Advertisements

ಲಾಕ್ ಡೌನ್ ಟೈಮ್ ನಲ್ಲಿ ಪೋಲಿಸರಿಗೆ ಕಾಲ್ ಮಾಡಿ ಸಮೋಸ ಆರ್ಡರ್ ಮಾಡಿದ.. ನಂತರ ಮನೆಗೆ ಬಂದ ಪೋಲಿಸ್ ಮಾಡಿದ್ದೇನು ಗೊತ್ತಾ?

Kannada Mahiti

ನಮಸ್ತೇ ಸ್ನೇಹಿತರೆ, ಲಾಕ್ ಡೌನ್ ನಿಂದಾಗಿ ಪೋಲಿಸರು ಹಗಲು ರಾತ್ರಿ ಎನ್ನದೇ ರೋಡ್ ಗಳ ಮೇಲೆ ಕಷ್ಟಪಟ್ಟು ಕೆಲಸ ಮಾಡ್ತಾ ಇದ್ದಾರೆ.. ಇತ್ತ ಕೆಲವು ಜನರು ಮನೆಯಲ್ಲೇ ಇರದೆ ರೋಡಿಗಿಳಿದು ಹಿಂ’ಸಿಸುತ್ತಿದ್ದಾರೆ. ಇನ್ನೂ ಇಂತಹವರಿಗೆ ಪೋಲಿಸರು ಹೇಗೆ ಬುದ್ದಿ ಕಲಿಸಿದ್ದಾರೆ ಎಂದು ನಾವೇಲ್ಲಾ ಟೀವಿಗಳಲ್ಲಿ ನೋಡಿರ್ತೀವಿ.. ಹೋಗಲಿ ಮನೆಯಲ್ಲಾದರು ನೆಮ್ಮದಿಯಿಂದ ಇದ್ದಾರಾ ಅಂದರೆ ಅದು ಕೂಡ ಮಾಡ್ತಿಲ್ಲಾ. ತುಂಬಾ ಎಮರ್ಜೆನ್ಸಿ ಸೇವೆಗಳಿಗಾಗಿ ಏರ್ಪಾಡು ಮಾಡಿದ್ದ ಹೆಲ್ಪ್ ಲೈನ್ ಗಳಿಗೆ ಕರೆ ಮಾಡಿ ಕಿತಾಪತಿ ಕೆಲಸಗಳನ್ನ ಮಾಡ್ತಾ ಇದ್ದಾರೆ. ಅದೇ ರೀತಿ ಓರ್ವ ಯುವಕ ಹೆಲ್ಪ್ ಲೈನ್ ನಂಬರ್ ಗೆ ಕರೆಮಾಡಿ ನಾಲ್ಕು ಸಮೋಸ ಬೇಕೇ ಬೇಕು ಎಂದು ಹಠ ಮಾಡಿದ.. ಆತನಿಗೆ ಅಲ್ಲಿನ ಡಿಸ್ಟ್ರಿಕ್ಟ್ ಕಮಿಷನರ್ ಕೊಟ್ಟಿರುವ ಕೆಲಸ ನೋಡಿ ಈಗ ಪ್ರತಿಯೊಬ್ಬರು ಕೂಡ ಶಭಾಷ್ ಎನ್ನುತ್ತಿದ್ದಾರೆ.

Advertisements

ಲಾಕ್ ಡೌನ್ ಅನೌನ್ಸ್ ಆಗಿದ್ದ ಸಮಯದಿಂದಲೂ ಹಲವು ಪೋಲಿಸರು ತಮ್ಮ ಮನೆಗಳನ್ನು ಬಿಟ್ಟು ದೇಶ ಸೇವೆಯನ್ನ ಮಾಡುತ್ತಿದ್ದಾರೆ.. ಇನ್ನೂ ಕೆಲವರಂತೂ ಐದು ದಿನಕ್ಕೆ ಅಥವಾ ವಾರಕ್ಕೊಮ್ಮೆ ಮನೆಗಳಿಗೆ ಬೇಟಿ ಕೊಡುತ್ತಿದ್ದಾರೆ. ಆದರೆ ಇಂತಹ ಪೋಲಿಸರಿಗೆ ಕೆಲವು ಕಿಡಗೇ’ಡಿಗಳು ಕಾ’ಟ ಕೊಡಲೇ ಬೇಕೆಂದು ತಿರ್ಮಾನ ಮಾಡಿದ್ದಾರೆ ಎಂದು ಅನಿಸುತ್ತದೆ.. ಉತ್ತರಪ್ರದೇಶದಲ್ಲಿ ಯಾವುದೇ ತುರ್ತು ಸೇವೆಗಳಿಗೆ ಹೆಲ್ಪ್ ಲೈನ್ ಗೆ ಕಾಲ್ ಮಾಡಿ ಎಂದು ಪ್ರಚಾರ ಮಾಡಿದ್ದರು. ಆದರೆ ಈ ಹುಡುಗ ಒಬ್ಬ ಅದನ್ನು ಬೇರೆ ರೀತಿಯಲ್ಲೇ ಅರ್ಥ ಮಾಡಿಕೊಂಡಿದ್ದಾನೆ.. ಹೆಲ್ಪ್ ಲೈನ್ ಗೆ ಕರೆಮಾಡಿ ಅಧಿಕಾರಿಗಳಿಗೆ ನನಗೆ ನಾಲ್ಕು ಸಮೋಸ ಬೇಕೆ ಬೇಕು ಎಂದು ಮನೆಗೆ ತಂದು ಕೊಡಿ. ಲಾಕ್ಡೌನ್ ನಿಂದ ಅಂಗಡಿಗಳು ಮುಚ್ಚಿವೆ ಎಂದು ಹಠ ಮಾಡಿದ..

ಅದಕ್ಕೆ ಅಧಿಕಾರಿಗಳು ಹೆಲ್ಪ್ ಲೈನ್ ನಲ್ಲಿ ಈ ರೀತಿಯ ಸೇವೆಗಳನ್ನು ಮಾಡುವುದಿಲ್ಲವೆಂದು ಎಷ್ಟೇ ಖಡಾಖಂಡಿತವಾಗಿ ಹೇಳಿದರು ಸಹ ಪದೇ ಪದೇ ಕಾಲ್ ಮಾಡಿ ಬಿಸಿ ಬಿಸಿ ಸಮೋಸಗಳು ಬೇಕೆ ಬೇಕು ಎಂದು ಹಿಂ’ಸೆ ಕೊಟ್ಟ. ಅದಕ್ಕೆ ಅಲ್ಲಿನ ಡಿಸ್ಟ್ರಿಕ್ಟ್ ಕಮೀಷನರ್ ಆದ ಡಿಸಿ ಅಂಜಿನೇಯ ಕುಮಾರ್ ಸಿಂಗ್ ಅವರು ಆ ಯುವಕನಿಗೆ ಸಮೋಸಗಳನ್ನು ತೆಗೆದುಕೊಂಡು ಹೋಗಿ ಕೊಡಿ ಎಂದು ಆದೇಶಿಸಿದರು.. ಆಗ ಅಧಿಕಾರಿಗಳು ಸಮೋಸಗಳನ್ನು ನೀಡಿ ಅವನಿಗೆ ಮತ್ತೊಂದು ಸರ್ಪ್ರೈಸ್ ಕೊಟ್ಟರು.

ಮನೆಯಿಂದ ಆಚೆ ಕರೆಸಿ ಡೀಸಿರವರ ಆದೇಶದಂತೆ ಅವರ ಮತ್ತು ಪಕ್ಕದ ರೋಡ್ ಗಳ ಡ್ರೈನೇಜ್ ಗಳನ್ನು ಅವನ ಕೈಯಲ್ಲೇ ಕ್ಲೀನ್ ಮಾಡಿಸಿ ಆ ಪೋಟೋಗಳನ್ನು ಡೀಸಿರವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.. ಮತ್ತು ಯಾರಾದರು ಸುಖಾ ಸುಮ್ಮನೆ ಪೋನ್ ಮಾಡಿ ಕಾ’ಟ ಕೊಟ್ಟರೆ ಅವರಿಗೆ ಇದೇ ಗತಿಯಾಗುತ್ತದೆ ಎಂದು ವಾರ್ನಿಂ’ಗ್ ಕೂಡ ಕೊಟ್ಟರು. ಇದನ್ನು ನೋಡಿದ ಜನ ಸಾಮಾನ್ಯರು..  ಕಮೀಷನರ್ ಮಾಡಿದ ಕೆಲಸ ಸರಿಯಾಗಿದೆ ಎಂದು ಒಪ್ಪಿಕೊಳ್ಳುತ್ತಿದ್ದಾರೆ.. ಮತ್ತು ಅವರನ್ನು ಪ್ರಶಂಸಿಸುತ್ತಿದ್ದಾರೆ. ನಿಮಗೆ ಏನು ಅನಿಸುತ್ತೆ.. ಬುದ್ದಿ ಕಲಿಸಲು ಅಲ್ಲಿನ ಕಮೀ’ಷನರ್ ಮಾಡಿದ ಈ ಕೆಲಸ ಸರಿನಾ ನಿಮ್ಮ ಅನಿಸಿಕೆ ತಿಳಿಸಿ.