Advertisements

5 ನಿಮಿಷದಲ್ಲಿ ಮನೆಯಲ್ಲೆ ಮಾಡಿ ಬೇಕರಿ ಸ್ಟೈಲ್ ಮಸಾಲಾ ಕಡಲೆ ಬೀಜ..

Aduge

ತುಂಬಾ ಸುಲಭವಾಗಿ ನಿಮ್ಮ ಮನೆಯಲ್ಲೇ ಇರುವ ಸಾಮಾನಿನಲ್ಲಿ ರುಚಿಯಾದ ಗರಿಗರಿಯಾಗಿ ಮಾಡಿದ ಎಣ್ಣೆ ಇರದ ಕಡಲೆಬೀಜ ಮಾಡಿ ಸವಿಯಿರಿ ಹಾಗೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಹುರಿದ ಮಸಾಲೆ ಕಡಲೆಕಾಯಿ ಬೀಜ ಮಾಡಲು ಬೇಕಾಗುವ ಸಾಮಗ್ರಿಗಳು : ಉಪ್ಪಿನ ಪುಡಿ 1 ಟೇಬಲ್ ಚಮಚ ನೀರು 2 ಲೋಟ ಕಡಲೆಕಾಯಿ ಬೀಜ 2 ದೊಡ್ಡ ಬಟ್ಟಲು.

Advertisements

ಮಾಡುವ ವಿಧಾನ : ಒಂದು ಬಟ್ಟಲಿಗೆ ಉಪ್ಪು, ಕಡಲೆಕಾಯಿ ಬೀಜ ಹಾಕಿ ಮೂರೂ ಲೋಟ ನೀರುನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಇಪ್ಪತ್ತು ನಿಮಿಷ ಬಿಡಿ. ನಂತರ ನೀರನ್ನು ಬಸಿದು ಒಂದು ತೆಳ್ಳನೆಯ ಬಿಳಿಯ ಬಟ್ಟೆಯ ಮೇಲೆ ಹರಡಿ. ನೀರು ಆರಿದ ತಕ್ಷಣ ಮೈಕ್ರೋ ಓವನ್ನಲ್ಲಿ ಸ್ಟ್ಯಾಂಡ್ ಮೇಲೆ ಅದರ ತಟ್ಟೆಯ ಮೇಲೆ ಹರಡಿ ಗ್ರಿಲ್ ಮೋಡಲ್ಲಿ ಐದು ನಿಮಿಷಕ್ಕೊಮ್ಮೆ ಸೆಟ್ ಮಾಡಿ ಎರಡು ಬಾರಿ ಇಟ್ಟು ತೆಗೆಯಿರಿ. ಈಗ ನೋಡಿ ಕಡಲೆಕಾಯಿ ಬೀಜವು ಗರಿ ಗರಿ ಯಾಗಿರುತ್ತದೆ.

ಮಸಾಲೆಗೆ ಬೇಕಾಗುವ ಸಾಮಗ್ರಿಗಳು : ಕಡಲೆ ಹಿಟ್ಟು ಎರಡು ಟೇಬಲ್ ಚಮಚ, ಅರಿಶಿಣ ಪುಡಿ ಒಂದು  ಟೀ ಚಮ, ಅಚ್ಚಕಾರದ ಪುಡಿ ಒಂದು ಟೇಬಲ್ ಚಮಚ,  ಚಾಟ್ ಮಸಾಲ ಒಂದು ಟೀ ಚಮಚ, ರುಚಿಗೆ ಬೇಕಾಗುವಷ್ಟು ಉಪ್ಪು, ಎರಡು ಚಮಚ ಎಣ್ಣೆ, ನಾಲ್ಕು ಟೇಬಲ್ ಚಮಚ ನೀರು.

ಈಗ ಒಂದು ದುಂಡಗಿನ ಪಾತ್ರೆಗೆ ಕಡಲೆಹಿಟ್ಟು, ಹರಿಶಿಣ ಪುಡಿ, ಚಾಟ್ ಮಸಾಲ, ಅಚ್ಚಕಾರದ ಪುಡಿ , ರುಚಿಗೆ ಬೇಕಾಗುವಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಚೆನ್ನಾಗಿ ಮಿಕ್ಸ್ ಮಾಡಿ ನಂತರ ಈಗ ಎರಡು ಸ್ಫೂನ್ ಎಣ್ಣೆ ಹಾಗೂ ನಾಲ್ಕು ಟೇಬಲ್ ಚಮಚ ನೀರನ್ನು ಹಾಕಿ ಚೆನ್ನಾಗಿ ಬೆರೆಸಿ. ಈಗ ಅದು ಚಟ್ನಿಯ ಹಾಗೆ ಇರುವುದು. ಗರಿಗರಿಯಾದ ಬಿಸಿ ಬಿಸಿಯಾದ ಕಡಲೆ ಬೀಜವನ್ನು  ಮೈಕ್ರೋಓವನ್ ನಿಂದ ತೆಗೆಯಿರಿ ನಂತರ ಈ ಪಾತ್ರೆಗೆ ಹಾಕಿ.  ಚಟ್ನಿಯ ತರ ಇರುವ ಮಸಾಲೆಯನ್ನು ಒಂದು ಚಮಚದಿಂದ ಎಲ್ಲಾ ಕಡಲೆಬೀಜಗಳಿಗೆ ಅಂಟಿಕೊಳ್ಳುವವರೆಗೂ ಚೆನ್ನಾಗಿ ಹಗುರವಾಗಿ ಮಿಕ್ಸ್ ಮಾಡಿ. ಕಡಲೆಬೀಜ ಬಿಸಿ ಇದ್ದರೆ ಮಸಾಲೆ ಕಡಲೆಬೀಜಗಳಿಗೆ ಒಂದೇ ಸಮನಾಗಿ ಚೆನ್ನಾಗಿ ಅಂಟಿಕೊಳ್ಳುತ್ತದೆ.

ಎಲ್ಲಾ ಕಡಲೇಬೀಜಕ್ಕೂ ಮಸಾಲೆ ಅಂಟಿದ ನಂತರ ಮೈಕ್ರೋ ಓವನ್ನ ತಟ್ಟೆಗೆ ಹರಡಿ ಗ್ರಿಲ್ ಮೋಡಿನಲ್ಲಿ ಐದು ನಿಮಿಷ ಸೆಟ್ ಮಾಡಿ, ನಂತರ ತೆಗೆದು ಮತ್ತೆ ಎಲ್ಲವನ್ನು ಕೈಯಾಡಿಸಿ ನಂತರ ಮತ್ತೆ ಮೂರು ನಿಮಿಷಕ್ಕೆ ಸೆಟ್ ಮಾಡಿ ಕೈಯಾಡಿಸಿ, ಇನ್ನು ಎರಡು ನಿಮಿಷಕ್ಕೆ ಸೆಟ್ ಮಾಡಿ ತೆಗೆದುಬಿಡಿ. ಈಗ ಗರಿಗರಿಯಾದ ರುಚಿರುಚಿಯಾದ ಮಸಾಲೆ ಕಡಲೆಬೀಜ ರೆಡಿ. ತಣ್ಣಗಾಗಲು ಸ್ವಲ್ಪ ಸಮಯ ಬಿಡಿ. ಪೂರ್ತಿ ತಣ್ಣಗೆ ಹಾಗಿದ ಮೇಲೆ ಮಸಾಲೆ ಕಡಲೆಬೀಜಗಳನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿ ಬೇಕೆನಿಸಿದಾಗ ನಿಮ್ಮ ಮನೆಯವರಿಗೆ ಹಾಗೂ ಸ್ನೇಹಿತರಿಗೆ ತಿನ್ನಲು ಕೊಡಿ.