Advertisements

ರುಚಿಯಾದ ಮಂಡ್ಯ ಶೈಲಿಯ ಕಾಲ್ ಸೂಪ್ ಮಾಡೋ ವಿಧಾನ ಹೇಗಂತ ನೋಡಿ..

Aduge

ಸ್ನೇಹಿತರೇ, ಭಾನುವಾರ ಬಂತೆಂದರೆ ಸಾಕು ಮಾಂಸಹಾರಿಗಳಿಗೆ ಹಬ್ಬ. ಬಿರಿಯಾನಿ, ಕಾಲ್ ಸೂಪ್ ಸೇರಿದಂತೆ ವಿಭಿನ್ನ ರೀತಿಯ ಮಾಂಸದ ಅಡುಗೆಗಳನ್ನ ಹುಡುಕಿಕೊಂಡು ಹೋಟೆಲ್ ಗಳಿಗೆ ಹೋಗುತ್ತಾರೆ. ಆದರಲ್ಲೂ ಬಹುತೇಕರು ಕಾಲ್ ಸೂಪ್ ಎಂದರೆ ತುಂಬಾ ಇಷ್ಟಪಡುತ್ತಾರೆ. ಆದರೆ ಹೋಟೆಲ್ ನಲ್ಲಿ ತಿಂದು ಆರೋಗ್ಯ ಕೆಡಿಸಿಕೊಳ್ಳುವ ಬದಲು ಮನೆಯಲ್ಲೇ ಮಾಡಿ ತಿಂದರೆ ಹೇಗಿರುತ್ತೆ ಆಲ್ವಾ..ಇನ್ನು ಈ ಕಾಲ್ ಸೂಪ್ಕೇವಲ ರುಚಿಗೆ ಮಾತ್ರವಲ್ಲದೆ, ಇದರಲ್ಲಿ ಹಲವಾರು ಆರೋಗ್ಯಕರ ಔಷಧಿ ಗುಣಗಳು ಕೂಡ ಇವೆ. ಹಾಗಾದ್ರೆ ಮನೆಯಲ್ಲೇ ಕಾಲ್ ಸೂಪ್ ಮಾಡೋದು ಹೇಗೆ ಅಂತ .ತಿಳಿಯೋಣ ಬನ್ನಿ..

Advertisements

ಕಾಲ್ ಸೂಪ್ ಮಾಡಲು ಬೇಕಾಗಿರುವ ಪದಾರ್ಥಗಳು : ಮೊದಲಿಗೆ ಮುಖ್ಯವಾಗಿ ಬೇಕಾಗಿರುವುದು ೨ ರಿಂದ ೩ ಕುರಿ ಇಲ್ಲವೇ ಮೇಕೆಯ ಕಾಲುಗಳು. ಟೊಮೋಟೊ, ಈರುಳ್ಳಿ ೨, ಕರಿಬೇವಿನ ಎಲೆ, ಕುದಿನ ಸೊಪ್ಪು, ಶುಂಠಿ, ಬೆಳ್ಳುಳ್ಳಿ ಎಳಸುಗಳು ೧೦, ಧನಿಯ ಪೌಡರ್ ಅರ್ಧ ಚಮಚ, ಮೆಣಸು ೧೫ ರಿಂದ ೨೦, ಅಡುಗೆ ಎಣ್ಣೆ ಒಂದು ವರೆ ಚಮಚ ಹಾಗೂ ನೀರು, ರುಚಿಗೆ ತಕ್ಕಷ್ಟು ಉಪ್ಪು, ಕೊತ್ತಂಬರಿ ಸೊಪ್ಪು, ಚಕ್ಕೆ,ಲವಂಗ, ಅರಿಶಿನ 1/4 ಚಮಚ, ಇನ್ನು ಕಾಲು ಸೂಪ್ ವಿಧಾನ ಹೇಗೆಂದು ನೋಡಿ.

ಮೊದಲಿಗೆ ಕುರಿ ಅಥ್ವಾ ಮೇಕೆ ಕಾಲುಗಳನ್ನ ತಂದು ಚೆನ್ನಾಗಿ ಕ್ಲೀನ್ ಮಾಡಿ. ಬಳಿಕ ಕುಕ್ಕರ್ ತೆಗೆದುಕೊಂಡು ಅದರಲ್ಲಿ ಸ್ವಲ್ಪ ಅಡುಗೆ ಎಣ್ಣೆಯನ್ನ ಹಾಕಿ ಬಳಿಕ ಕಾಲುಗಳು ಕುರಿಯ ಮುಳುಗವಷ್ಟು ನೀರು ಹಾಕಿ. ಬಳಿಕ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಅರಿಶಿನವನ್ನ ಹಾಕಿ ನಾಲ್ಕರಿಂದ ಐದು ವಿಷಲ್ ಬರುವವರೆಗೂ ಬೇಯಿಸಿ. ಕಾಲ್ ಸೂಪ್ ಮಾಡುವ ಸಂಪೂರ್ಣ ವಿಧಾನವನ್ನ ತಿಳಿಯಲು ಈ ವಿಡಿಯೋ ನೋಡಿ..