ನಮಸ್ತೇ ಸ್ನೇಹಿತರೆ, ಈಗಾಗಲೇ ಬಿಗ್ ಬಾಸ್ ಸೀಸನ್ ಮುಗಿದಿದ್ದು ಮಂಜು ಪಾವಗಡ ಅವರು ವಿಜೇತರಾಗಿದ್ದಾರೆ.. ಇನ್ನೂ ಬಿಗ್ ಬಾಸ್ ಸೀಸನ್ 8 ಮುಗಿದ ನಂತರವೇ ಮತ್ತೊಂದು ಮಿನಿ ಸೀಸನ್ ಕೂಡ ಅರಂಭ ಮಾಡ್ತಾರೆ ಕಲರ್ಸ್ ವಾಹಿನಿಯವರು.. ಈ ಮಿನಿ ಸೀಸನ್ ಗೆ ಎಲ್ಲಾ ಕಲರ್ಸ್ ಧಾರವಾಹಿಯ ನಟ ನಟಿಯರಿಗೆ ಅವಕಾಶ ಕೊಡಲಾಗಿತ್ತು.. ಅದರಂತೆ ನಟ ನಟಿಯರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡ್ತಾರೆ.. ಇನ್ನೂ ಒಂದು ವಾರಗಳ ಕಾಲ ನಡೆದ ಬಿಗ್ ಬಾಸ್ ಮಿನಿ ಸೀಸನ್ ನಲ್ಲಿ ಎಲ್ಲಾ ನಟ ನಟಿಯರು ಬಿಗ್ ಬಾಸ್ ಕೊಟ್ಟಂತಹ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಾರೆ.. ಇನ್ನೂ ಈ ಮಿನಿ ಸೀಸನ್ ವಾರದ ಅಂತಿಮಕ್ಕೆ ಬಂದಿದ್ದು ಸುದೀಪ್ ಅವರ ಇದನ್ನು ನಡೆಸಿಕೊಟ್ಟಿದ್ದಾರೆ.. ಇದೇ ವೇಳೆ ಬಿಗ್ ಬಾಸ್ ಸೀಸನ್ 8 ರ ಸ್ಪರ್ಧಿಗಳು ಕೂಡ ಬಂದಿದ್ದಾರೆ..
[widget id=”custom_html-3″]

ಇದರಲ್ಲಿ ಬಿಗ್ ಬಾಸ್ ಸೀಸನ್ 8ರ ವಿನ್ನರ್ ಮಂಜು ಪಾವಗಡ ಅವರು ಕೂಡ ಒಬ್ಬರು.. ಶೋ ನಡೆಸಿ ಕೊಡುತ್ತಿರುವ ಸಂದರ್ಭದಲ್ಲಿ ಸುದೀಪ್ ಅವರು ಮಂಜು ಪಾವಗಡ ಅವರ ಜೊತೆ ಮಾತುಕತೆ ನಡೆಸಿರುವುದು ಎಲ್ಲರ ಗಮನ ಸೆಳೆದಿದೆ. ಹೌದು ಕಿಚ್ಚ ಸುದೀಪ್ ಮತ್ತು ಮಂಜು ಪಾವಗಡ ಅವರ ನಡುವೆ ಒಂದು ಒಳ್ಳೆಯ ಬಾಂಧವ್ಯವಿದ್ದು ಅನೇಕ ಬಾರಿ ಸುದೀಪ್ ಅವರು ಮಂಜು ಅವರಿಗೆ ಕಾ’ಲೆ’ಳೆದಿದ್ದಾರೆ.. ಇದೇ ಮೊದಲೇನಲ್ಲ ಬಿಗ್ ಬಾಸ್ 8 ರ ಸೀಸನ್ ಆರಂಭದಿಂದ್ಲೂ ಸುದೀಪ್ ಮತ್ತು ಮಂಜು ಅವರ ನಡುವೆ ತಮಾಷೆ ಮಾತುಕತೆಗಳು ನಡೆದಿವೆ. ಮಂಜು ಅವರು ಸ್ಟೇಜ್ ಮೇಲೆ ಕರೆಸಿದ ಸುದೀಪ್ ಅವರು ಮಂಜು ಹೇಗಿದ್ದೀರಾ.. ಬಿಗ್ ಬಾಸ್ ಮುಗಿದ ಮೇಲೆ ಹೇಗಿದೆ ಜೀವನ, ಎಂದು ಪ್ರಶ್ನೆ ಮಾಡ್ತಾರೆ..
[widget id=”custom_html-3″]

ಅದರಂತೆ ಮಂಜು ಅವರು ಹೊಸ ಪ್ರಪಂಚ ನೋಡುತ್ತಿರುವ ರೀತಿ ಆಗ್ತಿದೆ.. ಬಿಗ್ ಬಾಸ್ ಗೆದ್ದ ನಂತರ ಮಾಧ್ಯಮಗಳು ಮುಂದೆ ಬರುತ್ತಿರುವುದು, ಸನ್ಮಾನಗಳು ಮಾಡುತ್ತಿರುವುದು ಎಲ್ಲವೂ ಕೂಡ ಖುಷಿ ನೀಡುತ್ತಿದೆ ಎಂದು ಹೇಳ್ತಾರೆ. ಈ ವೇಳೆ ಸುದೀಪ್ ಅವರು ಮಂಜು ಹಾಕಿದ್ದಂತಹ ಕೆಂಪು ಬಣ್ಣದ ಕೋಟ್ ನೋಡಿ ನನಗೆ ತುಂಬಾ ಇಷ್ಟವಾಗಿದೆ ಅಂಥ ಹೇಳ್ತಾರೆ.. ಮತ್ತೆ ಮಂಜು ಅವರೇ ಮುಂದೆ ಏನ್ ಮಾಡ್ಬೇಕು ಅಂಥ ಅಂದುಕೊಂಡಿದ್ದೀರಾ ಅಂಥ ಸುದೀಪ್ ಅವರು ಮುಂದೆ ಕೇಳ್ತಾರೆ.. ಮಂಜು ಸಾಕಷ್ಟು ಬಾರಿ ಸಿನಿಮಾಗಳಲ್ಲಿ ನಟಿಸಬೇಕು ಎಂಬ ಮಾತನ್ನು ಹೇಳಿಕೊಂಡಿದ್ದರು..
[widget id=”custom_html-3″]

ಅದೇ ರೀತಿ ಕಿಚ್ಚನ ಮಾತಿಗೆ ನಾನು ಸಿನಿಮಾದಲ್ಲಿ ನಟಿಸಬೇಕು, ಒಳ್ಳೆ ಪಾತ್ರಗಳನ್ನ ಮಾಡ್ಬೇಕು, ನಿಮ್ಮಂಥ ನಟರ ಜೊತೆ ನಟನೆ ಮಾಡ್ಬೇಕು ಅಂಥ ಹೇಳ್ತಾರೆ ಮಂಜು.. ಈ ಮಾತನ್ನ ಕೇಳಿದ ಸುದೀಪ್ ಅವರು ನನ್ನ ಬುಡಕ್ಕೆ ಯಾಕೆ ನೀವು ಕೈ ಹಾಕ್ತೀರಾ, ನೀವು ಅಲ್ಲಿಗೆ ಬರೋದು ನನ್ನ ಕೆಲಸ ಹೋಗೋದು.. ಇದೆಲ್ಲಾ ಯಾಕೆ ಬೇಕು. ನಿಮ್ಮ ಡ್ರಸ್ ನೋಡಿದ್ರೆ ಅದೇ ರೀತಿ ಅನಿಸುತ್ತೆ ಅಂತೆಲ್ಲಾ ಕಾ’ಲೆಳೆದು ನಕ್ಕಿದ್ದಾರೆ..