Advertisements

ದುಡ್ಡು ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದ ಮುದುಕನಿಗೆ ಮಂಗಳ ಮುಖಿಯರು ಮಾಡಿದ ಕೆಲಸ ನೋಡಿ. ನಿಜಕ್ಕೂ ಆಶ್ಚರ್ಯ..

Kannada Mahiti

ನಮಸ್ತೆ ಸ್ನೇಹಿತರೆ, ಮನುಷ್ಯರಲ್ಲಿ ಇರುವುದು ಎರಡೇ ಜಾತಿ ಒಂದು ಗಂಡು ಮತ್ತೊಂದು ಹೆಣ್ಣು.. ಆದರೆ ಅವೆರಡಕ್ಕೂ ಸೇರಿರುವ ಮತ್ತೊಬ್ಬರು ಇದ್ದಾರೆ ಅಂದರೆ ಅವರು ಮಂಗಳ ಮುಖಿಯರು.. ಈ ಲೋಕದ ಕಣ್ಣಿಗೆ ಇವರು ವಿಚಿತ್ರವಾಗಿ ಕಾಣಬಹುದು. ಆದರೆ ಮಂಗಳ ಮುಖಿಯರು ಕೂಡ ಮನುಷ್ಯರೇ.. ಇವರಿಗೂ ಸಹ ನಾವು ಒಳ್ಳೆಯ ಗೌರವ ಹಾಗು ಸ್ಥಾನವನ್ನು ಸರ್ಕಾರ ಕಲ್ಪಿಸಿ ಕೊಡಬೇಕು.. ಇನ್ನೂ ಚೆನ್ನೈನ ಬಸ್ ಒಂದರಲ್ಲಿ ಪರ್ಸ್ ಕಳೆದುಕೊಂಡು ಕಣ್ಣೀರು ಹಾಕುತಿದ್ದ ಅಜ್ಜನಿಗೆ ಮಂಗಳ ಮುಖಿಯರು ಮಾಡಿದ ಕೆಲಸವೇನು ನೋಡಿ..  ಕರುಣಾಕ್ಕರನ್ ಎಂಬ ಅಜ್ಜ ಯಾವುದೋ ಕೆಲಸದ ನಿಮಿತ್ತ ಮದುರೈನಿಂದ ಚೆನ್ನೈಗೆ ಸರ್ಕಾರಿ ಬಸ್ ನಲ್ಲಿ ಹೋಗುತ್ತಿರುತ್ತಾರೆ..

Advertisements

ಕೆಲವತ್ತಿನ ನಂತರ ಊಟದ ಸಮಯವಾಗಿದ್ದ ಕಾರಣ, ಆ ಬಸ್ ಅನ್ನು ದಾರಿ ಮಧ್ಯೆ ಹೋಟೆಲ್ ಬಳಿ ನಿಲ್ಲಿಸುತ್ತಾರೆ.. ಇನ್ನೂ ಬಸ್ ನಲ್ಲಿದ್ದ ಜನಗಳಿಗೆ 15 ನಿಮಿಷ ಬಸ್ ಇಲ್ಲೇ ನಿಂತಿರುತ್ತದೆ ಯಾರಾದರೂ ಊಟ ಮಾಡುವಾಗಿದ್ದರೆ ಹೋಗಿ ಊಟ ಮಾಡಿ ಬನ್ನಿ ಎಂದು ಕಂಡಕ್ಟರ್ ಹೇಳುತ್ತಾರೆ.. ಬಸ್ಸಿನಲ್ಲಿದ್ದ ಕೆಲವು ಪ್ರಯಾಣಿಕರು ಊಟ ಮಾಡಲು ಹೋಟೆಲ್ ಗೆ ಹೋಗುತ್ತಾರೆ. ಆದರೆ ಕರುಣಾಕ್ಕರನ್ ಮತ್ತು ಕೆಲವು ಪ್ರಯಾಣಿಕರು ಹೋಟೆಲ್ ಗೆ ಹೋಗದೆ ಸುಮ್ಮನೆ ಕೂತಿರುತ್ತಾರೆ.. ಅದೇ ಸಮಯಕ್ಕೆ ಮಂಗಳ ಮುಖಿಯರ ಗುಂಪೊಂದು ಬಸ್ಸನ್ನು ಅತ್ತಿ ಜನರ ಹತ್ತಿರ ಹಣ ಕೊಡಿ ಎಂದು ಕೇಳುತ್ತಿರುತ್ತಾರೆ..

ಒಬ್ಬರ ನಂತರ ಒಬ್ಬರ ಬಳಿ ಹಣವನ್ನು ಕೇಳುತಿದ್ದ ಇವರು ಕೊನೆಗ ಕರುಣಾಕ್ಕರನ್ ಅವರ ಹತ್ತಿರ ಬಂದು ಸಹಾಯ ಮಾಡಿ, ಹಣವನ್ನು ಕೊಡಿ ಎಂದು ಕೇಳಿಕೊಳ್ಳುತ್ತಾರೆ.. ಆಗ ಕರುಣಾಕ್ಕರನ್ ಜೋಬಿನಲ್ಲಿದ್ದ ಪರ್ಸ್ ತೆಗೆಯಲು ಕೈ ಹಾಕುತ್ತಾರೆ.. ಆದರೆ ಜೋಬಿನಲ್ಲಿ ಪರ್ಸ್ ಇರಲಿಲ್ಲ.. ಎಕೆಂದರೆ ಈ ಅಜ್ಜ ಬಸ್ ಅತ್ತುವಾಗಲೇ ಇವರ ಜೋಬಿನಿಂದ ಯಾರೋ ಪರ್ಸ್ ಅನ್ನು ಕಳ್ಳತನ ಮಾಡಿರುತ್ತಾರೆ.. ಇನ್ನೂ ಪರ್ಸ್ ಕಳೆದುಕೊಂಡ ಅಜ್ಜ ಕಣ್ಣೀರು ಹಾಕುತ್ತಾ ಮಂಗಳ ಮುಖಿಯರಿಗೆ! ನಾನು ಊರಿನಿಂದ ತಂದ ಹಣ ಎಲ್ಲಾ ಪರ್ಸ್ ನಲ್ಲೇ ಇಟ್ಟಿದ್ದೇ.. ಆದರೆ ಇದೀಗ ಯಾರೋ ನನ್ನ ಪರ್ಸ್ ಅನ್ನು ಕಳ್ಳತನ ಮಾಡಿಬಿಟ್ಟಿದ್ದಾರೆ..

ನಾನು ವಾಪಸ್ ಊರಿಗೆ ಹೋಗಲು ಬಸ್ ಚಾರ್ಜ್ ಗೆ ದುಡ್ಡಿಲ್ಲ. ನಿಮಗೂ ಕೂಡ ಕೊಡಲು ಹಣವಿಲ್ಲ ಎಂದು ಹೇಳಿಕೊಳ್ಳುತ್ತಾರೆ.. ಕಂಡಕ್ಟರ್ ಗೆ ಅಜ್ಜನ ಪರ್ಸ್ ಕಳವಾಗಿರುವ ವಿಷಯ ಗೊತ್ತಾಗಿ ಬೇರೆ ಪ್ರಯಾಣಿಕರ ಬಳಿ ವಿಚಾರಿಸುತ್ತಾರೆ.. ಆದರೆ ಎಲ್ಲರೂ ಸಹ ನಮಗೆ ಪರ್ಸ್ ಬಗ್ಗೆ ಗೊತ್ತಿಲ್ಲ ಎಂದು ಹೇಳುತ್ತಾರೆ.. ಆಗ ಕರುಣಾಕ್ಕರನ್ ಅವರು ನಾನು ಕಷ್ಟಪಟ್ಟಿದ್ದ ಐದು ಸಾವಿರ ಹಣ ಕಳೆದುಕೊಂಡೆ..

ಊರಿಗೆ ಏಗೆ ಹೋಗಲಿ, ಒಂದು ರೂಪಾಯಿ ಸಹ ಇಲ್ಲ ಎಂದು ಕಣ್ಣೀರು ಹಾಕುತ್ತಾರೆ.. ಇನ್ನೂ ಅಜ್ಜನ ಪರಿಸ್ಥಿತಿಯನ್ನು ನೋಡಿದ ಮಂಗಳಮುಖಿಯರು ಅಳಬೇಡಿ ನಾವು ನಿಮಗೆ ಸಹಾಯ ಮಾಡುತ್ತೇವೆ ಎಂದು ಹೇಳಿ.. ಬೆಳಗ್ಗೆಯಿಂದ  ಕಲೆಕ್ಷನ್‌ ಮಾಡಿದ್ದ ಎರಡೂವರೆ ಸಾವಿರ ಹಣವನ್ನು ಅಜ್ಜನಿಗೆ ಕೊಟ್ಟು ಹೊರಟು ಹೋಗುತ್ತಾರೆ.. ಇದನ್ನು ನೋಡಿದ ಪ್ರಯಾಣಿಕರು ಒಂದು ಕ್ಷಣ ಆಶ್ಚರ್ಯ ಪಡುತ್ತಾರೆ.. ಸ್ನೇಹಿತರೆ ಈ ನೈಜ ಘಟನೆಯ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..