Advertisements

ಇಡೀ ಜಗತ್ತೇ ತಿರುಗಿ ನೋಡುವಂತೆ ಮಾಡಿದ ರೈತ ! ನಂಬಲು ಅಸಾಧ್ಯ..

Kannada Mahiti Uncategorized

ಸ್ನೇಹಿತರೇ, ನಮ್ಮ ದೇಶದ ಬೆನ್ನೆಲುಬಾಗಿರುವ ಅನ್ನದಾತ ರೈತ ತಾನು ಕಷ್ಟಪಟ್ಟು ಬೆವರು ಸುರಿಸಿ ಬೆಳೆದ ಬೆಳೆಗೆ ತಕ್ಕ ಬೆಲೆ ಸಿಗದೇ ಅದಕ್ಕಾಗಿ ಮಾಡಿದ ಸಾಲವನ್ನ ತೀರಿಸುವುದರಲ್ಲಿ ಇಡೀ ಜೀವನ ಕಳೆಯಬೇಕಾಗುತ್ತದೆ. ಅಂತದರಲ್ಲಿ ರೈತನೊಬ್ಬ ಕೋಟ್ಯಂತರ ರೂಪಾಯಿ ಮೌಲ್ಯದ ಹೆಲಿಕಾಪ್ಟರ್ ಮಾಲೀಕನಾಗಿದ್ದಾನೆ ಎಂದರೆ ನಂಬಲು ಅಸಾಧ್ಯ ಅಲ್ಲವೇ..ಹೌದು, ಇಲ್ಲೊಬ್ಬ ರೈತ ಇಡೀ ಜಗತ್ತೇ ತನ್ನ ಕಡೆ ತಿರುಗಿ ನೋಡುವಂತಹ ಕೆಲಸ ಮಾಡಿದ್ದಾನೆ..

Advertisements

ಹೀಗೆ ಇಡೀ ಪ್ರಪಂಚವೇ ತನ್ನತ್ತ ನೋಡುವಂತೆ ಮಾಡಿದ ರೈತನ ಹೆಸರು ಜನಾರ್ಧನ್ ಭೋಯಿರ್ ಎಂದು. ಮಹಾರಾಷ್ಟ್ರದ ತೇನ್ ಜಿಲ್ಲೆಯ ಭಿವಾಂಡಿಯಾದವರು. ನಂಬದಿದ್ದರೂ ಇದೆ ಸತ್ಯ. ಈ ಅಸಾಮಾನ್ಯ ರೈತ ಈಗ ಬರೋಬ್ಬರಿ ೩೦ ಕೋಟಿ ಬೆಲೆಬಾಳುವ ಹೆಲಿಕಾಪ್ಟರ್ ನ ಮಾಲೀಕ. ವ್ಯವಸಾಯದ ಜೊತೆಗೆ ಹಾಲಿನ ವ್ಯಾಪಾರ ಮಾಡುವ ಈ ರೈತ ಡೈರಿಯನ್ನ ನಡೆಸುತ್ತಿದ್ದಾನೆ. ಇನ್ನು ಹಾಲು ಹಾಗೂ ಅದರ ಉತ್ಪನ್ನಗಳ ವ್ಯವಹಾರದ ಸಲುವಾಗಿ ಭಾರತದ ಬೇರೆ ಬೇರೆ ರಾಜ್ಯಗಳಿಗೆ ಪ್ರಯಾಣ ಮಾಡುತ್ತಿರುತ್ತಾನೆ.

ರೈತ ಜನಾರ್ಧನ್ ಭೋಯಿರ್ ವ್ಯವಹಾದ ಸಲುವಾಗಿ ಆಗಾಗ್ಗೆ ಬೇರೆ ಬೇರೆ ರಾಜ್ಯಗಳಿಗೆ ಹೋಗಿ ಬರುವ ಕಾರಣ ತನ್ನ ಪ್ರಯಾಣ ಆರಾಮದಾಯಕವಾಗಿ ಸುಗಮವಾಗಿರಬೇಕೆಂದು ಬರೋಬ್ಬರಿ ೩೦ ಕೋಟಿಯ ಹೆಲಿಕಾಪ್ಟರ್ ಕೊಂಡಿದ್ದಾನೆ. ಇನ್ನು ಇದಕ್ಕಾಗಿ ತನ್ನ ಮನೆಯ ಬಳಿಯೇ ಹೆಲಿಪ್ಯಾಡ್ ನಿರ್ಮಾಣ ಮಾಡಿರುವ ಜನಾರ್ಧನ್ ಭೋಯಿರ್, ಪೈಲಟ್ ಹಾಗೂ ಟೆಕ್ನಿಷಿಯನ್ ರೂಮ್ ಗಳಿಗೆಂದು ತನ್ನ ಎರಡೂವರೆ ಎಕರೆ ಜಮೀನಿನಲ್ಲಿ ಎಲ್ಲಾ ಅನುಕೂಲಗಳನ್ನ ಮಾಡಿದ್ದಾನೆ.

ಇನ್ನು ರೈತ ಜನಾರ್ಧನ್ ಭೋಯಿರ್ ವ್ಯವಸಾಯವನ್ನಷ್ಟೇ ಮಾಡುತ್ತಿಲ್ಲ, ಇದರ ಜೊತೆಗೆ ಗೋಧಾಮುಗಳನ್ನ ಹೊಂದಿದ್ದು ಇದರಿಂದ ಭಾರಿ ಪ್ರಮಾಣದ ಬಾಡಿಗೆ ಹಣ ಬರುತ್ತದೆ ಎಂದು ಹೇಳಲಾಗಿದೆ. ಜೊತೆಗೆ ಜನಾರ್ಧನ್ ಭೋಯಿರ್ ರಿಯಲ್ ಎಸ್ಟೇಟ್ ವ್ಯವಹಾರ ಕೂಡ ಮಾಡುತ್ತಾನೆ ಎಂದು ಹೇಳಲಾಗಿದೆ. ಇನ್ನು ಮುಂದಿನ ತಿಂಗಳು ಮಾರ್ಚ್ ಹದಿನೈದರಂದು ಜನಾರ್ಧನ್ ಭೋಯಿರ್ ಅವರಿಗೆ ಹೆಲಿಕಾಪ್ಟರ್ ತಲುಪಲಿದೆ ಎಂದು ಹೇಳಲಾಗಿದೆ.