Advertisements

8 ಕೋಟಿ ರೂಪಾಯಿ ಬೇಕು ದಯವಿಟ್ಟು ಸಹಾಯ ಮಾಡಿ ಎಂದು ಕೈ ಮುಗಿದು ಬೇಡಿಕೊಂಡ ಮಂಜು ಪಾವಗಡ.. ಕಾರಣ ಏನು ಗೊತ್ತಾ?

Kannada Mahiti

ಬಿಗ್​​ಬಾಸ್​​ ಮನೆಯಿಂದ ಟ್ರೋಫಿ ಗೆದ್ದು ಬಂದ ಬಳಿಕ ಮಂಜು ಪಾವಘಡ ಫುಲ್ ಬ್ಯುಸಿ.. ಅತ್ಯಂತ ಬ್ಯುಸಿ ಶೆಡ್ಯೂಲ್​ನಲ್ಲಿ ಸಹ ಆಗಾಗ ಗೆಳೆಯರ ಜೊತೆ ಕಾಣಿಸಿಕೊಳ್ತಾಯಿರದತಾರೆ, ಈ ಮಧ್ಯೆ ಒಂದೊಳ್ಳೆ ಕೆಲಸ ಮಾಡಲಿಕ್ಕೆ ಮುಂದಾಗಿದ್ದಾರೆ. ಹೌದು ಸೋಶಿಯಲ್ ಮಿಡಿಯಾದಲ್ಲಿ ಯಾವ್ದ್ಯಾವ್ದೋ ಪೈಡ್ ಪ್ರಮೋಶನ್ಸ್ ಹಾಕೋದೇ ಹೆಚ್ಚು, ಆ ಮಧ್ಯೆ ಈಗ ಮಂಜು ಪಾವಘಡ ಒಂದು ಪೋಸ್ಟ್ ಶೇರ್ ಮಾಡಿ ಜನತೆಯ ಮನ ಗೆದ್ದಿದ್ದಾರೆ. ಹೌದು ಈಗ ಮಗುವಿಗಾಗಿ ಮಂಜು ಪೋ’ಸ್ಟ್ ಶೇರ್ ಮಾಡಿದ್ದಾರೆ. ಜನಪ್ರಿಯತೆಯನ್ನೇ ಇಟ್ಟುಕೊಂಡು ಮಂಜು ಅವರು ಒಂದು ಸಮಾಜಮುಖಿ ಕಾರ್ಯದಲ್ಲಿ ಭಾಗಿ ಆಗಿದ್ದಾರೆ.

Advertisements

ಅಪರೂಪದ ಕಾ’ಯಿ’ಲೆಯಿಂದ ಬಳಲುತ್ತಿರುವ ಮಗುವಿನ ಜೀ’ವ ಉಳಿಸಲು ಅವರು ನೆರವಾಗುತ್ತಿದ್ದಾರೆ. ಮಗುವಿನ ಚಿ’ಕಿ’ತ್ಸೆಗೆ ಹಣದ ಸಹಾಯ ಮಾಡುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ. ಈ ಮಗುವಿನ ಚಿ’ಕಿ’ತ್ಸೆಗೆ ಈಗ ಬೇಕಿರುವುದು ಬರೋಬ್ಬರಿ 8 ಕೋಟಿ ರೂ.. ತುಮಕೂರು ಜಿಲ್ಲೆ ಶಿರಾ ತಾಲೂಕಿನ ನವೀನ್​ ಮತ್ತು ಜ್ಯೋತಿ ದಂಪತಿಯ ಮಗುವಿಗೆ ಅಪರೂಪದ ಕಾ’ಯಿ’ಲೆ ಬಂದಿದೆ. ಅದನ್ನು ಗುಣಪಡಿಸಲು ನಮ್ಮ ದೇಶದಲ್ಲಿ ಚಿಕಿತ್ಸೆ ಇಲ್ಲ. ಬೇರೆ ದೇಶದಿಂದ ಔಷಧಿ ತರಿಸಬೇಕು. ಒಂದು ಇಂಜೆಕ್ಷನ್​ ಬೆಲೆ 16 ಕೋಟಿ ರೂಪಾಯಿ.

ಹೀಗಾಗಿ ಈಗಾಗಲೇ 8 ಕೋಟಿ ರೂ ಸಂಗ್ರಹ ಆಗಿದೆ. ಅದಕ್ಕಾಗಿ ತುಂಬ ಧನ್ಯವಾದಗಳು. ಇನ್ನೂ 8 ಕೋಟಿ ರೂ ಬೇಕು ದಯಮಾಡಿ ತಮ್ಮ ಕೈಲಾದಷ್ಟು ಸಹಾಯ ಮಾಡಿ ಅಂತ ಮಂಜು ಕೇಳಿಕೊಂಡಿದ್ದಾರೆ. ಇನ್ನೊಬ್ಬರ ಸಹಾಯಕ್ಕೆ ಸ್ಪಂಧಿಸಿ ಆ ಜೀವದ ಜೊತೆಯಾಗೋಣ, ಹೆತ್ತವರ ನೋವು ಅರ್ಥ ಮಾಡಿಕೊಳ್ಳೋಣ ಅಂತ ವಿನಂತಿಸಿಕೊಂಡಿದ್ದಾರೆ. ಇನ್ನು ಮಂಜು ಈ ಪೋಸ್ಟ್​ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು, ಮಂಜು ಹೃದಯಕ್ಕೆ ಜನ ಫಿದಾ ಆಗಿದ್ದಾರೆ..