Advertisements

ಅಜ್ಜಿ ಹತ್ತಿರ ಹಣ್ಣು ತೆಗೆದುಕೊಂಡು ಬಯ್ಯುತ್ತಿದ್ದ ವ್ಯಕ್ತಿ.. ಒಂದು ದಿನ ಮಾಡಿದ್ದೇನು ಗೊತ್ತಾ?

Inspire Kannada Mahiti

ನಮಸ್ತೆ ಸ್ನೇಹಿತರೆ, ಈಗಿನ ಮನುಷ್ಯರು ತುಂಬಾ ಸ್ವಾರ್ಥಿಗಳಾಗಿದ್ದಾರೆ.. ತನ್ನ ಪಾಡು ಆಯಿತು ನನ್ನ ಕುಟುಂಬ ಚೆನ್ನಾಗಿದ್ದರೆ ಸಾಕು ಎಂದು ಇರುತ್ತಾರೆಯೇ ಹೊರತು ಹೊರಗಿನ ಜನಗಳ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಈ ಮಾಹಿತಿಯಲ್ಲಿ ನಾವು ಹೇಳಲು ಹೊರಟಿರುವ ಮೊಹನ್ ಎಂಬ ವ್ಯಕ್ತಿಯ ಕಥೆ ಕೇಳಿದರೆ ನೀವು ನಿಜಕ್ಕೂ ಆಶ್ಚರ್ಯ ಪಡುತ್ತೀರಾ. ಮೋಹನ್ ಪ್ರತಿದಿನ ಸಾವಿತ್ರಮ್ಮ ಎಂಬ ಅಜ್ಜಿಯ ಬಳಿ ಹಣ್ಣನ್ನು ಕೊಂಡುಕೊಳ್ಳಲು ಹೋಗುತ್ತಿದ್ದ.. ದುಡ್ಡು ಕೊಟ್ಟು ಅಜ್ಜಿಯ ಬಳಿ ಹಣ್ಣುಗಳನ್ನು ತೆಗೆದುಕೊಂಡ ನಂತರ ಅವುಗಳಲ್ಲಿ ಒಂದು ಹಣ್ಣನ್ನು ಎತ್ತಿಕೊಂಡು ಅಲ್ಲೇ ತಿಂದು ಈ ಹಣ್ಣು ತುಂಬಾ ಹುಳಿಯಾಗಿದೆ ತಿನ್ನಲು ಆಗುತ್ತಿಲ್ಲ ನೀವೆ ತಿಂದು ನೋಡಿ ಎಂದು ಹೋದಾಗಲೆಲ್ಲಾ ಅಜ್ಜಿಗೆ ಬೈದು ಆ ಹಣ್ಣನ್ನು ವಾಪಸ್ ಕೊಡುತ್ತಿದ್ದ..

Advertisements

ಆ ಅಣ್ಣನ್ನು ಅಜ್ಜಿ ತಿಂದು ಚೆನ್ನಾಗಿದೆ ಅಲ್ವಾ ಎಂದು ಹೇಳುತ್ತಿದ್ದರು. ಇನ್ನೂ ಸಾವಿತ್ರಮ್ಮ ಅಜ್ಜಿ ಹಣ್ಣನ್ನು ಪೂರ್ತಿಯಾಗಿ ತಿಂದ ನಂತರ ಮೋಹನ್ ಏನು ಮಾತಾಡದೇ ಮಿಕ್ಕ ಹಣ್ಣುಗಳನ್ನು ತೆಗೆದುಕೊಂಡು ತನ್ನ ಪಾಡಿಗೆ ತಾನು ಹೊರಟು ಹೋಗುತ್ತಿದ್ದ.. ಈ ರೀತಿ ಒಂದು ಸಾರಿ ಅಲ್ಲ ಎರಡು ಸಾರಿ ಅಲ್ಲ ಹೋದಾಗಲೆಲ್ಲಾ ಹುಳಿ, ಕಹಿ ಎಂದು ಹೇಳಿ ಅಜ್ಜಿಗೆ ತಿಂದು ನೋಡಲು ಮೋಹನ್ ಕೊಡುತ್ತಿದ್ದ.‌. ಒಂದು ದಿನ ಮೋಹನ್ ಹೆಂಡತಿ.. ಹಣ್ಣುಗಳೆಲ್ಲಾ ಚೆನ್ನಾಗಿವೆ ಆದರೂ ಚೆನ್ನಾಗಿಲ್ಲ ಎಂದು ಸುಳ್ಳು ಏಳ್ತಿರಲ್ಲಾ ಎಂದು ಕೇಳುತ್ತಾಳೆ.. ಆಗ ಮೋಹನ್ ನಗುತ್ತಾ ಈ ರೀತಿ ಹೇಳುತ್ತಾನೆ. ಸಾವಿತ್ರಮ್ಮ ಅಜ್ಜಿ ಒಳ್ಳೆಯ ಹಣ್ಣುಗಳನ್ನೇ ಮಾರಾಟ ಮಾಡುತ್ತಾರೆ ಆದರೆ ಅವರಿಗಂತ ಒಂದು ಹಣ್ಣನ್ನು ಸಹ ತಿನ್ನುವುದಿಲ್ಲ..

ನಾನು ಈ ರೀತಿ ಹಣ್ಣು ಚೆನ್ನಾಗಿಲ್ಲ ಎಂದು ಹೇಳಿ ಅವರಿಗೆ  ತಿಂದು ನೋಡಲು ಕೊಡುವುದರಿಂದ ಅಜ್ಜಿ ಹಣ್ಣನ್ನು ತಿನ್ನುತ್ತಾಳೆ.. ವಯಸ್ಸಾದವರು ಹಣ್ಣುಗಳನ್ನು ತಿನ್ನಬೇಕು ಆಗ ಅವರ ಆರೋಗ್ಯವು ಸಹ ಚೆನ್ನಾಗಿರುತ್ತದೆ. ಆದರೆ ಸಾವಿತ್ರಮ್ಮ ಅಜ್ಜಿ ದುಡ್ಡು ಖರ್ಚಾಗುತ್ತದೆ ಅಂತ ತಿನ್ನೊದಿಲ್ಲ. ಇದೇ ಕಾರಣಕ್ಕೆ ನಾನು ಅಜ್ಜಿಗೆ ಮೊದಲು ದುಡ್ಡು ಕೊಟ್ಟು ಹಣ್ಣುಗಳು ಚೆನ್ನಾಗಿದ್ದರು.. ಚೆನ್ನಾಗಿಲ್ಲ ಎಂದು ಹೇಳಿ ಅಜ್ಜಿಗೆ ಹಣ್ಣನ್ನು ತಿನ್ನಲು ಕೊಡುತ್ತೇನೆ ಎಂದು ಮೋಹನ್ ಹೇಳುತ್ತಾನೆ.. ತನ್ನ ಗಂಡನ ಒಳ್ಳೆಯ ಮನಸ್ಸನ್ನು ನೋಡಿ ಮೋಹನ್ ಹೆಂಡತಿ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾರೆ.

ಇನ್ನೂ ಎದುರುಗಡೆ ಇದ್ದ ತರಕಾರಿ ಅಂಗಡಿಯ ಒಬ್ಬ ವ್ಯಕ್ತಿ ಅಜ್ಜಿಯ ಬಳಿ ಬಂದು ಮೋಹನ್ ಹಣ್ಣುಗಳನ್ನು ಚೆನ್ನಾಗಿಲ್ಲ ಎಂದು ಹೇಳಿ ಬೈಯುತ್ತಿರುತ್ತಾನೆ.. ಆದರು ಅವನಿಗೆ ತಕ್ಕಡಿ ತೂಕಕ್ಕಿಂತ ಹೆಚ್ಚಿನ ಹಣ್ಣುಗಳನ್ನು ಏಕೆ ಕೊಡುತ್ತೀಯಾ ಎಂದು ಅಜ್ಜಿಯ ಬಳಿ ಕೇಳಿದ. ಆಗ ಸಾವಿತ್ರಮ್ಮ ಅಜ್ಜಿ ನಗುತ್ತಲೇ ನಾನು ಒಂದು ಹಣ್ಣು ತಿನ್ನಲೆಂದು ಬಂದಾಗಲೆಲ್ಲಾ ಹಣ್ಣು ಚೆನ್ನಾಗಿದ್ದರು ಚೆನ್ನಾಗಿಲ್ಲ ಎಂದು ಹೇಳುತ್ತಾನೆ.. ಈ ವಿಷಯ ನನಗೆ ಗೊತ್ತಾಗಿದೆ. ಅದಕ್ಕೆ ನಾನು ತಕ್ಕಡಿ ತೂಕಕ್ಕಿಂತ ಹೆಚ್ಚು ಹಣ್ಣನ್ನು ಕೊಡುತ್ತೇನೆ ಎಂದು ಸಾವಿತ್ರಮ್ಮ ಅಜ್ಜಿ ಹೇಳುತ್ತಾಳೆ.. ಸ್ನೇಹಿತರೆ ಮೋಹನ್ ಮಾಡಿದ್ದು ಸರಿನಾ ತಪ್ಪಾ ಹಾಗೂ ಈ ಘಟನೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.