Advertisements

ರಾಮಾಚಾರಿ ಸಿನಿಮಾದ ನಂತರ ಮಾಲಾಶ್ರೀ ಮತ್ತೆ ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ನಟಿಸುತ್ತಿಲ್ಲ ಯಾಕೆ ಗೊತ್ತಾ?

Cinema

ರಾಮಾಚಾರಿ.. ಮುದ್ದು ಮುದ್ದಾಗಿ ರವಿಚಂದ್ರನ್ ಪೆದ್ದು ಅಭಿನಯದಲ್ಲಿ ಕಾಣಿಸಿಕೊಂಡಿರೋ ಸೂಪರ್ ಹಿಟ್ ಸಿನಿಮಾ.. ಈ ಸಿನಿಮಾದಲ್ಲಿ ರವಿಮಾಮ ಹಾಗೂ ರೆಬಲ್ ಮಾಲಾಶ್ರೀಯ ಜೋಡಿ ಸಹ ಸೂಪರ್ ಹಿಟ್ ಆಗಿತ್ತು. ಇವರಿಬ್ಬರ ಕಾಂಬಿನೇಷನ್ ಅಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಪ್ರೇಕ್ಷಕ ಪ್ರಭುಗಳು ಶಿಳ್ಳೆ ಹೊಡೆದಿದ್ರು. ಇದೊಂದು ಎವರ್ಗ್ರೀನ್ ಸಿನಿಮಾ.. ಸಕ್ಸಸ್ಫುಲ್ ಸಿನಿಮಾ.. ಆದ್ರೂ ಕೂಡ ಈ ಸಿನಿಮಾ ಹಿಟ್ ಆಗಿದ್ರೂ ಮತ್ಯಾಕೆ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಮಾಲಾಶ್ರೀ ಮತ್ತೊಮ್ಮೆ ಬಣ್ಣ ಹಚ್ಚಲಿಲ್ಲ? ಜೊತೆಯಾಗಿ ಯಾಕೆ ಅಭಿನಯಿಸಿಲ್ಲ? ಈ ಅನುಮಾನ ಸದ್ಯ ನಿಮಗೂ ಇರಬೇಕಲ್ವ ಸಿನಿಮಾ ತೆರೆಕಂಡು ಒಂದು ವರ್ಷದ ಒಳಗೆ ಅದೆಷ್ಟೋ ಅಭಿಮಾನಿಗಳು ಮತ್ತೆ ನಿಮ್ಮಿಬ್ಬರನ್ನು ತೆರೆಯ ಮೇಲೆ ನೋಡಬೇಕು ಎಂಬ ಆಸೆ ಕೂಡ ವ್ಯಕ್ತ ಪಡಿಸಿದ್ರಂತೆ. ಅತ್ಯದ್ಭುತ ಕಥಾಹಂದರ ಹೊಂದಿದಂತಹ ರಾಮಾಚಾರಿ. ಐವರು ಅಣ್ಣಂದಿರ ಮಧ್ಯೆ ಭಯಭಕ್ತಿಯಿಂದ ಇದ್ದಂತಹ ಬಂಗಾರದ ಪಂಜರದಲ್ಲಿದ್ದಂತಹ ತಂಗಿಯ ಬಾಳು ಒಬ್ಬ ಪೆದ್ದು ಹುಡುಗನಿಂದ ಹೇಗೆ ಹಸನಾಗುತ್ತದೆ ಎಂಬುದನ್ನು ಚಿತ್ರ ಕಥೆ ಬಹಳ ಅಚ್ಚುಕಟ್ಟಾಗಿ ಹೇಳುತ್ತೆ, ಈ ಸಿನಿಮಾಗೆ ಆಡಿಯನ್ಸ್ ಫುಲ್ ಮಾರ್ಕ್ ಕೊಟ್ಟಿದ್ದಾರೆ.

Advertisements

ಆಗಿನ ಕಾಲದಲ್ಲಿ ಕನಸಿನ ರಾಣಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್. ಬಹುತೇಕ ಲೀಡ್ ನಟನೆಯಲ್ಲಿ ಮಾಲಾಶ್ರೀಯೇ ಕಾಣಿಸಿಕೊಳ್ತಿದ್ದರು. ದೊಡ್ಡ ದೊಡ್ಡ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದರು. ದೊಡ್ಡ ದೊಡ್ಡ ನಾಯಕರ ಜೊತೆ ಬಣ್ಣ ಹಚ್ಚುತ್ತಿದ್ರು. ಹೀಗಾಗಿ ಮಾಲಾಶ್ರೀ ಅವ್ರಿಗೆ ಡೇಟ್ಸ್ ಇರಲಿಲ್ಲ ಅನ್ನೋ ಅಭಿಪ್ರಾಯ ಒಂದು ಕಡೆ ಕೇಳಿ ಬರುತ್ತಿದ್ರೆ, ಇನ್ನೊಂದು ಕಡೆ ಇವರಿಬ್ಬರಿಗೆ ಸರಿ ಹೊಂಡುವಂತಹ ಕಥೆ ಸಿಕ್ಕಿಲ್ಲ ಅಂತ ಹೇಳಲಾಗ್ತಿದೆ. ಹೌದು ಹೇಳಿ ಕೇಳಿ ಮಾಲಾಶ್ರೀ ಹಾಗೂ ರವಿಚಂದ್ರನ್ ಅವರದ್ದು ಸೂಪರ್ ಹಿಟ್ ಜೋಡಿ. ಈ ಜೋಡಿ ಇನ್ನೊಂದು ಸಿನಿಮಾ ಮಾಡುವಾಗ ಸಾಮಾನ್ಯವಾಗಿ ನಿರೀಕ್ಷೆಗಳು ಜಾಸ್ತಿಯೇ ಇರುತ್ತೆ. ಆಡಿಯನ್ಸ್ ನಿರೀಕ್ಷೆ ಹುಸಿಗೊಳಿಸಬಾರದು, ಹಾಗೇ ಅವರ ನಿರೀಕ್ಷೆ ರೀಚ್ ಆಗಬೇಕು ಅಂದ್ರೆ ಒಳ್ಳೆ ಕತೆ ಬೇಕು. ಹೀಗಾಗಿ ಈ ಜೋಡಿಗೆ ಸೂಟ್ ಆಗೋ ಕತೆಯೂ ಸಿಕ್ಕಿಲ್ಲ ಅಂತ ಹೇಳಲಾಗ್ತಿದೆ.


ಇಷ್ಟೇ ಅಲ್ಲದೇ ಮತ್ತೊಂದಿಷ್ಟು ಜನ ಮಾಲಾಶ್ರೀಯವರು ನಿರ್ಮಾಪಕ ಕೋಟಿ ರಾಮು ಅವರನ್ನು ಮದುವೆಯಾಗಿದ್ದು ಕೂಡ ಒಂದು ಕಾರಣ ಅಂತ ಹೇಳ್ತಾಯಿದ್ದಾರೆ. ಮದುವೆ ಆದ ಮೇಲೆ ಮಾಲಾಶ್ರೀ ಸಾಂಸರಿಕ ಜೀವನದಲ್ಲಿ ಬ್ಯುಸಿ ಆಗಿದ್ರಿಂದ ಅವರಿಗೆ ನಟನೆಯಲ್ಲಿ ಅಷ್ಟು ಸಮಯ ಮೀಸಲಿಡಲು ಸಾಧ್ಯವಾಗಲಿಲ್ಲ ಅನ್ನೋ ಅಭಿಪ್ರಾಯ ಕೂಡ ಇದೆ. ಮದುವೆಯಾದ ನಂತರ ಆಗೊಂದು ಈಗೊಂದು ಸಿನಿಮಾಗಳಲ್ಲಿ ಕಾಣಿಸುತ್ತಿದ್ದರು ಅಲ್ಲದೆ ಸಂಪೂರ್ಣ ತಮ್ಮ ಗಮನವನ್ನು ವೈವಾಹಿಕ ಜೀವನದ ಮೇಲೆ ಹರಿಸಿದ ಕಾರಣ ಮತ್ತೆ ಇವರಿಬ್ಬರ ಅತ್ಯದ್ಭುತ ಪ್ರೇಮಕಥೆಯನ್ನು ತೆರೆಯ ಮೇಲೆ ನೋಡಲು ಸಾಧ್ಯವಾಗಲಿಲ್ಲ ಅನ್ನೋದು ಒಂದಿಷ್ಟು ಜನರ ಅಭಿಪ್ರಾಯ. ವಿಚಾರ ಏನೇ ಇರಲಿ, ಕಾರಣ ಯಾವುದೇ ಇರಲಿ.. ಈ ಸೂಪರ್ ಹಿಟ್ ಜೋಡಿ ಇನ್ನೊಂದಿಷ್ಟು ಸಿನಿಮಾಗಳನ್ನು ಜೊತೆಯಾಗಿ ನಟಿಸಬೇಕಿತ್ತು ಅನ್ನೋದು ಅಭಿಮಾನಿಗಳ ಅಭಿಪ್ರಾಯ..