Advertisements

ಬಿಗ್ ಬಾಸ್ ನಲ್ಲಿ ಮಂಜು ಆಕಿಕೊಳ್ತಿದ್ದ ಪ್ರತಿ ಬಟ್ಟೆಗಳಿಗೆ ದುಡ್ಡು ಕೊಡ್ತಿದ್ದ ಸ್ಟಾರ್ ನಟಿ ಯಾರು ಗೊತ್ತಾ? ಇದು ಮಂಜುಗೆ ಗೊತ್ತಿರ್ಲಿಲ್ಲಾ..

Cinema Entertainment

ಬಿಗ್​​ಬಾಸ್ ಕಿರೀಟವನ್ನು ಈ ಭಾರೀ ಮಂಜಣ್ಣ ಮುಡಿಗೇರಿಸಿಕೊಂಡಿರೋದು ಎಲ್ಲರಿಗೂ ಗೊತ್ತಿರೋ ವಿಚಾರ. ಅಪಾರ ಸಂಖ್ಯೆಯಲ್ಲಿ ವೋಟ್​​​​ಗಳಿಸಿ ಬಿಗ್​ಬಾಸ್ ವಿನ್ನರ್ ಪಟ್ಟವನ್ನು ಅಲಂಕರಿಸಿರುವ ಮಂಜು ಇನ್ನು ಸಹ ಬಿಗ್​ಬಾಸ್ ಗೆಲುವಿನ ಹ್ಯಾಂಗ್ ಓವರ್​​ನಲ್ಲಿಯೇಯಿದ್ದಾರೆ. ಪ್ರತೀ ದಿನ ಸಂದರ್ಶನ, ಸಂಭ್ರಮಾಚಾರಣೆ, ಕಾರ್ಯಕ್ರಮಗಳಿಗೆ ಹೋಗ್ತಾ ಬ್ಯುಸಿ ಶೆಡ್ಯೂಲ್​​ನಲ್ಲಿದ್ದಾರೆ. ಇನ್ನು ಬಿಗ್​​ಬಾಸ್ ಇನ್ನಿಂಗ್ಸ್​​ ಈ ಭಾರೀ ಎರಡೆರೆಡಿತ್ತು. ಬಿಗ್​ಬಾಸ್ ಮೊದಲನೇ ಇನ್ನಿಂಗ್ಸ್​​​ನಲ್ಲಿ ಮಂಜು ಅಂತಹ ಲಕ್ಸೂರಿಯಾದ ಬಟ್ಟೆಯೇನು ಹಾಕ್ತಾಯಿರಲಿಲ್ಲ..

Advertisements

ಆದ್ರೆ ಸೆಕೆಂಡ್ ಇನ್ನಿಂಗ್ಸ್​​ನಲ್ಲಿ ಮಾತ್ರ ಸಖತ್ ಸುಂದರವಾಗಿರುವ ಒಳ್ಳೆ ಒಳ್ಳೆ ಬಟ್ಟೆಗಳನ್ನು ಹಾಕುತ್ತಿದ್ರು. ಇದನ್ನು ಎಲ್ಲರೂ ಸಹ ನೋಟಿಸ್ ಮಾಡಿದ್ರು. ಈ ಬಗ್ಗೆ ಮಂಜುವನ್ನು ಕೇಳಿದಾಗ ಕೊಂಚ ಭಾವುಕವಾದ್ರು. ಯಾಕೆ ಗೊತ್ತಾ? ಇದಕ್ಕೂ ಒಂದು ಕಾರಣವಿದೆ. ಎಸ್.. ಮಂಜು ಪಾವಗಡ ಬಿಗ್ಬಾಸ್​ನಲ್ಲಿ ಧರಿಸುತ್ತಿದ್ದ ಬಟ್ಟೆಗಳನ್ನು ಅವರ ಫ್ರೆಂಡ್ ಒಬ್ಬರು ಡಿಸೈನ್ ಮಾಡಿ ಕಳುಹಿಸ್ತಿದ್ರಂತೆ, ಆದ್ರೆ ಆ ಡ್ರೆಸ್​ಗೆ ಯಾರು ದುಡ್ಡು ಕೊಡ್ತಿದ್ರು ಅಂತ ಖುದ್ದು ಮಂಜುವಿಗೆ ಗೊತ್ತಿರಲಿಲ್ವಂತೆ. ಹೌದು ಮಂಜುಗೆ ಸಹ ತನ್ನ ಬಟ್ಟೆಗೆ ಯಾರು ದುಡ್ಡು ಕೊಡ್ತಿದ್ರು ಅನ್ನೋ ವಿಚಾರ ಗೊತ್ತಾಗಿದ್ದು, ಬಿಗ್​ಬಾಸ್ ಟ್ರೋಫಿ ಗೆದ್ದಮೇಲೆ.. ಅಂದಹಾಗೇ ಮಂಜು ಹಾಕುವ ಬಟ್ಟೆಗೆ ದುಡ್ಡು ಕೊಡ್ತಿದ್ದದ್ದು ಬೇರೆಯಾರು ಅಲ್ಲ..

ಕನ್ನಡದ ಹೆಸರಾಂತ ನಟಿ, ಪಡ್ಡೆ ಹುಡುಗರ ಹಾಟ್ ಫೆವರೇಟ್ ಡಿಂಪಲ್ ಹುಡುಗಿ ರಚ್ಚು ಅಲಿಯಾಸ್ ರಚಿತಾ ರಾಮ್. ಹೌದು ಮಂಜು ಹಾಕಿದ್ದ ಪ್ರತೀ ಬಟ್ಟೆಗೆ ಸಹ ಡಿಸೈನರ್​​ಗೆ ದುಡ್ಡು ಕೊಟ್ಟು ರಚಿತಾರಾಮ್ ಕಳುಹಿಸಿಕೊಡ್ತಿದ್ರಂತೆ. ಬಿಗ್​ಬಾಸ್​​ನಂತಹ ದೊಡ್ಡ ವೇದಿಕೆಯಲ್ಲಿ ಮಂಜು ಚೆಂದದ ಬಟ್ಟೆ ಹಾಕಬೇಕು ಅಂತ ರಚಿತಾ ಆಸೆ ಪಟ್ಟಿದ್ರಂತೆ ಅಷ್ಟೇ ಅಲ್ಲದೇ ಮಂಜು ಫೈನಲ್​ಗೆ ಬಂದಾಗ ಆ ಬಟ್ಟೆಯನ್ನು ಖುದ್ದು ರಚಿತಾ ಅವರೇ ಬಟ್ಟೆ ಡಿಸೈನ್ ಮಾಡಿ ಮಂಜುವಿಗೆ ಕಳುಹಿಸಿಕೊಟ್ಟಿದ್ರಂತೆ. ಈ ವಿಚಾರವನ್ನು ಮಂಜು ಪಾವಗಡ ಅವರೇ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದು, ರಚಿತಾ ಅವರಿಗೆ ತುಂಬು ಹೃದಯದ ಧನ್ಯವಾದಗಳು. ಅವರು ತುಂಬಾ ಗ್ರೇಟ್ ಅಂತ ಹೇಳಿದ್ದಾರೆ.