Advertisements

ಡ್ರಾಮಾ ಜೂನಿಯರ್ಸ್ ಖ್ಯಾತಿಯ ಪುಟಾಣಿ ಮಹತಿ ಕೇವಲ ನಾಲ್ಕೇ ವರ್ಷಕ್ಕೆ ಹೇಗಾಗಿದ್ದಾಳೆ ಗೊತ್ತಾ ? ಈಗೇನು ಮಾಡುತ್ತಿದ್ದಾಳೆ ನೋಡಿ

Entertainment

ನಮಸ್ತೇ ಸ್ನೇಹಿತರೇ, ಕನ್ನಡ ಕಿರುತೆರೆಯ ಖ್ಯಾತ ರಿಯಾಲಿಟಿ ಶೋಗಳಲ್ಲಿ ಡ್ರಾಮಾ ಜೂನಿಯರ್ಸ್ ರಿಯಾಲಿಟಿ ಶೋ ಕೂಡ ಒಂದು. ಪುಟ್ಟ ಪುಟ್ಟ ಮಕ್ಕಳು ಬಂದು ವಾಹಿನಿಯ ವೇದಿಕೆಯಲ್ಲಿ ಅಭಿನಯಿಸುವುದನ್ನ ನೋಡಿದ್ರೆ ಸಾಕು, ಮನಸಿನಲ್ಲಿ ಎಷ್ಟೇ ನೋವು, ಸಂಕಟ ಇದ್ದರೂ ಕೂಡ ಕ್ಷಣದಲ್ಲೇ ಮಾಯವಾಗಿ ಸ್ವಲ್ಪ ಸಮಯವಾದರೂ ನೊಂದ ಮನಸ್ಸುಗಳಿಗೆ ನೆಮ್ಮದಿ ಕೊಡುವ ಕಾರ್ಯಕ್ರಮ ಇದಾಗಿತ್ತು ಎಂದರೆ ತಪ್ಪಾಗೊದಿಲ್ಲವೇನೋ. ಇನ್ನು ಕನ್ನಡದ ಖಾಸಗಿ ವಾಹಿನಿ ಜೀ ಕನ್ನಡದಲ್ಲಿ ೨೦೧೬ ಪ್ರಸಾರವಾಗಿದ್ದ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮ ಅದೇ ಸಮಯದಲ್ಲಿ ಬೇರೆ ಎಲ್ಲಾ ರಿಯಾಲಿಟಿ ಶೋಗಳಿಗಿಂತ ಉತ್ತಮ ಟಿಆರ್ಪಿ ರೇಟಿಂಗ್ಸ್ ನ್ನ ಪಡೆದುಕೊಂಡಿತ್ತು.

Advertisements

ಇನ್ನು ಈ ಕಾರ್ಯಕ್ರಮದಲ್ಲಿ ಪುಟಾಣಿ ಅಚಿಂತ್ಯ, ಪುಟ್ಟರಾಜು ಹೂಗಾರ್, ಚಿತ್ರಾಲಿ ಹಾಗೂ ಮಹತಿ ವೈಷ್ಣವಿ ಭಟ್ ತುಂಬಾ ಫೇಮಸ್ ಆದ ಸ್ಪರ್ಧಿಗಳಾಗಿದ್ದರು. ಇನ್ನು ಇವರು ತಮ್ಮ ಅದ್ಭುತ ನಟನೆ ಹಾಗೂ ತುಂಟ ಕೆಲಸಗಳಿಂದ ಜಡ್ಜ್ ಗಳ ಮನಸನ್ನ ಗೆಲ್ಲುವುದರ ಜೊತೆಗೆ ಕರ್ನಾಟಕದ ಮನೆ ಮಾತಾಗಿದ್ದವರು. ಈ ಪುಟಾಣಿಗಳ ಜೊತೆ ತನ್ನ ಅಭಿನಯದಿಂದಲೇ ಹೆಸರು ಮಾಡಿದವರಲ್ಲಿ ಪುಟಾಣಿ ಮಹತಿ ವೈಷ್ಣವಿ ಭಟ್ ಕೂಡ ಒಬ್ಬರಾಗಿದ್ದರು. ಆದರೆ ಕೇವಲ ನಾಲ್ಕೇ ವರ್ಷಕ್ಕೆ ಮಹತಿಯ ಜೀವನ ಶೈಲಿಯೇ ಬದಲಾಗಿದ್ದು ಈಗೇನು ಮಾಡುತ್ತಿದ್ದಾಳೆ ಎಂಬುದನ್ನ ನೋಡೋಣ ಬನ್ನಿ..ಡಾ.ಮುರಳೀಧರ ಮತ್ತು ಡಾ.ಸುಚಿತ್ರ ಅವರ ಪುತ್ರಿ ಈಕೆ. ೫ ವರ್ಷವಿದ್ದಾಗಲೇ ತನ್ನ ತಾಯಿಯಿಂದ ಕರ್ನಾಟಕ ಸಂಗೀತ ಅಭ್ಯಾಸ ಮಾಡಿದ್ದಾಳೆ. ೮ ನೇ ತರಗತಿಯಲ್ಲಿ ಓದುತ್ತಿರುವ ಮಹತಿ ೨೦೧೬ರ ಡ್ರಾಮಾ ಜೂನಿಯರ್ಸ್ ನ ಟಾಪ್ ಸ್ಪರ್ಧಿಗಳಲ್ಲಿ ಒಬ್ಬರು.

ಹೌದು, 2016ರ ಡ್ರಾಮಾ ಜೂನಿಯರ್ಸ್ ರಿಯಾಲಿಟಿ ಶೋ ಮುಗಿದು ಕೇವಲ ನಾಲ್ಕೇ ವರ್ಷಗಳಾಗಿದ್ದು ಮಹತಿ ಸಂಪೂರ್ಣವಾಗಿ ಬದಲಾಗಿದ್ದಾರೆ. ಇನ್ನು ರಿಯಾಲಿಟಿ ಶೋ ಮುಗಿದ ಬಳಿಕ ಕಳೆದ ನಾಲ್ಕು ವರ್ಷಗಳ ಕಾಲ ತಮ್ಮ ವಿದ್ಯಾಭ್ಯಾಸದ ಕಡೆ ಗಮನ ಹರಿಸಿದ್ದ ಮಹತಿ ಕಳೆದ ವರ್ಷವಷ್ಟೇ ಕನ್ನಡದ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಹೌದು, ಕಳೆದ ವರ್ಷ ತಾನೇ ಶುರುವಾಗಿರುವ ಜೀ ಕನ್ನಡದ ಟಾಪ್ ಸೀರಿಯಲ್ ಗಳಲ್ಲಿ ಒಂದಾದ ಗಟ್ಟಿಮೇಳ ಧಾರಾವಾಹಿಯಲ್ಲಿ ಮಹತಿ ವೈಷ್ಣವಿ ಭಟ್ ನಟಿಸುತ್ತಿದ್ದಾರೆ. ಗಟ್ಟಿಮೇಳ ಧಾರಾವಾಹಿಯ ನಾಯಕಿ ಪಾತ್ರವಾಗಿರುವ ಅಮೂಲ್ಯ ಪಾತ್ರದ ತಂಗಿ ಅಂಜು ಪಾತ್ರದಲ್ಲಿ ಮಹತಿ ನಟಿಸುತ್ತಿದ್ದಾರೆ. ಅಭಿನಯ ರಾಣಿ, ಅಭಿನಯ ಕಿಶೋರಿ ಎಂಬ ಬಿರುದುಗಳನ್ನ ಪಡೆದಿದ್ದಾರೆ ಮಹತಿ.

ಸ್ಟಾರ್ ಸುವರ್ಣ ವಾಹಿನಿಯ ‘ಸಿಂಧೂರ’ ಸಿರಿಯಲ್ಲಿಯೂ ನಟಿಸಿರುವ ಮಹತಿ ‘ಎಳೆಯರು ನಾವು ಗೆಳೆಯರು’ ಎಂಬ ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ ಮಹತಿ ವೈಷ್ಣವಿ ಭಟ್. ಇನ್ನು ಸಂಗೀತ ಅಭ್ಯಾಸ ಮಾಡಿರುವ ಮಹತಿ ನಟನೆ ಮಾತ್ರವಲ್ಲದೆ ಗಾಯಕಿಯೂ ಆಗಿದ್ದು, ತಾವು ಹಾಡಿರುವ ಹಾಡುಗಳ ವಿಡಿಯೊಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಮಹತಿಯವರ ಅಭಿನಯ ನೋಡಿ ಬೇರೆ ಬೇರೆ ಧಾರಾವಾಹಿಗಳಿಂದ ಅವಕಾಶಗಳು ಬರುತ್ತಿವೆ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಪುಟಾಣಿ ನಟಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಮಹತಿ ವೈಷ್ಣವಿ ಭಟ್ ರವರಿಗೆ ಮತ್ತಷ್ಟು ಸಿನಿಮಾ, ಸೀರಿಯಲ್, ರಿಯಾಲಿಟಿ ಶೋ ಕಾರ್ಯಕ್ರಮಗಳಲ್ಲಿ ಅವಕಾಶಗಳು ಸಿಗಲಿ ಎಂಬುದು ನಮ್ಮೆಲ್ಲರ ಆಶಯ.