Advertisements

ಒಂದೇ ಏಟಿಗೆ ಟ್ರೈನ್ ನಲ್ಲಿದ್ದ 25 ಜನ ಹುಡುಗಿಯರನ್ನು ಕಾಪಾಡಿದ ವ್ಯಕ್ತಿ.. ಏನು ಮಾಡಿದ ಗೊತ್ತಾ?

Kannada Mahiti

ನಮಸ್ತೇ ಸ್ನೇಹಿತರೆ, ಈಗಿನ ಸಮಾಜದಲ್ಲಿ ಸೋಷಿಯಲ್ ಮೀಡಿಯಾದ ಪ್ರಭಾವ ಪ್ರತಿಯೊಬ್ಬರ ಮೇಲೆ ಎಷ್ಟು ಬೀರಿದೆ ಅಂತ ನಾವು ಹೇಳಬೇಕಾಗಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಕೇವಲ ಒಂದು ಪೋಸ್ಟ್ ಕೆಲವು ಜೀವನಗಳನ್ನೇ ಬದಲಾಯಿಸಿ ಬಿಡುತ್ತದೆ.. ಇನ್ನೂ ಇದೇ ಸೋಷಿಯಲ್ ಮೀಡಿಯಾದಲ್ಲಿ ಎಷ್ಟು ಒಳ್ಳೆಯ ಕೆಲಸ ನಡೆಯುತ್ತದೆಯೋ ಅಷ್ಟೇ ಕೆ’ಟ್ಟ ಕೆಲಸಗಳು ಸಹ ನಡೆಯುತ್ತವೆ. ಮುಖ್ಯವಾಗಿ ಹುಡುಗಿಯರ ಜೀವನವನ್ನು ಆ’ಳು ಮಾಡಲೆಂದೇ ಕೆಲವು ಗುಂಪುಗಳು ಕೆಲಸವನ್ನು ಮಾಡುತ್ತಿವೆ.. ಅದೇ ರೀತಿ ಒಬ್ಬ ವ್ಯಕ್ತಿ ಟ್ರೈನ್ ನಲ್ಲಿ ಪ್ರಯಾಣಿಸುತ್ತಿದ್ದ. 25 ಹುಡುಗಿಯರಿಗೆ ಮಾಡಿರುವ ಕೆಲಸ ನಿಜಕ್ಕೂ ಗ್ರೇಟ್..

Advertisements

ಸಾಮಾನ್ಯವಾಗಿ ಟ್ರೈನ್ ನಲ್ಲಿ ಪ್ರಯಾಣಿಸುವಾಗ ನಮ್ಮ ಎದುರಿಗೆ, ಅಕ್ಕಪಕ್ಕದಲ್ಲಿ ಯಾರು ಇದ್ದಾರೆ. ಅವರು ಏನು ಮಾಡುತ್ತಿದ್ದಾರೆ.. ಅಂತ ನೀವು ನಾವು ಕೂಡ ಗಮನಿಸಿಯೇ ಇರುತ್ತೇವೆ. ಅದೇ ರೀತಿ ಆದರ್ಶ್ ಶ್ರೀ ವತ್ಸವ್ ಎಂಬುವ ವ್ಯಕ್ತಿ ಬಾಂದ್ರಾ ಎಕ್ಸ್ಪ್ರೆಸ್ ನಲ್ಲಿ ಪ್ರಯಾಣಿಸುತ್ತಿದ್ದ.. ತನ್ನ ಎದುರಿಗೆ 25 ಜನ ಹುಡುಗಿಯರು ಕೂತಿದ್ದರು. ಅದರಲ್ಲಿ ಹಲವರು ಅಳುತ್ತಿದ್ದರು.. ಇನ್ನೂ ಕೆಲವರ ಕಣ್ಣಿನಲ್ಲಿ ಭಯ ಕಾಣಿಸುತ್ತಿತ್ತು. ಇಷ್ಟು ಜನ ಹುಡುಗಿಯರಿಗೂ ವಯಸ್ಸಾದ ಇಬ್ಬರು ವ್ಯಕ್ತಿಗಳು ಕಾವಲಿದ್ದರು.. ಈ ಸಂದರ್ಭದಲ್ಲಿ ಆದರ್ಶ್ ಗೆ ಏನು ಮಾಡಬೇಕು ತಿಳಿಯಲಿಲ್ಲ. ಆಗ ತನ್ನ ಪೋನ್ ತೆಗೆದುಕೊಂಡು ಈ ರೀತಿ ಟ್ವೀಟ್ ಮಾಡಿದ..

ನಾನು ಅವಾಧ್ ಬಾಂದ್ರಾ ಎಕ್ಸ್ಪ್ರೆಸ್ ನಲ್ಲಿ ಪ್ರಯಾಣಿಸುತ್ತಿದ್ದೇನೆ. S5 ಬೋಗಿಯಲ್ಲಿ ಇದ್ದೇನೆ. ನನ್ನ ಮುಂದೆ 25 ಜನ ಹುಡುಗಿಯರಿದ್ದಾರೆ. ಅವರನ್ನು ಕಾಪಾಡಿ ಎಂದು ರೈಲ್ವೆ ಮಂತ್ರಿಗೆ, ಪ್ರಧಾನ ಮಂತ್ರಿ ಕಛೇರಿಗೆ ಟ್ವೀಟ್ ಮಾಡಿದ. ಮುಂದಿನ ಸ್ಟೇಷನ್ ಕಬ್ದಾನ್ ಗಂಚ್ ಬರುವಷ್ಟರಲ್ಲಿ ಇಬ್ಬರು ಆರ್.ಪಿ.ಎಪ್ ಜವಾನರು ಬಂದು ಆ ಹೆಣ್ಣುಮಕ್ಕಳನ್ನು ಕಾಪಾಡಿದರು.. ನಂತರ ತಿಳಿದು ಬಂದಿದ್ದು ಏನೆಂದರೆ ಅಲ್ಲಿದ್ದ 25 ಹೆಣ್ಣುಮಕ್ಕಳು ಸಹ ಎಲ್ಲರೂ 10 ರಿಂದ 16 ವರ್ಷದ ಹುಡುಗಿಯರು.. ಇವರು ವೆಸ್ಟ್ ಬೆಂಗಾಲ್ ಗೆ ಸೇರಿದವರಾಗಿದ್ದರು. ಇವರನ್ನು ಕೆ’ಟ್ಟ ದಂಗೆಗೆ ಮಾರಲು ಸಾಗಿಸಲಾಗುತ್ತಿತ್ತು..

ನಂತರ ಈ ಎಲ್ಲಾ ಹುಡುಗಿಯರನ್ನು ಮಕ್ಕಳ ಕಲ್ಯಾಣ ಇಲಾಖೆಗೆ ಒಪ್ಪಿಸಲಾಗಿದೆ. ಮತ್ತು ಇಷ್ಟು ಜನ ಹೆಣ್ಣು ಮಕ್ಕಳನ್ನು ಕಾಪಾಡಿದ ಆದರ್ಶ್ ಅವರಿಗೆ ರೈಲ್ವೇ ಚೇರ್ಮನ್ ರಿಂದ ಇಡಿದು ಪ್ರತಿಯೊಬ್ಬರು ಸಹ ಅಭಿನಂದನೆಯನ್ನ ಸಲ್ಲಿಸಿದ್ದಾರೆ.. ಸೋಷಿಯಲ್ ಮೀಡಿಯಾ ಅನ್ನುವುದು ಕೆ’ಟ್ಟದಲ್ಲ ಬದಲಾಗಿ ನಾವು ಅದನ್ನು ಹೇಗೆ ಉಪಯೋಗಿಸಿ ಕೊಳ್ಳುತ್ತೇವೆ ಅನ್ನುವುದೇ ಮುಖ್ಯ.. ಇಂತಹ ಕಠಿಣ ಪರಿಸ್ಥಿತಿಯಲ್ಲಿ ತನ್ನ ಬುದ್ಧಿವಂತಿಕೆಯನ್ನು ಉಪಯೋಗಿಸಿ ಹೆಣ್ಣು ಮಕ್ಕಳನ್ನು ಕಾಪಾಡಿದ ಆದರ್ಶ್ ಅವರಿಗೆ ನೀವು ಏನು ಹೇಳಲು ಇಷ್ಟ ಪಡುತ್ತೀರಾ ತಿಳಿಸಿ.