Advertisements

ಭೂಲೋಕದ ಅಮೃತ ಮಜ್ಜಿಗೆ ಕುಡಿಯೋದ್ರಿಂದ ಏನೆಲ್ಲಾ ಲಾಭ ಇದೆ ನೋಡಿ!

Health

ನಮಸ್ಕಾರ ಪ್ರಿಯ ವೀಕ್ಷಕರೆ ಕಲೆವೊಂದು ಆಹಾರ ಪದಾರ್ಥಗಳು, ತರಕಾರಿಗಳು ಎಲ್ಲವು ನಮ್ಮ ಅರೋಗ್ಯಕ್ಕೆ‌ ಒಂದಲ್ಲಾ ಒಂದು ರೀತಿಯಿಂದಾಗಿ ಲಾಭದಾಯಕವಾಗಿವೆ. ಇನ್ನು ಇದೇ ಆರೋಗ್ಯ ವಿಷಯಕ್ಕೆ ಬಂದರೆ ಹಾಲು ಒಂದು ಉತ್ತಮ ಆಹಾರ. ಹಾಲಿನಿಂದ ತಯಾರಿಸಲಾಗುವ ಬೆಣ್ಣೆ, ತುಪ್ಪ, ಮಜ್ಜಿಗೆ ಎಲ್ಲವು ಆರೋಗ್ಯಕ್ಕೆ ಉತ್ತಮವಾಗಿವೆ. ಇಂದು ಅದೇ ಹಾಲಿನಿಂದ ಕೆನೆ ತಯಾರಿಸಿ ‌ಕೆನೆಯನ್ನು ಕಡೆದು ಬೆಣ್ಣೆ ತೆಗೆದು, ತದನಂತರ ಸಿಗುವುದೇ ಮಜ್ಜಿಗೆ. ಮಜ್ಜಿಗೆಯಿಂದ ನಮ್ಮ ದೇಹಕ್ಕಾಗುವ ಲಾಭಗಳೇನು? ಮಜ್ಜಿಗೆ ಯಾವೆಲ್ಲ ಔಷಧೀಯ ಗುಣಗಳನ್ನು ಹೊಂದಿದೆ ಎಂಬುವುದನ್ನು ಈ ಸ್ಟೋರಿಯಲ್ಲಿ ತಿಳಿಯೋಣ. ಅಜ್ಜಿ ಮುತ್ತಜ್ಜಿ ಕಾಲದಿಂದಲೂ ಮನೆ ತುಂಬಾ ದನಕರುಗಳು ಬಾಯಾರಿಕೆ ಎಂದು ಬಂದವರಿಗೆ ನೀರಿನ ಬದಲಾಗಿ ಮಜ್ಜಿಗೆ ನೀಡುವ ಕಾಲವೊಂದಿತ್ತು. ಆ ಪದ್ಧತಿ ಇನ್ನು ರೂಢಿಯಲ್ಲಿದೆ. ಮಜ್ಜಿಗೆ ನಾಲಿಗೆಗೆ ರುಚಿ ದೇಹಕ್ಕೆ ತಂಪು. ಬೇಸಿಗೆಯಲ್ಲಿ‌‌‌ ಮಜ್ಜಿಗೆ ಸೇವಿಸಿದರೆ ತಕ್ಕ ಮಟ್ಟಿಗೆ ಆಯಾಸ ನಿವಾರಣೆಯಾಗುತ್ತದೆ. ಹೀಗೆ ಬಾಯಾರಿಕೆಯದಾಗ ಊಟದ‌ ನಂತರ ಮಜ್ಜಿಗೆ ಕುಡಿಯುವುದು ಉತ್ತಮ ನಿದ್ರೆಗೆ ಕಾರಣವಾಗುತ್ತದೆ.

Advertisements

ಮಜ್ಜಿಗೆ ಕೇಲವ ರುಚಿ‌ ಮಾತ್ರವಲ್ಲದೆ ದೇಹಕ್ಕೆ ಉತ್ತಮವಾಗಿದೆ. ಮಜ್ಜಿಗೆಯಲ್ಲಿ ಕ್ಯಾಲೋರಿ, ಪ್ರೊಟೀನ್, ಕಾರ್ಬೋಹೈಡ್ರೇಟ್, ಫ್ಯಾಟ್, ಫೈಬರ್, ಸೋಡಿಯಂ, ವಿಟಮಿನ್ ಎ ಮತ್ತು ವಿಟಮಿನ್ ಬಿ 12 ಇದೆ. ಇಷ್ಟು ಪೋಷಕಾಂಶ ಇರುವ ಮಜ್ಜಿಗೆಯನ್ನು ನಿಯಮಿತವಾಗಿ ಕುಡಿಯುವುದರಿಂದ ನಮ್ಮ ದೇಹದ ಮೂಳೆಗಳಿಗೆ ರಕ್ಷಣೆ ಸಿಗುತ್ತದೆ. ಮಜ್ಜಿಗೆಯಲ್ಲಿ ವಿಟಮಿನ್ ಎ ಮತ್ತು ಕ್ಯಾಲ್ಶಿಯಂ ಉತ್ತಮ‌ ಪ್ರಮಾಣದಲ್ಲಿ ಮೂಳೆಗಳಿಗೆ ರಕ್ಷಣೆ ನೀಡುವುದರ ಜೊತೆಗೆ ಅವು ಬಲಿಷ್ಠವಾಗಿರಲು ಸಹಾಯ ಮಾಡುತ್ತದೆ. ಮಜ್ಜಿಗೆಗೆ ಜೀರಿಗೆ ಪುಡಿ ಹಾಗೂ ಉಪ್ಪು ಸೇರಿಸಿ ಕುಡಿಯುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ. ಮಜ್ಜಿಗೆಯಲ್ಲಿ ಸಕ್ಕರೆ ಬೆರೆಸಿ ಕುಡಿಯುವುದರಿಂದ ಎದೆ ಉರಿ ಹಾಗೂ ಉರಿ ತೇಗು ಶಮನವಾಗುತ್ತದೆ. ಮಜ್ಜಿಗೆಯಲ್ಲಿ ಉಪ್ಪು ಹಾಗೂ ಹಸಿಶುಂಠಿ ರಸವನ್ನು ಸೇರಿಸಿ ಸೇವನೆ ಮಾಡುವುದರಿಂದ ವಾಕರಿಕೆ ವಾಂತಿ ಕಡಿಮೆ ಆಗುತ್ತದೆ. ನಮ್ಮ ದೇಹಕ್ಕೆ ಅಗತ್ಯವಿರುವ ಖನಿಜಗಳು ಮಜ್ಜಿಗೆಯಲ್ಲಿ ಹೇರಳವಾಗಿ ಕಂಡುಬರುತ್ತದೆ.

ಮಜ್ಜಿಗೆಯನ್ನು ಕುಡಿಯುವುದರಿಂದ ಮಾನಸಿಕ ಒತ್ತಡ ಕಡಿಮೆಮಾಡಿ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ಇದಷ್ಟೆಯಲ್ಲದೆ ದೇಹದ ಜೀರ್ಣವ್ಯುಹದ ಸಮಸ್ಯೆಗಳಾದ ಅಜೀರ್ಣ, ಹೊಟ್ಟೆ ಉರಿ, ಆ್ಯಸಿಡಿಟಿ ಕಂಡುಬಂದರೆ ಅರ್ಧ ಲೋಟ ಹುಳಿ ಮಜ್ಜಿಗೆಗೆ ಇಂಗು, ಉಪ್ಪು ಬೆರೆಸಿ ಕುಡಿಯುವುದರಿಂದ ಕೆಲವೆ ಹೊತ್ತಿನಲ್ಲಿ ಹೊಟ್ಟೆ ನೋವು ಕಡಿಮೆ ಆಗುತ್ತದೆ. ಮಜ್ಜಿಗೆಯಲ್ಲಿರುವ ಪೊಟ್ಯಾಷಿಯಂ ಅಂಶವು ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ನಿಯಮಿತವಾಗಿ ಮಜ್ಜಿಗೆಯನ್ನು ಕುಡಿಯುವುದರಿಂದ ರಕ್ತನಾಳಗಳಲ್ಲಿ ಶೇಖರಣೆಯಾಗಿರುವ ಕೊಬ್ಬನ್ನು ಕರಗಿಸುತ್ತದೆ.

ಸಮೃದ್ಧವಾಗಿ ಬೆಣ್ಣೆ ತೆಗೆದ ಮಜ್ಜಿಗೆಯನ್ನು ಸೇವನೆ ಮಾಡುವುದರಿಂದ ದೇಹದ ತೂಕ ಕಡಿಮೆ ಆಗುತ್ತದೆ. ಉರಿ ಮೂತ್ರ ಅಥವಾ ಮೂತ್ರ ವಿಸರ್ಜಿಸಲು ತೊಂದರೆ ಆಗುತ್ತಿದ್ದರೆ ಮಜ್ಜಿಗೆಗೆ ಬೆಲ್ಲವನ್ನು ಸೇರಿಸಿ ಕುಡಿಯುವುದರಿಂದ ನಿವಾರಣೆಯಾಗುತ್ತದೆ. ಪ್ರತಿದಿನ ಊಟದ ನಂತರ ನಿಯಮಿತವಾಗಿ ಮಜ್ಜಿಗೆಯನ್ನು ಕುಡಿಯುವುದರಿಂದ ಅನೇಕ ಆರೋಗ್ಯಕರ ಲಾಭಗಳಿವೆ.ಸದ್ಯ ಮಜ್ಜಿಗೆಗು‌‌ ಮಾರುಕಟ್ಟೆಯಲ್ಲಿ ಬೇಡಿಕೆ‌ ಹೆಚ್ಚಿಸದ್ದು ಮಸಾಲಾ ಮಜ್ಜಿಗೆ, ಸಹಿ ಮಜ್ಜಿಗೆ, ಲಸ್ಸಿ ಹೀಗೆ ಅಭಿರುಚಿಗೆ ತಕ್ಕಂತಹ ರುಚಿ ನಮಗೆ ಸಿಗುತ್ತವೆ.‌ ಒಟ್ಟಾರೆ ಮನೆಯಲ್ಲಿ ಯಾವುದೇ ಕಲಬೇರಿಕೆ ಇಲ್ಲದೆ ದೂರೆಯುವ ಮಜ್ಜಿಗೆಯನ್ನು ಸೇವಿಸುವುದರ ಮೂಲಕ ಆರೋಗ್ಯ ಚನ್ನಾಗಿಟ್ಟುಕೊಳ್ಳಬಹುದು.