Advertisements

ಮಂಡ್ಯ ರಮೇಶ್ ಹೆಂಡತಿ ಹೇಗಿದ್ದಾರೆ ನೊಡಿದ್ದೀರಾ? ಇವರು ತುಂಬಾನೆ ಫೇಮಸ್..

Cinema

ನಮಸ್ತೆ ಸ್ನೇಹಿತರೆ, ಮಂಡ್ಯ ರಮೇಶ್ ಕನ್ನಡ ಚಿತ್ರರಂಗ ಕಂಡ ಕ್ರಿಯಾಶೀಲ ಪೋಷಕ ನಟ ಹಾಗು ಹಾಸ್ಯ ನಟ ತಮ್ಮ ಹಾಸ್ಯ ನಟನೆಯಿಂದ ಮಂಡ್ಯ ರಮೇಶ್ ಅವರು ಕನ್ನಡ ಚಿತ್ರ ರಸಿಕರ ಮನ ಗೆದ್ದಿದ್ದಾರೆ.‌ ಮೂಲತಃ ರಂಗಭೂಮಿ ಹಿನ್ನಲೆಯಿಂದ ಬಂದ ಮಂಡ್ಯ ರಮೇಶ್ ಅವರು ಜನುಮದ ಜೋಡಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು.. ಮಂಡ್ಯ ರಮೇಶ್ ಅವರು 1964 ರಲ್ಲಿ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಹುಟ್ಟಿದರು. ಮಂಡ್ಯ ರಮೇಶ್ ಅವರು ಬೆಳೆದದ್ದು ರಂಗಭೂಮಿಯ ಒಡನಾಟದಲ್ಲಿ.

Advertisements

ಕಲೆಯನ್ನೆ ಉಸಿರಾಗಿಸಿಕೊಂಡ ಮಂಡ್ಯ ರಮೇಶ್ ಅವರು ಹಲವಾರು ನಾಟಕಗಳಲ್ಲಿ ನಟಿಸಿ ನಿರ್ದೇಶಿಸಿದ್ದಾರೆ. ಮಂಡ್ಯ ರಮೇಶ್ ಅವರು ಮೈಸೂರಿನಲ್ಲಿ ನಟನಾ ನಾಟಕ ಶಾಲೆಯನ್ನು ನಡೆಸುತ್ತಿದ್ದಾರೆ.. ಇನ್ನೂ ಮಂಡ್ಯ ರಮೇಶ್ ಅವರು ಜನುಮದ ಜೋಡಿ, ಕನಸುಗಾರ, ನಾಗಮಂಡಲ, ಅಮೃತದಾರೆ, ಮಠ ಈಗೆ 200 ಕ್ಕು ಹೆಚ್ಚು ಚಿತ್ರಗಳಲ್ಲಿ ಹಾಸ್ಯ ನಟನಾಗಿ ಪೋಷಕ ನಟರಾಗಿ ನಟಿಸಿದ್ದಾರೆ. ಜನನಿ, ಮನೆತನ, ಮಂತನ, ಮಜಾಟಾಕಿಸ್ ಹಾಗು..

ಇನ್ನೂ ಮುಂತಾದ ಕಿರುತೆರೆ, ರಿಯಾಲಿಟಿ ಶೋಗಳಲ್ಲಿ ಸಹ ತಮ್ಮ ನಟನೆಯಿಂದ ಪ್ರೇಕ್ಷಕರನ್ನು ರಂಜಿಸಿದ್ದಾರೆ.. ಇನ್ನೂ ಇವರ ಪತ್ನಿ ಸರೋಜ ಹೆಗಡೆ ಅವರು ಕೂಡ ರಂಗಭೂಮಿ ಹಿನ್ನಲೆಯಿಂದ ಬಂದವರು. ಮಂಡ್ಯ ರಮೇಶ್ ಅವರದ್ದು ಲವ್ ಕಮ್ ಅರೆಂಜ್ ಮ್ಯಾರೇಜ್.. ಇನ್ನೂ ಮಂಡ್ಯ ರಮೇಶ್ ಹಾಗು ಸರೋಜ ಹೆಗಡೆ ದಂಪತಿಗೆ ನಿಶಾ ರಮೇಶ್ ಎಂಬ ಸುಂದರ ಮಗಳಿದ್ದಾಳೆ. ಇನ್ನೂ ರಮೇಶ್ ಅವರು ಕೂಡ ರಂಗಭೂಮಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ..