Advertisements

ಕನಸಿನ ರಾಣಿ ಮಾಲಾಶ್ರೀ ಮಗಳ ಹುಟ್ಟುಹಬ್ಬದ ಸಂಭ್ರಮ.. ಈಗ ಇವರ ಮಕ್ಕಳು ಎಷ್ಟು ದೊಡ್ಡವರಾಗಿದ್ದಾರೆ ಗೊತ್ತಾ? ನೋಡಿ.

Cinema

ನಮಸ್ತೆ ಸ್ನೇಹಿತರೆ, ಮಾಲಾಶ್ರೀಯವರ ಹೆಸರು ಕೇಳಿದರೆ ಸಾಕು ಈಗಲೂ ಒಂದು ಕ್ಷಣ 90ರ ದಶಕದ ಗಂಡೈಕ್ಲ ಎದೆ ಜಲ್ ಅನಿಸಿರುವುದು ಖಂಡಿತ‌. ಮಾಲಾಶ್ರೀಯವರು ಚಾಮುಂಡಿ, ದುರ್ಗಿ ಈ ರೀತಿ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಹೆಸರು ಮಾಡಿದ್ದು ನಿಜ.. ಆದರೆ ಮಾಲಾಶ್ರಿಯವರು ರಾಮಾಚಾರಿ, ನಂಜುಂಡಿ ಕಲ್ಯಾಣ ಈ ರೀತಿಯ ಸಿನಿಮಾಗಳಲ್ಲಿಯೇ ಹೆಚ್ಚು ಇಷ್ಟವಾಗಿದ್ರೂ. ಕನಸಿನ ರಾಣಿ ಎಂತಲೇ ಖ್ಯಾತರಾಗಿದ್ದರು. ಇನ್ನೂ ಹೇಳಬೇಕೆಂದರೆ ಈಗ ನಟಿ ಮಣಿಯರು ನನ್ನದು ಹೆಚ್ಚು ಸಂಭಾವನೆ ಎನ್ನುವ ಕಾಲ.. ಆದರೆ ಆ ಕಾಲದಲ್ಲಿಯೇ ಮಾಲಾಶ್ರಿಯವರಿಗೆ ಲಕ್ಷಗಳ ಲೆಕ್ಕದಲ್ಲಿ ಸಂಭಾವನೆ ಕೊಡಲಾಗುತ್ತಿತ್ತು..

Advertisements

ಕನ್ನಡದ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿಯರಲ್ಲಿ ಮಾಲಾಶ್ರೀಯವರೇ ಟಾಪ್ ನಲ್ಲಿದ್ರು. ಮಾಲಾಶ್ರಿಯವರು ಯಾವ ಮಟ್ಟಕ್ಕೆ ಬ್ಯುಸಿಯಾಗಿದ್ದರು ಎಂದರೆ.. ರಾಮಾಚಾರಿ ಸಿನಿಮಾದ ಸಮಯದಲ್ಲಿ ಒಂದು ದಿನಕ್ಕೆ ಮೂರು ಸಿನಿಮಾಗಲ್ಲಿ ಪಾಲ್ಗೊಳ್ಳುತ್ತಿದ್ದರು. ಬೇರೆ ಸಿನಿಮಾಗಳ ಚಿತ್ರೀಕರಣ ಮುಗಿಸಿ.. ರಾಮಾಚಾರಿ ಚಿತ್ರೀಕರಣಕ್ಕೆ ಬಂದು ಸುಸ್ತಾಗಿ ಮಲಾಗಿದ್ದಾಗಲು ಸಹ ಅದೇ ಸಮಯದಲ್ಲಿ ರವಿಚಂದ್ರನ್ ಅವರು ಒಂದು ಸಂಪೂರ್ಣ ಹಾಡಿನ ಚಿತ್ರೀಕರಣವನ್ನ ಮಾಲಾಶ್ರೀಯವರಿಗೆ ತಿಳಿಯದಂತೆಯೇ ಚಿತ್ರೀಕರಣ ಮಾಡಿ ಮುಗಿಸಿದ್ದರು.

ದೊಡ್ಡ ನಿರ್ಮಾಕನನ್ನ ಮದುವೆಯಾದರೂ ಸಹ ಚಿತ್ರೀಕರಣಕ್ಕೆ ಬಂದರೆ ನಿರ್ದೇಶಕರಿಗೆ ಹಾಗೂ ಕಲಾವಿದರಿಗೆ ಎಂದಿನಂತೆ ಗೌರವ ನೀಡಿ ತಮ್ಮ ಕೆಲಸವನ್ನು ಮಾಡುತ್ತಿದ್ದರು.. ಇನ್ನೂ ಮುಂದೆ ಮಹಿಳಾ ಪ್ರಧಾನ ಸಿನಿಮಾಗಳತ್ತ ಮಾಲಾಶ್ರಿಯವರ ಹೊಲವು ಹೆಚ್ಚಾಯಿತು. ಸಧ್ಯ ಸಿನಿಮಾರಂಗದಿಂದ ಕೊಂಚ ಬ್ರೇಕ್‌ ಪಡೆದಿರುವ ಮಾಲಾಶ್ರಿಯವರು ಕುಟುಂಬದ ಜೊತೆ ಸಮಯವನ್ನು ಕಳೆಯುತ್ತಿದ್ದಾರೆ.. ಇನ್ನೂ ಮಾಲಾಶ್ರೀಯವರ ಮಕ್ಕಳು ಹೇಗಿದ್ದಾರೆಂಬ ಸಣ್ಣ ಕುತೂಹಲ ಅಭಿಮಾನಿಗಳಿಗೆ ಇದ್ದೇ ಇರುತ್ತದೆ. ಮಾಲಾಶ್ರಿಯವರು ನಿರ್ಮಾಪಕ ರಾಮು ಅವರನ್ನ ಮದುವೆಯಾಗಿದ್ದು.‌.

ಈ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ, ಅನನ್ಯ ಹಾಗೂ ಆರ್ಯ ಎಂಬ ಇಬ್ಬರು ಮಕ್ಕಳಿದ್ದು.. ಇಬ್ಬರೂ ಸಹ ಓದಿನಲ್ಲಿ ಬ್ಯುಸಿಯಾಗಿದ್ದು..‌ ಸಿನಿಮಾ ರಂಗದ ಕಡೆಗೆ ಮುಖ ಮಾಡುವುದೇ ಸಂದೇಹವಾಗಿದೆ. ಅಪ್ಪ ಅಮ್ಮ ಇಬ್ಬರೂ ಸಿನಿಮಾ ಇಂಡಸ್ಟ್ರಿಯವರಾದರು ಸಹ.. ಮಕ್ಕಳು ತಮ್ಮ ಗುರಿ ಏನಿದಿಯೋ ಅದನ್ನೇ ಸಾಧಿಸಲಿ ಎಂದು ಹೇಳುತ್ತಾರೆ ಮಾಲಾಶ್ರಿಯವರು. ಸಧ್ಯ ಇಂದು ಮಾಲಾಶ್ರಿಯವರ ಮಗಳು ಅನನ್ಯ ಹುಟ್ಟು ಹಬ್ಬವಿದ್ದು.. ಮಗಳಿಗೆ ವಿಶೇಷವಾಗಿ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ.

ಹೌದು ಸಾಮಾಜಿಕ ಜಾಲತಾಣದಲ್ಲಿ ಮಗಳ ಪೊಟೊಗಳನ್ನು ಹಂಚಿಕೊಂಡಿರುವ ಮಾಲಾಶ್ರಿಯವರು ಹುಟ್ಟು ಹಬ್ಬದ ಶುಭಾಶಯಗಳು ನನ್ನ ಮಗಳೇ.. ನೀನು ನಿಜಕ್ಕೂ ನನಗೆ ಅತ್ಯಮೂಲ್ಯ, ನೀನೆ ನನಗೆ ಎಲ್ಲಾ ಎಂಬುದು ನಿನಗೆ ತಿಳಿದಿದೆ ಎಂದು ಅಂದುಕೊಳ್ಳುವೆ.. ನಿನ್ನ ಜೀವನ ಪೂರ್ತಿ ಸಂತೋಷ ಪ್ರೀತಿ ತುಂಬಿರಲಿ ಎಂದು ಆರೈಸುವೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.. ಅಭಿಮಾನಿಗಳು ಹಾಗೂ ಸ್ನೇಹಿತರು ಸಹ ಅನನ್ಯ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ್ದು ಮುಂದಿನ ಜೀವನಕ್ಕೆ ಶುಭಹಾರೈಸಿದ್ದಾರೆ.