Advertisements

ಶೃತಿಯವರಿಂದ ದೂರ ಆದ್ಮೇಲೆ ಎಸ್ ಮಹೇಂದರ್ ಸಂತೋಷವಾಗಿದ್ದಾರಾ? ಇವರ ನಡುವೆ ಆಗಿದ್ದೇನು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಎಸ್ ಮಹೇಂದರ್ ಎಷ್ಟೋ ಜನರನ್ನು ಸ್ಟಾರ್ ಗಳನ್ನು ಮಾಡಿದ ಅದ್ಬುತ ನಿರ್ದೇಶಕ.. ಅದೆಷ್ಟೋ ಜನರಿಗೆ ಚಿತ್ರರಂಗದಲ್ಲಿ ಜೀವ ದಾನ ನೀಡಿದ ಕ್ರಿಯೇಟರ್. ಕನ್ನಡಿಗರಿಗೆ ಸೆಂಟಿಮೆಂಟ್ ಅಂದ್ರೆ ಏನು ಎಂದು ತೋರಿಸಿ ಕಣ್ಣಲ್ಲಿ ನೀರು ತರಿಸಿದ ಅದ್ಬುತ ಕಲಾಕಾರ.. ಆದರೆ ಎಷ್ಟೊಂದು ಜನರನ್ನು ಬೆಳೆಸಿದ ಎಸ್ ಮಹೇಂದರ್ ಜೀವನದಲ್ಲಿ ಆಗಿದ್ದೇನು, ಈಗ ಅವರು ಏನು ಮಾಡ್ತಿದ್ದಾರೆ ಗೊತ್ತಾ? ಅದೊಂದು ಕಾಲ ಎಸ್ ಮಹೇಂದರ್ ಅಂದ್ರೆ ನಿರ್ಮಾಪಕರಿಗೆ ಜೇನು ತುಪ್ಪ ಇದ್ದಂತೆ.. ಕಡಿಮೆ ಬಜೇಟ್ ನಲ್ಲಿ ಸಿನಿಮಾ ತೆಗೆದು ಸಂಬಂಧಗಳನ್ನೇ ಕಥಾವಸ್ತುವನ್ನಾಗಿ ಮಾಡಿಕೊಂಡು ಜೀವನದ ಮೌಲ್ಯಗಳನ್ನು ತೋರಿಸಿ ಹಿಟ್ ಮೇಲೆ ಹಿಡ್ ಕೊಟ್ಟು ನಿರ್ಮಾಪಕ ಜೇಬು ತುಂಬಿಸುತ್ತಿದ್ದ ಎಸ್ ಮಹೇಂದರ್ ಡೇ’ಟ್ಸ್ ಗಾಗಿ ಕಾಯುತ್ತಿದ್ದರು ನಿರ್ಮಾಪಕರು.

Advertisements

ಎಲ್ಲವೂ ಚೆನ್ನಾಗಿತ್ತು.. ನಟಿ ಶೃತಿ ಮತ್ತು ಎಸ್ ಮಹೇಂದರ್ ಮಧ್ಯೆ ಪ್ರೇಮದ ಚಿಗುರು ಹುಟ್ಟಿಕೊಂಡು 1998 ರಲ್ಲಿ ಇಬ್ಬರು ಮದುವೆಯಾದರು‌. ನಂತರ ಈ ದಂಪತಿಗೆ ಒಂದು‌ ಮುದ್ದಾದ ಹೆಣ್ಣು ಮಗು ಹುಟ್ಟಿತು.. ಎಸ್ ಮಹೇಂದರ್ ಮತ್ತು ಶೃತಿ ಅನ್ಯೋನ್ಯ ಜೀವನ ನಡೆಸುತ್ತಿದ್ದರು. ಹಾಗ ಬಂದಿದ್ದೇ ರಾಜಕೀಯ.. ತಾನು ಹುಟ್ಟಿದ ಸ್ಥಳ ಕೊಳ್ಳೇಗಾಲಕ್ಕೆ ಏನಾದರೂ ಒಳ್ಳೆಯ ಕೆಲಸ ಮಾಡೋಣ ಎಂದು ರಾಜಕೀಯಕ್ಕೆ ದು’ಮುಕಿದ ಎಸ್ ಮಹೇಂದರ್ ಕೊಳ್ಳೇಗಾಲದಿಂದ ಎಮ್ ಎಲ್ ಎ ಎಲೆಕ್ಷನ್ ಗೆ ನಿಂತರು. ರಾಜಕೀಯ ಆಳ ಗೊತ್ತಿಲ್ಲದ ಎಸ್ ಮಹೇಂದರ್ ವಾಪಸ್ ಬರಲು ಆಗದ ಕಾರಣ ತನ್ನಲ್ಲಿದ್ದ ಹಣವನ್ನೇಲ್ಲಾ ಖರ್ಚು ಮಾಡಿದರು..

ಆದರೆ ಅಂದುಕೊಂಡಿದ್ದು ಒಂದು ಆಗಿದ್ದೇ ಇನ್ನೊಂದು. ಕೇವಲ 12 ಸಾವಿರ ಮತಗಳ ಅಂತರದಿಂದ ಸೋಲನ್ನು ಅನುಭವಿಸಿದರು ಎಸ್ ಮಹೇಂದರ್.. ಎಲೆಕ್ಷನ್ ನಂತರ ಎಸ್ ಮಹೇಂದರ್ ಜೀವನದಲ್ಲಿ ಊಹಿಸದ ಘ’ಟ’ನೆಗಳು ನಡೆಯುತ್ತಾ ಹೋದವು. ನಟಿ ಶೃತಿ ಮತ್ತು ಎಸ್ ಮಹೇಂದರ್ ಮಧ್ಯೆ ವೈ’ಮನಸ್ಸು, ಕೊನೆಗೆ ಅದು ವಿ’ಚ್ಚೇ’ದನದಲ್ಲಿ ಕೊನೆಯಾಯಿತು.. ಕಾಲದ ಮಹಿಮೇನೆ ಆಗೆ. ಟೈಮ್ ಸರಿ ಇಲ್ಲಾ ಅಂದರೆ ಕೆಲವೊಮ್ಮೆ ಅಮೃತ ಕೂಡ ನಮ್ಮ ಕಣ್ಣಿಗೆ ವಿ’ಷ’ವಾಗಿ ಕಾಣುತ್ತದೆ. ಮೂರು ವರ್ಷ ಒಂಟಿಯಾಗಿದ್ದ ಎಸ್ ಮಹೇಂದರ್ 2012 ರಲ್ಲಿ ಯಶೋಧ ಅನ್ನುವವರನ್ನು ಮದುವೆಯಾದರು..

ಇದರ ಮಧ್ಯೆ ಎಸ್ ಮಹೇಂದರ್ ಅವರ ಮಗಳು ಗೌರಿ ಬರೆದ ಒಂದು ಪೋಸ್ಟ್ ಹೃದಯವನ್ನು ಹಿಂ’ಡುತ್ತದೆ. ಅಪ್ಪ ಐ ಲೌವ್ ಯು.. ನೀವು ಯಾವಾಗ್ಲೂ ನನ್ನ ಮೊದಲ ಪ್ರೀತಿ. ನನ್ನ ನೆಚ್ಚಿನ ಹೀರೋ. ನಿಮ್ಮ ಮೇಲಿನ ನನ್ನ ಪ್ರೀತಿ ನಮ್ಮಿಬ್ಬರ ಬಾಂಧವ್ಯದ ಬೆಸುಗೆಯನ್ನು ಯಾರಿಂದಲೂ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ.. ಐ ಮಿಸ್ ಯು. ನಿಮ್ಮೊಂದಿಗೆ ಸಮಯ ಕಳೆಯಬೇಕು ಎಂದಿದ್ದೇನೆ. ಅದು ಶೀಘ್ರದಲ್ಲೇ ನಿಜವಾಗಲಿದೆ ಎಂದು ಪೋಸ್ಟ್ ಮಾಡಿದ ಗೌರಿ ಅಪ್ಪನ‌ ಬಗ್ಗೆ ಪ್ರೀತಿಯನ್ನು ತೋರ್ಪಡಿಸಿದರು..

ತುಂಬಾ ಗ್ಯಾಪ್ ತಗೊಂಡು 2011 ರಿಂದ 2017 ರವರೆಗೆ ಎಸ್ ಮಹೇಂದರ್ ಅವರು ಮೂರು ಸಿನಿಮಾ ನಿರ್ದೇಶಿಸಿ ಮಾಡಿದರು. ಆದರೆ ಆ ಸಿನಿಮಾಗಳು ಹೇಳಿಕೊಳ್ಳುವಷ್ಟು ಹಿಟ್ ಆಗಲಿಲ್ಲ.. ಸುಮಾರು ಮೂರು ವರ್ಷದಿಂದ ಯಾವ ಸಿನಿಮಾ ಕೂಡ ಮಾಡಿಲ್ಲ ಎಸ್ ಮಹೇಂದರ್ ಅವರು. ಒಂದಂತು ನಿಜ ಮುಂದಿ‌ನ ಪೀಳಿಗೆಗೆ ಎಸ್ ಮಹೇಂದರ್ ಅವರ ಸಿನಿಮಾಗಳು ತೋರಿಸಿದರೆ ಸಾಕು ಸಂಬಂಧಗಳ ಮೌಲ್ಯ ಏನು ಅನ್ನೋದು ಗೊತ್ತಾಗುತ್ತದೆ.. ಎಸ್ ಮಹೇಂದರ್ ಅವರು ಮತ್ತೆ ಸಿನಿಮಾ ನಿರ್ದೇಶನ ಮಾಡ್ಬೇಕಾ.. ಇದರ ಬಗ್ಗೆ ನೀವೇನ್ ಹೇಳ್ತಿರಾ.