Advertisements

ಕುರುಕ್ಷೇತ್ರದ ಯು’ದ್ಧದ ಬಳಿಕ ಪಾಂಡವರು ಮಾಡಿದ್ದೇನು ? ದ್ರೌಪದಿಯ ಜೊತೆಗೆ ಪಂಚ ಪಾಂಡವರ ಅಂ’ತ್ಯವಾಗಿದ್ದು ಹೇಗೆ ?

Adyathma

ಪ್ರಿಯ ಸ್ನೇಹಿತರೇ, ಧರ್ಮದ ಸ್ಥಾಪನೆಗಾಗಿ ನಡೆದ ಕುರುಕ್ಷೇತ್ರ ಯು’ದ್ಧದ ಬಳಿಕ ಪಂಚ ಪಾಂಡವರು ಏನಾದರೂ ಎಷ್ಟು ವರ್ಷಗಳ ಕಾಲ ರಾಜ್ಯಭಾರ ಮಾಡಿದ್ರು..ಅವರ ಅಂ’ತ್ಯ ಹೇಗಾಯಿತು ಎಂಬ ಹಲವಾರು ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಮೂಡುವುದು ಸಹಜ. ಸದಾ ವಾಸುದೇವ ಶ್ರೀಕೃಷ್ಣನ ಸೂಚನೆಗಳನ್ನೇ ಪಾಲಿಸುತ್ತಾ ಧರ್ಮದ ಮಾರ್ಗವನ್ನೇ ಅನುಸರಿಸುತ್ತಾ ಬಂದ ಪಾಂಡವರುಧರ್ಮಾತ್ಮರಾದರು. ಬರೀ ಕ’ಪಟ, ಮೋ’ಸ, ಅನ್ಯಾಯ, ಅಧರ್ಮ ಮೆರೆದ ಕೌರವರು ಮಣ್ಣು ಸೇರಿದ್ರು. ಪಿತಾಮಹ ಭೀಷ್ಮ, ಗುರು ದ್ರೋಣಾಚಾರ್ಯ ಹಾಗೂ ಮಹಾರಥಿ ಕರ್ಣರಂತಹ ಯೋಧರು ದುರ್ಯೋಧನನ ಜೊತೆಗಿದ್ದರೂ ಕೌರವರನ್ನ ಕಾಪಾಡಲು ಯಾರ ಕೈನಿಂದಲೂ ಆಗುವುದಿಲ್ಲ.

ಹಾಗಾದ್ರೆ ಕುರುಕ್ಷೇತ್ರ ಯುದ್ಧದ ಬಳಿಕ ಪಾಂಡವರು ಸಾ’ವು ಹೇಗಾಯಿತು ಎಂಬುದೇ ಕುತೂಹಲಕಾರಿಯಾಗಿದೆ. ಹೌದು, ಪಾಂಡವರ ಪರಾಕ್ರಮಕ್ಕೆ ಸರಿಸಾಟಿಯೇ ಇರಲಿಲ್ಲ. ಅಶ್ವಿನಿ ದೇವತೆಗಳ ವರಪ್ರಸಾದವಾದ ನಕುಲ ಸಹದೇವರು ಅಪ್ರತಿಮ ರೂಪವಂತರು ಹಾಗೂ ಶಸ್ತ್ರ ಪಾಂಡಿತ್ಯಗಳಲ್ಲಿ ಅಗಾಧವಾದ ಪಾಂಡಿತ್ಯವನ್ನು ಹೊಂದ್ದಿದವರು ಆಗಿದ್ದರು. ದೇವೇಂದ್ರನ ವರಪ್ರಸಾದವಾದ ಮಧ್ಯಮ ಪಾಂಡವ ಅರ್ಜುನ ಧನುರ್ಧಾರಿಗಳಲ್ಲಿ ಶ್ರೇಷ್ಠನಾಗಿದ್ದ. ಇನ್ನು ಸ್ವಯಂ ವಾಯುದೇವರ ವರಪ್ರಸಾದವಾಗಿದ್ದ ಬಾಹುಬಲಿ ಭೀಮನ ಭುಜ ಬಲ ಪರಾಕ್ರಮಕ್ಕೆ ಯಾರೂ ಸರಿಸಾಟಿ ಇರಲಿಲ್ಲ. ಧರ್ಮರಾಜ ಯಮರಾಜನ ಅಂಶರೂಪವಾಗಿದ್ದ ಯುಧಿಷ್ಠಿರನ ಧರ್ಮವು ಕೂಡ ಶ್ರೇಷ್ಠವಾಗಿತ್ತು.

Advertisements

ಇನ್ನು ಪಂಚ ಪಾಂಡವರು ಎಂದಿಗೂ ಶ್ರೀ ಕೃಷ್ಣನ ಆಜ್ಞೆಗಳನ್ನ ಮೀರಿದವರಲ್ಲ. ವಾಸುದೇವನ ಆರಾಧಕರಾಗಿದ್ದರು. ಅವರ ಜೀವನವೇ ಕೃಷ್ಣನ ಮೇಲೆ ಅವಲಂಬಿತವಾಗಿತ್ತು. ಇನ್ನು ವಾಸುದೇವನ ಕೂಡ ಅಷ್ಟೇ ಧರ್ಮವಂತರಾಗಿದ್ದ ಪಾಂಡವರ ಜೊತೆ ಸೇರಿ ಪಾಪಿಗಳಿಂದಲೇ ತುಂಬಿದ್ದ ಭೂಭಾರವನ್ನ ಕಡಿಮೆ ಮಾಡುತ್ತಾನೆ. ಇನ್ನು ಅಲ್ಲಿಗೇ ಭೂಮಿಗೆ ಬಂದ ಶ್ರೀಕೃಷ್ಣನ ಅವತಾರದ ಕೆಲಸ ಸಮಾಪ್ತವಾಗಿದ್ದು ಬೇಡನೊಬ್ಬ ಬಿಟ್ಟ ಬಾಣದ ಮೂಲಕ ಕೃಷ್ಣನ ಅಂ’ತ್ಯವಾಗುತ್ತದೆ. ಇನ್ನು ಶ್ರೀಕೃಷ್ಣ ತಮ್ಮೆಲ್ಲರನ್ನು ಬಿಟ್ಟು ಹೋದ ಎಂಬ ವಿಷಯ ತಿಳಿದ ಮೇಲಂತೂ ಅವರಿಗೆ ಜೀವನವೇ ಬೇಡ ಎನಿಸಿಬಿಡುತ್ತದೆ. ಅದಾಗಲೇ ವಾಸುದೇವ ಸೇರಿದಂತೆ ಎಲ್ಲರನ್ನೂ ಕಳೆದುಕೊಂಡಿದ್ದ ಪಾಂಡವರಿಗೆ ಜೀವನ ಬರೀ ಶೂನ್ಯ ಎನಿಸಿಬಿಡುತ್ತದೆ.

ಬಳಿಕ ಅವರು ಮಹಾಪ್ರಸ್ಥಾನ ಮಾಡಲು ನಿರ್ಧಾರ ಮಾಡುತ್ತಾರೆ. ಮಹಾಪ್ರಸ್ಥಾನ ಎಂದರೆ ತಮ್ಮ ಮನಸನ್ನ ಆ ಭಗವಂತನಲ್ಲಿ ಕೇಂದ್ರೀಕರಿಸಿ ಅನ್ನ ಆಹಾರಾದಿಗಳನ್ನ ಬಿಟ್ಟು ದೇಹವು ಕುಸಿದು ಬೀಳುವ ತನಕ ಬಾರದ ಲೋಕಕ್ಕೆ ಪ್ರಯಾಣ ಮಾಡುವುದು ಎಂದು. ಇನ್ನು ಇದಕ್ಕೆ ಸಿದ್ದರಾದ ಪಾಂಡವರು ರಾಜ್ಯವನ್ನೆಲ್ಲಾ ತ್ಯಜಿಸಿ ಹಸ್ತಿನಾವತಿಯನ್ನ ಬಿಟ್ಟು ಮುಕ್ತಿಯ ಕಡೆಗೆ ಸಾಗುತ್ತಾರೆ. ಇನ್ನು ಇವರನ್ನ ಒಂದು ನಾಯಿಯು ಸಹ ಹಿಂಬಾಲಿಸುತ್ತದೆ. ಹೀಗೆ ಅನ್ನ ಆಹಾರಗಳನ್ನ ಬಿಟ್ಟು ಸುತ್ತುತ್ತಾ ಸುತ್ತುತ್ತಾ ಕೊನೆಗೆ ಹಿಮಾಲಯ ಪರ್ವತ ಏರಲು ಶುರು ಮಾಡುತ್ತಾರೆ. ಹಿಮಾಲಯ ಪರ್ವತವನ್ನ ಏರುತ್ತಿದ್ದಾಗಲೇ ಪಂಚ ಪಾಂಡವರ ಮಡದಿ ದ್ರೌಪದಿ ಕುಸಿದು ಬಿದ್ದು ಇಹಲೋಕ ತ್ಯಜಿಸುತ್ತಾಳೆ. ಆಗ ಭೀಮನು ತನ್ನ ಜೇಷ್ಠನನ್ನ ಕೇಳುತ್ತಾನೆ..ಅಣ್ಣಾ ದ್ರೌಪದಿ ಏಕೆ ಇಷ್ಟು ಬೇಗ ಕುಸಿದು ಬಿದ್ದು ಅ’ಸುನೀಗಿದಳು ಅಂತ. ಆಗ ಯುಧಿಷ್ಠಿರನು ದ್ರೌಪದಿಯು ಐವರು ಪತಿಯರನ್ನ ಸಮನಾಗಿ ಪ್ರೀತಿಸುವ ಬದಲು ಯಾರಿಗೂ ತಿಳಿಯದಂತೆ ಅರ್ಜುನನಿಗೆ ಹೆಚ್ಚು ಪ್ರೀತಿ ತೋರುತ್ತಿದ್ದಳು..ಆ ಕಾರಣದಿಂದಲೇ ದ್ರೌಪದಿ ಕುಸಿದುಬಿದ್ದದ್ದು ಅಂತ ಧರ್ಮರಾಯ ಹೇಳುತ್ತಾನೆ.

ಬಳಿಕ ನಕುಲ ಹಾಗೂ ಸಹದೇವ ಇಬ್ಬರು ಒಬ್ಬರ ಬಳಿಕ ಒಬ್ಬರು ಕುಸಿದು ಬಿದ್ದು ಪ್ರಾ’ಣ ಕಳೆದುಕೊಳ್ಳುತ್ತಾರೆ. ಮತ್ತೆ ಯುಧಿಷ್ಠಿರನನ್ನ ಅದೇ ಪ್ರಶ್ನೆ ಕೇಳಿದ ಭೀಮನಿಗೆ ಧರ್ಮರಾಜ ಹೇಳುತ್ತಾನೆ..ತಾವು ರೂಪವಂತರೂ ಹಾಗೂ ಮೇಧಾವಿಗಳು, ಹಾಗೂ ಅಗಾದವಾದ ಪಾಂಡಿತ್ಯವನ್ನ ಪಡೆದಿದ್ದೇವೆ ಎಂಬ ಗರ್ವ ನಕುಲ ಸಹದೇವರಲ್ಲಿ ಇತ್ತು ಹಾಗಾಗಿ ಅವರು ಕುಸಿದು ಬಿದ್ದರು ಎಂದು ಹೇಳುತ್ತಾನೆ ಧರ್ಮಜ. ಬಳಿಕ ಜಗತ್ತಿನ ಶ್ರೇಷ್ಠ ಧನುರ್ಧಾರಿ ಅರ್ಜುನ ಕೂಡ ಕುಸಿದುಬಿದ್ದು ಸ್ವರ್ಗಸ್ತನಾಗಿರುತ್ತಾನೆ. ಮತ್ತೆ ಅದೇ ಪ್ರಶ್ನೆ ಭೀಮ ತನ್ನ ಅಣ್ಣನಲ್ಲಿ ಕೇಳುತ್ತಾನೆ. ಸ್ವತಃ ವಾಸುದೇವನ ಪ್ರಿಯ ಸಖ, ಕೃಷ್ಣನ ವಿಶ್ವರೂಪವನ್ನ ಕಣ್ಣಾರೆ ಕಂಡಿದ್ದ, ಶ್ರೇಷ್ಠ ಧನುರ್ಧಾರಿಯಾಗಿದ್ದ ಪಾರ್ಥನಲ್ಲಿಯೂ ಕೂಡ ದೋಷವಿತ್ತೇ ಎಂದು ಪ್ರಶ್ನೆ ಮಾಡುತ್ತಾನೆ. ಇದಕ್ಕೆ ಧರ್ಮಜ ಹೇಳುತ್ತಾನೆ..ಭೀಮ ಅರ್ಜುನನಿಗೆ ಜಗತ್ತಿನಲ್ಲಿಯೇ ನನ್ನಂತಹ ಪರಾಕ್ರಮಿ ಬೇರೊಬ್ಬರಿಲ್ಲ ಎಂಬ ಗರ್ವ ಆವರಿಸಿತ್ತು. ಇನ್ನು ಇದೆ ಗರ್ವದ ಕಾರಣದಿಂದಲೇ ತಾನು ಜಗತ್ತಿನಲ್ಲಿರುವ ಎಲ್ಲಾ ರಾಜರನ್ನ ಸೋಲಿಸುತ್ತೇನೆ ಎಂದು ಹೇಳಿದ್ದ. ಆದರೆ ಅದು ಸಾಧ್ಯವಾಗಿರಲಿಲ್ಲ. ಹಾಗಾಗಿ ಅವನಲ್ಲಿ ತುಂಬಿದ್ದ ಅಹಂಕಾರ ಹಾಗೂ ತಾನು ತೆಗೆದುಕೊಂಡಿದ್ದ ವಚನವನ್ನ ಪಾಲಿಸದ ಕಾರಣ ವಚನ ಭ್ರಷ್ಟನಾಗಿದ್ದು ಅವನು ಕುಸಿದು ಬೀಳಲು ಕಾರಣವಾಯಿತು ಎಂದು ಹೇಳುತ್ತಾನೆ.

ಇನ್ನು ಮುಂದೆ ಮುಂದೆ ಸಾಗುತ್ತಿದ್ದಂತೆ ವಾಯುಪುತ್ರ ಭೀಮ ಸಹ ಕುಸಿದು ಬೀಳುತ್ತಾನೆ. ಇದೆ ವೇಳೆ ಕೊನೆ ಕ್ಷಣಗಳಲ್ಲಿ ತಾನು ಮಾಡಿದ ತಪ್ಪುಗಳೇನು ಎಂಬುದರ ಬಗ್ಗೆ ಧರ್ಮರಾಯನಿಂದ ತಿಳಿಯುತ್ತಾನೆ..ಹೌದು, ಭೀಮನಿಗೆ ತಾನು ಅತೀ ಬಲಶಾಲಿ ಎಂಬ ಅಹಂಕಾರ ಆವರಿಸಿರುತ್ತದೆ. ಜೊತೆಗೆ ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವಿಸಿರುವುದು ಸಹ ಅವನ ತಪ್ಪಾಗಿ ಪರಿಣಮಿಸಿರುತ್ತದೆ. ಮನುಷ್ಯರು ಆರೋಗ್ಯವಾಗಿರಲು ಎಷ್ಟು ಬೇಕೋ ಅಷ್ಟೇ ಆಹಾರ ಮಾತ್ರ ಸೇವಿಸಬೇಕು. ಆದರೆ ಅಗತ್ಯಕ್ಕಿಂತ ಹೆಚ್ಚು ಸೇವಿಸುವುದು ಅನ್ನಕ್ಕೆ ಮಾಡುವ ಅಪಮಾನ ಹಾಗೂ ಬೇರೆ ಜೀವಿಗಳಿಗೆ ಮಾಡಿದ ಅನ್ಯಾಯ ಎಂದು ಭೀಮನು ತನ್ನ ಜೀವನದಲ್ಲಿ ಮಾಡಿದ ತಪ್ಪನ್ನ ಯುಧಿಷ್ಠಿರ ಹೇಳುತ್ತಾನೆ. ಹೀಗೆ ಎಲ್ಲರೂ ಸ್ವರ್ಗಸ್ಥರಾದ ಬಳಿಕ ಯುಧಿಷ್ಠಿರನ ಜೊತೆ ಉಳಿದಿದ್ದು ಅವರನ್ನೇ ಹಿಂಬಾಲಿಸಿ ಬರುತ್ತಿದ್ದ ನಾಯಿ ಮಾತ್ರ. ಹೀಗೆ ಹಿಮಾಲಯ ಏರುತ್ತಿದಂತೆ ಸ್ವರ್ಗಾಧಿಪತಿ ಇಂದ್ರ ಪ್ರತ್ಯಕ್ಷನಾಗಿ ಸ್ವಶರೀರನಾಗಿ ಸ್ವರ್ಗಕ್ಕೆ ಬರುವಂತೆ ಆಹ್ವಾನ ಕೊಡುತ್ತಾನೆ. ಇನ್ನು ಆದಾಗಲೇ ತನ್ನ ಮಡದಿ ಹಾಗೂ ನಾಲ್ವರು ತಮ್ಮಂದಿರು ಸ್ವರ್ಗಸ್ತರಾಗಿರುತ್ತಾರೆ. ಇನ್ನು ತನ್ನನ್ನೇ ಹಿಂಬಾಲಿಸಿ ಬಂದಿರುವ ನಾಯಿಗೂ ಸಹ ಸ್ವರ್ಗಕ್ಕೆ ಪ್ರವೇಶ ನೀಡಬೇಕು ಎಂದು ಧರ್ಮರಾಯ ದೇವೇಂದ್ರನಲ್ಲಿ ವಿನಂತಿ ಮಾಡಿಕೊಳ್ಳುತ್ತಾನೆ.

ಆದರೆ ಇದಕ್ಕೆ ಉತ್ತರಿಸಿದ ಇಂದ್ರದೇವ ನಾಯಿಗಳಿಗೆ ಸ್ವರ್ಗಕ್ಕೆ ಪ್ರವೇಶವಿಲ್ಲ..ನೀವು ಮಾತ್ರ ಬನ್ನಿ ಎಂದು ಹೇಳುತ್ತಾನೆ. ಆದರೆ ಇದನ್ನ ಕೇಳಿದ ಯುಧಿಷ್ಠಿರ ನನ್ನನ್ನೇ ನಂಬಿಕೊಂಡು ನನ್ನ ಹಿಂದೆಯೇ ಬಂದ ನಾಯಿಗೆ ಸ್ವರ್ಗಕ್ಕೆ ಪ್ರವೇಶ ಇಲ್ಲವೆಂದಮೇಲೆ ಅಂತಹ ಸ್ವರ್ಗ ನನಗೂ ಬೇಡ ಎಂದು ಹೇಳುತ್ತಾನೆ. ಇದಾದ ಬಳಿಕ ನಾಯಿಯ ಕಡೆ ತಿರುಗಿ ನೋಡಿದಾಗ ಅಲ್ಲಿಯವರೆಗೂ ಧರ್ಮರಾಯನನ್ನೇ ಹಿಂಬಾಲಿಸಿ ಬಂದಿದ್ದ ನಾಯಿಯೇ ಇರುವುದಿಲ್ಲ. ಮಾಯವಾಗಿರುತ್ತದೆ. ಆದರೆ ಯುಧಿಷ್ಠಿರನ ಧರ್ಮವನ್ನ ಪರೀಕ್ಷೆ ಮಾಡುವ ಸಲುವಾಗಿ ನಾಯಿಯ ರೂಪದಲ್ಲಿ ನರಕಾಧಿಪತಿ ಯಮರಾಜನೇ ಬಂದಿರುತ್ತಾನೆ. ಯುಧಿಷ್ಠಿರನ ಧರ್ಮ ಪಾರಾಯಣತೆಗೆ ಮೆಚ್ಚುತ್ತಾನೆ. ಇಡೀ ಜೀವನದ ಉದ್ದಕ್ಕೂ ಧರ್ಮವನ್ನೇ ಉಸಿರಾಗಿಟ್ಟುಕೊಂಡು ಬಂದಿದ್ದ ಧರ್ಮರಾಯ ಶರೀರ ಸಮೇತನಾಗಿ ಸ್ವರ್ಗ ಪ್ರವೇಶ ಮಾಡುತ್ತಾನೆ.