉಡುಪಿಯ ಮಹಾರಾಜ ಅದರ ಹಿಂದೆ ಇದ್ದ ರಹಸ್ಯವೊಂದನ್ನ ಹೇಳುತ್ತಾನೆ. ಹೌದು, ನೀವು ಯು’ದ್ಧದಲ್ಲಿ ಗೆಲ್ಲಲು ವಾಸುದೇವ ಶ್ರೀಕೃಷ್ಣ ಹೇಗೆ ಕಾರಣನೋ, ಹಾಗೆಯೇ ಯಾವ ಸೈನಿಕನಿಗೂ ಊಟದಲ್ಲಿ ಕಿಂಚಿತ್ತೂ ವ್ಯತ್ಯಾಸವಾಗದಂತೆ ವ್ಯವಸ್ಥೆ ಮಾಡಲು ಕೂಡ ಕೃಷ್ಣನೇ ಕಾರಣ ಎಂದು ಹೇಳುತ್ತಾನೆ.

ಅದೇನೆಂದರೆ, ನಾವು ಪ್ರತೀ ದಿವಸ ರಾತ್ರಿಯೆಂದು ಕೃಷ್ಣನಿಗೆ ತಿನ್ನಲೆಂದು ಕಡಲೆಬೀಜ ಕೊಡುತ್ತಿದ್ದವು. ಕಡಲೆ ಬೀಜ ಕೊಡುವುದಕ್ಕೆ ಮುಂಚೆ ಹಾಗೂ ಕೃಷ್ಣ ತಿಂದ ಬಳಿಕ ಕಡಲೆಬೀಜ ಲೆಕ್ಕ ಮಾಡುತ್ತಿದ್ದೆವು. ಪ್ರತೀ ದಿನ ರಾತ್ರಿ ಶ್ರೀಕೃಷ್ಣ ತಿನ್ನುತ್ತಿದ್ದ ಕಡಲೆಬೀಜದ ಸಾವಿರ ಪಟ್ಟಿನಷ್ಟು ಸೈನಿಕರು ಯುದ್ಧದಲ್ಲಿ ವೀರ ಮ’ರಣ ಹೊಂದುತ್ತಿದ್ದರು. ಅದು ಹೇಗೆಂದರೆ ಕೃಷ್ಣ ೧೦೦ ಕಡಲೆಬೀಜ ತಿಂದರೆ ಮಾರನೆಯ ದಿನದ ಯುದ್ಧದಲ್ಲಿ ಒಂದು ಲಕ್ಷದಷ್ಟು ಸೈನಿಕರು ಸಾ’ವಿಗೀಡಾಗುತ್ತಿದ್ದರು. ಇದೇ ಆಧಾರದ ಮೇಲೆ ನಾವು ಸೈನಿಕರಿಗೆಲ್ಲಾ ಊಟದ ವ್ಯವಸ್ಥೆ ಮಾಡುತ್ತಿದ್ದೆವು.

ಇದರ ಹಿಂದೆ ಇರುವುದೇ ಅದೇ ಶ್ರೀಕೃಷ್ಣನ ಪವಾಡ ಎಂದು ಧರ್ಮರಾಯನಿಗೆ ರಾಜ ನರೇಶ ಹೇಳುತ್ತಾನೆ. ಇದನ್ನ ಕೇಳಿ ಅಚ್ಚರಿಗೀಡಾದ ಯುದಿಷ್ಠಿರ ಉಡುಪಿ ರಾಜನ ಬುದ್ದಿವಂತಿಕೆ ಹಾಗೂ ಚಾಕಚಕ್ಯತೆ ಜೊತೆಗೆ ಸೈನಿಕರಿಗಾಗಿ ಊಟ ತಯಾರಿಸುವುದರ ಹಿಂದೆ ಇದ್ದ ಸಹೃದಯಕ್ಕೆ ಹೃದಯಪೂರ್ವಕ ಧನ್ಯವಾದಗಳನ್ನ ಅರ್ಪಿಸುತ್ತಾರೆ. ಸ್ನೇಹಿತರೆ, ಈಗ ಗೊತ್ತಾಯಿತಲ್ಲ. ಲಕ್ಷಾಂತರ ಸೈನಿಕರಿಗೆ ಊಟದ ವ್ಯವಸ್ಥೆ ಮಾಡುವುದರ ಹಿಂದೆ ಅಡಗಿದ್ದ ಆ ರಹಸ್ಯ. ಇನ್ನು ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂಬುದನ್ನ ಕಾಮೆಂಟ್ ಮಾಡಿ ತಿಳಿಸಿ..