Advertisements

ಮಂಜು ಮತ್ತು ಸುದೀಪ್ ಅವರದ್ದು ಒಂದೇ ಜಾತಿ ಅದಕ್ಕೆ ಮಂಜು ಪಾವಗಡ ಗೆದ್ದಿದ್ದಾರೆ ಎಂದ ಜನ.. ಇದಕ್ಕೆ ಉತ್ತರ ಕೊಟ್ಟ ನಟ ಏನ್ ಹೇಳಿದ್ರು ಗೊತ್ತಾ?

Entertainment

ನಮಸ್ತೇ ಸ್ನೇಹಿತರೆ, ಬಿಗ್ ಬಾಸ್ ಸೀಸನ್ 8 ಮುಕ್ತಾಯಗೊಂಡಿದೆ.. ಒಂದು ಕಡೆ ಮಂಜು ಪಾವಗಡ ವಿನ್ನರ್ ಪಟ್ಟ ಪಡೆದು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಬೇರೆಯದ್ದೇ ಸುದ್ದಿ ಹರಿದಾಡುತ್ತಿದೆ.. ಹೌದು ಮಂಜು ಪಾವಗಡ ಬಿಗ್ ಬಾಸ್ ವಿನ್ನರ್ ಆಗಲು ಅವರ ಜಾತಿಯೇ ಕಾರಣ ಎಂದು ಎಲ್ಲೆಡೆ ಕೇಳಲಾಗುತ್ತಿದೆ. ಹೌದು ಮಂಜು ಪಾವಗಡ ಬಿಗ್ ಬಾಸ್ ಸೀಸನ್ 8 ರ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.. ಈಗಾಗಿ ಮಂಜುಗೆ ದೊಡ್ಡ ಅಭಿಮಾನಿ ಬಳಗವೇ ಸಿಕ್ಕಿದೆ. ಮೊದಲ ದಿನದಿಂದಲೂ ತನ್ನದೇ ಗುಣಗಳಿಂದ ಬಿಗ್ ಬಾಸ್ ಮನೆ ಮಂದಿ ಹಾಗು ವೀಕ್ಷಕರ ಮನ ಗೆದ್ದಿದ್ದ ಮಂಜು ಈಗ ವಿನ್ನರ್ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಇದೀಗ ಮಂಜು ಪಾವಗಡ ವಿನ್ನರ್ ಆಗಿದ್ದಕ್ಕೆ ವೀಕ್ಷಕರು ಕೂಡ ಫುಲ್ ಕುಷಿಯಾಗಿದ್ದಾರೆ..

[widget id=”custom_html-3″]

Advertisements

ಸದ್ಯ ಮಂಜು ಅವರು ಸಿಕ್ಕಾಪಟ್ಟೆ ಬ್ಯುಸಿ ಪರ್ಸನ್ ಎಂದರೆ ತಪ್ಪಾಗಲಾರದು.. ಬಡ ಕುಟುಂಬದಿಂದ ಬಂದ ಮಂಜು ಬೆಂಗಳೂರಿನಲ್ಲಿ ತುಂಬಾ ಕಷ್ಟಪಟ್ಟು ಮೇಲೆ ಬಂದಿದ್ದಾರೆ. ಇಷ್ಟು ದಿನ ತಿನ್ನಲು ತುತ್ತು ಅನ್ನಕ್ಕೂ ಗತಿ ಇಲ್ಲದೇ ಉಪವಾಸದಿಂದ ನರಳಿದ್ದಾರೆ.. ಹೇಗಾದರೂ ಮಾಡಿ ತನ್ನ ಬಡತನವನ್ನು ಮೆಟ್ಟಿ ನಿಲ್ಲಬೇಕು ಎಂದು ನಿರ್ಧಾರ ಮಾಡಿದ ಮಂಜು ಇಂದು ಸಾಧಿಸಿ ತೋರಿಸಿದ್ದಾರೆ. ಪೆಟ್ರೋಲ್ ಬಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಮಂಜು ಕಾಮಿಡಿ ಶೋ ಮಜಾ ಭಾರತದಲ್ಲಿ ಎಲ್ಲರನ್ನು ನಗಿಸುತ್ತಿದ್ದರು.. ಅದೃಷ್ಟವೋ ಸದಾವಕಾಶವೋ ಎಂಬಂತೆ ಮಂಜು ಗೆ ಬಿಗ್ ಬಾಸ್ ನಲ್ಲಿ ಸ್ಪರ್ಧಿಸುವ ಅವಕಾಶ ಒದಗಿ ಬಂತು. ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಲು ಬಯಸದ ಮಂಜು ಬಿಗ್ ಬಾಸ್ ಸೀಸನ್ 8 ಕ್ಕೆ ಎಂಟ್ರಿಕೊಟ್ಟುಬಿಟ್ಟರು..

[widget id=”custom_html-3″]

ಬಿಗ್ ಬಾಸ್ ಮನೆಗೆ ಬಂದ ಹೊಸತರಲ್ಲಿ ಮಂಜು ಬಗ್ಗೆ ಹೆಚ್ಚು ಗೊತ್ತಿಲ್ಲದವರೆಗೂ ಕೂಡ ಚಿರಪರಿಚಿತರಾದರು. ಬಿಗ್ ಬಾಸ್ ಮನೆಯಲ್ಲಿ ಇತರ ಸ್ಪರ್ಧಿಗಳಿಗೆ ಟಾಪ್ ಪೈಟ್ ಕೊಡುತ್ತಿದ್ದರು.. ಇನ್ನೂ ಉಳಿದ ಸಮಯದಲ್ಲಿ ಹರಟೆ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದರು. ಆದರೆ ದುರಾದೃಷ್ಟ ಎಂಬಂತೆ ಕರೋನ ಕಾರಣದಿಂದ ಬಿಗ್ ಬಾಸ್ ಸೀಸನ್ ಅರ್ಧಕ್ಕೆ ನಿಲ್ಲಿಸಬೇಕಾಯಿತು.. ಹಾಗ ಮಂಜು ತಾವು ಕಂಡಿದ್ದ ಕನಸೆಲ್ಲವೂ ನನಸಾಗಲಿಲ್ಲಾ ಎಂದು ಬಿಗ್ ಬಾಸ್ ಬೇಸರ ಪಟ್ಟುಕೊಂಡಿದ್ದರು. ಆದರೆ ಲಾಕ್ ಡೌನ್ ಮುಗಿದ ನಂತರ ಮತ್ತೆ ಬಿಗ್ಬಾಸ್ ಸೀಸನ್ 8 ಎರಡನೇ ಇನ್ನಿಂಗ್ಸ್ ಆರಂಭವಾಯಿತು.. ಮತ್ತೆ ಕನಸು ಚಿಗುರು ಹೊಡೆದಂತೆ ಮಂಜು ತುಂಬಾ ಕುಷಿಯಾಗಿ ಬಿಗ್ ಬಾಸ್ ಮನೆಗೆ ಎರಡನೇ ಬಾರಿಗೆ ಎಂಟ್ರಿ ಕೊಟ್ಟರು..

[widget id=”custom_html-3″]

ಆಗಲು ವಿನ್ ಆಗಿ ಸಾಧಿಸಬೇಕು ಎಂಬ ಹಂಬಲದಿಂದಲೇ ದಿನ ಕಳೆದರು.. ಫಿನಾಲೆ ರೌಂಡ್ ತಲುಪಿದ ಬಳಿಕ ತಾನೇ ವಿನ್ನರ್ ಎಂಬುದನ್ನು ಘೋಷಿಸುತ್ತಿದ್ದಂತೆ ಮಂಜು ಪಾವಗಡ ಅವರು ನಂಬಲೇ ಇಲ್ಲಾ.. ಅಷ್ಟರ ಮಟ್ಟಕ್ಕೆ ತಮ್ಮ ಕನಸು ನನಸಾಗುತ್ತೆ ಎಂದು ಮಂಜು ಎಂದೂ ಸಹ ಊಹಿಸಿರಲಿಲ್ಲಾ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಮಂಜು ಹಾಗು ಸುದೀಪ್ ಅವರು ಒಂದೇ ಜಾತಿ ಅದಕ್ಕೆ ಮಂಜು ಅವರನ್ನ ವಿನ್ನರ್ ಎಂದು ಘೋಷಿಸಿದ್ದಾರೆ ಎನ್ನುವ ವಿಚಾರಗಳ ಬಗ್ಗೆ ಚರ್ಚೆ ನಡೆಯುತ್ತಿದೆ..

[widget id=”custom_html-3″]

ಇದಕ್ಕೆ ಕಾರಣ ಈ ಹಿಂದೆ ಮಂಜು ಬಿಗ್ ಬಾಸ್ ಮನೆಯಲ್ಲಿದ್ದ ಸಮಯದಲ್ಲಿ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಮಂಜುವಿನ ಜಾತಿಯ ಬಗ್ಗೆ ತಿಳಿಸಿ ಸುದೀಪ್ ಅವರು ಮಂಜು ಒಂದೇ ಜಾತಿ ಎಲ್ಲರು ವೋಟ್ ಮಾಡಿ ಎಂದು ಮನವಿ ಮಾಡಿದ್ದರು.. ಈ ಬಗ್ಗೆ ಸಂದರ್ಶನ ಒಂದರಲ್ಲಿ ಮಂಜು ಅವರನ್ನೇ ನೇರವಾಗಿ ಕೇಳಿದಕ್ಕೆ ಮಂಜು ಹೇಳಿದ್ದೇನು ಗೊತ್ತಾ.. ಇದಕ್ಕೂ ನನಗೂ ಸಂಬಂಧವಿಲ್ಲಾ. ನಾನು ಇದರ ಬಗ್ಗೆ ಏನನ್ನು ಮಾತನಾಡಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಜಾತಿಯನ್ನು ಎಲ್ಲದಕ್ಕು ಹೋಲಿಸಿ ಅಸಯ್ಯ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ..