Advertisements

ಪತಿ ನಿಧನದ 8 ತಿಂಗಳ ಬಳಿಕ‌ ದೊಡ್ಡ ನಿರ್ಧಾರ ಮಾಡಿದ ಮಾಲಾಶ್ರೀ.. ಏನು ಗೊತ್ತೇ!

Cinema

ಪ್ರಿಯ ವೀಕ್ಷಕರೆ ಕನ್ನಡ ಸಿನೆಮಾ ರಂಗದಲ್ಲಿ ಅದೆಷ್ಟೊ ನಟಿಯರು ತಮ್ಮ ಅಭಿನಯ ಕೌಶಲ್ಯದಿಂದ ಅಪಾರ ಪ್ರಮಾಣದ ಅಭಿಮಾನಿ ಬಳಗವನ್ನು‌ ಬಾಚಿಕೊಂಡಿದ್ದಾರೆ. ಅಂತವರ ಸಾಲಿನಲ್ಲಿ ಪ್ರೇಮಾ, ಶೃತಿ, ಸೌಂದರ್ಯ ಹಲವರಾದರೆ ಒಳಗೆಸೆರಿದರೆ ಗುಂಡು ಹುಡುಗಿಯಾಗುವಳು ಗಂಡು ಎಂಬ ಹಾಡಿನ‌ ಮೂಲಕ ಕನ್ನಡ ಅಭಿಮಾನಿಗಳನ್ನು ರಂಜಿಸಿದ್ದು ಸ್ಯಾಂಡಲ್ ವುಡ್ ‌ಕನಸಿನ ರಾಣಿ ಎಂದೆ ಕರೆಯಲ್ಪಡುವ ಮಾಲಾಶ್ರೀ. ನಂಜುಂಡಿ ಕಲ್ಯಾಣ ಸಿನಿಮಾ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟ ಮಾಲಾಶ್ರೀ ಅವರು ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದವರು.. ಆ ಕಾಲದಲ್ಲಿ ಅತಿ ಹೆಚ್ಚು ಸಂಭಾವನೆ ನೀಡುತ್ತಿದ್ದ ನಟಿ ಎಂದರೆ ಅದು ಮಾಲಾಶ್ರೀ ಅವರಿಗೆ ಮಾತ್ರ. ಹೀಗೆ ಇವರು ಕನ್ನಡ ಚಿತ್ರರಂಗದಲ್ಲಿ ಅಪಾರ ಮನ್ನಣೆ ಬೇಡಿಕೆಯನ್ನು ಹೊಂದಿದ್ದರು.

[widget id=”custom_html-3″]

Advertisements

ಸುಮಾರು ವರ್ಷಗಳಿಂದ ಮಾಲಾಶ್ರೀ ನಾಯಕ ನಟಿಯಾಗಿ, ಮಹಿಳೆ ಪೌರುಷ, ಸಾಹಸ, ಸಮಾಜದಲ್ಲಿ ‌ನಡೆಯುವ ಮಹಿಳೆಯ ದೌರ್ಜನ್ಯ ‌ಕುರಿತಾದ ಕಥೆಗಳಿಗೆ ನಟಿಸುವುದರ ಮೂಲಕ ಜೀವ ತುಂಬುತ್ತಿದ್ದರು‌. ಹೀಗೆ ನಟನೆ‌ ನಂತರ ನಿರ್ದೇಶಕ ರಾಮು ಅವರೊಂದಿಗೆ ಸಪ್ತಪದಿ ತುಳಿದು ಸಂತೋಷದಿಂದ ತಮ್ಮ ಜೀವನ ಸಾಗಿಸುತ್ತಿದ್ದರು. ಇನ್ನು ಇವರದ್ದು ಮುದ್ದಾದ ಕುಟುಂಬ. ಮಾಲಾಶ್ರೀ ಹಾಗೂ ರಾಮು ದಂಪತಿಗಳಿಗೆ ಒಂದು ಗಂಡು ಹಾಗೂ ಹೆಣ್ಣು ಮಗು. ಇತ್ತಿಚೀಗೆ ಪ್ರಪಂಚದುದ್ದಕ್ಕೂ ಹಬ್ಬಿಕೊಂಡ ಕೋರೊನಾ ದಾ’ಳಿ’ಯಿಂದಾಗಿ ಎಂಟು ತಿಂಗಳ ಹಿಂದೆ ರಾಮು ಅವರು ನಿಧನರಾದರು. ಪತಿಯನ್ನು ಕಳೆದುಕೊಂಡ ನೋವಿನ ಜೊತೆಯೇ ಸಹಜ ಜೀವನಕ್ಕೆ ಬರುತ್ತಿರುವ ಮಾಲಾಶ್ರೀ ಅವರು ಕಾರ್ಯಕ್ರಮಗಳಲ್ಲಿಯೂ ಭಾಗಿಯಾಗುತ್ತಿದ್ದು, ಇದೀಗ ಎಂಟು ತಿಂಗಳ ಬಳಿಕ ಪ್ರಮುಖ ನಿರ್ಧಾರವೊಂದನ್ನು ಸಹ ತೆಗೆದುಕೊಂಡಿದ್ದಾರೆ.

[widget id=”custom_html-3″]

ಇನ್ನು ಮಾಲಾಶ್ರೀ ಪತಿ‌ ರಾಮು ಅವರು ಕೋಟೆ ರಾಮು ಎಂದೆ‌ ಹೆಸರಾಗಿದ್ದರು. ತಮ್ಮ‌ 21 ನೇ ವಯಸ್ಸಿಗೆ ಚಂದನವನವನ್ನು ಪ್ರವೇಶಿಸಿ ನಿರ್ದೇಶಕರಾಗಿ ಬೆಳೆದು ಬಂದಿದ್ದಾರೆ‌ ವಜ್ರೇಶ್ವರಿ ಕಂಬೈನ್ಸ್.. ಈಶ್ವರಿ ಪ್ರೊಡಕ್ಷನ್ಸ್ ಹೀಗೆ ಆಗಿನ ಕಾಲದಲ್ಲಿ ಹೆಸರು ಹಾಗೂ ಗೌರವ ಸಂಪಾದಿಸಿದ್ದ ಕೆಲವೇ ನಿರ್ಮಾಣ ಸಂಸ್ಥೆಗಳಲ್ಲಿ ರಾಮು ಅವರ ನಿರ್ಮಾಣ ಸಂಸ್ಥೆಯೂ ಒಂದಾಗಿತ್ತು.. ಇನ್ನು ರಾಮು ಅವರು ಮೊದಲು ನಿರ್ಮಾಣ‌ ಮಾಡಿದ್ದ ಸಿನಿಮಾ ನಟ ದೇವರಾಜ್ ಅವರದ್ದಾದರೆ ಕೊನೆಯ ಸಿನಿಮಾ ಅವರ ಮಗ ಪ್ರಜ್ವಲ್ ದೇವರಾಜ್ ಅವರ ಅರ್ಜುನ್ ಗೌಡ ಆಗಿದೆ.

[widget id=”custom_html-3″]

ಇನ್ನು ಅರ್ಜುನ ಗೌಡ ಸಿನೆಮಾ ತೆರೆ ಮೇಲೆ‌ ಬರುವಾಗಲೇ ರಾಮು ಅವರು ನಿಧನ ಹೊಂದಿದ್ದು. ಆದರೆ ಈಗ ಮಾಲಾಶ್ರೀ ಪತಿ ಆಸೆಯಂತೆ ಆ‌ ಸಿನೆಮಾ ಬಿಡುಗಡೆಯ ಎಲ್ಲ‌ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ. ಹೌದು ಡಿಸೆಂಬರ್ 31 ರಂದು ಅರ್ಜುನ್ ಗೌಡ ಸಿನಿಮಾ ಬಿಡುಗಡೆಗೆ ಎಲ್ಲಾ ತಯಾರಿಯಾಗಿದ್ದು ರಾಮು ಅವರ ಕನಸನ್ನು ಇದೀಗ ಎಂಟು ತಿಂಗಳ ಬಳಿಕ ಮಾಲಾಶ್ರೀ ಅವರು ನೆರವೇರಿಸುತ್ತಿದ್ದಾರೆ.. ಅಷ್ಟೇ ಅಲ್ಲದೇ ಮುಂದಿನ ದಿನಗಳಲ್ಲಿ ರಾಮು ಸ್ಯಾಂಡಲ್ವುಡ್ ನೀಡಿದ್ದ ಕೊಡುಗೆ ಹಾಗೂ ನಿರ್ಮಾಪಕಿಯಾಗಿ ಗುರುತಿಸಿಕೊಂಡು ರಾಮು ನಿರ್ಮಾಣ ಸಂಸ್ಥೆಯನ್ನು ಮುಂದುವರೆಸಿಕೊಂಡು ಹೋಗಲಿದ್ದಾರೆ ಎಂದು ಹೇಳಲಾಗುತ್ತಿದೆ.. ಒಟ್ಟಿ‌ನಲ್ಲಿ‌ ನೋವಿನ ಜೊತೆಯೇ ವಾಸ್ತವದ ಹೊಸ ಜೀವನಕ್ಕೆ ಹೊಸ ಹೆಜ್ಜೆ ಹಾಕುತ್ತಿರುವ ಮಾಲಾಶ್ರೀ ಅವರಿಗೆ ಒಳ್ಳೆಯದಾಗಲಿ.