Advertisements

ಸಖತ್ ವೈ’ರಲ್ ಆಗಿದ್ದ ಈ ಹುಡುಗಿ ಮನೆ ನೋಡಿದ್ರೆ ನಿಜಕ್ಕೂ ದಂ’ಗಾಗ್ತೀರಾ! ಈ ಹುಡುಗಿಯ ಪೋಟೊಗಾಗಿ ಹಾಲಿವುಡ್ ಮಂದಿ ಭಾರತಕ್ಕೆ ಬಂದಿದ್ಯಾಕೆ ಗೊತ್ತಾ?

Cinema

13ವರ್ಷದ ಬಾಲಕಿ ಬಾಲಿವುಡ್‌ನಿಂದ ಹಾಲಿವುಡ್‌ವರೆಗೂ ಅಭಿಮಾನಿ ಬಳಗವನ್ನು ಹೊಂದಿದ್ದೇಗೆ? ಕನಸು ಕಾಣುವುದು ಪ್ರತಿಯೊಬ್ಬನ ಹಕ್ಕು ಬದುಕಿನಲ್ಲಿ ಸತತ ಪರಿಶ್ರಮದಿಂದ ಕನಸಿನ ಮಹಲುಗಳನ್ನು ನನಸು ಮಾಡಿಕೊಳ್ಳಲಿಕ್ಕೆ ಸಾಧ್ಯವಾಗುತ್ತೆ, ಕಠಿಣ ಶ್ರಮದಿಂದ ತಾನು ಐದನೇ ವಯಸ್ಸಿನಲ್ಲಿ ಕಂಡ ಕನಸನ್ನು ಹದಿಮೂರನೇ ವಯಸ್ಸಿಗೆ ಈ ಬಾಲಕಿ ನನಸು ಮಾಡಿಕೊಂಡಿರುವ ಕಥೆ ಬಾಂಬೆ ಮಂದಿಯನ್ನು ಹುಬ್ಬೇರಿಸುವಂತೆ ಮಾಡಿದೆ. ಈ ಪುಟ್ಟ ಕಂಗಳಲ್ಲಿ ಸಾಗರದಷ್ಟು ಕನಸು ಹೊಂದಿರುವ ಬಾಲಕಿಯ ಹೆಸರು ಮಲೀಶಾ ಕುರುವಾಯಿ. ಮಲೀಶಾ ಒಮ್ಮೆ ಯು’ಟ್ಯೂಬ್‌ನಲ್ಲಿ ಪ್ರಿಯಾಂಕ ಚೋಪ್ರಾ ಅವರು ರ‍್ಯಾಂಪ್ ವಾಕ್ ಮಾಡುವ ಶೈಲಿ ನೋಡ್ತಾಳೆ..

[widget id=”custom_html-3″]

Advertisements

ಆ ವಿಡಿಯೋ ಐದು ವರ್ಷದ ಮಗುವಿನ ಮೇಲೆ ಎಷ್ಟು ಪ್ರಭಾವ ಬೀರುತ್ತೆ ಅಂದರೆ ಮುಂದೊಂದು ದಿನ ತಾನು ತನ್ನ ಬದುಕಿನಲ್ಲಿ ಅತೀ ದೊಡ್ಡ ಮೊಡೆಲ್ ಆಗಬೇಕು, ಡ್ಯಾನ್ಸರ್ ಆಗಬೇಕು ಎಂಬಿತ್ಯಾದಿ ಕನಸುಗಳನ್ನು ಹುಟ್ಟಿಹಾಕುತ್ತೆ. ಈಕೆಯ ಕನಸಿಗೆ, ಬದುಕಿನ ಹಿನ್ನಲೆ ತದ್ವಿರುದ್ಧವಾಗಿತ್ತು. ಅಂದರೆ ಮಲೀಶಾ ಬಾಂಬೆಯ ಸ್ಲಂ ಒಂದರಲ್ಲಿ ತನ್ನ ತಂದೆ ಹಾಗೂ ತಮ್ಮನೊಂದಿಗೆ ವಾಸಿಸುತ್ತಿದ್ದಳು, ಮೂರು ಹೊತ್ತಿನ ಊಟಕ್ಕೆ ಸರಿದೂಗುತ್ತಿತ್ತು ತಂದೆ ಮುಖೇಶ್ ಅವರ ಸಂಬಳ. ಆದರೂ ತಾನು ದೊಡ್ಡ ಮಾಡೆಲ್ ಆಗಲೇಬೇಕು ಅಂತ ನಿಶ್ಚಯ ಮಾಡಿಕೊಂಡಿದ್ದ ಮಲೀಶಾ ವಿ’ಡಿಯೋ ನೋಡಿ ರ‍್ಯಾಂ’ಪ್ ವಾಕ್ ಮಾಡುವುದು ಡ್ಯಾನ್ಸ್ ಮಾಡುವುದು ಮಾಡುತ್ತಿದ್ದಳು..

[widget id=”custom_html-3″]

ಒಂದು ದಿನ ಹಾಲಿವುಡ್‌ನ ಸ್ಟಾರ್ ಹಿರೋ ರಾಬರ್ಟ್ ಹಾಪ್‌ಮೆನ್ ತನ್ನ ಮ್ಯುಸಿಕ್ ವಿಡಿಯೋ ಚಿತ್ರೀಕರಣಕ್ಕೆ ಸುಂದರ ಲೊಕೇಷನ್ ಹುಡುಕುತ್ತಾ ಬಾಂಬೆಗೆ ಬರುತ್ತಾರೆ.. ಆಗ ಮಲೀಶಾ ಕಜಿನ್ ಖುಷಿಯ ಮೂಲಕ ರಾಬರ್ಟ್ಗೆ ಮಲೀಶಾ ಪರಿಚಯವಾಗುತ್ತಾಳೆ. ಮಲೀಶಾ ಇಂಗ್ಲೀಶ್‌ನಲ್ಲಿ ಮಾತಾಡುವ ಶೈಲಿಗೆ, ಆಕೆಯ ಲವಲವಿಕೆ, ಚುರುಕುತನಕ್ಕೆ ಮತ್ತು ಆಕೆ ತನ್ನ ಕನಸು ನನಸು ಮಾಡಿಕೊಳ್ಳಲಿಕ್ಕೆ ಪಡುತ್ತಿದ್ದ ಶ್ರಮಕ್ಕೆ ರಾಬರ್ಟ್ ಮರಳಾಗುತ್ತಾನೆ, ಏನಾದರೂ ಮಾಡಿ ಮಲೀಶಾಗೆ ಸಹಾಯ ಮಾಡಬೇಕು ಅಂತ ನಿರ್ಧರಿಸಿ ಆಕೆಯ ಹೆಸರಲ್ಲಿ ಇನ್’‌ಸ್ಟಾಗ್ರಾಮ್ ಖಾತೆ ತೆರೆದು ಅವಳ ಸುಂದರ ಫೋಟೋ ಹಾಗೂ ರಾಬರ್ಟ್ ಜೊತೆಯಿರುವ ಫೋಟೊವನ್ನು ರಾಬರ್ಟ್ ಶೇ’ರ್ ಮಾಡ್ತಾರೆ..

[widget id=”custom_html-3″]

ಪ್ರಸಿದ್ಧ ಹಾಲಿವುಡ್ ಸ್ಟಾರ್ ಜೊತೆ ಬಾಂಬೆ ಬಾಲಕಿಯ ಫೋಟೊ ನೋಡಿ ಎಲ್ಲ ನಿ’ಬ್ಬೆ’ರಗಾಗಿ ಆಕೆಯ ಹಿನ್ನಲೆ ತಗೆದುಕೊಳ್ಳುವ ಪ್ರಯತ್ನ ಮಾಡ್ತಾರೆ, ಇದರ ಸಲುವಾಗಿ ಮಲೀಶಾ ಇನ್ಸ್ಟಾ ಖಾತೆಯನ್ನು ಫಾ’ಲೋ ಮಾಡಲಿಕ್ಕೆ ಶುರು ಮಾಡ್ತಾರೆ.. ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದ ಮಲೀಶಾ ಅವರ ಫೋಟೋವನ್ನು ತಮ್ಮ ಮ್ಯಾಗ್‌ಜೀನ್‌ಗೆ ಹಾಕಬೇಕು ಅಂತ ಶೈನಿ ಹಾಗೂ ಪಾಲ್ಗೊನಿ ಎಂಬುವ ಪ್ರಖ್ಯಾತ ಪಿಕೋಕ್ ಮ್ಯಾಗಜೀನ್‌ನ ಡಿಸೈನರ್ಸ್ ನಿರ್ಣಯಿಸ್ತಾರೆ, ಹಾಗೆಯೇ ಮ್ಯಾಗಜೀನ್ ಕಂಪನಿ ಜೊತೆ ಚರ್ಚಿಸಿ ಆಕೆಯ ಫೋಟೋ ಶೂ’ಟ್ ಮಾಡಿ ಕಳೆದ ಅಕ್ಟೋಬರ್‌ನಲ್ಲಿ ಅಂದರೆ 2020ರ ಅಕ್ಟೋಬರ್ ತಿಂಗಳ ಪಿಕೋಕ್ ಮ್ಯಾಗಜೀನ್‌ನ ಮುಖಪುಟದಲ್ಲಿ ಮಲೀಶಾ ಫೋಟೋವನ್ನು ಹಾಕಿಕೊಳ್ತಾರೆ..

[widget id=”custom_html-3″]

ಹೀಗೆ ಬಾಲಿವುಡ್‌ನಿಂದ ಹಾಲಿವುಡ್‌ವರೆಗೂ ಮಲೀಶಾ ಪ್ರಖ್ಯಾತಿ ಪಡೆದುಕೊಳ್ತಾಳೆ, ಈಗ ಆ ಪುಟ್ಟ ಬಾಲಕಿಯ ಹಿಂದೆ ಬಾಂಬೆ ಹಾಗೂ ದೇಶದ ಪ್ರತಿಷ್ಟಿತ ಡ್ಯಾನ್ಸ್ ಕಂಪನಿಗಳು ಸಹ ಹಿಂದೆ ಬಿದ್ದಿವೆ.. ಮಲೀಶಾ ಕನಸು ನನಸಾಗಲು ರಾಬರ್ಟ್ ಪಾತ್ರವೂ ತುಂಬಾಯಿದೆ, ಆತ ಮಲೀಶಾ ಹೆಸರಲ್ಲಿ ಒಂದು ವೆಬ್‌ಸೈಟ್ ಸಹ ಮಾಡಿ ಆಕೆಯ ಬದುಕಿಗೆ ಸಹಾಯಧನವನ್ನು ಸಂಗ್ರಹಿಸಿದ್ದಾರೆ. ಪ್ರಿಯ ಓದುಗರೇ ಬದಕಿನಲ್ಲಿ ದೃಢ ಸಂಕಲ್ಪ, ಅದೇನೆ ಸಮಸ್ಯೆ ಆದರೂ ಗೆಲ್ಲುವ ಹಠ, ನಿರ್ಧಾರದ ಮೇಲೆ ಬದ್ಧತೆ ಇದ್ದವರಿಗೆ ಯಾವ ಬಡತನವೂ ಸಮ’ಸ್ಯೆಯಾಗಲ್ಲ, ನಾವು ಮಾಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ರೆ ಬದುಕಿನಲ್ಲಿ ಯಾವುದು ಅಸಾಧ್ಯವಲ್ಲ ಎಂಬುವುದಕ್ಕೆ ಮಲೀಶಾ ಕಥೆಯ ನೈಜ ನಿದರ್ಶನ..