Advertisements

ಪೆಟ್ರೊಲ್ ಬಂಕ್ ನಲ್ಲಿ ಕೆಲಸ ಮಾಡ್ತಿದ್ದ ಹುಡುಗನ ಜೀವನ ಇವತ್ತು ಎಷ್ಟು ಬದಲಾಗಿದೆ ಗೊತ್ತಾ?

Entertainment

ಈ ಭಾರಿಯ ಬಿಗ್​​ಬಾಸ್ ಕೀರೀಟವನ್ನು ಮುಡಿಗೇರಿಸಿಕೊಂಡ ಅತ್ಯುತ್ತಮ ಸ್ಫರ್ಧಿ.. ಜನರ ಮನಸ್ಸಿಗೆ ಕಾಮಿಡಿ ಕಚಗುಳಿ ಕೊಟ್ಟು, ಸದಾ ಆ್ಯಕ್ಟೀವ್ ಆಗಿದ್ದು, ಟಾಸ್ಕ್ ಅಂತ ಬಂದಾಗ ಅದರಲ್ಲೂ ತಾನೇ ಮುಂದು ನಿಂತು ಗೆಲುವಿನ ನಗು ಬೀರಿದ ಬೆಸ್ಟ್ ಪರ್ಫಾಮರ್​.. ಅಂದಹಾಗೇ ಎಷ್ಟೋ ಜನರಿಗೆ ಮಂಜು ಪಾವಗಡರ ಬದುಕಿನ ಕತೆ ಗೊತ್ತಿಲ್ಲ.. ಅವರಲು ಪಾವಗಡದಿಂದ ಇಲ್ಲಿಯವರೆಗೆ ಹೇಗೆ ಬಂದಿದ್ದಾರೆ ಅನ್ನೋ ವಿಚಾರವೇ ತಿಳಿಸಿದಿಲ್ಲ. ಬಾಲ್ಯದಿಂದಲೇ ಕಡುಬಡತನದಲ್ಲಿ ಜೀವಿಸುತ್ತಿದ್ದ ಮಂಜು ಪಾವಗಡ ಮನೆಯ ವಾತವಾರಣ ಅಷ್ಟೊಂದು ಅನೂಕೂಲವಿಲ್ಲದ ಹಿನ್ನಲೆ ಶಿಕ್ಷಣಕ್ಕೆ ಬೇಗಾನೇ ಗುಡ್​ಬೈ ಹೇಳಿದ್ರು.

[widget id=”custom_html-3″]

Advertisements

ಬಳಿಕ ಊರಲ್ಲಿಯೇ ಅಲ್ಲೊಂದು ಇಲ್ಲೊಂದು ಕೆಲಸ ಮಾಡಿಕೊಂಡ್ರು ಜೀವನ ನಡೆಸ್ತಿದ್ರು. ಊರಿನವರ ಸಲಹೆ ಮೇರೆಗೆ ಬೆಂಗಳೂರಿನತ್ತ ಕೆಲಸಕ್ಕಾಗಿ ಮುಖ ಮಾಡಿದ್ರು. ಬೆಂಗಳೂರಿಗೆ ಬಂದವರೇ ಮಂಜು ಜೆಪಿನಗರದ ಪೆಟ್ರ್ರೋಲ್​ ಬಂಕ್​ ಅಲ್ಲಿ ಕೆಲಸಕ್ಕೆ ಸೇರಿಕೊಂಡ್ರು. ಅಲ್ಲಿ ಬರುತ್ತಿದ್ದ ಜೆಕೆ, ತಾರಾ ಇನ್ನಿತರ ಸಿನಿ ಕಲಾವಿದರ ಕಂಡು ತಾನು ಸಹ ಸಿನಿಮಾ ಕಲಾವಿದ ಆಗಬೇಕು ಅಂತ ಅಂದುಕೊಳ್ತಾರಂತೆ. ಈ ಹಿನ್ನಲೆ ತಡಮಾಡದೇ ಆ್ಯಕ್ಟಿಂಗ್ ಕ್ಲಾಸ್​​ಗೂ ಸಹ ಮಂಜು ಸೇರಿಕೊಳ್ತಾರೆ. ಆರಂಭದಲ್ಲಿ ಅವರಿವರ ಟೀಕೆಯ ಮಧ್ಯೆಯೇ ನಾಟಕಗಳಲ್ಲಿ ಕೆಲಸ ಮಾಡಲು ಶುರು ಮಾಡಿದ ಮಂಜು ಪಾವಗಡ..

[widget id=”custom_html-3″]

ಹೋಗ್ತಾ ಹೋಗ್ತಾ ಪೆಟ್ರೋಲ್ ಬಂಕ್ ಕೆಲಸಕ್ಕೆ ಗುಡ್ ಬೈ ಹೇಳಿ ಸಂಪೂರ್ಣವಾಗಿ ರಂಗಭೂಮಿಯಲ್ಲಿ ತೊಡಗಿಕೊಳ್ತಾರೆ. ನಂತರ ಮಜಾಭಾರತದಲ್ಲಿ ಭಾಗವಹಿಸುತ್ತಾರೆ. ಮಂಜು ಅವರದ್ದು ಗಡಿ ಜಿಲ್ಲೆಯಾದ್ದರಿಂದ ಕನ್ನಡ ಅವರಿಗೆ ಸ್ವಲ್ಪ ಸಮಸ್ಯೆ ಇತ್ತಂತೆ, ಜೊತೆಗೆ ನಟನೆಯಲ್ಲಿ ಸಹ ಅಷ್ಟೊಂದು ಮಾಗಿದ ಜ್ಞಾನ ಇಲ್ಲದೇ ಇದ್ದದ್ದರಿಂದ ಅವರಿಗೆ ಮಜಾಭಾರತದಿಂದ ಗೇಟ್​​ಪಾಸ್ ಕೊಡ್ತಾರೆ. ನಂತರ ಕಮ್​ಬ್ಯಾಕ್ ಮಾಡಿದ ಮಂಜು ನಟನಾ ಕೌಶಲ್ಯವನ್ನು ತೋರಿಸಿ ತನ್ನ ಪ್ರಬುದ್ಧ ಕಲೆಯ ಅನಾವರಣ ಮಾಡ್ತಾರೆ. ಆ ಬಳಿಕ ಎಂದು ಸಹ ಮಂಜು ಪಾವಗಡ ಹಿಂದುರಿಗಿ ನೋಡಲಿಲ್ಲ..