Advertisements

ಚಿಲ್ಲರೆಯಿಂದ BMW ಕಾರನ್ನು ಕೊಂಡುಕೊಳ್ಳಲು ಹೋದ ವ್ಯಕ್ತಿ ನಂತರ..ಏನಾಯ್ತು ನೋಡಿ !

Kannada Mahiti

ಹಣ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ..ಆದರೆ ಬಹುತೇಕರಿಗೆ ಕಾಯಿನ್ ಗಳಿಗಿಂತ ನೋಟಿನ ಮೇಲೆಯೇ ಹೆಚ್ಚು ಆಸಕ್ತಿ. ಆದರೆ ಮಧ್ಯಮವರ್ಗದವರು ಈಗಲ್ಲ. ತಮ್ಮಲ್ಲಿರುವ ಚಿಲ್ಲರೆ ಹಣವನ್ನ ಹುಂಡಿಯಲ್ಲಿ ಕೂಡಿಟ್ಟು ಉಳಿಕೆ ಮಾಡಿರುತ್ತಾರೆ. ಹೀಗೆ ಮಧ್ಯಮವರ್ಗದಲ್ಲಿ ಹುಟ್ಟಿ ಜೀವನ ನಡೆಸುತ್ತಿದ್ದ ಚುನಮ್ ಎಂಬ ವ್ಯಕ್ತಿ ತಾನು ಚಿಕ್ಕಿಂದಿನಂದಲೇ ಚಿಲ್ಲರೆಯನ್ನ ಉಳಿತಾಯ ಮಾಡುವ ಹವ್ಯಾಸ ಬೆಳೆಸಿಕೊಂಡಿದ್ದ. ಇನ್ನು ತನ್ನ ಜೀವನ ಸಾಗಿಸುವ ಸಲುವಾಗಿ ಚಿಕ್ಕ ಪುಟ್ಟ ಕೆಲಸಗಳನ್ನ ಮಾಡುತ್ತಿದ್ದ ಈತನಿಗೆ ಬಾರೀ ದೊಡ್ಡ ಆಸೆಯೇ ಇತ್ತು.

ಹೌದು, ಚುನಮ್ ಗೆ BMW ಕಾರನ್ನಕೊಳ್ಳಬೇಕೆಂಬ ಕನಸನ್ನ ಹೊಂದಿದ್ದ. ಇನ್ನು ತನ್ನ ಕನಸನ್ನ ನೆರವೇರಿಸಿಕೊಳ್ಳಲೇಬೇಕೆಂಬ ಹಠದಿಂದ ತನ್ನ ಚಿಕ್ಕವಯಸ್ಸಿನಿಂದಲೇ ಚಿಲ್ಲರೆಯನ್ನ ಕೂಡಿಡಲು ಶುರು ಮಾಡಿದ್ದ. ಕೊನೆಗೂ ಒಂದು ದಿನ BMW ಕಾರಿನ ಶೋ ರೂಮ್ ಗೆ ಹೋದ ಚುನಮ್ ಬರೋಬ್ಬರಿ ೫೨ ಲಕ್ಷದ ಕಾರನ್ನ ಸೆಲೆಕ್ಟ್ ಮಾಡಿಕೊಂಡ. ಇನ್ನು ತನಗಿಷ್ಟವಾದ ಕಾರನ್ನ ಆರಿಸಿಕೊಂಡ ಚುನಮ್ 52 ಲಕ್ಷದ ಹಣವನ್ನ ಚಿಲ್ಲರೆ ರೂಪದಲ್ಲಿ ಕೊಡೆತ್ತೇನೆ ಎಂದು ಶೋರೂಮ್ ನ ಮ್ಯಾನೇಜರ್ ಬಳಿ ಕೇಳಿದ.

Advertisements

ಆದರೆ ಚುನಮ್ ಮಾತು ಕೇಳಿ ಶಾಕ್ ಗೆ ಒಳಗಾದ ಮ್ಯಾನೇಜರ್ ಮೋಡ ಮೊದಲು ಆ ವ್ಯಕ್ತಿಯ ಮಾತಿಗೆ ಹಿಂದೇಟು ಹಾಕಿದ. ಆದರೆ ಬಳಿಕ ಯೋಚನೆ ಮಾಡಿ, ಇದು ಆ ವ್ಯಕ್ತಿಯ ಕಷ್ಟಾರ್ಜಿತದಿಂದ ಬಂದದ್ದು, ಹಾಗೂ ಕಸ್ಟಮರ್ ಕಳೆದುಕೊಳ್ಳಲು ಇಷ್ಟಪಡದ ಆ ಮ್ಯಾನೇಜರ್ ಹಣ ತೆಗೆದುಕೊಳ್ಳಲು ಒಪ್ಪಿಕೊಂಡ. ಬಳಿಕ ಮನೆಗೆ ಹೋದ ಚುನಮ್ ಬರೋಬ್ಬರಿ ೪೫ ಬಕೆಟ್ ಗಳಲ್ಲಿ ಚಿಲ್ಲರೆನ್ನ ಲಾರಿಯಲ್ಲಿ ತುಂಬಿಕೊಂಡು ಬಂದು ಶೋರೂಮ್ ಮುಂದೆ ನಿಲ್ಲಿಸಿದ. ಇನ್ನು ಆ ಶೋ ರೂಮ್ ಹನ್ನೆರಡು ಮಂದಿ ಸಿಬ್ಬಂದಿ ಹದಿನೆಂಟು ಗಂಟೆಗಳಿಗಿಂತ ಹೆಚ್ಚು ಕಾಲ ಆ ಚಿಲ್ಲರೆ ಹಣವನ್ನ ಎಣಿಕೆ ಮಾಡುತ್ತಾರೆ. ಇನ್ನು ೫೨ ಲಕ್ಷ ಮೊತ್ತದ ಚಿಲ್ಲರೆ ಹಾಗೂ ಕಾಯಿನ್ ರೂಪದ ಹಣವನ್ನ ಎಣಿಸಿ ಎಣಿಸಿ ಸಿಬ್ಬಂದಿ ಐರಾಣಾಗಿ ಹೋಗಿರುತ್ತಾರೆ.

ಕೊನೆಗೂ ತನ್ನ ಜೀವನದ ಆಸೆಯನ್ನ ನೆರವೇರಿಸಿಕೊಂಡ ಚುನಮ್ ಜುಮ್ ಅಂತ ಜಗತ್ತನ್ನೇ ಗೆದ್ದವನಂತೆ BMW ಕಾರನ್ನ ಡ್ರೈವ್ ಮಾಡಿಕೊಂಡು ಹೊರಡುತ್ತಾನೆ. ಚಿಲ್ಲರೆಯನ್ನ ತಾತ್ಸಾರ ಮಾಡುವರಿಗೆ ಒಂದು ನಿದರ್ಶನ. ಹನಿ ಹನಿ ಗೂಡಿದ್ರೆ ಹಳ್ಳ, ತೆನೆ ತೆನೆ ಕೂಡಿದ್ರೆ ಬಳ್ಳ ಎಂಬ ಗಾದೆ ಮತ್ತೆ ಇದೆ. ಇವತ್ತಿನಿಂದಲೇ ಒಂದೊಂದು ರೂಪಾಯಿಯನ್ನ ನಾವು ಕೂಡಿಟ್ಟಲ್ಲಿ ಮುಂದೊಂದು ದಿನ ನಮ್ಮ ಕಷ್ಟದ ಸಮಯದಲ್ಲಿ ಆ ಚಿಲ್ಲರೆಯೇ ನಮ್ಮನ್ನ ಹಿಡಿಯುವುದು.