Advertisements

ವಾರಗಟ್ಟಲೇ ಶೇಖರಿಸಿ ಇಡಬಹುದಾದ ರುಚಿ ರುಚಿಯಾದ ಪುಳಿಯೋಗರೆ ಗೊಜ್ಜು ಮಾಡುವ ವಿಧಾನ

Aduge

ಪುಳಿಯೋಗರೆ ಎಂದರೆ ಎಲ್ಲರ ಬಾಯಲ್ಲಿ ನೀರೂರುತ್ತದೆ. ಎಲ್ಲರಿಗೂ ಫೇವರೆಟ್ ಟಿಫನ್. ಮಕ್ಕಳಿಗೆ ಪುಳಿಯೋಗರೆ ಎಂದರೆ ಹಬ್ಬವೇ ಹಬ್ಬ. ಈಗ ವಾರಗಟ್ಟಲೇ ಶೇಖರಿಸಿ ಇಡಬಹುದಾದ ರುಚಿ ರುಚಿಯಾದ ಪುಳಿಯೋಗರೆ ಗೊಜ್ಜು ಮಾಡುವ ವಿಧಾನ ತಿಳಿಯೋಣ ಬನ್ನಿ.

Advertisements

ಮೊದಲಿಗೆ ಪುಳಿಯೋಗರೆ ಪುಡಿ ಮಾಡಿಟ್ಟುಕೊಳ್ಳಿ : ಇದನ್ನು ತಯಾರಿಸಿ ತಿಂಗಳುಗಟ್ಟಲೆ ಇಡಬಹುದು ಹಾಗೂ ಮೊದಲೇ ಮಾಡಿಟ್ಟುಕೊಂಡರೆ ಗೊಜ್ಜು ತಯಾರಿಸುವಾಗ ಬೇಗ ಮಾಡಬಹುದು.

ಕಡಲೆ ಬೇಳೆ ಒಂದು ಪ್ರಮಾಣ ಬಟ್ಟಲು, ಉದ್ದಿನಬೇಳೆ ಅರ್ಧ ಪ್ರಮಾಣ ಬಟ್ಟಲು, ಸಾಸಿವೆ, ಜೀರಿಗೆ, ದನಿಯಾ, ಎಳ್ಳು, ಚಕ್ಕೆ, ಲವಂಗ, ಬಾಣಲೆಯಲ್ಲಿ ಉರಿದು ಹದವಾಗಿ ಆರಿಸಿ, ಮೆಣಸಿನಕಾಯಿ ಒಣಗಿದ ಅಥವಾ ಖಾರದ / ಅಚ್ಚಖಾರದ ಪುಡಿಯನ್ನು ತಗೆದುಕೊಳ್ಳಬಹುದು. ಉರಿದ ಪದಾರ್ಥ, ಬ್ಯಾಡಗಿ ಮೆಣಸಿನಕಾಯಿ ಕೆಂಪು ಮೆಣಸಿನಕಾಯಿ, ಒಣಕೊಬ್ಬರಿ ಒಂದು ಬಟ್ಟಲು, ಎಲ್ಲವನ್ನೂ ಮಿಕ್ಸರ್ ನಲ್ಲಿ ಮಿಕ್ಸರ್ ಜಾರ್ ಗೆ ಹಾಕಿ ಪುಡಿ ಮಾಡಿಟ್ಟುಕೊಳ್ಳಿರಿ.

ಈಗ ಪುಳಿಯೋಗರೆ ಗೊಜ್ಜು ಮಾಡೋಣ ಬನ್ನಿ : ಮೊದಲಿಗೆ ಹುಳಿಗೆ ಹುಣಸೆಹಣ್ಣು ನೀರಿಗೆ ಹಾಕಿ ನೆನೆಯಲು ಬಿಡಿ. ನಂತರ ಅಡುಗೆ ಎಣ್ಣೆಯನ್ನು ಅಚ್ಚಿದ ಸ್ಟವ್ ಮೇಲಿಟ್ಟ ಬಾಣಲೆಗೆ ಹಾಕಿ. ಸಾಸಿವೆ ಜೀರಿಗೆ, ಕಡಲೆಬೇಳೆ, ಉದ್ದಿನಬೇಳೆ, ಕರಿಬೇವು, ಒಣ ಮೆಣಸಿನಕಾಯಿ, ಬ್ಯಾಡಗಿ ಮೆಣಸಿನಕಾಯಿ, ಒಗ್ಗರಣೆ ಹಾಕಿ, ನಂತರ ಪುಡಿ ಮಾಡಿಟ್ಟುಕೊಂಡ ಒಂದು ಕಪ್ ಒಣಕೊಬ್ಬರಿ, ಒಂದು ಬಟ್ಟಲು ಪುಳಿಯೋಗರೆ ಪುಡಿ ಹಾಕಿರಿ.

ನಂತರ ಹುಣಸೆಹಣ್ಣಿನ ರಸ, ಬೆಲ್ಲದಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿರಿ ರುಚಿ ಹೆಚ್ಚಿಸುತ್ತದೆ ಅಡುಗೆ ಎಣ್ಣೆ ಮತ್ತಷ್ಟು ಮೇಲೆ ಹಾಕಿ ಕಲೆಸಿರಿ. ಐದು ನಿಮಿಷ ಚೆನ್ನಾಗಿ ಕುದಿಸಿ. ಈಗ ರುಚಿ ರುಚಿಯಾದ ಪುಳಿಯೋಗರೆ ಗೊಜ್ಜು ರೆಡಿ. ಜಾರ್ ಅಥವಾ ಡಬ್ಬಿಕೆ ಹಾಕಿ ಫ್ರಿಜ್ ನಲ್ಲೂ ಹಾಗೆಯೇ ಇಡಬಹುದು. ಬಿಸಿ ಬಿಸಿ ಅನ್ನಕ್ಕೆ ಕಲೆಸಿ ಮನೆಯವರಿಗೆ ತಿನ್ನಲು ನೀಡಿದರೆ ಕ್ಷಣ ಮಾತ್ರದಲ್ಲಿ ಖಾಲಿ. ನೀವು ಮಾಡಿ ನೋಡಿ.