ನಮಸ್ತೆ ಸ್ನೇಹಿತರೆ, ಪ್ರೀತಿ ಅನ್ನುವುದು ಒಂದು ಮಾಯೆ, ಆ ಮಾಯೆ ಹೊಳಗೆ ಬಿದ್ದರೆ ಏನು ಕೂಡ ಗೊತ್ತಾಗುವುದಿಲ್ಲ.. ಅದಕ್ಕೇ ಪ್ರೀತಿ ಕುರುಡು ಅನ್ನೋದು. ಹಾಗೆ ಪ್ರೀತಿಗೆ ಯಾವುದೇ ವಯಸ್ಸಿನ ಅಂತರವಿಲ್ಲ.. ಇನ್ನೂ 47 ವರ್ಷದ ಖ್ಯಾತಿ ನಟಿಯನ್ನು ಮದುವೆಯಾಗುತ್ತಿದ್ದಾರೆ ಯಂಗ್ ಹೀರೊ. ತನಗಿಂತ 13 ವರ್ಷದ ಚಿಕ್ಕ ವಯಸ್ಸಿನ ನಟನನ್ನು ಮದುವೆಯಾಗುತ್ತಿರುವ ನಟಿ ಯಾರು ಗೊತ್ತಾ? ಆ ಮಾಹಿತಿಯನ್ನು ನೋಡೊಣ ಬನ್ನಿ.. ತಮ್ಮ 47 ವಯಸ್ಸಿನಲ್ಲಿ ಮದುವೆಯಾಗುತ್ತಿರುವ ನಟಿ ಮತ್ಯಾರು ಅಲ್ಲ ಮಲೈಕಾ ಅರೋರಾ.. ಆ ಯುವ ನಟ ಬಾಲಿವುಡ್ ನ ಅರ್ಜುನ್ ಕಪೂರ್.

1998 ರಲ್ಲಿ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಅವರನ್ನು ಮದುವೆಯಾಗಿದ್ದ ಮಲೈಕಾ ನಂತರ ಮಗನಿಗೆ ಜನ್ಮ ನೀಡಿದ್ದರು.. ಈಗ ಮಗನ ವಯಸ್ಸು 18 ವರ್ಷ. ನಟಿ ಮಲೈಕಾ ಹಾಗೂ ಅರ್ಬಾಜ್ ಖಾನ್ ಮಧ್ಯೆ ಮನಸ್ತಾಪ ಉಂಟಾದ ಮೇಲೆ.. ನಟ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ಮಾಡಲು ಶುರುಮಾಡಿದ ಮಲೈಕಾ 2017 ರಲ್ಲಿ ಅರ್ಬಾಜ್ ಖಾನ್ ಗೆ ಡೈವರ್ಸ್ ಕೊಟ್ಟು ಅರ್ಜುನ್ ಕಪೂರ್ ಅವರನ್ನು ಮದವೆಯಾಗಲು ಹೊರಟಿದ್ದಾರೆ ಮಲೈಕಾ. ಈಗ ಅವರಿಗೆ 47 ವರ್ಷ ವಯಸ್ಸು.. ಅರ್ಜುನ್ ಕಪೂರ್ ಗೆ 34 ವರ್ಷ. ಇಬ್ಬರ ಮಧ್ಯೆ ಸುಮಾರು 13 ವರ್ಷ ವಯಸ್ಸಿನ ಅಂತರ..

ಹುಡುಗಿ 1 ವರ್ಷ ದೊಡ್ಡವಳಾಗಿದ್ದರೂ ಹಿಂಜರಿಯುವ ಈ ಸಮಾಜದಲ್ಲಿ. ತನಗಿಂತ 13 ವರ್ಷ ದೊಡ್ಡವರಾದ ನಟಿಯನ್ನು ಮದುವೆ ಯಾಗುತ್ತಿರುವುದು ವಿಶೇಷ.. ಈಗ ಒಟ್ಟಿಗೆ ಸುತ್ತಾಡುವ ಈ ಜೋಡಿ 2020 ರಲ್ಲಿ ಮದುವೆಯಾಗಲು ಪ್ಲಾನ್ ಮಾಡಿದ್ದರಂತೆ.. ಆದರೆ ಚೀನಾ ಕಾಯಿಲೆಯಿಂದ ಮದುವೆಯನ್ನು ಮುಂದಕ್ಕೆ ಹಾಕಿದ್ದಾರೆಂದು ಹೇಳಲಾಗುತ್ತಿದೆ. ಹಿರಿಯ ನಟಿಯಲ್ಲಿ ಪ್ರೀತಿ ಹುಡುಕಿದ ಅರ್ಜುನ್ ಕಪೂರ್, ಕಿರಿಯ ನಟನಲ್ಲಿ ನೆಮ್ಮದಿ ಕಂಡಿರುವ ಮಲೈಕಾ ಜೋಡಿಯ ಪ್ರೀತಿಯನ್ನು ಕಂಡು ಕೆಲವೊಂದು ಜನ ಸಪೋರ್ಟ್ ಮಾಡಿದರೆ.. ಇನ್ನೊಂದಷ್ಟು ಜನ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.