ನಮಸ್ತೇ ಸ್ನೇಹಿತರೆ, ಬಿಗ್ ಬಾಸ್ ಸೀಸನ್ 8 ಮುಗಿದು ಮಿನಿ ಸೀಸನ್ ಕೂಡ ಆರಂಭವಾಗಿ ಮುಕ್ತಾಯಗೊಂಡಿದೆ.. ಬಿಗ್ ಬಾಸ್ ಸೀಸನ್ 9 ಗೂ ಕೂಡ ಎಲ್ಲಾ ತಯಾರಿ ನಡೆಯುತ್ತಿದೆ.. ಇನ್ನೂ ಬಿಗ್ ಬಾಸ್ ಸೀಸನ್ 8 ರಲ್ಲಿ ದಿವ್ಯಾ ಅರವಿಂದ್ ಜೋಡಿ ಎಷ್ಟು ಪೇಮಸ್ ಆಗಿದ್ರೋ ಅದೇ ರೀತಿ ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್ ಕೂಡ ಅಷ್ಟೇ ಪೇಮಸ್.. ಬಿಗ್ ಬಾಸ್ ಮನೆಯ ಮೊದಲ ಇನ್ನಿಂಗ್ಸ್ ನಲ್ಲಿ ಈ ಜೋಡಿಗಳು ಅಷ್ಟಕಷ್ಟೆ ಎನ್ನುವ ರೀತಿ ಇದ್ದರು.. ಆದರೆ ಎರಡನೆಯ ಇನ್ನಿಂಗ್ಸ್ ನಲ್ಲಿ ಮಂಜು ದಿವ್ಯಾ ಅವರು ಸಾಕಷ್ಟು ಹತ್ತಿರವಾಗ್ತಾರೆ.. ಇಬ್ಬರು ಕೂಡ ಒಳ್ಳೆಯ ಸ್ನೇಹಿತರಂತೆ ಇರ್ತಾರೆ. ಇನ್ನೂ ಬಿಗ್ ಬಾಸ್ ನ ಕೊನೆಯ ದಿನಗಳಲ್ಲಿ ದಿವ್ಯಾ ಸುರೇಶ್ ಅವರು ಎಲಿಮಿನೇಟ್ ಆದಾಗ ಮಂಜು ಅವರ ಬಗ್ಗೆ ಸಾಕಷ್ಟು ಹೊಗಳಿಕೆ ಮಾತುಗಳ ಜೊತೆಗೆ ನನ್ನ ಮಂಜು ಅಂತೆಲ್ಲಾ ದಿವ್ಯಾ ಸುರೇಶ್ ಅವರು ಹೇಳ್ತಾರೆ..

ಇದನ್ನು ನೋಡಿದ ಪ್ರೇಕ್ಷಕರು ಇವರ ಮಧ್ಯೆ ಲವ್ ಇರಬಹುದಾ ದಿವ್ಯಾ ಸುರೇಶ್ ಯಾಕೆ ನನ್ನ ಮಂಜು ಅಂತೆಲ್ಲಾ ಹೇಳಿದ್ರು ಅಂಥ ಅಂದುಕೊಳ್ತಾರೆ.. ಇನ್ನೂ ಬಿಗ್ ಬಾಸ್ ಟ್ರೋಪಿಯನ್ನ ಮಂಜು ಅವರೇ ಎತ್ತಿ ಹಿಡಿಯುತ್ತಾರೆ.. ಆ ಸಂದರ್ಭದಲ್ಲಿ ದಿವ್ಯಾ ಸುರೇಶ್ ಅವರು ತುಂಬಾ ಸಂಭ್ರಮ ಪಟ್ಟಿದ್ರು ಅದರ ಜೊತೆಗೆ ಅವರ ತಂದೆಯ ತಾಯಿಯ ಬಳಿ ತುಂಬಾ ಹತ್ತಿರವಾಗಿ ಮಾತಾಡಿದ್ರು.. ಬಿಗ್ ಬಾಸ್ ಮುಗಿದ ನಂತರ ಸಾಕಷ್ಟು ಸಂದರ್ಶನಗಳಲ್ಲಿ ಮಂಜು ಮತ್ತು ದಿವ್ಯಾ ಸುರೇಶ್ ಅವರು ಕಾಣಿಸಿಕೊಳ್ತಾರೆ.. ಸಂದರ್ಶನದಲ್ಲಿ ಕೂಡ ದಿವ್ಯಾ ಸುರೇಶ್ ಮಂಜು ಪಾವಗಡ ಅವರ ಮನೆಗೆ ಹೋಗಿದ್ದೆ ಅವರ ತಂದೆ ತಾಯಿಯ ಬಳಿ ಮಾತಾಡಿದ್ದೇನೆ ಮಂಜು ನಾನು ಒಳ್ಳೆ ಸ್ನೇಹಿತರು ಅಂತೆಲ್ಲಾ ಮಾತಾಡಿದ್ರು.. ಆದರೆ ಪ್ರೇಕ್ಷಕರು ಇವರ ಮಧ್ಯೆ ಏನೋ ನಡಿತಿದೆ ಅಂತೆಲ್ಲಾ ಅಂದುಕೊಳ್ತಾರೆ..

ಆದರೆ ಇದಕ್ಕೆಲ್ಲಾ ಮಂಜು ಅವರು ಅಂಥದ್ದು ಏನು ಇಲ್ಲಾ ದಿವ್ಯಾ ನಾನು ಒಳ್ಳೆ ಸ್ನೇಹಿತರಂತೆ ಇದ್ದೀವೆ ಅಂಥ ಹೆಳ್ತಾರೆ.. ಇದಾದ ಬಳಿಕ ಸಾಕಷ್ಟು ಬಾರಿ ಮಂಜು ಮತ್ತು ದಿವ್ಯಾ ಅವರು ಮೀಟ್ ಆಗ್ತಾರೆ ಅವರ ವೀಡಿಯೋಗಳು ಕೂಡ ವೈರಲ್ ಆಗಿರುವುದನ್ನು ನೀವು ನೋಡಿರ್ತೀರಾ.. ಇದರ ನಡುವೆ ದಿವ್ಯಾ ಅವರು ಮತ್ತೊಂದು ಹೇಳಿಕೆ ಕೊಡ್ತಾರೆ ನಾನು ಮಂಜು ರಾಧಾ ಕೃಷ್ಣ ರೀತಿ ಇದ್ವಿ ಅಂಥ. ಈ ಮಾತು ಕೂಡ ಬಹಳ ಚರ್ಚೆಗೆ ಗುರಿಯಾಗಿತ್ತು. ಈ ಮಾತಿಗೆ ಅಭಿಮಾನಿಗಳು ನೀವು ಇಬ್ಬರು ಮದುವೆ ಆದ್ರೆ ತುಂಬಾ ಚೆನ್ನಾಗಿರುತ್ತೆ, ಸೂಪರ್ ಜೋಡಿ ನಿಮ್ಮ ನಡುವೆ ಲವ್ ಏನಾದರು ಇದೆಯ ಅಂತೆಲ್ಲಾ ಕೇಳ್ತಾರೆ.. ಆ ಸಮಯದಲ್ಲಿ ಕೂಡ ದಿವ್ಯಾ ಸುರೇಶ್ ನೀವು ಅಂದುಕೊಂಡಿರುವ ರೀತಿ ಏನು ಇಲ್ಲಾ ಅಂಥ ಹೇಳ್ತಾರೆ..

ಆದರೆ ಈಗ ದಿವ್ಯಾ ಮತ್ತು ಮಂಜು ಪಾವಗಡ ಅವರು ಪೋಟೋಶೂಟ್ ಮಾಡಿಸಿರುವ ಫೋಟೋಗಳು ಬಹಳ ವೈರಲ್ ಆಗಿದೆ. ಆದರೆ ಈ ಪೋಟೊ ಹಿಂದಿರುವ ಅಸಲಿ ಕಥೆ ಬೇರೇನೆ ಇದೆ.. ಹೌದು ಬಿಗ್ ಬಾಸ್ 8 ಮುಕ್ತಾಯಗೊಳ್ಳುತ್ತಿದ್ದಂತೆಯೇ ಮತ್ತೊಂದು ಬಿಗ್ ಬಾಸ್ ಮಿನಿ ಸೀಸನ್ ಆರಂಭ ಮಾಡಿದ್ದು ಅದು ಈಗ ಮುಕ್ತಾಯಗೊಂಡಿದೆ.. ಈ ಕಾರ್ಯಕ್ರಮಕ್ಕೆ ಬಿಗ್ ಬಾಸ್ ಸೀಸನ್ 8 ರ ಸ್ಪರ್ಧಿಗಳೆಲ್ಲರೂ ಭಾಗಿಯಾಗಿದ್ದರು.. ಅದರಲ್ಲಿ ಮಂಜು ಮತ್ತು ದಿವ್ಯಾ ಸುರೇಶ್ ಅವರು ಕೂಡ ಭಾಗಿಯಾಗಿರ್ತಾರೆ.. ಈ ವೇಳೆ ಇವರಿಬ್ಬರು ಪೊಟೋಶೂಟ್ ಮಾಡಿಸಿಕೊಂಡಿದ್ದಾರೆ. ಇನ್ನೂ ಈ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು ಅಭಿಮಾನಿಗಳು ಕಾಮೆಂಟ್ ಮೂಲಕ ನಿಮ್ಮ ಜೋಡಿ ಚೆನ್ನಾಗಿದೆ ಅಂತೆಲ್ಲಾ ತಮ್ಮ ಅನಿಸಿಕೆಗಳನ್ನ ತಿಳಿಸಿದ್ದಾರೆ..