Advertisements

ಚಿಂದಿ ಪೇಪರ್ ಆಯುವ ವ್ಯಕ್ತಿ ಸುಮಾರು 2 ಸಾವಿರಕ್ಕೂ ಹೆಚ್ಚು ಜನರ ಪ್ರಾಣವನ್ನು ಉಳಿಸಿದ್ದಾನೆ! ಹೇಗೆ ಗೊತ್ತಾ? ಇಡೀ ದೇಶವೇ ಸೆಲ್ಯೂಟ್ ಮಾಡುತ್ತಿದೆ..

Inspire

ನಮಸ್ತೆ ಸ್ನೇಹಿತರೆ, ಸಾಮಾನ್ಯವಾಗಿ ನಾವು ರಸ್ತೆ ಬದಿಗಳಲ್ಲಿ ಚಿಂದಿ ಪೇಪರ್, ಪ್ಲಾಸ್ಟಿಕ್ ಆಯುವವರನ್ನ ನೋಡಿರುತ್ತೇವೆ.. ಕೆಲವು ಜನರು ಇವರನ್ನ ತೀರ ಅಸಡ್ಡೆಯಿಂದ ನೋಡ್ತಾರೆ. ಅವರಿಗೂ ಕೂಡ ಒಂದು ಜೀವನ, ಮನಸ್ಸು ಇರುತ್ತದೆ ಎನ್ನುವುದನ್ನು ಸಹ ಅರ್ಥ ಮಾಡಿಕೊಳ್ಳುವುದಿಲ್ಲ.. ಈ ರೀತಿ ಪೇಪರ್ ಆಯುವ ವ್ಯಕ್ತಿಯೊಬ್ಬ ತನ್ನ ಮಗುವಿನೊಂದಿಗೆ ಮಾಡಿರುವ ಈ ಕೆಲಸ ದೇಶಾದ್ಯಂತ ವೈರಲ್ ಆಗಿತ್ತು. ಇಡೀ ದೇಶವೇ ಒಂದು ಕ್ಷಣ ಅಚ್ಚರಿಪಟ್ಟಿದೆ.. ಅಪ್ಪ ಹಾಗೂ ಮಗಳು ಇಬ್ಬರು ಸೇರಿ ಚಿಂದಿ ಪೇಪರ್ ಆಯುತ್ತಿದ್ದರೂ ಕೂಡ ಸಾವಿರಾರು ಜನರ ಪ್ರಾ’ಣವನ್ನು ಉಳಿಸಿದ್ದಾರೆ. ತ್ರಿಪುರದಲ್ಲಿ ಬಾರಿ ಮಳೆ ಬಂದಾಗ ಹಲವು ಪ್ರದೇಶಗಳಲ್ಲಿ ಭೂ’ಕುಸಿತ, ನೈಸರ್ಗಿಕ ವಿ’ಕೋಪಗಳು ಉಂಟಾಗಿತ್ತು.

Advertisements

ಅಂತಹ ಪ್ರದೇಶದಲ್ಲಿ ಒಂದು ರೈಲ್ವೇ ಟ್ರ್ಯಾಕ್ ಕೂಡ ಇತ್ತು.. ಇಲ್ಲಿ ನಡೆದ ಒಂದು ವಿಚಿತ್ರ ಘಟನೆ ಏನೆಂದರೆ ತ್ರಿಪುರದಲ್ಲಿ ಒಂದು ರೈಲ್ವೆ ಟ್ರ್ಯಾಕ್ ಕಂಬಿ ಮುರಿದು ಹೋಗಿತ್ತು.. ಅದೇ ಟ್ರ್ಯಾಕ್ ಮೇಲೆ ರೈಲು ಬರುತ್ತಿರುವುದನ್ನ ಚಿಂದಿ ಪೇಪರ್ ಆಯುವ ವ್ಯಕ್ತಿ ಹಾಗೂ ಮಗಳು ನೋಡಿದ್ದಾರೆ. ಅವರಿಗೆ ಆ ಸಮಯದಲ್ಲಿ ಏನು ಮಾಡಬೇಕು ಅಂತ ತೋಚಲಿಲ್ಲ.. ತಕ್ಷಣ ಯಾರಿಗಾದರೂ ತಿಳಿಸಬೇಕು ಎಂದರೆ ಅಲ್ಲಿ ಯಾರೂ ಕೂಡ ಇರಲಿಲ್ಲ. ಆದರೂ ಕೂಡ ತಮ್ಮ ಪ್ರಾಣವನ್ನು ಲೆಕ್ಕಿಸದೆ ಸಾವಿರಾರು ಜನರ ಪ್ರಾಣವನ್ನು ಉಳಿಸಿದ್ದಾರೆ.. ತಕ್ಷಣ ಚಿಂದಿ ಪೇಪರ್ ಆಯುವ ವ್ಯಕ್ತಿ ಹೇಗಾದರೂ ಮಾಡಿ ರೈಲಿನಲ್ಲಿರುವ ಸಾವಿರಾರು ಜನರನ್ನು ಪ್ರಾಣವನ್ನು ಉಳಿಸಬೇಕೆಂದು ತನ್ನ ಮಗುವಿನ ಬಟ್ಟೆಯನ್ನು ಬಿಚ್ಚಿದ್ದಾನೆ..

ಅದು ತುಂಬಾ ಚಿಕ್ಕದಾಯಿತು ಎಂದು ಹರಿತ ಈ ವ್ಯಕ್ತಿ ಆನಂತರ ತನ್ನ ಅಂಗಿಯನ್ನು ಸಹ ಬಿಚ್ಚಿ ರೈಲು ಕಂಬಿಗಳ ಮೇಲೆ ರೈಲಿನ ಎದುರಾಗಿ ರೈಲನ್ನು ನಿಲ್ಲಿಸಿ ಎಂದು ಸನ್ನೆ ಮಾಡುತ್ತಾ ಓಡುತ್ತಾನೆ. ಅದೃಷ್ಟವೋ ಎನೋ ಅನ್ನುವಂತೆ ಇದು ಲೋಕೊ ಪೈಲಟ್ ಗೆ ಕಾಣಿಸಿದ್ದರಿಂದ ತಕ್ಷಣ ಲೋಕೊ ಪೈಲಟ್ ಇದನ್ನ ಹರಿತು ಇಲ್ಲಿ ಏನೋ ನಡೆಯುತ್ತಿದೆ ಎಂದು ನಿದಾನವಾಗಿ ರೈಲನ್ನು ನಿಲ್ಲಿಸುತ್ತಾ‌ನೆ.. ಆನಂತರ ಬಂದು ನೋಡಿದಾಗ ಘಟನೆ ಲೋಕೊ ಪೈಲಟ್ ಗೆ ಎಲ್ಲವೂ ಅರಿವಾಗಿರುತ್ತದೆ.. ನಂತರ ಚಿಂದಿ ಆಯುವ ವ್ಯಕ್ತಿಗೆ ಧನ್ಯವಾದಗಳನ್ನು ತಿಳಿಸಿ ರೈಲಿನಲ್ಲಿದ್ದ ಪ್ರಯಾಣಿಕರು ಸಹ ಧನ್ಯವಾದಗಳನ್ನು ತಿಳಿಸಿದ್ದಾರೆ‌.

ಆನಂತರ ಈ ವಿಷಯ ತ್ರಿಪುರದ ಮಿನಿಸ್ಟರ್ ಗೂ ಕೂಡ ತಲುಪಿದೆ. ತನ್ನ ಪ್ರಾಣವನ್ನು ಸಹ ಲೆಕ್ಕಿಸದೆ ಚಿಂದಿ ಪೇಪರ್ ಆಯುವ ವ್ಯಕ್ತಿ ಸುಮಾರು 2000 ಕ್ಕೂ ಹೆಚ್ಚು ಜನರ ಪ್ರಾಣವನ್ನು ಉಳಿಸಿದ್ದ.. ಅವನಿಗೆ ಉತ್ತಮ‌ ಭೋಜನವನ್ನು ಎರ್ಪಿಡಿಸುವುದರ ಜೊತೆಗೆ ತ್ರಿಪುರದ ಅಸೆಂಬ್ಲಿಯಲ್ಲಿ ಚರ್ಚೆಯನ್ನು ನಡೆಸಿ ಅವನ ಜೀವನಕ್ಕೆ ಅಗತ್ಯವಾದ ಮೂಲ ಸೌಕರ್ಯ, ಉದ್ಯೋಗವನ್ನು ಕಲ್ಪಿಸಿಕೊಟ್ಟಿದ್ದಾರೆ‌. ಇಷ್ಟಾದ ನಂತರ ರೈಲ್ವೆ ಇಲಾಖೆ ಈ ವ್ಯಕ್ತಿಗೆ ಬಹುಮಾನವನ್ನ ಘೋಷಿಸಿದ್ದಾರೆ.. ಇಲ್ಲಿ ಚಿಂದಿ ಆಯುವ ವ್ಯಕ್ತಿ ಜನರ ಜೀವವನ್ನ ಕಾಪಾಡಿದರ ಜೊತೆಗೆ ತನ್ನ ಜೀವನವನ್ನು ಸಹ ರೂಪಿಸಿಕೊಂಡಿದ್ದಾನೆ. ಈ ಕೆಲಸಕ್ಕೆ ಸೆಲ್ಯೂಟ್ ಹೊಡೆಯಲೇ ಬೇಕು..