Advertisements

ದುರ್ಯೋಧನ ಸಂಪೂರ್ಣವಾಗಿ ಬಟ್ಟೆಯಿಲ್ಲದೆ ತನ್ನ ತಾಯಿ ಗಾಂಧಾರಿಯ ಮುಂದೆ ಹೋಗಿ ನಿಂತಿದ್ದೇಕೆ ! ಬಳಿಕ ಅಲ್ಲಿ ನಡೆದಿದ್ದೇನು ನೋಡಿ ?

Adyathma

ನಮಸ್ತೇ ಸ್ನೇಹಿತರೇ, ಮಹಾನ್ ದೃಶ್ಯಕಾವ್ಯ ಮಹಾಭಾರತವನ್ನ ನೋಡಿದಷ್ಟೂ, ಓದಿದಷ್ಟು ಅದರ ಬಗ್ಗೆ ತಿಳಿಯುವ ಕುತೂಹಲ ಹೆಚ್ಚಾಗುತ್ತಲೇ ಹೋಗುತ್ತದೆ. ಇನ್ನು ಇದು ಮಹಾಭಾರತದ ಖಳನಾಯಕ ಎಂದೇ ಕರೆಯಲಾಗುವ ದುರ್ಯೋಧನಿಗೆ ಸಂಬಂಧಪಟ್ಟ ಪ್ರಸಂಗವಿದು. ದುರ್ಯೋಧನ ಪಾಂಡವರ ವಿರುದ್ಧ ಯುದ್ಧ ಮಾಡಿದ್ದೂ ಆ ಮೂರು ಜನ ಮಹಾಯೋಧರು ತನ್ನ ಕಡೆ ಇದ್ದಾರೆ ಎಂಬ ನಂಬಿಕೆಯಿಂದ. ಇವರಿಂದ ನನಗೆ ಜಯ ಕಟ್ಟಿಟ್ಟ ಬುತ್ತಿ ಎಂಬ ವಿಶ್ವಾಸದಿಂದ. ಹೌದು, ಮಹಾಮಹಿಮ ಭೀಷ್ಮ, ಗುರು ದ್ರೋಣಾಚಾರ್ಯ, ಹಾಗು ಆಪ್ತಮಿತ್ರ ಕರ್ಣನಿಂದ. ಆದರೆ ಧರ್ಮದ ಪರವಾಗಿದ್ದ ಪಂಚ ಪಾಂಡವರ ಜೊತೆ ವಾಸುದೇವ ಶ್ರೀಕೃಷ್ಣನಿದ್ದ. ಹಾಗಾಗಿ ಶ್ರೀ ಕೃಷ್ಣನ ಸಲಹೆಗಳ ಮೇರೆಗೆ ಆ ಮೂರು ಜನ ಮಹಾಯೋಧರನ್ನ ಪಾಂಡವರು ವ’ಧೆ ಮಾಡುತ್ತಾರೆ.

ಇನ್ನು ದುರ್ಯೋಧನ ತಾನು ಅಪಾರವಾಗಿ ನಂಬಿದ್ದ ಕರ್ಣನ ಅಂ’ತ್ಯವಾಗುತ್ತಿದ್ದಂತೆ ಕುಸಿದುಹೋಗುತ್ತಾನೆ. ಇನ್ನು ನನಗೆ ಕುರುಕ್ಷೇತ್ರ ಯು’ದ್ಧದಲ್ಲಿ ಸೋಲು ಖಚಿತ ಎಂದು ನಿರಾಶನಾಗಿಬಿಡುತ್ತಾನೆ. ಆದರೆ ಕೌರವರ ಮಾತೆ ಗಾಂಧಾರಿ ದೇವಿ ಏನಾದರೂ ಮಾಡಿ ತನ್ನ ಒಬ್ಬ ಮಗನನ್ನಾದರೂ ಉಳಿಸಿಕೊಳ್ಳಬೇಕೆಂದು ಕುರುಕ್ಷೇತ್ರದ ಭೂಮಿಗೆ ಬಂದು ತನ್ನ ಸಹೋದರ ಶಕುನಿಯನ್ನ ಭೇಟಿ ಮಾಡುತ್ತಾಳೆ. ಗಾಂಧಾರಿ ಶಕುನಿಗೆ ಹೇಳುತ್ತಾಳೆ. ಅಣ್ಣಾ ನನಗೆ ಮಹರ್ಷಿ ವೇದವ್ಯಾಸರು ಹೇಳಿದ್ದಾರೆ.. ಮನುಷ್ಯರು ಯಾವ ವಿಷಯದಲ್ಲಿ ತನ್ನ ನಿಗ್ರಹ ಮಾಡಿಕೊಳುತ್ತಾರೋ ಅವರಿಗೆ ಅಲ್ಲಿಯೇ ಎಲ್ಲಾ ಶಕ್ತಿ ಒಗ್ಗೂಡುವುದೆಂದು. ಆ ಶಕ್ತಿಯಿಂದ ನಾನು ಪುತ್ರ ದುರ್ಯೋಧನಿಗೆ ಕವಚ ಮಾಡಿ ಅವನನ್ನ ಸಾ’ವಿನಿಂದ ಪಾರು ಮಾಡಬಲ್ಲೆ..ಆದರೆ ಅದು ಯಾವ ರೀತಿ ಎಂದು ನನಗೆ ತಿಳಿದಿಲ್ಲ ಎಂದು ಶಕುನಿ ಬಳಿ ಹೇಳುತ್ತಾಳೆ.

Advertisements

ಆಗ ಕುಟಿಲ ತಂತ್ರಗಾರಿಕೆಯಲ್ಲಿ ಮೇಧಾವಿಯಾಗಿದ್ದ ಶಕುನಿಯು ನಿನ್ನ ಕಣ್ಣುಗಳಲ್ಲೇ ನಿನ್ನ ತಪಸ್ಸಿನ ಶಕ್ತಿ ಎಲ್ಲಾ ತುಂಬಿಕೊಂಡಿದೆ. ಹಾಗಾಗಿ ಒಂದು ಬಾರಿ ನಿನ್ನ ಕಣ್ಣಿನ ಪಟ್ಟಿ ತೆಗೆದು ಮಗು ದುರ್ಯೋಧನ ದೇಹದ ಮೇಲೆ ದೃಷ್ಟಿ ಬೀರಿದ್ದೆ ಆದಲ್ಲಿ ಅವನ ದೇಹಕ್ಕೆ ವಜ್ರದ ಕವಚ ಪ್ರಾಪ್ತವಾಗಲಿದ್ದು ದುರ್ಯೋಧನ ದೇಹದ ಅಂಗಾಂಗಗಳೆಲ್ಲಾ ವಜ್ರ ಖಾಯವಾಗುತ್ತವೆ. ಆಗ ದುರ್ಯೋಧನನ ಸೋಲಿಸುವುದಾಗಲಿ ಇಲ್ಲವೇ ಸಾ’ಯಿಸುವುದಾಗಲಿ ಯಾರ ಕೈನಿಂದಲೂ ಸಾಧ್ಯವಾಗುವುದಿಲ್ಲ ಎಂದು ಹೇಳುತ್ತಾನೆ. ಇನ್ನು ಈ ರಹಸ್ಯವೂ ವಾಸುದೇವ ಶ್ರೀಕೃಷ್ಣನಿಗೆ ತಿಳಿಯಬಾರದೆಂದು ತನ್ನ ಜೊತೆ ಚದುರಂಗದ ಆಟವಾಡಲು ಕರೆಯುತ್ತಾನೆ. ಇದರಿಂದ ಶ್ರೀಕೃಷನನ್ನೇ ಯಾಮಾರಿಸಿ ದುರ್ಯೋಧನಿಗೆ ಗಾಂಧಾರಿಯಿಂದ ವಜ್ರ ಕವಚ ಪ್ರಾಪ್ತವಾಗಿಸಬೇಕೆಂದು.

ಆದರೆ ಭಗವಂತ ವಾಸುದೇವನನ್ನ ಮನುಷ್ಯನಾದ ಶಕುನಿ ಮೋಸ ಮಾಡಲು ಸಾಧ್ಯವೇ..ಹೌದು, ಶಕುನಿಯು ಗಾಂಧಾರಿಯಿಂದ ವಜ್ರ ಕವಚ ಪ್ರಾಪ್ತವಾಗುವುದಾಗಿ ದುರ್ಯಧನಿಗೆ ಹೇಳಿರುತ್ತಾನೆ. ನಿನ್ನ ಬಟ್ಟೆಗಳನ್ನ ತೆಗೆದು ನ’ಗ್ನ’ನಾಗಿ ಗಾಂಧಾರಿಯ ಮುಂದೆ ಹೋಗಿ ನಿಲ್ಲುವಂತೆ ಹೇಳಿರುತ್ತಾನೆ. ಇತ್ತ ಕಡೆ ಶಕುನಿ ಕೃಷ್ಣನ ಜೊತೆ ಆಟದಲ್ಲಿ ನಿರತನಾಗಿದ್ದರೆ ಅತ್ತ ಕಡೆ ಗಾಂಧಾರಿ ದೇವಿಯು ತಂಗಿದ್ದ ಬಿಡಾರದ ಕಡೆ ಸುಯೋಧನ ಹೋಗುತ್ತಿರುತ್ತಾನೆ. ಆದರೆ ಸ್ವಯಂ ಮಾಯಾಪತಿಯಾದ ನಾರಾಯಣನ ಅವತಾರಿ ವಾಸುದೇವನಿಗೆ ಮೋಸ ಮಾಡಲು ಸಾಧ್ಯವೇ. ಹೌದು, ಶ್ರೀಕೃಷ್ಣನ ಒಂದು ರೂಪ ಶಕುನಿಯ ಜೊತೆ ಆಟದಲ್ಲಿ ನಿರತನಾಗಿದ್ದರೆ, ಮತ್ತೊಂದು ರೂಪದಲ್ಲಿ ಕೃಷ್ಣ ಬಟ್ಟೆಯಿಲ್ಲದೇ ಹೋಗುತ್ತಿದ್ದ ದುರ್ಯೋಧನಿಗೆ ಎದುರುಗೊಳ್ಳುತ್ತಾನೆ.

ಬಳಿಕ ಹೀಗೆ ಒಂದು ತುಂಡು ಬಟ್ಟೆ ಸಹ ಇಲ್ಲದೆ, ಯುವಕನಾದ ನೀನು ನಿನ್ನ ಮಾತೆಯ ಮುಂದೆ ಹೋಗಿ ನಿಲ್ಲುವುದು ಅಧರ್ಮ ಹಾಗೂ ಮಹಾ ಪಾಪ ಕೂಡ. ಇದರಿಂದ ನಿಂಗೆ ಯುದ್ಧದಲ್ಲಿ ಜಯಸಿಗುವುದಿಲ್ಲ. ನೀನು ನರಕಕ್ಕೆ ಹೋಗುವೆ ಎಂದು ಬುದ್ದಿ ಹೇಳುತ್ತಾನೆ. ಹಾಗೂ ನಿನ್ನ ಅಂ’ಗವನ್ನ ಮುಚ್ಚುವಂತ ಒಂದು ತುಂಡು ಬಟ್ಟೆಯೆನ್ನಾದರೂ ಕಟ್ಟಿಕೊಂಡು ಹೋಗು ಎಂದು ಸಲಹೆ ನೀಡುತ್ತಾನೆ. ಕೃಷ್ಣನ ಮಾತನ್ನ ನಂಬಿದ ಸುಯೋಧನ ತನ್ನ ಒಂದು ಅಂಗವನ್ನ ಮುಚ್ಚುವಂತಹ ಒಂದು ತುಂಡು ಬಟ್ಟೆ ಕಟ್ಟಿಕೊಂಡು ಹೋಗಿ ತನ್ನ ಮಾತೆ ಗಾಂಧಾರಿಯ ಎದುರಿಗೆ ನಿಲ್ಲುತ್ತಾನೆ.

ಆಗ ಗಾಂಧಾರಿ ತಾನು ಕಟ್ಟಿದ್ದ ಬಟ್ಟೆಯನ್ನ ತೆಗೆಯಲು ಅವಳ ದೃಷ್ಟಿ ನೇರವಾಗಿ ದುರ್ಯೋಧನನ ದೇಹದ ಮೇಲೆ ಬಿದ್ದು, ಗಾಂಧಾರಿಯ ಕಣ್ಣಿನಲ್ಲಿ ಕೇಂದ್ರೀಕೃತವಾಗಿದ್ದ ತಪಃ ಶಕ್ತಿಯೆಲ್ಲಾ ಸುಯೋಧನನ ದೇಹದ ಪ್ರತಿ ಭಾಗದ ಮೇಲೆಲ್ಲಾ ಬಿದ್ದು ಅವನ ದೇಹ ವಜ್ರವಾಗುತ್ತದೆ. ಆದರೆ ಕೃಷ್ಣನ ಮಾತಿನಂತೆ ದುರ್ಯೋಧನ ತನ್ನ ದೇಹದ ಒಂದು ಭಾಗವನ್ನ ತುಂಡು ಬಟ್ಟೆಯಿಂದ ಮುಚ್ಚಿದ್ದ ಕಾರಣ ಆ ಭಾಗ ಮಾತ್ರ ವಜ್ರವಾಗದೆ ಹಾಗೆ ಉಳಿಯುತ್ತದೆ. ಇದರಿಂದಲೇ ದುರ್ಯೋಧನನ್ನ ಅರ್ಧ ವಜ್ರ ಕಾಯ ಎನ್ನಲಾಗುತ್ತದೆ. ಹಾಗಾಗಿಯೇ ಶ್ರೀಕೃಷ್ಣನ ಸಲಹೆಯ ಮೇರೆಗೆ ಮಹಾಬಲಿ ಭೀಮ ತನ್ನ ಗಧೆಯಿಂದ ಸುಯೋಧನನ ತೊಡೆಯ ಭಾಗದ ಮೇಲೆ ಹೊ’ಡೆಯುತ್ತಾನೆ. ಇದರಿಂದ ದುರ್ಯೋಧನ ಅಂ’ತ್ಯವಾಗುತ್ತದೆ.