Advertisements

ಕೇವಲ 7 ಮಾವಿನ ಹಣ್ಣಿಗೆ 10 ಬಾಡಿಗಾರ್ಡ್ಸ್ ಕಾವಲು.. ಯಾಕೆ ಗೊತ್ತಾ?

Kannada Mahiti

ಕೆಲವೊಂದು ಬಾರಿ ನಮ್ಮ ಅದೃಷ್ಟ ಪಕ್ಕದಲ್ಲೇ ಇದ್ದರು ಮಾವು ಬೇರೆ ಕಡೆ ಎಲ್ಲಾ ಹುಡುಕ್ತಾ ಇರ್ತೀವಿ.. ಅದೇ ರೀತಿ ಆಗಿದೆ ಇಲ್ಲೋರ್ವ ರೈತನ ಸ್ಥಿತಿ. ಮಧ್ಯಪ್ರದೇಶದ ಸಂಕಲ್ಪ್ ಎನ್ನುವ ರೈತರೊಬ್ಬರು ತಮ್ಮ ಕುಟುಂಬಸ್ಥರ ಜೊತೆ ಒಮ್ಮೆ ಚೆನ್ನೈಗೆ ಟ್ರೈನ್ ನಲ್ಲಿ ಹೋಗ್ತಾ ಇದ್ರು.. ಆಗ ಆ ಟ್ರೈನ್ ಪ್ರಯಾಣದ ವೇಳೆ ಪರಿಚಯವಾದ ಒಬ್ಬ ವಯಸ್ಸಾದ ವ್ಯಕ್ತಿ ಸಂಕಲ್ಪ ಅವರಿಗೆ ಒಂದು ಮಾವಿನ ಬೀಜವನ್ನ ಕೊಟ್ಟು.. ಈ ಬೀಜವನ್ನ ಜೋಪನವಾಗಿ ನೋಡಿಕೊಂಡು ಊರಿಗೆ ತಲುಪಿದ ಮೇಲೆ ಇದನ್ನು ಭೂಮಿಯಲ್ಲಿ ಇಟ್ಟು ಜೋಪಾನವಾಗಿ ಬೆಳೆಸು ಎಂದು ಹೇಳುತ್ತಾರೆ‌. ನಂತರ ಆ ಬೀಜವನ್ನು ತೆಗೆದುಕೊಂಡ ಸಂಕಲ್ಪ ಅವರು.. ಇದೇನಿದು ಎಲ್ಲಾ ಸಾಮಾನ್ಯ ಮಾವಿನ ಬೀಜದಂತೆ ಇದು ಇದೆ.. ಇದಕ್ಯಾಕೆ ಈ ವ್ಯಕ್ತಿ ಇಷ್ಟೊಂದು ಕಾಳಜಿ ವಹಿಸುತ್ತಿದ್ದಾರೆ ಎಂದುಕೊಂಡು ಅಷ್ಟಾಗಿ ಈ ಮಾವಿನ ಬೀಜದ ಕಡೆಗೆ ತೆಲೆ ಕೆಡಸಿಕೊಳ್ಳಲಿಲ್ಲ..

[widget id=”custom_html-3″]

Advertisements

ನಂತರ ಊರಿಗೆ ತಲುಪಿದ ಸಂಕಲ್ಪ ಅವರು ತಮ್ಮ ಮಾವಿನ ತೋಟದಲ್ಲಿ ವ್ಯಕ್ತಿಯೊಬ್ಬ ಕೊಟ್ಟಿದ್ದ ಮಾವಿನ ಬೀಜವನ್ನು ನೇಡುತ್ತಾನೆ. ಇನ್ನೂ ಈ ಬೀಜ ಗಿಡವಾಗಿ ಮರವಾಗಿ ಹಣ್ಣನ್ನು ಕೊಡುವ ಹಂತಕ್ಕೆ ತಲುಪಿದಾಗ ಆ ಮರದಲ್ಲಿ ಬಂದ ಮಾವು ವಿಭಿನ್ನವಾಗಿರುತ್ತದೆ.. ಇದನ್ನು ಕಂಡ ಸಂಕಲ್ಪ ಅವರು ಇದೇನಿದು ಈ ಗಿಡದಲ್ಲಿ ಬಂದ ಮಾವು ವಿಭಿನ್ನವಾಗಿದೆಯಲ್ಲಾ ಎಂದುಕೊಂಡು ತೋಟಗಾರಿಕೆಯ ಅವರ ಹತ್ತಿರ ತಮ್ಮ ಗೊಂದಲದ ಬಗ್ಗೆ ಹೇಳಿಕೊಳ್ಳುತ್ತಾರೆ. ನಂತರ ಸಂಕಲ್ಪ ಅವರ ಮಾವಿನ ತೋಟಕ್ಕೆ ಬಂದು.. ಈ ವಿಶೇಷವಾದ ಮಾವನ್ನು ಪರೀಕ್ಷೆ ಮಾಡಿದ ತೋಟಗಾರಿಕೆ ಟೀಮ್ ಗೆ ಶಾಕ್.. ಯಾಕೆಂದರೆ ಈ ಮಾವು ವಿಶ್ವದ ದುಬಾರಿ ಮಾವು ಹಾಗ ಮಿಯಾ ಜಾಕಿ ಜಾತಿಗೆ ಸೇರಿದ ಮಾವು ಎಂದು ಗೊತ್ತಾಗುತ್ತದೆ.

[widget id=”custom_html-3″]

ಈ ಮಿಯಾ ಜಾಕಿ ಮಾವನ್ನು ಜಪಾನ್ ನಲ್ಲಿ ವಿಶೇಷವಾದ ವಾತಾವರಣದಲ್ಲಿ ಬೆಳೆಯುತ್ತಾರೆ. ಕಳೆದ ವರ್ಷ ಜಪಾನ್ ನಲ್ಲಿ ಈ ಮಾವಿನ ಹಣ್ಣಿನ ಒಂದು ಕೇಜಿ ಸುಮಾರು ಮೂರು ಲಕ್ಷಕ್ಕೆ ಮಾರಾಟವಾಗಿದೆ.. ಇನ್ನೂ ಸಂಕಲ್ಪ ಅವರು ನೆಟ್ಟಿರುವ ಗಿಡ ಸುಮಾರು ಏಳು ಹಣ್ಣುಗಳನ್ನು ಬಿಟ್ಟಿದೆ. ಆದರೆ ಈ ವಿಷಯ ತಿಳಿದ ಸಂಕಲ್ಪ ಅವರಿಗೆ ಒಂದು ಕಡೆ ಸಂತಸ ಇನ್ನೊಂದು ಕಡೆ ದೊಡ್ಡ ತಲೆ ನೋವು ಉಂಟಾಗಿದೆ.. ಯಾಕೆಂದರೆ ಈ ಮಾವಿನ ಹಣ್ಣನ್ನು ಯಾರಾದರೂ ಕಳ್ಳತನ ಮಾಡಿದರೆ ಏನು ಗತಿ ಎಂದು ಸಂಕಲ್ಪ ಅವರಿಗೆ ದೊಡ್ಡ ಯೋಚನೆಯಾಗಿದೆ.  ಇದೇ ಕಾರಣಕ್ಕೆ ನಾಲ್ಕು ಜನ ಬದ್ರತಾ ಸಿಬ್ಬಂದಿ ಆರು ಶ್ವಾನಗಳನ್ನ ಈ ಮಾವಿನ ಗಿಡಕ್ಕೆ ಬದ್ರತೆಗೆ ನೇಮಿಸಲಾಗಿದೆ..

[widget id=”custom_html-3″]

ಈ ಮಿಯಾ ಜಾತಿಯ ಒಂದು ಹಣ್ಣು ಸುಮಾರು 900 ಗ್ರಾಂ ತೂಕ ಬರುತ್ತದೆ.. ಈಗಾಗಲೇ ಸಂಕಲ್ಪ ಅವರನ್ನ ಸಂಪರ್ಕಿಸಿರುವ ಕೆಲವು ವ್ಯಾಪಾರಸ್ಥರು ಒಂದು ಹಣ್ಣಿಗೆ 21 ಸಾವಿರ ಕೊಡುತ್ತೇವೆ ಎಂದು ಹೇಳಿದ್ದು.. ಇನ್ನೂ ಕೆಲವರಂತೂ ಇನ್ನು ಜ್ಯಾಸ್ತಿ ಹಣವನ್ನ ಕೊಡುತ್ತೇವೆ ನಿಮ್ಮ ಮಾವನ್ನು ನಮಗೆ ಕೊಡಿ ಎಂದು ಕೇಳುತ್ತಿದ್ದಾರೆ. ಎನೇ ಆದ್ರೂ ಜಪಾನ್ ನ ವಿಶೇಷವಾದ ಜಾಗ ಮತ್ತು ಒಳ್ಳೆಯ ವಾತಾವರಣದಲ್ಲಿ ಬೆಳೆಯುವ ಈ ಮಾವಿನ ಮರ ಭಾರತದ ಭೂಮಿಯಲ್ಲಿ ಬೆಳೆದಿರೋದು ರೈತರಲ್ಲಿ ಹೊಸ ಭರವಸೆ ಮೂಡಿಸಿದೆ.. ಇದರ ಬಗ್ಗೆ ನೀವೇನ್ ಹೇಳ್ತೀರಾ.