Advertisements

ಗಂಡುಬೀರಿ ಹುಡುಗಿ ಪಾತ್ರದಿಂದಲೇ ಫೇಮಸ್ ಆದ 80ರ ದಶಕದ ಟಾಪ್ ನಟಿ ಮಂಜುಳಾವರ ಮಗ ಸೊಸೆ ಈಗ ಹೇಗಿದ್ದಾರೆ ಗೊತ್ತಾ ?

Cinema

ನಮಸ್ತೇ ಸ್ನೇಹಿತರೇ, ಸ್ಯಾಂಡಲ್ವುಡ್ ಕಂಡ ೮೦ರ ದಶಕದ ಖ್ಯಾತ ಟಾಪ್ ನಟಿಯರಲ್ಲಿ ಮಂಜುಳಾ ಕೂಡ ಒಬ್ಬರು. ಹಳ್ಳಿ ಹುಡುಗಿ ಪಾತ್ರವಾಗಲಿ, ಗಾಂಚಾಲಿ ಹುಡುಗಿ ಪಾತ್ರವಾಗಲಿ ಅಥ್ವಾ ಗಂಡು ಬೀರಿ ಹುಡುಗಿ ಪಾತ್ರವಾಗಲಿ ನಟಿಸುವುದರಲ್ಲಿ ಮಂಜುಳವರು ಎತ್ತಿದ ಕೈ. ಇನ್ನು ಹಳ್ಳಿ ಹುಡುಗಿಯ ಪಾತ್ರಗಳಲ್ಲಿ ಹೆಚ್ಚಾಗಿ ನಟಿಸಿರುವ ಮಂಜುಳ ಅವರ ಈ ಪಾತ್ರದ ಹಿಂದೆ ನಿಮಗೆ ಗೊತ್ತಿಲ್ಲದ ಒಂದು ಸ್ವಾರಸ್ಯಕರವಾದ ಘಟನೆ ಕೂಡ ಇದೆ. ಹೌದು, ಕನ್ನಡಚಿತ್ರ ರಂಗದ ಮೇರು ನಟ ರಾಜಣ್ಣನವರ ಬಂಗಾರದ ಪಂಜರದ ಚಿತ್ರಕ್ಕಾಗಿ ಹೀರೋಯಿನ್ ಪಾತ್ರಕ್ಕಾಗಿ ಹುಡುಕಾಟ ನಡೆಸುತ್ತಿದ್ದರು ಆ ಚಿತ್ರದ ನಿರ್ಮಾಪಕರು. ಇನ್ನು ಅವರು ನಾಯಕಿ ಪಾತ್ರಕ್ಕಾಗಿ ಯಾರಾದರೂ ಹೊಸ ಪ್ರತಿಭೆಯ ಫೋಟೋ ಇದ್ದರೆ ಕೊಡಿ ಎಂದು ಬಂಗಾರದ ಪಂಜರ ಚಿತ್ರದ ಫೋಟೋಗ್ರಾಫರ್ ಬಳಿ ಕೇಳುತ್ತಾರೆ.

ಇನ್ನು ಅದಾಗಲೇ ಚಿಕ್ಕ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ನಟಿ ಮಂಜುಳ ಅವರ ಕೆಲವೊಂದು ಫೋಟೋಗಳನ್ನ ಕಲೆಕ್ಟ್ ಮಾಡಿದ ಛಾಯಾಗ್ರಾಹಕ ಅಶ್ವತ್ ಅವರು ಆ ಚಿತ್ರದ ನಿರ್ಮಾಪಕರಾಗಿದ್ದ ಕೆಸಿಎನ್. ಗೌಡರ ಬಳಿ ಹೋಗುತ್ತಾರೆ. ಆದರೆ ಅದೇ ಸಮಯದಲ್ಲಿ ಕೆಸಿಎನ್. ಗೌಡರು ಬೇರೆಯವರ ಜೊತೆ ಮಾತನಾಡುತ್ತಿದ್ದು, ಅವರು ತುಂಬಾ ಬ್ಯಸಿ ಇದ್ದ ಕಾರಣ ಮಂಜುಳ ಅವರ ಫೋಟೋಗಳನ್ನ ಕೆಸಿಎನ್. ಗೌಡರ ಟೇಬಲ್ ಮೇಲೆ ಇಟ್ಟು ಹೊರಟುಹೋಗುತ್ತಾರೆ. ಆದರೆ ಇದೆ ವೇಳೆ ಅಲ್ಲಿ ಫ್ಯಾನ್ ಜೋರಾಗಿ ತಿರುಗುತ್ತಿದ್ದ ಕಾರಣ ಮಂಜುಳ ಅವರ ಫೋಟೋಗಳು ಅಲ್ಲೇ ಪಕ್ಕದಲ್ಲಿದ್ದ ಡಸ್ಟ್ ಬಿನ್ ಗೆ ಬಿದ್ದು ಬಿಡುತ್ತವೆ. ಇದನ್ನ ಗಮನಿಸಿದ ಆ ನಿರ್ಮಾಪಕರು ನಾನು ನೋಡುವ ಮುಂಚೆಯೇ ಫೋಟೋಗಳು ಡಸ್ಟ್ ಬಿನ್ ಗೆ ಬಿದ್ದು ಬಿಟ್ಟವಲ್ಲ, ಇದು ಯಾಕೋ ಸರಿ ಕಾಣುತ್ತಿಲ್ಲ ಎಂದು ಭಾವಿಸಿ ಮಂಜುಳ ಅವರ ಫೋಟೋಗಳನ್ನ ನೋಡಲೇ ಇಲ್ಲ ನಿರ್ಮಾಪಕ ಕೆಸಿಎನ್. ಗೌಡರು.

Advertisements

ಬಳಿಕ ಬಂಗಾರದ ಪಂಜರ ಚಿತ್ರಕ್ಕಾಗಿ ನಟಿ ಆರತಿಯವರನ್ನ ನಾಯಕಿ ನಟಿಯನ್ನಾಗಿ ಮಾಡಿದ್ರು. ಆದರೆ ನಟಿ ಮಂಜುಳಾ ಅವರಿಗೆ ಅದೃಷ್ಟ ಚೆನ್ನಾಗಿಯೇ ಇತ್ತು. ಅದೇ ವರ್ಷ ತೆರೆ ಕಂಡ ರಾಜ್ ಕುಮಾರ್ ಅವರ ಬ್ಲಾಕ್ ಬಸ್ಟರ್ ಚಿತ್ರ ‘ಸಂಪತ್ತಿಗೆ ಸವಾಲ್’ ಚಿತ್ರದಲ್ಲಿ ಹೀರೋಯಿನ್ ಆಗಿ ನಟಿಸುವ ಅವಕಾಶ ಮಂಜುಳಾ ಅವರಿಗೆ ಸಿಕ್ಕಿತು. ಇನ್ನು ಈ ಚಿತ್ರವಂತೂ ಆಗಿನ ಕಾಲಕ್ಕೆ ಸೂಪರ್ ಹಿಟ್ ಆಗಿ ಓಡಿತು. ಮಂಜುಳಾ ಅವರು ಚಂದನವನದ ಟಾಪ್ ನಟಿಯಾಗಿ ಗುರುತಿಸಿಕೊಂಡರು. ಮಂಜುಳಾ ಅವರು ಹುಟ್ಟಿದ್ದು 8 ನವೆಂಬರ್ 1951ತುಮಕೂರಿನ ಹೊನ್ನೇನಹಳ್ಳಿ ಎಂಬ ಗ್ರಾಮದಲ್ಲಿ. ಲಿಂಗಾಯಿತ ಕುಟುಂಬದಲ್ಲಿ ಜನಿಸಿದ ಮಂಜುಳಾ ಅವರ ತಂದೆ ಶಿವಣ್ಣ, ತಾಯಿ ದೇವೇರಮ್ಮ ಎಂದು. ತಂದೆ ಶಿವಣ್ಣನವರು ಸಬ್ ಇನ್ಸ್ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಇನ್ನು ಮಂಜುಳಾ ಅವರು ಮದುವೆಯಾಗಿದ್ದು ನಿರ್ದೇಶಕರಾಗಿದ್ದ ಅಮೃತಮ್ ಎಂಬುವವರನ್ನ.

ಇನ್ನು ನಟಿ ಮಂಜುಳಾರವರಿಗೆ ಅಭಿಷೇಕ್ ಎಂಬ ಮಗನಿದ್ದಾನೆ. ಅಭಿಷೇಕ್ ಅವರು ೨೦೦೯ರಲ್ಲಿ ಸುಷ್ಮಾ ಶ್ರೀನಿವಾಸ್ ಎಂಬುವವರನ್ನ ಮದುವೆಯಾಗಿದ್ದಾರೆ. ಇನ್ನು ಅಭಿಷೇಕ್ ಅವರು ಮಾಧ್ಯಮಗಳ ಜೊತೆ ತಮ್ಮ ತಾಯಿ ಬಗ್ಗೆ ಮಾನಾಡುವಾಗ ನಾನು ಮಂಜುಳಾ ಅವರ ಮಗನೆಂದು ಗೊತ್ತಾದರೆ ನನ್ನನ್ನ ಅಭಿಮಾನದಿಂದ ಮಾತನಾಡಿಸುವ ಜನ ತುಂಬಾ ಪ್ರೀತಿಯನ್ನ ಕೂಡ ತೋರಿಸುತ್ತಾರೆ. ನಾನು ನನ್ನ ತಾಯಿಯನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಭಾವನಾತ್ಮಕವಾಗಿ ಹೇಳಿದ್ದಾರೆ. ಇನ್ನು ಚಂದನವನದ ಟಾಪ್ ನಟಿಯಾಗಿ ಮೆರೆದ ಮಂಜುಳಾ ಅವರು ಬದುಕಿದ್ದು ಮಾತ್ರ ಕೇವಲ 35ವರ್ಷ.

೭೦ ಹಾಗೂ ೮೦ರ ದಶಕದಲ್ಲಿ ಕನ್ನಡ ಚಿತ್ರರಂಗದ ಟಾಪ್ ನಟಿಯಾಗಿ ಮೆರೆದ ಮಂಜುಳಾ ಅವರು ೧೯೮೨ರಲ್ಲಿ ಅಮೃತಮ್ ಅವರನ್ನ ಮದುವೆಯಾದ ಬಳಿಕ ಅವರಿಗೆ ಚಿತ್ರರಂಗದಲ್ಲಿ ಅವಕಾಶಗಳು ಕಡಿಮೆಯಾಗುತ್ತವೆ. ಅದರ ಬಳಿಕ ಅವರು ತುಂಬಾ ಆರ್ಥಿಕ ಸಮಸ್ಯೆಗಳನ್ನ ಎದುರಿಸಿದ್ರು ಎಂದು ಹೇಳಲಾಗುತ್ತದೆ.

ಎರಡು ದಶಕಗಳ ಕಾಲ ಚಂದನವನದ ಟಾಪ್ ನಟಿಯಾಗಿ ಮಿಂಚಿದ್ದ ಮಂಜುಳಾ ಅವರು ಸೆಪ್ಟೆಂಬರ್ ೧೨,೧೯೮೬ರಂದು ಅಡುಗೆ ಮನೆಯಲ್ಲಿ ಇದ್ದ ವೇಳೆ ಸ್ಟವ್ ಬ’ರೆಸ್ಟ್ ಆದ ಕಾರಣ ಇಹಲೋಕ ತ್ಯಜಿಸುತ್ತಾರೆ. ಆದರೆ ಮಂಜುಳ ಅವರ ನೆನಪು ಮಾತ್ರ ಸ್ಯಾಂಡಲ್ ವುಡ್ ಚಿತ್ರರಂಗ ಇರುವವರೆಗೂ ಅಜರಾಮರವಾಗಿರುತ್ತದೆ. ಮಂಜುಳಾ ಅವರ ನಟನಾ ಕೌಶಲ್ಯ ಇಂದಿನ ಎಷ್ಟೋ ಯುವ ನಟಿಯರಿಗೆ ಮಾದರಿಯಾಗಿದೆ.