Advertisements

ಮಲೆ ಮಹದೇಶ್ವರ ಬೆಟ್ಟದಲ್ಲಿ ರಾತ್ರಿ ನಡೆಯಿತು ಭಾರಿ ಪವಾಡ.. ಅಂಥದ್ದೇನು ನಡೆಯಿತು ಗೊತ್ತಾ?

Temples

ವೈಜ್ಞಾನಿಕವಾಗಿ ಭೌಗೋಳಿಕವಾಗಿ ಗಮನಿಸಿದಾಗ ಈ ಸ್ಥಳ ದಟ್ಟ ಕಾಡುಗಳಿಂದ ಆವೃತವಾಗಿದ್ದು ವಾಸಕ್ಕೆ ಯೋಗ್ಯವಾಗಿಲ್ಲ.. ವಿಪರೀತ ಕಾಡುಪ್ರಾಣಿಗಳ ಹಾವಳಿ ಇರುವ ಈ ಪ್ರದೇಶದಲ್ಲಿ ಶತಮಾನಗಳ ಹಿಂದೆ ಯೋಗಿಗಳು ತಪಸ್ಸು ಮಾಡಲು
ಬೀಡು ಬಿಡುತ್ತಿದ್ದರೆಂದು ಎಂದು ನಂಬಲಾಗಿದೆ.. ಮನುಷ್ಯರಿಲ್ಲದ ದಟ್ಟಕಾಡು ಆಗಿದ್ದರಿಂದ ಅದು ತಪಸ್ಸಿಗೆ ಯೋಗ್ಯವಾದ ಸ್ಥಳವೆಂದು ದೇಶದ ಅನೇಕ ಯೋಗಿಗಳು ಇಲ್ಲಿ ತಪಸ್ಸಿಗೆಂದು ಬಂದು ನೆಲೆಸುತ್ತಿದ್ದರು. ಆದರೆ ಕಾಲ ಕ್ರಮೇಣ ಈಗ ಕಾಡು ಇಲ್ಲಿ ನಾಶವಾಗುತ್ತ ಇದೆ. ಆದರೂ ಈ ದಟ್ಟ ಕಾಡಿನ ವೈಭವ ಈಗಲೂ ಕೂಡ ಇದೆ. ಹೌದು ಅದುವೇ ಚಾಮರಾಜನಗರ ಜಿಲ್ಲೆಯ ಪೂರ್ವ ಘಟ್ಟದ ಪ್ರಕೃತಿ ರಮಣೀಯ ವಾದ ಬೆಟ್ಟಗಳ ಸಾಲಿನಲ್ಲಿ ರಮ್ಯ ವನಸಿರಿ ಮಧ್ಯೆ ಇರುವ ಪವಿತ್ರ ಪುಣ್ಯಕ್ಷೇತ್ರ
ಮಾದೇಶ್ವರ ಬೆಟ್ಟ ಮೈಸೂರಿನಿಂದ 185 ಕಿಲೋಮೀಟರ್ ಚಾಮರಾಜನಗರದಿಂದ 115 ಕಿಲೋಮೀಟರ್ ಕೊಳ್ಳೇಗಾಲದಿಂದ 78 ಕಿಲೋಮೀಟರ್ ಹಾಗೂ ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಸುಮಾರು 208 ಕಿಲೋಮೀಟರ್ ದೂರದಲ್ಲಿರುವ ಮಲೆ ಮಹದೇಶ್ವರ ಬೆಟ್ಟ ಎಮ್ ಎಮ್ ಹಿಲ್ಸ್ ಎಂದೇ ಪ್ರಖ್ಯಾತಿ ಆಗಿದೆ. ಮಲೆ ಮಹದೇಶ್ವರ ಬೆಟ್ಟ ಸಮುದ್ರಮಟ್ಟಕ್ಕಿಂತ ಸುಮಾರು ಮೂರು ಸಾವಿರ ಅಡಿ ಎತ್ತರದಲ್ಲಿದೆ. ಹಚ್ಚ ಹಸಿರಿನ ಕಾಡಿನ ಪ್ರದೇಶದಲ್ಲಿರುವ 77 ಬೆಟ್ಟಗಳ ಸಾಲಿನಲ್ಲಿ ವಿಶಾಲವಾದ ಪ್ರಧಾನ ಬೆಟ್ಟದ ಮೇಲೆ ಮಾದೇಶ್ವರ ಸ್ವಾಮಿ ತಪಸ್ಸನ್ನು ಆಚರಿಸಿ ಇಲ್ಲಿಯೇ ನೆಲೆಸಿದ್ದರು ಎಂದು ನಂಬಲಾಗಿದೆ.

[widget id=”custom_html-3″]

Advertisements

15ನೇ ಶತಮಾನದಲ್ಲಿ ಜೀವಿಸಿದ್ದ ರೆಂದು ಜನರ ಸಂಕಷ್ಟಗಳನ್ನು ತಮ್ಮ ಹಲವು ಶಕ್ತಿಯಿಂದ ಪರಿಹರಿಸಿದ ದೇವಾಂಶ ಸಂಭೂತ ರೆಂದು ಹೇಳಲಾಗುವ ಜನಪದರ ಆರಾಧ್ಯ ದೈವ ಮಾದೇಶ್ವರನಿಗೆ ಇಲ್ಲಿ ಬೃಹತ್ ದೇವಾಲಯ ಇದೆ.. ಬೆಟ್ಟದ ಮೇಲೆ ಮಾದೇಶ್ವರ ದೇವಾಲಯ ಇರುವ ಕಾರಣ ಈ ಪ್ರದೇಶಕ್ಕೆ ಮಲೆ ಮಾದೇಶ್ವರ ಎಂದೆ ಹೆಸರು ಬಂದಿದೆ. ಮಲೆ ಎಂದರೆ ಬೆಟ್ಟ ಎಂದು ಅರ್ಥ ಬೆಟ್ಟದ ಮೇಲೆ ಇರುವ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಈ ಭವ್ಯ ದೇವಾಲಯಕ್ಕೆ ಎರಡು ಗೋಪುರಗಳಿವೆ. ದೇವಾಲಯದ ಪ್ರವೇಶಕ್ಕೆ ಮೂರು ಅಂತಸ್ತಿನ ಗೋಪುರವಿದ್ದು ಮೇಲ್ಭಾಗದಲ್ಲಿ ಪಂಚ ಕಳಸವಿದೆ. ಗೋಪುರದ ವಿವಿಧ ಹಂತದಲ್ಲಿ ಹನುಮಂತ ಗರುಡ ‘ರಾಕ್ಷ’ಸ ಗಣಗಳು ಗಣಪತಿ ಸುಬ್ರಹ್ಮಣ್ಯ ಸಿಂಹವಾಹಿನಿಯಾದ ದುರ್ಗೆ ದ್ವಾರಪಾಲಕರು ಯಮನನ್ನೇ ಕೊ’ಲ್ಲ’ಲು ಮುಂದಾದ ಮಾರ್ಕಂಡೇಯ ಹಾಗೂ ಮುಖ್ಯವಾಗಿ ಹುಲಿಯ ಮೇಲೆ ಕುಳಿತ ಮಾದೇಶ್ವರ ಸುಂದರ ಗೋಪುರದ ಮೇಲೆ ಶಿಲ್ಪಗಳಿವೆ. ದೇವಾಲಯ ಪ್ರದಕ್ಷಣ ಪಥದಲ್ಲಿ ಹುಲಿವಾಹನ ಗಜವಾಹನ ಕಾಮಧೇನು ಹಂಸ ವಾಹನವೇ ಮೊದಲಾದ ವಾಹನಗಳು ಹಾಗೂ ಪರಿವಾರದ ದೇವತೆಗಳಿವೆ.ಪ್ರಧಾನ ಗ’ರ್ಭ’ಗೃಹದಲ್ಲಿ ಮಹದೇಶ್ವರ ಲಿಂಗವಿದ್ದು ಬೆಳ್ಳಿಯ ಕವಚವನ್ನು ತೊಡಿಸಲಾಗಿದೆ.ಮಹದೇಶ್ವರ ಬೆಟ್ಟಕ್ಕೆ ಹೋಗಲು ಸರ್ಪ ದಾರಿ ಬಸವ ದಾರಿ ಎಂಬ ಎರಡು ಮಾರ್ಗಗಳಿವೆ.

[widget id=”custom_html-3″]

ಹಿಂದೆ ಇಲ್ಲಿ ಜನ ನಡೆದುಕೊಂಡೆ ಹೋಗುತ್ತಿದ್ದರು ಈಗಲೂ ಕೂಡ ಹರಕೆ ಹೊತ್ತವರು ನಡೆದುಕೊಂಡು ಬರುವ ಸಂಪ್ರದಾಯವಿದೆ. ಈಗ ದೇವಾಲಯದ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗಿದ್ದು ದೇವಾಲಯದ ವರೆಗೂ ಬರಲು ಡಾಂಬರು ರಸ್ತೆಯನ್ನು ಹಾಕಲಾಗಿದೆ. ಯಾತ್ರಿಕರಿಗೆ ಸಕಲ ಸೌಲಭ್ಯಗಳಿರುವ ಅತಿಥಿಗೃಹ ಹಾಗೂ ಚತ್ರಗಳು ಕೂಡ ಇವೆ. ಹಾಗೂ ಇಲ್ಲಿ ದಿನ ನಿತ್ಯ ಅನ್ನ ದಾಸೋಹ ಕೂಡ ನಡೆಯುತ್ತದೆ. ಆದರೆ ಇತ್ತೀಚೆಗೆ ಭಕ್ತರ ಗುಂಪೊಂದು ಸರ್ಪ ದಾರಿ ಮೂಲಕ ಮಾದೇಶ್ವರ ಬೆಟ್ಟಕ್ಕೆ ಹೋಗುವಾಗ ಒಂದು ವಿಚಿತ್ರ ಘ’ಟ’ನೆ ನಡೆದಿದೆ. ಅದೇನೆಂದರೆ ಆರು ಜನ ಭಕ್ತರು ನಡೆದುಕೊಂಡೆ ದೇವಸ್ಥಾನಕ್ಕೆ ಹೋಗಬೇಕೆಂದು ಹರಕೆ ಹೊತ್ತಿದ್ದರು. ಇದೇ ಕಾರಣ ಅವರು ಸರ್ಪ ದಾರಿಯಲ್ಲಿ ಬೆಟ್ಟವನ್ನು ಸಾಯಂಕಾಲ ಹತ್ತಲು ಪ್ರಾರಂಭಿಸಿದ್ದಾರೆ ಹೀಗೆ ಹೋಗುವಾಗ ದಾರಿಯ ಮಧ್ಯದಲ್ಲಿ ಅವರಿಗೆ ಏನೋ ಮಿಂಚು ಹೊಳೆದಾಗೆ ಕಂಡಿದೆ. ಆಗ ಸ್ವಲ್ಪ ಹತ್ತಿರ ಹೋದಾಗ ಅವರಿಗೆ ಗೋಚರಿಸಿದ್ದು ಹುಲಿಯ ಕಣ್ಣುಗಳು ಹಾಗೂ ಹುಲಿಯ ಮೇಲೆ ಮಾದೇಶ್ವರ ಸ್ವಾಮಿ ಇದನ್ನು ಕಂಡು ಮೂಕವಿಸ್ಮಿತರಾದ ಆ ಭಕ್ತರು ಈ ಘ’ಟ’ನೆಯಲ್ಲಿ ಸೂರ್ಯ ಎನ್ನುವ ಭಕ್ತ ಹುಲಿಯ ಹಾಗೂ ಮಾದೇಶ್ವರ ಸ್ವಾಮಿಯನ್ನು ನೋಡಿ ಮೂ’ರ್ಛೆ ಹೋಗಿದ್ದಾನೆ. ಆಮೇಲೆ ಅವನನ್ನು ಎಚ್ಚರಿಸಲಾಗಿದೆ. ಸ್ವಲ್ಪ ಹೊತ್ತಿನ ಮೇಲೆ ನೋಡಿದಾಗ ಆ ಹುಲಿ ತನ್ನ ತನ್ನಪಾಡಿಗೆ ತಾನು ಅಲ್ಲಿಂದ ಮಾಯವಾಗಿದೆ ಎಂದು ಭಕ್ತರು ಹೇಳಿಕೊಂಡಿದ್ದಾರೆ.

[widget id=”custom_html-3″]

ಈ ವಿಷಯವನ್ನು ಅವರು ದೇವಸ್ಥಾನಕ್ಕೆ ಬಂದು ದೇವಸ್ಥಾನದ ಮಂಡಳಿಗೆ ಹೇಳಿದಾಗ ಈ ರೀತಿಯ ಘ’ಟ’ನೆಗಳು ಇಲ್ಲಿ ನೂರಾರು ವರ್ಷಗಳಿಂದ ನಡೆಯುತ್ತಿದೆ ಎಂದು ಹೇಳಿದ್ದಾರೆ. ಆ ಮಹದೇಶ್ವರ ಸ್ವಾಮಿ ಈ ಬೆಟ್ಟದಲ್ಲೇ ಇದ್ದಾನೆ ಅವನು ಎಲ್ಲರನ್ನು ಕಾಪಾಡುತ್ತಿದ್ದಾನೆ ಎನ್ನುವ ಪ್ರತೀಕವಿದೆ. ಮಹದೇಶ್ವರ ಬೆಟ್ಟದ ಸುತ್ತ ಆನೆ ಮಲೆ ಜೇನು ಮಲೆ
ಕಾನೂ ಮಲೆ ಪುಷ್ಪಮಲೆ ದವಳ ಮಳೆ ಕೊಂಗುಮಲೆ ಪೊನ್ನಾಕ್ಷಿ ಮಲೆ ಮೊದಲಾದ 77 ಬೆಟ್ಟಗಳಿವೆ ಬಹುತೇಕ ಬೆಟ್ಟಗಳು ತಮಿಳುನಾಡು ಗಡಿಯಲ್ಲಿರುವ ಕಾರಣ ಈ ಬೆಟ್ಟಗಳಿಗೆ ತಮಿಳು ಹೆಸರುಗಳು ಕೂಡ ಅಂಟಿಕೊಂಡಿವೆ. ಗಿರಿಜನರ
ಸೋಲಿಗರ ಹಾಗೂ ಮಾದೇಶ್ವರ ನನ್ನು ತಮ್ಮ ಕುಲದೈವವಾಗಿ ಆರಾಧಿಸುತ್ತಾರೆ. ಮಾದೇಶ್ವರ ಪವಾಡದ ಬಗ್ಗೆ ಈ ಪ್ರದೇಶದಲ್ಲಿ ಅಷ್ಟೇ ಅಲ್ಲದೆ ನೆರೆಹೊರೆಯ ರಾಜ್ಯದಲ್ಲೂ ಜನ ಜೀತ ಕಥೆಗಳಿವೆ. 15ನೇ ಶತಮಾನದಲ್ಲಿ ಲೋಕಕಲ್ಯಾಣ ದೇಶ ಸಂಚಾರ ಮಾಡಿ ಹಲವರ ಸಂಕಷ್ಟ ನಿವಾರಿಸಿದ ಮಹಾ ಪ’ವಾ’ಡ ಪುರುಷ ಮಹದೇಶ್ವರರ ಬಗ್ಗೆ ಭಕ್ತಿ ಗೌರವವಿದೆ. ಮಹದೇಶ್ವರರು ಹುಲಿಯ ಮೇಲೆ ಸವಾರಿ ಮಾಡುತ್ತಿದ್ದರು ಎಂಬುವುದು ಜನರ ನಂಬಿಕೆ ಇದೆ. ಇದೇ ಕಾರಣ ಈಗಲೂ ಕೂಡ ಅವರು ಇಲ್ಲೇ ಇದ್ದಾರೆ ನಮ್ಮ ಮಧ್ಯೆ ಇದ್ದಾರೆ ಇದೇ ಕಾಡಿನಲ್ಲಿ ಓಡಾಡುತ್ತಿದ್ದಾರೆ ಎನ್ನುವ ಅಪಾರ ನಂಬಿಕೆ ಇದೆ. ಹೀಗಾಗಿಯೇ ಚಾಮರಾಜನಗರ ಜಿಲ್ಲೆ ಹಾಗು ತಮಿಳುನಾಡಿನ ಅನೇಕ ಮನೆಗಳಲ್ಲಿ ಭಕ್ತರ ಮನೆಗಳಲ್ಲಿ ಹುಲಿಯ ಮೇಲೆ ಕುಳಿತ ಮಹದೇಶ್ವರ ಚಿತ್ರವನ್ನು ನೀವು ನೋಡಬಹುದು.

[widget id=”custom_html-3″]

ಜನಪದರದಿಂದ ಆಡಿ ಹೊಗಳಿಸಿಕೊಳ್ಳುವ ಮಾದೇಶ್ವರರು ದಕ್ಷಿಣ ಕರ್ನಾಟಕದ ಬೇವಿನ ಕೊ’ಲ್ಲಿ’ಯಲ್ಲಿ ಜನಿಸಿದ್ದರು ಎಂಬ ಪ್ರತ್ಯೇಕವಿದೆ. ಬಳಿಕ ಈ ಬೆಟ್ಟದ ರಮಣೀಯ ಕ್ಕೆ ಮನಸೋತು ಇಲ್ಲಿಯೇ ನೆಲೆಸಿದ ಅವರು ಸುದೀರ್ಘ ಕಾಲ ತಪಸ್ಸು ಮಾಡಿ ಸಿದ್ಧಿಯನ್ನು ಪಡೆದಿದ್ದರೆಂದು ನಂಬಲಾಗಿದೆ. ತಮ್ಮ ತಪಃಶಕ್ತಿಯನ್ನು ಜನರ ಕಲ್ಯಾಣಕ್ಕಾಗಿ ವಿಯೋಗಿಸಿ ಕೊಂಡಿದ್ದರು. ಇವರಲ್ಲಿ ಹಲವು ಶಕ್ತಿ ಗಳಿದ್ದು ಎಂದು ಹೇಳಲಾಗಿದೆ. ಮಹದೇಶ್ವರನ ಪವಾಡಗಳನ್ನು ಕಣ್ಣಾರೆ ಕಂಡವರು ತಿಳಿದಿರುವ ಪ್ರಸಂಗಗಳನ್ನು ತೆಲೆಮಾರಿನಿಂದ ತೆಲೆಮಾರಿಗೆ ಮಾತಿನ ಮೂಲಕ ಹಾಡಿನ ಮೂಲಕ ಪದಗಳ ಮೂಲಕ ಜನ ಜೀತ ವಾಗಿವೆ. ಮಹದೇಶ್ವರ ಬೆಟ್ಟದಲ್ಲಿ ನಡೆಯುವ ಶಿವರಾತ್ರಿಯ ಮಹಾರಥೋತ್ಸವಕ್ಕೆ ಲಕ್ಷಾಂತರ ಜನರು ಇಲ್ಲಿ ದೇಶವಿದೇಶಗಳಿಂದ ಬರುತ್ತಾರೆ. ಮಹದೇಶ್ವರನಿಗೆ ಉಘೇ ಅನ್ರಪ್ಪೋ ಎಂದು ಒಬರು ಕೂಗಿದರೆ ಮಾದಪ್ಪನಿಗೆ ಉಘೇ ಉಘೇ ಎಂಬ ಭಕ್ತರ ಶೋಷಣೆಗಳು ಮುಗಿಲು ಮುಟ್ಟುತ್ತವೆ. ಅಲ್ಲಿನ ಏಳು ಬೆಟ್ಟಗಳನ್ನು ವಿವಿಧ ಜಾನಪದ ಹೆಸರಿಂದ ಕರೆಯಲಾಗುತ್ತದೆ. ಈ ಬೆಟ್ಟಗಳಿಂದ ಸುತ್ತುವರೆದ ಸಂಪೂರ್ಣ ಪ್ರದೇಶವನ್ನು ಮಾದೇಶ್ವರ ಬೆಟ್ಟ ಎಂದೇ ಕರೆಯಲಾಗುತ್ತದೆ. ಇಲ್ಲಿ ಹಲವಾರು ರೀತಿಯ ಕಾಡು ಪ್ರಾಣಿಗಳು ಅದರಲ್ಲೂ ಹುಲಿ ಆನೆ ಚಿರತೆ ಕರಡಿ ಹಾವುಗಳು ನಿಮಗೆ ಕಾಣುತ್ತವೆ. ಇದೇ ಕಾರಣ ಇಲ್ಲಿ ಹೆಚ್ಚಾಗಿ ಭಕ್ತರು ಪ್ರವಾಸಿಗರ ಜೊತೆಗೆ ಚಾರಣ ಮಾಡಲು ಕೂಡ ಹೇಳಿಮಾಡಿಸಿದಂತಹ ಜಾಗವಾಗಿದೆ. ಸ್ನೇಹಿತರೆ ಒಂದು ವೇಳೆ ನೀವು ಚಾಮರಾಜನಗರ ಆನೂರು ಕೊಳ್ಳೇಗಾಲ ಮೈಸೂರು ಕಡೆ ಹೋದರೆ ದಯವಿಟ್ಟು ಮಲೆಮಹದೇಶ್ವರ ಬೆಟ್ಟಕ್ಕೆ ಭೇಟಿ ಕೊಡಿ ಆ ಮಹದೇಶ್ವರ ಆಶೀರ್ವಾದ ನಿಮ್ಮ ಮೇಲೆ ಇರಲಿ ಎಂದು ನಾವು ಕೂಡ ಹಾರೈಸುತ್ತೇವೆ