Advertisements

ತನ್ನ ಹೆಂಡತಿಗೆ ಅವಮಾನ ಮಾಡಿದ್ದಾರೆ ಅಂತ ಈತ ಹೆಂಡತಿಗಾಗಿ ಮಾಡಿದ್ದು ಏನ್ ಗೊತ್ತಾ? ಬೆಚ್ಚಿ ಬಿಳ್ತೀರಾ..

Kannada Mahiti

ನಮಸ್ತೆ ಸ್ನೇಹಿತರೆ, ತನ್ನ ಹೆಂಡತಿಗೆ ಅವಮಾನ ಮಾಡಿದ್ದಾರೆ ಎಂದು ಈತ ಹೆಂಡತಿಗಾಗಿ ಮಾಡಿದ್ದೇನು ಗೊತ್ತಾ? ಈ ಸ್ಟೋರಿಯನ್ನ ನೊಡೋಣ ಬನ್ನಿ.. ಗಂಡ ಹೆಂಡತಿಗಾಗಿ ಏನು ಬೇಕಾದರೂ ಮಾಡುತ್ತಾನೆ ಅನ್ನೋದಕ್ಕೆ ಸಾಕಷ್ಟು ಉದಾಹರಣೆಗಳು ಇವೆ. ನೀವು ಇದೇ ರೀತಿ ಹಲವು ಸಂಗತಿಗಳನ್ನು ನೋಡಿರ್ತೀರಾ ಅಥವಾ ಕೇಳಿರ್ತೀರಾ‌.. ತನ್ನ ಹೆಂಡತಿ ನೀರು ತರಲು ಬೇರೆಯವರ ಮನೆಗೆ ಹೋಗಿದ್ದಾಗ ಅವರು ನೀರು ಕೊಡದೇ ಕಳುಹಿಸುತ್ತಾರೆ.. ಇದರಿಂದ ನೋವು ಅನುಭವಿಸಿದ ತನ್ನ ಹೆಂಡತಿಗಾಗಿ ತಮ್ಮ ಮನೆಯ ಮುಂದೆ ಬಾವಿಯನ್ನು ತೋಡಿ ನೀರು ಬರುವ ಹಾಗೆ ಮಾಡಬೇಕು ಅಂತ ನಿರ್ದರಿಸುತ್ತಾನೆ..

Advertisements

ಮಹಾರಾಷ್ಟ್ರದ ವಾಷಿಂಗ್ ಜಿಲ್ಲೆಯ ಕಲಂಬೇಶ್ವರ್ ಗ್ರಾಮದ ದಲಿತ ದಿನಕೂಲಿ ಕೆಲಸಗಾರ ತಾಂಜಿ ಒಬ್ಬಂಟಿಯಾಗಿ ಬಾವಿ ತೋಡಿದ್ದಾನೆ. ದಿನದಲ್ಲಿ ಆರು ಗಂಟೆಗಳ ಕಾಲ ಬಾವಿ ತೋಡುತ್ತಿದ್ದ ಈತನಿಗೆ 40 ದಿನಗಳ ನಂತರ ನೀರು ಸಿಕ್ಕಿದೆ.. ಗ್ರಾಮದಲ್ಲಿ‌ನ ದಲಿತರೆಲ್ಲರೂ ಬೇರೊಂದು ಮನೆಯ ಬಾವಿಯಿಂದ ನೀರು ತರಬೇಕಾಗಿತ್ತು. ತಾಂಜಿಯ ಪತ್ನಿ ಸಂಗೀತ ನೀರು ತರಲು ಹೋದಾಗ ಆ ಮನೆಯವರು ಈಕೆಗೆ ನೀರು ಕೊಡಲು ನಿರಾಕರಿಸಿ ಅವಮಾನ ಮಾಡಿದ್ದರು.. ಇನ್ನೂ ಸಂಗೀತ ಮನೆಗೆ ಬಂದು ನನ್ನಲ್ಲಿ ಈ ವಿಷಯವನ್ನು ಹೇಳಿದಾಗ ನಾನು ಅವಮಾನದಿಂದ ಅತ್ತುಬಿಟ್ಟೆ ನಾನು ಬಡವರು ಮತ್ತು ದಲಿತರಾಗಿರುವ ಕಾರಣವೇ ಅವರು ನಮ್ಮನ್ನ ಅವಮಾನಿಸಿದ್ದರು..

ಆಗಲೇ ನಾವು ಇನ್ನು ಮುಂದೆ ಯಾರ ಬಳಿಯೂ ನೀರು ಕೇಳಲು ಹೋಗುವುದಿಲ್ಲ ಎಂದು ತಿರ್ಮಾನ ಮಾಡಿದೆ. ನಾನು ಮಾಲಿಂಗ್ ಗೆ ಹೋಗಿ ಬಾವಿ ತೋಡಲು ಬೇಕಾದ ವಸ್ತುಗಳನ್ನು ಖರೀದಿಸಿ ಬಾವಿ ತೋಡಲು ಶುರುಮಾಡಿದೆ.. ನಮ್ಮ ದಲಿತರ ಗ್ರಾಮದಲ್ಲಿ ನೀರು ಬತ್ತಿ ಹೋಗಿದ್ದು. ಅದಕ್ಕಾಗಿ ಇತರ ಜಾತಿಯವರ ಮನೆಯಲ್ಲಿ ನೀರು ತರಬೇಕಾಗಿತ್ತು.. ಇತರ ಜಾತಿಯವರು ನಾವು ದಲಿತರೆಂಬ ಒಂದೇ ಕಾರಣಕ್ಕಾಗಿ ಅವಮಾನ ಮಾಡುತ್ತಿದ್ದರು ಎಂದು ತಾಂಜಿಯವರು ಹೇಳಿದ್ದಾರೆ.. ತಾಂಜಿ ಒಬ್ಬನೇ ಬಾವಿ ತೋಡುವ ಕೆಲಸವನ್ನ ಮಾಡಿದ್ದಾನೆ.

ಮೊದ ಮೊದಲು ತಾಂಜಿಗೇನು ಹುಚ್ಚು ಅಂತ ಜನರು ನಕ್ಕಿದ್ದರು ಹಾಗೂ ಅಪಹಾಸ್ಯವನ್ನು ಕೂಡ ಮಾಡಿದ್ದರು.. ಆದರೆ ಇದಾವುದಕ್ಕೂ ತಲೆಕೊಡದೇ 40 ದಿನಗಳ ಕಾಲ ಬಾವಿ ತೊಡಿದ ನಂತರ ನೀರು ಸಿಕ್ಕಿದೆ.. ಈಗ ನನ್ನ ಗ್ರಾಮದವರು ಬೇರೆಕಡೆ ಹೋಗಿ ಬೇಡುವಂತಿಲ್ಲ ಎಂದು ಹೇಳಿಕೊಂಡಿದ್ದಾರೆ. ಅದೇನೆ ಇರಲಿ ನನ್ನ ಹೆಂಡತಿಗಾಗಿ ಮತ್ತು ಸಮಾಜದವರನ್ನು ಅವಮಾನಿಸಿದವರ ಮುಂದೆ ಈತ ಮಾಡಿರುವ ಕೆಲಸ ನಿಜಕ್ಕೂ ಅದ್ಬುತವೇ ಅನ್ನಬಹುದು.. ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅನ್ನುವದನ್ನ ತಿಳಿಸಿ.