ನಮಸ್ತೇ ಸ್ನೇಹಿತರೇ, ನಾವು ಮುಂಜಾಗ್ರತೆ ವಹಿಸದೇ ಆತುರವಾಗಿ ಮಾಡುವ ಕೆಲಸಗಳು ಎಷ್ಟೋ ಬಾರಿ ನಮಗೆ ಅಪಾಯ ತರುವ ಸಾಧ್ಯತೆಗಳೇ ಹೆಚ್ಚು. ಹೌದು, ಕಾರ್ ನಲ್ಲೋ, ಬೈಕ್ ನಲ್ಲೋ ಹೊರಗಡೆ ಹೋಗುವಾಗ ನಾವು ಏನನ್ನು ಚೆಕ್ ಮಾಡದೇ ಆತುರಾತುರವಾಗಿ ಹೊರಟುಬಿಡುತ್ತೇವೆ. ಇದೆ ನಾವು ಮಾಡುವ ಮೊದಲ ತಪ್ಪು. ಎಷ್ಟೇ ಅರ್ಜೆಂಟ್ ಇರಲಿ, ಯಾವುದೇ ಕೆಲಸವಿರಲು ನಾವು ಬೈಕ್ ಅಥ್ವಾ ಕಾರ್ ಏರುವ ಮುಂಚೆ ಎಚ್ಚರಿಕೆವಹಿಸುವುದು ಉತ್ತಮ. ಇದಕ್ಕೂ ಕಾರಣವೂ ಇದೆ. ಹೀಗೆಯೇ ಆತುರವಾಗಿ ಸರಿಯಾಗಿ ಚೆಕ್ ಮಾಡ್ದೆ ಹೆಲ್ಮೆಟ್ ಧರಿಸಿ ತನ್ನ ಬೈಕ್ ಏರಿ ಹೊರಟ ಕೇರಳದ ಶಿಕ್ಷಕರೊಬ್ಬರು ಸೀದಾ ಆಸ್ಪತ್ರೆ ಸೇರಿದ ಘಟನೆ ನಡೆದಿದೆ.

ಕೇರಳದ ಶಾಲೆಯೊಂದರಲ್ಲಿ ಶಿಕ್ಷಕ ವೃತ್ತಿ ಮಾಡುತ್ತಿರುವ ರಂಜಿತ್ ಎನ್ನುವವರು ಎಂದಿನಂತೆ ತಮ್ಮ ಹೆಲ್ಮೆಟ್ ಧರಿಸಿಕೊಂಡು ಬೈಕ್ ಏರಿ ಶಾಲೆಗೆ ಹೋಗಿದ್ದಾರೆ. ಆ ಶಾಲೆಯ ದೂರ ೫ ಕಿಮೀ ಇತ್ತು. ಮತ್ತೆ ಅಲ್ಲಿ ಪಾಠ ಮಾಡಿದ ಬಳಿಕ ಮತ್ತೊಂದು ಶಾಲೆಯಲ್ಲಿ ಪಾಠ ಮಾಡುವ ಸಲುವಾಗಿ ರಂಜಿತ್ ಮೇಷ್ಟ್ರು ಮತ್ತೆ ತಮ್ಮ ಬೈಕ್ ಏರಿ ಹೊರಟಿದ್ದಾರೆ. ಇನ್ನು ಶಾಲೆಯನ್ನ ತಲುಪುವಷ್ಟರ ಹೊತ್ತಿಗೆ ಸುಮಾರು ಹನ್ನೆರಡು ಗಂಟೆ ಆಗಿದೆ. ಅಷ್ಟೊತ್ತಿಗೆ ಅವರು ಸುಮಾರು ೧೧ ಕಿಮೀ ಬೈಕ್ ನಲ್ಲಿ ಓಡಾಡಿದ್ದಾರೆ. ಶಾಲೆಯ ಬಳಿ ಬೈಕ್ ಪಾರ್ಕ್ ಮಾಡಿದ ರಂಜಿತ್ ತಮ್ಮ ಹೆಲ್ಮೆಟ್ ನ್ನ ತೆಗೆಯುತ್ತಿದ್ದಂತೆ ಬೆಚ್ಚಿಬೀಳುತ್ತಾರೆ. ಕಾರಣ ಹೆಲ್ಮೆಟ್ ನಲ್ಲಿ ಹಾವಿನ ಬಾಲವಿರುವುದು ಕಾಣಿಸುತ್ತದೆ. ಗಾತ್ರದಲ್ಲಿ ಹಾವು ಚಿಕ್ಕದಾಗಿದ್ದರೂ ಅದು ತುಂಬಾ ವಿ’ಷಕಾರಿ ಹಾವು ಎಂದು ತಿಳಿದು, ಆ ಶಾಲೆಯವರು ತಕ್ಷಣವೇ ಆ ಶಿಕ್ಷಕನನ್ನ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚೆಕಪ್ ಮಾಡಿಸುತ್ತಾರೆ. ತಪಾಸಣೆ ನಡೆಸಿದ ವೈದ್ಯರು ದೇಹಕ್ಕೆ ವಿ’ಷ ಸೇರಿಲ್ಲ ಎಂಬುದನ್ನ ಧೃಡ ಪಡಿಸುತ್ತಾರೆ.

ಇನ್ನು ಇದರ ಬಗ್ಗೆ ರಂಜಿತ್ ಅವರು ಹೇಳಿದ ಹಾಗೆ ಅವರ ಮನೆಯ ಬಳಿ ಕೊಳವೊಂದಿದ್ದು ಅಲ್ಲಿಂದ ಬಂದ ಹಾವು ಹೆಲ್ಮೆಟ್ ಒಳಗಡೆ ಸೇರಿಕೊಂಡಿರಬಹುದು ಎಂದು ಅವರು ಹೇಳಿದ್ದಾರೆ. ಹೆಲ್ಮೆಟ್ ಚಿಕ್ಕದಿದ್ದ ಕಾರಣ ರಂಜಿತ್ ಅವರ ತಲೆಗೆ ಫಿಟ್ ಆಗಿತ್ತು. ಹಾಗಾಗಿ ಹೆಲ್ಮೆಟ್ ಒಳಗಡೆ ನುಸುಳಿದ ಹಾವಿಗೆ ಆಚೆ ಬರಲಾರದೆ, ಕದಲಲು ಕೂಡ ಆಗದೆ ಒಳಗಡೆಯೇ ಅ’ಪ್ಪಚ್ಚಿಯಾಗಿ ಪ್ರಾ’ಣ ಬಿಟ್ಟಿತ್ತು. ಇನ್ನು ಆ ಹೆಲ್ಮೆಟ್ ಮತ್ತೆ ಉಪಯೋಗಿಸದ ಶಿಕ್ಷಕ ರಂಜಿತ್ ಅವರು ಹೆಲ್ಮೆಟ್ ನ್ನ ಸು’ಟ್ಟಾಕಿದ್ದಾರೆ. ಸ್ನೇಹಿತರೇ, ಈ ಘಟನೆ ನಡೆದು ಹತ್ತಿರತ್ತಿರ ಒಂದು ವರ್ಷ ಆಗಿದೆ. ಆದರೂ ಇಂತಹ ಸುದ್ದಿಗಳನ್ನ ಮತ್ತೆ ಮತ್ತೆ ಓದಿದಾಗ, ನಾವು ಹೊರಗಡೆ ಹೊರಡುವ ಮುಂಚೆ ಹೇಗೆ ಮುಂಜಾಗ್ರತೆವಹಿಸಬೇಕು ಎಂಬುದರ ಎಚ್ಚರಿಕೆವಹಿಸುತ್ತೇವೆ. ಹಾಗಾಗಿಯೇ ಈ ಮಾಹಿತಿಯನ್ನ ನಾವು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ಯಾವುದೇ ಒಂದು ವಸ್ತುವನ್ನ ಉಪಯೋಗಿಸುವ ಮುಂಚೆ ಅದನ್ನ ಒಂದು ಬಾರಿ ಚೆಕ್ ಮಾಡಿ ಬಳಿಕ ಉಪಯೋಗಿಸುವುದು ಉತ್ತಮ.