Advertisements

ದರಿದ್ರ ಲಕ್ಷ್ಮಿ ನಿಮ್ಮ ಮನೆಯಿಂದ ಹೊರ ಹೋಗಬೇಕಾದ್ರೆ ಹಣಕಾಸಿನ ಸಮಸ್ಯೆ ಇದ್ದರೆ ಇದೊಂದು ಸಣ್ಣ ಕೆಲಸ ಮಾಡಿ..

Adyathma Astrology

ನಮಸ್ತೇ ಸ್ನೇಹಿತರೇ, ನಿಮ್ಮ ಕುಟುಂಬದಲ್ಲಿ ಅನಾವಶ್ಯಕವಾದ ಮನಸ್ತಾಪಗಳಾಗುತ್ತಿವೆ, ನೀವು ಎಷ್ಟೇ ಕಷ್ಟ ಪಟ್ಟು ದುಡಿದರೂ ನಯಾ ಪೈಸೆ ಕೂಡ ಕೈನಲ್ಲಿ ನಿಲ್ಲುತ್ತಿಲ್ಲ, ಶುಭಕಾರ್ಯಗಳಿಗೆ ವಿಜ್ನ್ಯ ಆಗುವುದು, ಆರೋಗ್ಯದಲ್ಲಿ ಪದೇ ಪದೇ ಏರುಪೇರಾಗುವುದು, ಸಾಲದ ಭಾದೆ, ಏನೋ ಮನಸ್ಸಿಗೆ ಕತ್ತಲೆ ಆವರಿಸಿದಂತೆ ಅನಿಸುತ್ತಿದೆ ಎಂದಾದರೆ ಅದರ ಅರ್ಥವೇ ನಿಮ್ಮ ಮನೆಯಲ್ಲಿ ದರಿದ್ರ ಲಕ್ಷ್ಮಿ ತಂಡವಾಡುತ್ತಿದ್ದಾಳೆ ಎಂದು ಶಾಸ್ತ್ರಗಳು ಹೇಳುತ್ತವೆ. ಇನ್ನು ಇದು ವಾಸ್ತು ದೋಷ ಇಲ್ಲವೇ ಜಾತಕದ ತೊಂದರೆಯಿಂದಾಗಿ ಇಂತಹ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಕಾಣಿಸಿಕೊಳ್ಳುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರಗಳಲ್ಲಿ ಹೇಳಲಾಗಿದೆ. ಈ ಎಲ್ಲಾ ಸಮಸ್ಯೆಗಳು ನಿಮ್ಮ ಮನೆಯಲ್ಲಿ ವಾಸ್ತು ದೋಷದಿಂದಲೇ ಆಗಿದ್ದರೆ ಅದಕ್ಕೆ ಒಂದು ಪರಿಹಾರ ಕೂಡ ಇದೆ.

Advertisements

ಇಂತಹ ಸಮಸ್ಯೆಗಳಿಂದ ಪಾರಾಗಬೇಕಾದರೆ ನಾವು ಮೊದಲು ನಮ್ಮ ಮನೆಯಲಿ ನಾವೇ ಕೆಲವೊಂದು ನಿಯಮಗಳನ್ನ ಹಾಕಿಕೊಳ್ಳಬೇಕು. ಹೌದು, ಪ್ರತೀ ದಿನ ತಪ್ಪದೆ ಭಕ್ತಿಯಿಂದ ಬೆಳಿಗ್ಗೆ ಮತ್ತೆ ಸಾಯಂಕಾಲ ಕೂಡ ನಿಮ್ಮ ಮನೆಯಲ್ಲಿರುವ ದೇವರ ಕೋಣೆಯಲ್ಲಿ ಮರೆಯದೇ ದೀಪಗಳನ್ನು ಹಚ್ಚಿ ಪೂಜೆ ಮಾಡಬೇಕು. ಇನ್ನು ನಿಮ್ಮ ಮನೆಯ ಅಂಗಳದಲ್ಲಿರುವ ತುಳಸಿ ಕಟ್ಟೆಗೆ ದೀಪದಿಂದ ಬೆಳುಗುವುದರ ಜೊತೆಗೆ ಪೂಜೆ ಮಾಡುವುದರಿಂದ ನಿಮ್ಮ ಮನೆಯಲ್ಲಿರುವ ನಕಾರಾತ್ಮಕ ಶಕ್ರಿಗಳು ನಾ’ಶವಾಗುತ್ತವೆ. ಧನದೇವತೆ ಮಹಾಲಕ್ಷ್ಮೀದೇವಿಗೆ ಹಾಲಿನಿಂದ ಮಾಡಿದ ಪದಾರ್ಥವನ್ನ ನೈವೇದ್ಯವಾಗಿ ಅರ್ಪಿಸಿ ಭಕ್ತಿಯಿಂದ ಪೂಜೆ ಮಾಡಿ.

ಇನ್ನು ನಿಮಗೆ ಅಷ್ಟ ದರಿದ್ರ ಸಮಸ್ಯೆಗಳಿಂದ ತೊಂದರೆಗಳಿದ್ದಲ್ಲಿ ಈ ಒಂದು ಉಪಾಯ ಮಾಡಿ. ದಶಮಿಯ ದಿನದಂದು ಗೋಧೂಳಿಯ ವೇಳೆ ಅಂದರೆ ಸಾಯಂಕಾಲದ ಸಮಯದಲ್ಲಿ ಮಹಾಲಕ್ಷ್ಮಿ ದೇವಿಯ ಪೂಜೆ ಮಾಡಿ. ದೇವರ ಕೋಣೆಯನ್ನ ಸ್ವಚ್ಛ ಮಾಡಿ ತುಪ್ಪದ ದೀಪಗಳನ್ನ ಹಚ್ಚಿ. ಬಳಿಕ ಭಕ್ತಿಯಿಂದ ಪೂಜೆ ಮಾಡಿ. ಬಳಿಕ ನಿಮ್ಮ ತುಳಸಿ ಗಿಡದ ಬಳಿ ತುಪ್ಪದ ದೀಪವನ್ನ ಹಚ್ಚಿ ಭಕ್ತಿಯಿಂದ ಪೂಜೆಯನ್ನ ಮಾಡಿ.

ದೇವರ ಪೂಜೆಯೆಲ್ಲಾ ಮುಗಿದ ಮೇಲೆ ಹಳದಿ ವಸ್ತ್ರವನ್ನ ತೆಗೆದುಕೊಳ್ಳಿ (ಬಿಳಿ ಬಟ್ಟೆಯನ್ನ ಕೂಡ ಹರಿಶಿಣದಿಂದ ಹಳದಿ ವಸ್ತ್ರವನ್ನಾಗಿ ಮಾಡಿಕೊಳ್ಳಬಹುದು) ಒಂದು ಹಿಡಿ ಸಾಸಿವೆ ತೆಗೆದುಕೊಳ್ಳಿ, ಒಂದು ರೂಪಾಯಿ ಹನ್ನೊಂದು ನಾಣ್ಯಗಳನ್ನ ತೆಗೆದುಕೊಳ್ಳಿ. ೫ ಅಡಿಕೆ. ೫ ತುಳಸಿ ದಳ ,ಲಕ್ಷ್ಮಿ ಕವಡೆಗಳು. ಇವೆಲ್ಲವನ್ನೂ ತೆಗೆದುಕೊಂಡು ಹಳದಿ ಬಟ್ಟೆಯಲ್ಲಿ ಹಾಕಿ ಗಂಟನ್ನ ಕಟ್ಟಿ. ಬಳಿಕ ಈ ಗಂಟನ್ನ ಹರಿಶಿಣ ಮಿಕ್ಸ್ ಮಾಡಿರುವ ಹಸುವಿನ ಹಾಲಿನಲ್ಲಿ ಅದ್ದಿ ಬಳಿಕ ಅದನ್ನ ದೇವರ ಮುಂದೆ ಇಟ್ಟು ಪೂಜೆ ಮಾಡಿ. ನಂತರ ನಿಮ್ಮ ಮನೆಯ ತುಳಸಿ ಗಿಡದ ಮುಂದೆ ಇದಕ್ಕೂ ಮೊದಲು ಹಚ್ಚಿಟ್ಟ ದೀಪದ ಮುಂದೆ ಮತ್ತೆ ಭಕ್ತಿಯಿಂದ ಪೂಜೆ ಮಾಡಿ. ಧನ ದೇವತೆ ಮಹಾಲಕ್ಷ್ಮಿ ದೇವಿಯಲ್ಲಿ ನಿಮ್ಮ ಮನದಾಸೆಯನ್ನ ಬೇಡಿಕೊಂಡು ಆ ಗಂಟನ್ನ ಮನೆಯ ಬಾಗಿಲಿಗೆ ಕಟ್ಟಿ.

ಇನ್ನು ಬಾಗಿಲಿನಲ್ಲಿ ಕಟ್ಟಿರುವ ಈ ಗಂಟು ಒಂದು ದಶಮಿಯಿಂದ ಮತ್ತೆ ದಶಮಿ ಬರುವವರೆಗೂ ಬಾಗಿಲಿನಲ್ಲೇ ಇರಲಿ. ಮತ್ತೆ ಬರುವ ದಶಮಿಯಲ್ಲೂ ಕೂಡ ತಪ್ಪದೆ ಮೇಲೆ ಹೇಳಿದಂತೆ ಮಾಡಿ. ನಿಮ್ಮ ಮನೆಯ ವಾಸ್ತುದೋಷವು ದೂರವಾಗುವುದರ ಜೊತೆಗೆ ಮಹಾಲಕ್ಷ್ಮಿ ಕರುಣೆ ನಿಮಗೆ ಪ್ರಾಪ್ತವಾಗಿ ನಿಮ್ಮ ದಾರಿದ್ರ್ಯವಲ್ಲಾ ಕಳೆದುಹೋಗುವುದು.