Advertisements

ಮಂಗಳ ಮುಖಿಯರಿಗೆ ನೀವು ಹಣ ಕೊಟ್ಟಲ್ಲಿ ಮರೆಯದೆ 1 ನಾಣ್ಯ ಪಡೆದು ಮನೆಯಲ್ಲಿ ಹೀಗೆ ಮಾಡಿ !

Kannada Mahiti

ಸ್ನೇಹಿತರೇ, ನಮ್ಮ ಸಮಾಜದಲ್ಲಿ ತುಂಬಾ ನಿರ್ಲಕ್ಷಕ್ಕೆ ಒಳಗಾಗಿರುವರು ಯಾರಾದರೂ ಇದ್ದರೆ ಅವರು ಮಂಗಳ ಮುಖಿಯರು ಮಾತ್ರ. ರಸ್ತೆಗಳಲ್ಲಿ, ಅಂಗಡಿಗಳಲ್ಲಿ ಇವರು ಹಣ ಕೇಳುವುದನ್ನ ಎಲ್ಲರೂ ನೋಡಿರುತ್ತೇವೆ. ಸಾಮಾನ್ಯವಾಗಿ ಇವರು ಹಣ ಕೇಳಿದ್ರೆ ಯಾರೂ ಇಲ್ಲ ಎನ್ನುವುದಿಲ್ಲ. ತಮಗಿಷ್ಟ ಬಂದಷ್ಟು ಹಣ ಕೊಡುತ್ತಾರೆ. ಜೊತೆಗೆ ಅವರಿಂದ ಒಂದು ನಾಣ್ಯವನ್ನ ಪಡೆಯುವುದನ್ನ ಕೂಡ ನಾವು ನೋಡಿದ್ದೇವೆ. ಇಷ್ಟೇ ಅಲ್ಲ ಮಂಗಳಮುಖಿಯರಿಂದ ಆಶೀರ್ವಾದ ಕೂಡ ಪಡೆಯುವವರು ಕೂಡ ನಮ್ಮಲ್ಲಿ ಅನೇಕರಿದ್ದಾರೆ. ಇದರಿಂದ ಒಳ್ಳೆಯದಾಗುತ್ತದೆ ಎಂಬುದು ಬಹುತೇಕರಲ್ಲಿ ಇರುವ ನಂಬಿಕೆ.

Advertisements

ಇನ್ನು ಮನೆಯಲ್ಲಿ ನಡೆಯುವ ಶುಭ ಸಮಾರಂಭಗಳಿಗೆ ಮಂಗಳ ಮುಖಿಯರನ್ನ ಕರೆಸಿ ಅವರಿಂದ ಆಶೀರ್ವಾದ ಕೂಡ ಪಡೆಯುತ್ತಾರೆ. ಇನ್ನು ಮಂಗಳ ಮುಖಿಯರು ನಮ್ಮ ಎದುರಿಗೆ ಬಂದಾಗ ಈ ಕೆಲಸಗಳನ್ನ ಮಾಡಿದ್ರೆ ಶುಭವಾಗುತ್ತದೆ ಎಂಬ ನಂಬಿಕೆಗಳಿವೆ. ಹೌದು, ಬೆಳಗಿನ ಜಾವ ಎದ್ದು ಮನೆಯಿಂದ ಹೊರಗಡೆ ಹೋದಾಗ, ಒಂದು ವೇಳೆ ಮಂಗಳ ಮುಖಿಯರು ನಿಮ್ಮ ಕಣ್ಣಿಗೆ ಬಿದ್ದಲ್ಲಿ ಅಂತಹವರಿಗೆ ಶುಭ ಆಗುತ್ತದೆ ಎಂದು ಹೇಳಲಾಗಿದೆ. ಮಂಗಳಮುಖಿಯರು ನಿಮ್ಮ ಬಳಿ ಬಂದಾಗ ನಿಮ್ಮ ಕೈಲಾದಷ್ಟು ಹಣವನ್ನ ಅವರಿಗೆ ಕೊಡುವುದು ಉತ್ತಮ ಎಂದು ಹೇಳಲಾಗಿದೆ. ಇನ್ನು ಕೆಲ ಮಂಗಳ ಮುಖಿಯರು ಸುಮ್ಮನೆ ಆಶೀರ್ವಾದ ಮಾಡುವುದಿಲ್ಲವಂತೆ..ನೀವು ಹಣ ಕೊಟ್ಟ ಮೇಲೆ ಅವರು ಮನಸ್ಫೂರವಕವಾಗಿ ಆಶೀರ್ವಾದ ಮಾಡುತ್ತಾರಂತೆ.

ಅವರ ಆಶೀರ್ವಾದ ನಿಮಗೆ ದೊರೆತರೆ ಅದು ಶುಭದಾಯಕದ ಸಂಕೇತ ಎನ್ನಲಾಗಿದೆ. ಇದರಿಂದ ಮುಂದಿನ ನಿಮ್ಮ ಜೀವನ ಉತ್ತಮವಾಗಿರುತ್ತದೆ ಎಂಬುದು ಇದರ ಅರ್ಥ. ಇನ್ನು ಮಂಗಳಮುಖಿಯರಿಗೆ ನೀವು ಹಣ ಕೊಟ್ಟಾಗ, ಮರೆಯದೆ ಅವರಿಂದ ಒಂದು ನಾಣ್ಯವನ್ನ ಪಡೆಯುವುದು ಒಳ್ಳೆಯದು. ಬಳಿಕ ಅವರು ಕೊಟ್ಟ ನಾಣ್ಯವನ್ನ ಒಂದು ಕೆಂಪು ಬಟ್ಟೆಯಲ್ಲಿ ಸುತ್ತಿ ಮನೆಯಲ್ಲಿ ನೀವು ದುಡ್ಡನ್ನ ಇಡುವ ಸ್ಥಳದಲ್ಲಿ ಇಟ್ಟರೆ ಮಾತೆ ಧನಲಕ್ಷ್ಮೀ ದೇವಿ ಸದಾ ನಿಮ್ಮ ಮನೆಯಲಿ ನೆಲೆಸಿರುತ್ತಾಳೆ ಎಂಬ ನಂಬಿಕೆ ಇದೆ. ಅದೇನೇ ಇದ್ದರೂ ಇದೆಲ್ಲವೂ ಅವರವರ ನಂಬಿಕೆಗೆ ಬಿಟ್ಟ ವಿಷಯವಾಗಿದ್ದು, ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನೆಂದು ತಿಳಿಸಿ..