Advertisements

ಮಹಾನಾಯಕ ಧಾರವಾಹಿ ನಿಲ್ಲಿಸಬೇಕೆಂದು ರಾತ್ರೋ ರಾತ್ರಿ ರಾಘವೇಂದ್ರ ಹುಣುಸೂರು ಅವರಿಗೆ ಕಾಲ್ ಮೇಲೆ ಕಾಲ್ ಗಳು! ಫೋನ್ ಕಾಲ್ ಮಾಡಿದ್ದೂ ಯಾರು ಗೊತ್ತಾ?

Entertainment

ನಮಸ್ತೆ ಸ್ನೇಹಿತರೆ ಜೀಕನ್ನಡ ವಾಹಿನಿಯಲ್ಲಿ ಭಾರತ ಖಂಡ ಮಾತ್ರವಲ್ಲದೆ ವಿದೇಶವೇ ತಿರುಗಿ ನೋಡುವ ಹಾಗೆ ಮಾಡಿದಂತಹ ಮಹಾನ್ ನಾಯಕನ ಧಾರವಾಹಿ ಈಗಾಗಲೇ ಪ್ರಸಾರ ವಾಗುತ್ತಿದೆ. ಇನ್ನೂ ಈ ಧಾರಾವಾಹಿನಿಯನ್ನು ಜನರು ಕಣ್ಣು ಮಿಟುಕಿಸದಂತೆ ನೋಡುತಿದ್ದಾರೆ. ಹೌದು ಸ್ನೇಹಿತರೆ ಮಹಾನ್ ವ್ಯಕ್ತಿಯ ಜೀವನ ಚರಿತ್ರೆಯನ್ನ ಅದ್ಭುತವಾಗಿ ಈ ಧಾರಾವಾಹಿನಿಯಲ್ಲಿ ಮೂಡಿ ಬಂದಿದೆ. ಎಲ್ಲರ ಮನೆ ಮನೆಯಲ್ಲೂ ಜಗತ್ತು ಕಂಡ ಮಹವೀರನ ಕಥೆಯ ಧಾರಾವಾಹಿನಿಯನ್ನು ನೋಡಿ ಕಣ್ತುಂಬಿಸಿಕೊಳ್ಳುತಿದ್ದಾರೆ.

Advertisements

ಆದರೆ ಇದೀಗ ಜಿ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ಅವರಿಗೆ ಇದ್ದಕಿದ್ದಂತೆ ಮಧ್ಯರಾತ್ರಿಯಲ್ಲಿ ಫೋನ್ ಕಾಲ್ ಗಳ ಮೇಲೆ ಕಾಲ್ ಗಳು ಬರುತ್ತಿದೆ. ಮಹಾನ್ ನಾಯಕನ ಧಾರಾವಾಹಿ ಪ್ರಸಾರ ಮಾಡುತ್ತಿರುವುದಕ್ಕೆ ರಾಘವೇಂದ್ರ ಹುಣುಸೂರು ಅವರಿಗೆ ಬೆದರಿಕೆಯನ್ನು ಸಹ ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಸ್ನೇಹಿತರೆ ಮಹಾನ್ ನಾಯಕ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ತಮ್ಮ ಜೀವನದ ಪೂರ್ಣ ಚರಿತ್ರೆಯನ್ನು ಮಹಾನಾಯಕ ಧಾರವಾಹಿ ಎಳೆ ಎಳೆಯಾಗಿ ತಿಳಿಸುತ್ತಿದೆ. ಹೌದು ಅಂಬೇಡ್ಕರ್ ತಮ್ಮ ಬಾಲ್ಯದಲ್ಲಿ ಏನೆಲ್ಲಾ ನೋವುಗಳನ್ನು ಅನುಭವಿಸಿದ್ದಾರೆ, ತಮ್ಮ ಗುರಿಯನ್ನು ತಲುಪಲು ಎಷ್ಟು ಕಷ್ಟ ಪಟ್ಟಿದ್ದಾರೆ ಎಂಬುದು ಧಾರಾವಾಹಿಯ ಅಂಬೇಡ್ಕರ್ ಅವರ ಬಾಲ್ಯದ ಕಥೆಯಲ್ಲಿ ನಾವು ನೋಡುತ್ತಿದ್ದೇವೆ. ಇನ್ನು ಅಂಬೇಡ್ಕರ್ ಬಾಲ್ಯ ನಟನಾಗಿ ಅಭಿನಯಿಸಿದ ಮನೋಜ್ಞ ಅವರನ್ನು ನೋಡಿದರೆ ಎಂತವರನ್ನು ಕೂಡ ಮೂಕವಿಸ್ಮಿತರನ್ನಾಗಿ ಮಾಡುತ್ತದೆ ಅಷ್ಟರ ಮಟ್ಟಿಗೆ ಈ ಧಾರಾವಾಹಿನಿಯಲ್ಲಿ ಅಭಿನಯ ಮಾಡಿದ್ದಾನೆ.

ಅದರೇ ಯಾರೋ ಒಬ್ಬ ಕಿಡಗೇಡಿ ಈ ಧಾರಾವಾಹಿನಿಯನ್ನು ಕೂಡಲೇ ನಿಲ್ಲಿಸಬೇಕು ಎಂದು ರಾಘವೇಂದ್ರ ಹುಣಸೂರು ಅವರಿಗೆ ಕಾಲ್ ಮೇಲೆ ಕಾಲ್ ಮಾಡುತ್ತಿದ್ದಾರಂತೆ. ಹೌದು ಇದರ ಬಗ್ಗೆ ಹಂಚಿಕೊಂಡಿರುವ ರಾಘವೇಂದ್ರ ಹುಣಸೂರು ಅವರು ನನಗೆ ಬಹಳಷ್ಟು ಕರೆಗಳು ಹಾಗು ಮೆಸೇಜ್ಗಳು ಬರುತ್ತಿವೆ ಮಧ್ಯರಾತ್ರಿಯಲ್ಲೂ ಸಹ ನನಗೆ ಕಾಲ್ ಮಾಡಿ ಮಹಾನಾಯಕ ಧಾರಾವಾಹಿಯನ್ನು ನಿಲ್ಲಿಸಬೇಕೆಂದು ಹೇಳಿದ್ದಾರಂತೆ. ಆದರೆ ರಾಘವೇಂದ್ರ ಹುಣಸೂರು ಅವರು ಇದರ ಬಗ್ಗೆ ಏನು ಮಾತಾಡಿದ್ದಾರೆ ಗೊತ್ತಾ ನಿಜಕ್ಕೂ ಹೆಮ್ಮೆ ಪಡುವಂತಹದ್ದು.

ಈ ಕರೆಗಳೆಗೆಲ್ಲ ನಾನು ಜಗ್ಗುವುದಿಲ್ಲ. ಮಹಾನಾಯಕ ಧಾರಾವಾಹಿ ಮುಂದುವರೆಯುತ್ತದೆ. ಇದು ನನಗೆ ಪರ್ಸನಲ್ ಹಾಗಿ ಪ್ರೀತಿ ಕೂಡ ಹೌದು. ಯಾರಿಗೆಲ್ಲ ಇದರಿಂದ ಸಮಾಜಕ್ಕೆ ತೊಂದರೆ ಆಗುತ್ತದೆ ಎಂದು ತಿಳಿದುಕೊಂಡಿದ್ದಾರೆಯೋ ಅವರೇ ಈ ಸಮಾಜದ ದೊಡ್ಡ ತೊಂದರೆಗಳು ನೀವು ಆದಷ್ಟು ಗುಣಮುಖರಾಗಿ ಜೈ ಭೀಮ್ ಎಂದು ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ನಿಜಕ್ಕೂ ರಾಘವೇಂದ್ರ ಹುಣಸೂರು ಅವರು ಕಿಡಗೇಡಿಗಳಿಗೆ ತಕ್ಕ ಉತ್ತರವನ್ನೇ ಕೊಟ್ಟಿದ್ದಾರೆ. ಮಹಾನ್ ನಾಯಕನ ಈ ಚರಿತ್ರೆಯನ್ನು ನೋಡಿದರೆ ಎಲ್ಲರಿಗು ಸ್ಫೂರ್ತಿಯಾಗುವಂತದ್ದು ಆದರೆ ಇವರ ಬಗ್ಗೆ ಸರಿಯಾಗಿ ತಿಳಿಯದೆ ಇರೋ ಮೆದುಳಿನಲ್ಲಿ ಮಣ್ಣು ತುಂಬುಕೊಂಡಿರೋ ಜೀವಿಗಳು ಈ ಕೆಲಸಗಳನ್ನ ಮಾಡುತ್ತಿದ್ದಾರೆ. ಈ ರೀತಿ ಬೆದರಿಕೆಗಳನ್ನು ಹಾಕುವುದು ಸರಿಯಲ್ಲ. ಈ ಧಾರಾವಾಹಿನಿಯಲ್ಲಿ ನೋಡಿ ಕಲಿಯುವುದು ರೂಢಿಸಿಕೊಳ್ಳುವುದು ಬಹಳಷ್ಟು ಇದೆ. ಪ್ರತಿಯೊಬ್ಬರ ಜೀವನದಲ್ಲಿ ಅಂಬೇಡ್ಕರ್ ಅವರು ಬಹಳ ಸ್ಫೂರ್ತಿದಾಯಕ ವ್ಯಕ್ತಿ ಹಾಗಿದ್ದಾರೆ. ಅವರನ್ನು ಸ್ಫೂರ್ತಿಯಾಗಿ ತಗೆದುಕೊಂಡು ಜೀವನದಲ್ಲಿ ಏನಾದರು ಸಾಧನೆ ಮಾಡುವುದರ ಕಡೆಗೆ ಗಮನ ಕೊಡಬೇಕು ಈ ರೀತಿ ಮಾಡಿದರೆ ಏನು ಉಪಯೋಗವಿಲ್ಲ.