Advertisements

ದೇವರು ಕೆಟ್ಟವರಿಗೆ ಶಿಕ್ಷೆ ನೀಡುವ ಬದಲಿಗೆ ಎಲ್ಲರನ್ನೂ ಒಳ್ಳೆಯವರನ್ನಾಗಿ‌ ಯಾಕೆ ಮಾಡಲ್ಲ.? ದ್ರೌಪದಿಯ ಈ ಸಂದೇಹಕ್ಕೆ ಕೃಷ್ಣ ಹೇಳಿದ್ದೇನು ಗೊತ್ತಾ ?

Adyathma

ನಮಸ್ತೇ ಸ್ನೇಹಿತರೇ, ರಾಮಾಯಣ ಹಾಗೂ ಮಹಾಭಾರತ ಗ್ರಂಥಗಳಿಗೆ ಸರಿಸಾಟಿಯಾದ ಮತ್ತೊಂದು ಗ್ರಂಥವಿಲ್ಲ. ತಿಳಿದಷ್ಟು ತಿಳಿಯುವ ಕುತೂಹಲ. ಇನ್ನು ಮಹಾಭಾರತವನ್ನ ದೃಶ್ಯಕಾವ್ಯದ ಮೂಲಕ ನೋಡುವುದು ಇದೆಯಲ್ಲ ಅದೊಂದು ಅದ್ಭುತ. ಭಗವಾನ್ ವಾಸುದೇವ ಕೃಷ್ಣ ಮಹಾಭಾರತದ ಮೂಲಕ ನೀಡಿದ ಸಂದೇಶವಂತೂ ಯುಗ ಯುಗಕ್ಕೂ ಮನುಷ್ಯನ ಜೀವನಕ್ಕೆ ಅತ್ಯಾವಶ್ಯಕವಾಗಿದೆ. ಇನ್ನು ಮಹಾಭಾರತವನ್ನ ಓದಿದಷ್ಟು ದೃಶ್ಯಕಾವ್ಯದ ಮೂಲಕ ನೋಡಿದಷ್ಟು ನಮ್ಮಲ್ಲಿ ಹಲವಾರು ಪ್ರಶೆಗಳು ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಅದೇ ತರಹ ನನಗೆ ಅನೇಕ ದಿನಗಳಿಂದ ಕಾಡುತ್ತಿದ್ದ ಪ್ರಶ್ನೆಯೊಂದಕ್ಕೆ ಮಹಾಭಾರತ ಧಾರವಾಹಿ ಮೂಲಕ ಉತ್ತರ ಸಿಕ್ಕಿದೆ. ಹೌದು, ಪಾಂಡವರು ಹಾಗೂ ಕೌರವರ ಮಧ್ಯೆ ನಡೆದ ಕುರುಕ್ಷೇತ್ರ ಮಹಾ ಸಂ’ಗ್ರಾಮದಲ್ಲಿ ಪಿತಾಮಹ ಭೀಷ್ಮ, ಗುರು ದ್ರೋಣಾಚಾರ್ಯ, ಮಹಾರಥಿ ಕರ್ಣ, ಪ್ರಚಂಡ ಗಧಾ ದಾರಿ ದುರ್ಯೋಧನ ಸೇರಿದಂತೆ ಇಡೀ ಕುರುಕುಲದ ನಾ’ಶ’ವಾಗಿಹೋಗುತ್ತದೆ.

Advertisements

ಇನ್ನು ತನ್ನ ಮಿತ್ರ ಸುಯೋಧನನ ಅಂತಿಮ ಆಸೆಯನ್ನ ನೆರವೇರಿಸುವ ಸಲುವಾಗಿ ಗುರು ಪುತ್ರ ಅಶ್ವತ್ಥಾಮ ಪಂಚ ಪಾಂಡವರೆಂದು ಮಲಗಿದ್ದ ಪಾಂಡವರ ಮಕ್ಕಳಾದ ಉಪಪಾಂಡವರ ವ’ಧೆ ಮಾಡಿಬಿಡುತ್ತಾನೆ. ಜೊತೆಗೆ ದ್ರೌಪದಿಯ ಸಹೋದರನಾದ ದೃಷ್ಟ್ಯದ್ಯುಮ್ನನನ್ನು ಸಹ ಪರಲೋಕಕ್ಕೆ ಕಳುಹಿಸಿಡಿಬಿಡುತ್ತಾನೆ. ಕೊನೆಗೆ ತಾನು ವ,ಧೆ ಮಾಡಿದ್ದೂ ಉಪಪಾಂಡವರು ಎಂದು ತಿಳಿದು ಗರ್ಭಿಣಿಯಾಗಿದ್ದ ಅಭಿಮನ್ಯುವಿನ ಪತ್ನಿ ಉತ್ತರೆಯ ಗರ್ಭದಲ್ಲಿ ಬೆಳೆಯುತ್ತಿದ್ದ ಮಗು ನಾ’ಶ’ವಾಗಿ ಹೋಗಲಿ ಎಂದು ಬ್ರಹ್ಮಾಸ್ತ್ರವನ್ನೇ ಬಿಡುತ್ತಾನೆ. ಇನ್ನು ಒಮ್ಮೆ ಪ್ರಯೋಗಿಸಿದ ಬ್ರಹ್ಮಾಸ್ತ್ರ ತನ್ನ ಕೆಲಸವನ್ನ ಮಾಡದೇ ಹಿಂದಿರುಗುವುದಿಲ್ಲ. ಅದೇ ರೀತಿ ಆ ಮಹಾಸ್ತ್ರ ಉತ್ತರೆಯ ಗರ್ಭದ ಒಳಹೊಕ್ಕು ಇನ್ನು ಕಣ್ಣು ಬಿಡದ ಪಾಂಡವರ ಭವಿಷ್ಯವೇ ಎನಿಸಿದ್ದ ಸಂತಾನದ ಪ್ರಾ’ಣ ತೆಗೆಯುತ್ತದೆ.

ಆದರೆ ಭಗವಾನ್ ಕೃಷ್ಣನ ಕೃಪೆಯೆಂದು ಆ ಮಗುವಿಗೆ ಮತ್ತೆ ಪ್ರಾಣ ಬಂದು ತಾಯಿಯ ಗರ್ಭದಲ್ಲೇ ಒಮ್ಮೆ ಮೃ’ತ್ಯವಾಗಿ ಮತ್ತೆ ಬದುಕಿದ ಮಗುವಿಗೆ ಪರೀಕ್ಷಿತ್ ಎಂದು ಹೆಸರಿಡಲಾಗುತ್ತದೆ. ಮುಂದೆ ಇದೇ ಪರೀಕ್ಷಿತ್ ಹಸ್ತಿನಾಪುರದ ಮಹಾರಾಜನಾಗುತ್ತಾನೆ. ಇನ್ನು ಇದನ್ನೆಲ್ಲಾ ನೋಡಿದ ದ್ರೌಪದಿ ಸರ್ವಶಕ್ತನಾದ ಪರಮಾತ್ಮ ಸ್ವರೂಪಿಯಾದ ಕೃಷ್ಣನಲ್ಲಿ ಒಂದು ಪ್ರಶ್ನೆಯನ್ನ ಕೇಳುತ್ತಾಳೆ..ಗೋವಿಂದ ನೀನು ಸರ್ವಶಕ್ತ ಭಗವಂತ.. ಎಲ್ಲವನ್ನು ಮಾಡುವ ಸರ್ವಶಕ್ತನು. ಯುದ್ದದಿಂದ ಎಷ್ಟೆಲ್ಲಾ ವಿ’ಧ್ವಂ’ಸವಾಗಿದೆ. ಇದನ್ನ ನೀನು ತಡೆಯಬಹುದಾಗಿದ್ದರೂ ಏಕೆ ತಡೆಯಲಿಲ್ಲ. ಈ ಯುದ್ದದಿಂದ ನಾವು ಪಡೆದುಕೊಂಡಿದ್ದಾದರೂ ಏನು? ನಿನ್ನ ಚಮತ್ಕಾರದಿಂದ ಏನೆಲ್ಲಾ ಮಾಡುವೆ ? ಇಷ್ಟೆಲ್ಲಾ ಮಾಡುವ ನೀನು ಕೆಟ್ಟವರಿಗೆ ಶಿಕ್ಷೆ ನೀಡುವ ಬದಲು ಅವರನ್ನ ನಿನ್ನ ಚಮತ್ಕಾರದಿಂದ ಒಳ್ಳೆಯವರನ್ನಾಗಿ ಮಾಡಬಹುದಿತ್ತಲ್ಲಾ ? ದ್ರುಪದ ಕನ್ಯೆ ದ್ರೌಪದಿಯ ಸಂದೇಹಕ್ಕೆ ಕೃಷ್ಣ ಉತ್ತರಿಸಿದ್ದು ಹೀಗೆ..

ವಾಸುದೇವ ಹೇಳುತ್ತಾನೆ..ಆತ್ಮವು ಪರಮಾತ್ಮನ ಅಂಶವಾಗಿರುವುದರಿಂದ ಅದರ ಗುಣವನ್ನು ಬದಲಾಯಿಸಲು ಸ್ವತಃ ಭಗವಂತನಿಂದಲೂ ಸಾಧ್ಯವಿಲ್ಲ.‌ ಆತ್ಮ ತನ್ನದೇ ಆದ ಗುಣವಿಶೇಷಗಳನ್ನು ರೂಪಿಸಿಕೊಳ್ಳಲು ಸರ್ವ ಸ್ವತಂತ್ರವಾಗಿರುತ್ತದೆಯಂತೆ. ಮನುಷ್ಯ ತನಗಿಂತ ಮೇಲಿನ ಸ್ಥಾನದಲ್ಲಿರುವವರನ್ನು ಅನುಕರಿಸುತ್ತಾರೆ, ಧರ್ಮ ಆಗಿರಲಿ ಅಧರ್ಮ ಆಗಿರಲಿ.‌ ಹೀಗಾಗಿ ಅಧರ್ಮಿಗಳನ್ನು ಚಮತ್ಕಾರದಿಂದ ಬದಲಿಸಲು ಆಗುವುದಿಲ್ಲ, ಶಿ’ಕ್ಷೆಯೇ ನೀಡಬೇಕು. ಹೀಗಾಗಿ ಈ ತರಹ ದುಷ್ಟಗುಣಹೊಂದಿದ ಆತ್ಮಗಳನ್ನು ನರಕಕ್ಕೆ ಕಳಿಸಿ ಶಿಕ್ಷಿಸಲಾಗುತ್ತದೆ. ಮಿತ್ರರೇ ನಿಮಗೂ ಸಹ ಈ ತರಹದ ಪ್ರಶ್ನೆಗಳು ಮೂಡಿರಬಹುದಲ್ಲವೇ..ಹೌದು, ಸರ್ವಶಕ್ತನಾದ ಪರಮಾತ್ಮ ಏಕೆ ದುಷ್ಟರ ಮನಸನ್ನ ಬದಲಿಸಿ ಒಳ್ಳೆಯವರಂತೆ ಮಾಡಲು ಸಾಧ್ಯವಿಲ್ಲ ಎಂದು..ಈಗ ಇದಕ್ಕೆ ನಿಮಗೆ ಉತ್ತರ ಸಿಕ್ಕಿತಲ್ಲವೇ..ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನೆಂಬುದನ್ನ ತಿಳಿಸಿ..