ನಮಸ್ತೆ ಸ್ನೇಹಿತರೆ, ಸಹಾಯ ಅನ್ನೋದು ಒಬ್ಬರನ್ನು ಕೇಳಿ ಮಾಡೋದಲ್ಲ.. ಕೇಳದೆ ಮಾಡೋದನ್ನ ಸಹಾಯ ಅಂತಾರೆ. ಹಾಗೆಯೇ ಇಲ್ಲೊಬ್ಬ ವ್ಯಕ್ತಿ 8 ವರ್ಷದಿಂದ ಏನು ಕೇಳದೆಯೇ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ.. ಇನ್ನೂ ಈ ಮಾಹಿತಿಯಲ್ಲಿ ತಿಳಿಸಿಕೊಡುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. 52 ವರ್ಷದ ಈ ವ್ಯಕ್ತಿಯ ಹೆಸರು ಜಾರ್ಜ್.. ಇವರು ಹುಟ್ಟಿ ಬೆಳೆದಿದ್ದು ಕೂಡ ಹೈದರಾಬಾದ್ ನಲ್ಲೇ. ಅಷ್ಟು ದೊಡ್ಡ ಸಿರಿವಂತ ಅಲ್ಲದೇ ಇದ್ದರೂ ಇನ್ನೊಬ್ಬರಿಗೆ ಸಹಾಯ ಮಾಡೊದ್ರಲ್ಲಿ ಸಿರಿವಂತನಿಗಿಂತ ದೊಡ್ಡ ಮನಸ್ಸು ಉಳ್ಳವರು.. ತನ್ನಿಂದಾದ ಸಹಾಯವನ್ನು ಒಬ್ಬರಿಗೆ ಮತ್ತು ಇಬ್ಬರಿಗೆ ಮಾಡಲು ಶುರುಮಾಡುತ್ತಾರೆ. ಆದರೆ ಜಾರ್ಜ್ ಅವರಿಗೆ ಇದರಿಂದ ತೃಪ್ತಿ ಸಿಗಲಿಲ್ಲ..

ಚಿಕ್ಕ ಚಿಕ್ಕ ಸಹಾಯ ಮಾಡುತ್ತಾ ಆ ಒಂದು ದಿನ ರಾತ್ರಿ ಮಾಡಿದ ಸಹಾಯದಿಂದ ತಾನು ಒಂದು ದೊಡ್ಡ ನಿರ್ಧಾರ ಮಾಡಿಕೊಂಡು ಇಂದು 300 ಕ್ಕೂ ಹೆಚ್ಚು ಜನರನ್ನ ದತ್ತು ಪಡೆದು ಅವರನ್ನನೋಡಿಕೊಳ್ಳುತ್ತಿದ್ದಾರೆ.. ಒಂದು ದಿನ ಕೆಲಸ ಮುಗಿಸಿ ತನ್ನ ಸ್ನೇಹಿತರೊಂದಿಗೆ ಮನೆಗೆ ಹೋಗುವಾಗ ಒಬ್ಬ ಮಹಿಳೆ ಮಗುವಿನೊಂದಿಗೆ ಸಹಾಯಕ್ಕಾಗಿ ಎದುರು ನೋಡುತ್ತಿರುವುದನ್ನು ಗಮನಿಸುತ್ತಾರೆ. ಇದನ್ನು ಗಮನಿಸಿದ ಜಾರ್ಜ್ ಅವರು ಆಕೆಯ ಪರಿಸ್ಥಿತಿಯ ಬಗ್ಗೆ ತಿಳಿದುಕೊಳ್ಳಲು ಮಾತನಾಡಿಸುತ್ತಾರೆ.. ಆಗಲೇ ಜಾರ್ಜ್ ಅವರು ಆ ಮಹಿಳೆಗೆ ತನ್ನ ಸ್ನೇಹಿತನ ಮನೆಯಲ್ಲಿ ಕೆಲಸವನ್ನು ಕೊಡಿಸುತ್ತಾರೆ. ಇನ್ನೂ ಮಗುವಿನ ವಿದ್ಯಾಭ್ಯಾಸವನ್ನು ನೋಡಿಕೊಳ್ಳಬೇಕು ಎಂದುಕೊಂಡು ಆ ಮಗುವನ್ನು ಶಾಲೆಗೆ ಸೇರಿಸುತ್ತಾರೆ..

ಯಾರಿಗೂ ಸಹ ಬಿಕ್ಷೆ ಬೇಡಲು ಬಿಡದ ಈ ವ್ಯಕ್ತಿ ಸಹಾಯ ಕೋರುವವರನ್ನು ಹುಡುಕಿ ತನ್ನಿಂದಾಗುವ ಸಹಾಯವನ್ನು ಮಾಡುತ್ತಿದ್ದು ಆಶ್ರಮವೂ ಕೂಡ ನಡೆಸುತ್ತಿದ್ದಾರೆ.. ಇನ್ನೂ ಜಾರ್ಜ್ ಮಾಡುತ್ತಿರುವ ಸಮಾಜ ಸೇವೆಗಾಗಿ ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ ಸಹಾಯವನ್ನು ಮಾಡುತ್ತಿದ್ದಾರೆ. ಒಂದು ಚಿಕ್ಕ ಮಗುವಿನಿಂದ ಶುರುವಾದ ಈ ಕೆಲಸಕ್ಕೆ ಈಗ 60 ಟೀಮ್ ಗಳು ಕೆಲಸ ಮಾಡುತ್ತಿವೆ.. ತಾನು ತನ್ನ ಕುಟುಂಬ ಚೆನ್ನಾಗಿದ್ದರೆ ಸಾಕು ಎನ್ನುವ ಈ ಕಾಲದಲ್ಲಿ ಬೇರೆಯವರೂ ಸಹ ಚೆನ್ನಾಗಿರಲಿ ಎಂದು ಬಯಸುವ ಈ ವ್ಯಕ್ತಿಯ ಬಗ್ಗೆ ನೀವು ಏನು ಹೇಳಲು ಇಷ್ಟ ಪಡುತ್ತೀರಾ ಎಂಬುದನ್ನು ತಿಳಿಸಿ.