Advertisements

ಮಹಾಭಾರತದ ಯುದ್ಧ ಮುಗಿದ ಬಳಿಕ ಅರ್ಜುನನ ರಥಕ್ಕೆ ಆಗಿದ್ದೇನು !

Adyathma

ಹಿಂದೂ ಧರ್ಮದಲ್ಲಿ ರಾಮಾಯಣ, ಮಹಾಭಾರತ ಗ್ರಂಥಗಳಿಗೆ ಪೂಜ್ಯ ಭಾವನೆಯಿದೆ. ಮನುಷ್ಯನ ಪ್ರತಿಯೊಂದು ಪ್ರಶ್ನೆಗಳಿಗೂ ಈ ಮಹಾನ್ ಗ್ರಂಥಗಳಿಂದ ಉತ್ತರ ಸಿಗುತ್ತದೆ. ಇನ್ನು ಕೌರವರು ಪಾಂಡವರ ನಡುವೆ ಅಧಿಕಾರಕ್ಕಾಗಿ ನಡೆದ ಯುದ್ಧವೇ ಮಹಾಭಾರತ. ಪಾಂಡವರು ಎಂದರೆ ಒಳ್ಳೆಯದು, ಕೌರವರು ಎಂದರೆ ಕೆಟ್ಟದ್ದು ಎಂಬುದೇ ಮಹಾಭಾರತದ ಸಾರ. ಆದರೆ ಮಹಾಭಾರತದಲ್ಲಿ ನಡೆದಿರುವ ಹಲವಾರು ಘಟನೆಗಳು ಪ್ರಶ್ನೆಯಾಗಿಯೇ ಉಳಿದುಕೊಂಡಿವೆ. ಅದರಲ್ಲಿ ಮಧ್ಯಮ ಪಾಂಡವ ಅರ್ಜುನನ ಬಗೆಗಿನ ಕತೆಗಳು.

Advertisements

ಮಹಾಭಾರತದಲ್ಲಿ ರಾಜ್ಯದ ಅಧಿಕಾರಕ್ಕಾಗಿ ಸ್ವಂತ ಅಣ್ಣತಮ್ಮಂದಿರ ನಡುವೆಯೇ ಕುರುಕ್ಷೇತ್ರದಲ್ಲಿ ದೊಡ್ಡ ಮಹಾಯುದ್ದವೇ ನಡೆಯುತ್ತದೆ. ಇನ್ನು ಪಾರ್ಥ ಅರ್ಜುನ ೫ ಕುದುರೆಗಳ ರಥದ ಮೇಲೆ ಕುಳಿತು ಯುದ್ದ ಮಾಡುತ್ತಾನೆ. ರಥದ ಮೇಲೆ ಮಹಾಬಲಿ ರಾಮಭಕ್ತ ಹನುಮಂತನ ಮೂರ್ತಿ ಇರುತ್ತದೆ. ಇನ್ನು ಅರ್ಜುನನ ಸಾರಥಿಯಾಗಿ ಮಾಯಾಪತಿ ಸ್ವಯಂ ವಾಸುದೇವ ಕೃಷ್ಣನೇ ಇರುತ್ತಾನೆ.

ಆದರೆ ಯುದ್ಧ ಮುಗಿದ ಬಳಿಕ ಅರ್ಜುನನ ರಥ ಏನಾಯಿತು ಎಂಬುದರ ಬಗ್ಗೆ ಹಲವಾರು ಪ್ರಶ್ನೆಗಳಿವೆ. ಇದಕ್ಕೆ ಕಾರಣವು ಇದೆ. ಭೀಷ್ಮ, ದ್ರೋಣ, ಕರ್ಣರಂತಹ ಮಹಾನ್ ಧನುರ್ಧಾರಿಗಳ ಬಾಣಗಳಿಂದ ರಥವು ಅರ್ಜುನನ್ನ ಹಲವು ಬಾರಿ ಪ್ರಾಣಾಪಾಯದಿಂದ ಕಾಪಾಡಿರುತ್ತದೆ. ಮಹಾರಥಿಯರ ದಿವ್ಯಾಸ್ತ್ರಗಳಿಂದಲೂ ರಥಕ್ಕೆ ಕೊಂಚವೂ ಕೂಡ ತೊಂದರೆಯಾಗಿರುವುದಿಲ್ಲ. ಇನ್ನು ರಥದಿಂದ ಮೊದಲು ಸಾರಥಿ ಇಳಿಯಬೇಕು.ಬಳಿಕವಷ್ಟೇ ಹಿಂದೆ ಇರುವವರು ಇಳಿಯಬೇಕಾಗುತ್ತದೆ.

ಆದರೆ ಕೃಷ್ಣನ ಮಾತಿನಂತೆ ಮೊದಲು ಅರ್ಜುನ ರಥದಿಂದ ಇಳಿಯುತ್ತಾನೆ. ಬಳಿಕ ಕುದುರೆಗಳನ್ನ ಬಿಟ್ಟು ರಥದಿಂದ ಕೆಳಗೆ ಇಳಿಯುತ್ತಾನೆ. ಬಳಿಕ ರಥಕ್ಕೆ ಬೆಂಕಿ ಹತ್ತಿಕೊಂಡು ಚಿದ್ರವಾಯಿತು ಎಂದು ಹೇಳಲಾಗುತ್ತದೆ. ಹೌದು, ರಥದ ಮೇಲೆ ಹನುಮಂತ, ಸಾರಥಿಯಾಗಿ ಶ್ರೀ ಕೃಷ್ಣ ರಥದ ಮೇಲೆ ಇರುವವರೆಗೂ ರಥಕ್ಕೆ ಯಾವುದೇ ಅಪಾಯ ಆಗಿರುವುದಿಲ್ಲ. ಕಾರಣ ಭೀಷ್ಮ, ದ್ರೋಣಾಚಾರ್ಯ, ಹಾಗೂ ಕರ್ಣ ಬಿಟ್ಟ ದಿವ್ಯಾಸ್ರಗಳಿಂದ ಅರ್ಜುನನ ರಥವೂ ಉಳಿಯಲು ಹೇಗೆ ಸಾಧ್ಯ..ಹಾಗಾಗಿ ಕೃಷ್ಣ, ಹನಮಂತ ರಥದ ಮೇಲೆ ಇರುವವರೆಗೂ ರಥಕ್ಕೆ ಎನೂ ಆಗಿರುವುದಿಲ್ಲ. ಆದರೆ ಯುದ್ಧದ ಬಳಿಕ ರಥವು ಛಿದ್ರ ಛಿದ್ರವಾಗಿ ಸ್ಪೋಟಗೊಳ್ಳುತ್ತದೆ ಎಂಬ ಮಾಹಿತಿ ಇದೆ.