Advertisements

ಕೋರ್ಟ್ ಆದೇಶ! ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೆ ಎಷ್ಟು ಪಾಲು ಸಿಗುತ್ತಿದೆ ಗೊತ್ತಾ? ನಿಮ್ಮ ಪ್ರಕಾರ ಹೆಣ್ಣು ಮಕ್ಕಳಿಗೆ ಎಷ್ಟು ಪಾಲು ಸಿಗಬೇಕು..

News

ಪ್ರಿಯ ಸ್ನೇಹಿತರೆ ವಿವಾಹ ಬಂಧನಕ್ಕೊಳಗಾದ ನಂತರ ಹೆಣ್ಣು ಮಗಳು ಆಕೆಯೆ ಗಂಡನ ಮನೆಗೆ ಸೀಮಿತವಾಗುತ್ತಾಳೆ. ಆಕೆಗೆ ತವರು ಮನೆಯ ಮೇಲೆ ಯಾವುದೇ ರೀತಿಯ ಹಕ್ಕುಗಳು ಇರುವುದಿಲ್ಲ ಎಂಬುವುದು ಸಾಮಾನ್ಯವಾಗಿ ಜನರ ತಲೆಯಲ್ಲಿರುವ ಸಂಗತಿ. ಗೆಳೆಯರೇ ಆದರೆ ಈಗ ಕಾಲ ಬದಲಾಗಿದೆ, ಕಾಲಕ್ಕೆ ತಕ್ಕಂತೆ ಕಾನೂನಿನ ನಿಯಮಾವಳಿಗಳು ಬದಲಾಗುತ್ತಿವೆ. ಹೆಣ್ಣುಮಕ್ಕಳಿಗೆ ಆಕೆಯ ತಂದೆಯ ಆಸ್ತಿಯಲ್ಲಿ ಎಂದರೆ ಪಿತ್ರಾರ್ಜಿತ ಆಸ್ತಿಯನ್ನು ಪಾಲು ಪಡೆಯಬಹುದಾ, ಪಡೆಯಬಹುದಾದರೆ ಯಾವ ಕೂನೂನುಗಳಿವೆ ಅಂತೀರಾ ಇಲ್ಲಿದೆ ನೋಡಿ‌ ಕಂಪ್ಲಿಟ್ ಸ್ಟೋರಿ.. ಹೆಣ್ಣು ಮಕ್ಕಳಿಗೆ ಮೊದಲು ತಂದೆಯ ಆಸ್ತಿಯಲ್ಲಿ ಪಾಲು ಇರಲಿಲ್ಲ.

[widget id=”custom_html-3″]

Advertisements

1956ರ ಕಾಯ್ದೆ ಪ್ರಕಾರ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಯಾವುದೆ ರೀತಿಯ ಹಕ್ಕುಗಳು ಇರಲಿಲ್ಲ. ಮಹಿಳೆಯರಿಗೆ ಆಸ್ತಿಯಲ್ಲಿ ಸಮಪಾಲು ಪ್ರ’ಕ’ರಣಗಳು ನ್ಯಾಯಾಲಯದ ಮೆಟ್ಟಿಲೇರಿದಾಗ ಭಾರತ ಸರ್ಕಾರ ಮಹಿಳೆಯರ ಆಸ್ತಿಗೆ ಸಂಬಂಧಿಸಿದಂತೆ ಈ ಹಿಂದೆ ಜಾರಿಯಲ್ಲಿದ್ದ ಹಿಂದೂ ಉತ್ತರಾಧಿಕಾರಿ ಕಾಯ್ದೆ 1956 ತಿದ್ದುಪಡೆ ಮಾಡುವ ಮೂಲಕ 2005 ರಲ್ಲಿ ಹೊಸ ಕಾನೂನು ಜಾರಿಗೆ ಮಾಡಲಾಯಿತು. 2005ರ ಕಾಯ್ದೆಯ ಪ್ರಕಾರ ಪಿತ್ರಾರ್ಜಿತ ಆಸ್ತಿಯಲ್ಲಿ ಮಹಿಳೆಯರಿಗೆ ಹಕ್ಕಿದೆ ಎಂದು ಮಾನ್ಯ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ನ್ಯಾಯ ಪೀಠವು ತೀರ್ಪು ನೀಡಿತ್ತು.ಸುಪ್ರೀಂ ಕೋರ್ಟನ ಎಕಿ ಸುಕ್ರಿ ಹಾಗೂ ಅಶೋಕ ಭೂಷಣ್ ಅವರ ಪೀಠವು 2005 ಕ್ಕಿಂತ ಮೊದಲು ಜನಿಸಿದ ಹೆಣ್ಣು ಮಕ್ಕಳಿಗೂ ಸಹ ತನ್ನ ತಂದೆಯ ಆಸ್ತಿಯಲ್ಲಿ ಪಾಲು ಪಡೆಯುವ ಹಕ್ಕಿದೆ ಎಂದು ಈ‌ ಪೀಠವು ತೀರ್ಪು ನೀಡತ್ತು. ಹಿಂದೂ ಉತ್ತರಾಧಿಕಾರಿ ಕಾಯ್ದೆಯಲ್ಲಿ ಹೆಣ್ಣುಮಕ್ಕಳು ಹುಟ್ಟಿನಿಂದಲೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಉತ್ತರಾಧಿಕಾರ ಹೊಂದಿರುತ್ತಾರೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

[widget id=”custom_html-3″]

2005 ರ ಕಾಯಿದೆಯ ಪ್ರಕಾರ ತಾಯಿ, ತಂದೆಯ ಆಸ್ತಿಯಲ್ಲಿ ಮಗನಿಗೆ ಎಷ್ಟು ಆಸ್ತಿಯಲ್ಲಿ ಹಕ್ಕಿದೆ ಅಷ್ಟೆ ಸಮಾನವಾದ ಹಕ್ಕು ಮಗಳಿಗೂ ಇದೆ. ಮಹಿಳೆಗೆ ನೀಡಿದ ಸಮಾನ ಪಾಲಿನ ಪ್ರಮಾಣದಷ್ಟೆ ಸಹೋದರ ಹಾಗೂ ಸಹೋದರಿಗೂ ನೀಡಲಾಗುವುದು ಹೆಣ್ಣುಮಕ್ಕಳು ತಾವು ಪಡೆದ ಪಾಲನ್ನು ಮಾರಾಟದ ಮೂಲಕ, ವಿಲ್ ಮೂಲಕ ಅಥವಾ ಉಡುಗೊರೆ ರೂಪದಲ್ಲಿ ವಿಲೇವಾರಿ ಮಾಡಬಹುದು. 20/12/2004ರ ಮೊದಲು ಪಿತ್ರಾರ್ಜಿತ ಆಸ್ತಿ ವಿಲ್ ಅಥವಾ ಪರಭಾರೆ ಆಗಿದ್ದರೆ ಮಹಿಳೆಗೆ ಹಕ್ಕು ಸಿಗದೆ ಇರಬಹುದು ಆದರೆ ನೋಂದಣಿ ಆಗಿದ್ದಲ್ಲಿ ಹೆಣ್ಣುಮಕ್ಕಳಿಗೆ ಹಕ್ಕು ಸಿಗುತ್ತದೆ ಎಂದು ಕಾನೂನು ತಿಳಿಸುತ್ತದೆ. ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ನೀಡವುದರ ಮೂಲಕ ಸಮಾನತೆಗೆ ಅವಕಾಶ ಕಲ್ಪಿಸಿದಂತಾಗಿದೆ. ಹೆಣ್ಣು ಗಂಡು ಮಕ್ಕಳಿಬ್ಬರು ಆಸ್ತಿಯಲ್ಲಿ ಸಮಾನ ಹಕ್ಕು ಪಡೆಯುವುದರ ಮೂಲಕ ಸಮಾನ ಜವಾಬ್ದಾರಿಗಳಿಗೂ ಪಾಲುದಾರಾಗಿರುತ್ತಾರೆ.