ನಮಸ್ತೆ ಸ್ನೇಹಿತರೆ, ಈ ಘಟನೆ ಆಂದ್ರಪ್ರದೇಶದ ಕೃಷ್ಣಾ ನಗರದಲ್ಲಿ ನಡೆದಿದೆ.. ಮೀಲಾ ಅರುಣ್ ಮತ್ತು ಬಿಜಲಿ ಗುರುವಯ್ಯ ಎಂಬ ಗಂಡ ಹೆಂಡತಿ ಇಬ್ಬರು ತುಂಬಾ ಕಷ್ಟಪಟ್ಟು ಮನೆ ಕಟ್ಟಲು ಹಣವನ್ನು ಒಂದು ಕಬ್ಬಿಣದ ಸೂಟ್ ಕೇ’ಸ್ ನಲ್ಲಿ ಕೂಡಿ ಇಡುತ್ತಿದ್ದರು. ಮನೆ ಕಟ್ಟಲು ಬೇಕಾದಷ್ಟು ಹಣ ಕೂಡಿಟ್ಟ ನಂತರ ಆ ಹಣದಿಂದ ಒಂದು ಸುಂದರ ಮನೆ ಕಟ್ಟಬೇಕು ಎಂಬುದು ಇವರ ಆಸೆಯಾಗಿತ್ತು.. ಈಗೆ ಬಹಳ ವರ್ಷಗಳಿಂದ ಬಡ ದಂಪತಿಗಳು ಹಣವನ್ನು ಈ ಸೂಟ್ ಕೇ’ಸ್ ನಲ್ಲಿ ಕೂಡಿ ಇಡುತ್ತಿದ್ದರು. ಒಂದು ದಿನ ಹಣ ಎಷ್ಟಾಗಿದೆ ಎಂದು ಸೂಟ್ ಕೇ’ಸ್ ತೆರದು ನೋಡಿದಾಗ ಆ ಹಣವೆಲ್ಲಾ ಚೆಲ್ಲಾಪಿಲ್ಲಿಯಾಗಿ ತುಂಡು ತುಂಡಾಗಿ ಬಿದ್ದಿದ್ದವು..

ಇದನ್ನು ನೋಡಿದ ಕುಟುಂಬ ಕಣ್ಣೀರಿನಲ್ಲಿ ಮುಳುಗಿತು. ಇನ್ನೂ ತುಂಡು ತುಂಡಾದ ಹಣವನ್ನು ಆಚೆಗೆ ಎಸೆಯುವಾಗಲು ಕೂಡ ಗೋ’ಳಾಡುತ್ತಾ ಇರುತ್ತಾರೆ. ಇದನ್ನು ನೋಡಿದ ಅಲ್ಲಿನ ಜನಗಳು ಸಹ ಓಡಿ ಬರುತ್ತಾರೆ.. ನಂತರ ಈ ವಿಷಯ ಪೋಲಿಸರಿಗೆ ಮುಟ್ಟುತ್ತದೆ. ಅಲ್ಲಿಗೆ ಬಂದ ಪೋಲಿಸರು ಹಣ ಈ ರೀತಿ ಹರಿಯಲು ಕಾರಣವೇನೆಂದು ತನಿ’ಖೆ ನಡೆಸಿದಾಗ ಒಂದು ವಿಷಯ ಹೊರಗೆ ಬರುತ್ತದೆ.. ಅದೇನೆಂದರೆ ಮನೆಯಲ್ಲಿದ್ದ ಇಲಿಗಳು ಈ ಸೂಟ್ ಕೇಸ್ ನಲ್ಲಿ ಸೇರಿಕೊಂಡು ಹಣವನ್ನೇಲ್ಲಾ ಚೂರು ಚೂರಾಗಿ ಮಾಡಿರುತ್ತವೆ.

ಪೋಲಿಸರು ಹರಿದ ಹಣವನ್ನು ನೋಡಿ ಬೇಸರಗೊಂಡು ಅವರಿಗೆ ಸಮಾಧಾನ ಮಾಡಿ ಅವರ ಪಾಡಿಗೆ ಅವರು ಹೊರಟು ಹೋಗುತ್ತಾರೆ.. ನಿಜಕ್ಕೂ ಇದು ದುಃಖದ ಸಂಗತಿ.. ಕಷ್ಟ ಪಟ್ಟು ದುಡಿದ ಹಣದಲ್ಲಿ ಸ್ವಲ್ಪ ಮಟ್ಟಿಗೆ ಮನೆ ಕಟ್ಟಿಸಲೆಂದು ಎತ್ತಿಟ್ಟ ಈ ಹಣ ಈಗ ಇಲಿಗಳ ಪಾಲಾಗಿದೆ.. ಆದರೆ ಈ ಗಂಡ ಹೆಂಡತಿಯ ರೋದನೆ ಮಾತ್ರ ನಿಜಕ್ಕೂ ಕಣ್ಣೀರು ತರಿಸುತ್ತದೆ.. ಇನ್ನೂ ಯಾರಾದರೂ ಅಲ್ಲಿ ಇವರಿಗೆ ಕೈಲಾದಷ್ಟು ಸಹಾಯ ಮಾಡಿದರೆ ಒಳ್ಳೆಯದು..