Advertisements

ತನ್ನ ಜೀವನದಲ್ಲಿ ಅನುಭವಿಸಿದ ಕಷ್ಟಗಳ ಬಗ್ಗೆ ಭಾವನಾತ್ಮಕವಾಗಿ ಹಂಚಿಕೊಂಡ ಶಾಸ್ತ್ರಿ ನಟಿ !

Cinema

ನಮಸ್ತೇ ಸ್ನೇಹಿತರೇ, ಹೀಗೆ ಕಾಣಿಸಿಕೊಂಡು ಬೆಳ್ಳಿಪರದೆಯ ಮೇಲೆ ಮಿಂಚಿ ಮರೆಯಾದ ನಟಿಯರು ಅನೇಕರಿದ್ದಾರೆ.. ತಾವು ಮರೆಯಾದ ಬಳಿಕ ಯಾವುದೇ ಚಿತ್ರಗಳಲ್ಲೂ ಕೂಡ ಕಾಣಿಸಿಕೊಳ್ಳುವುದಿಲ್ಲ.. ಎಲ್ಲಿ ಹೋದರೂ ?ಹಿಗೇನು ಮಾಡುತ್ತಿದ್ದಾರೆ ಎಂಬ ಪ್ರಶ್ನೆಗಳನ್ನ ಹುಟ್ಟುಹಾಕುತ್ತಾರೆ. ಈ ಲಿಸ್ಟ್ ನಲ್ಲಿ ದರ್ಶನ್ ಅಭಿನಯದ ಶಾಸ್ತ್ರೀ ಖ್ಯಾತಿಯ ಚಿತ್ರದಲ್ಲಿ ನಟಿಸಿದ್ದ ನಟಿ ಮಾನ್ಯ ನಾಯ್ಡು ಕೂಡ ಒಬ್ಬರು. ಇವರು ಕನ್ನಡ ಮಾತ್ರವಲ್ಲದೆ ತೆಲಗು, ತಮಿಳು ಸೇರಿದಂತೆ ಮಲಯಾಳಂ ಚಿತ್ರಗಳಲ್ಲಿ ನಟಿಸಿ ಬಹುಭಾಷಾ ನಟಿಯಾಗಿದ್ದಾರೆ. ಇತ್ತೀಚಿಗೆ ಯಾವುದೇ ಚಿತ್ರಗಳಲ್ಲೂ ನಟಿಸದಿದ್ದರೂ ಸಾಮಾಜಿಕ ಜಾಲಾತಾಣಗಳಲ್ಲಿ ಮಾತ್ರ ಆಕ್ಟಿವ್ ಆಗಿ ಇದ್ದಾರೆ. ಈಗ ಇದ್ದಕಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ವೈಯುಕ್ತಿಕ ಜೀವನದ ಬಗ್ಗೆ ಹಂಚಿಕೊಡನಿರುವ ನಟಿ ಮಾನ್ಯ ತಾನು ತಮ್ಮ ರಿಯಲ್ ಲೈಫ್ ನಲ್ಲಿ ಅನುಭವಿಸಿದ ಕಷ್ಟಗಳ ಬಗ್ಗೆ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

Advertisements

ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಜೀವನದ ಕಹಿ ಘಟನೆಗಳ ಬಗ್ಗೆ ಬಿಚ್ಚಿಟ್ಟಿರುವ ನಟಿ ಮಾನ್ಯ, ಪ್ರತಿಯೊಬ್ಬರನ್ನ ಪ್ರೋತ್ಸಾಹಿಸಲು ಸಲುವಾಗಿ ಈ ಪಾಸಿಟೀವ್ ಸ್ಟೋರಿಯನ್ನ ನಾನು ಬರೆಯುತ್ತಿದ್ದು ಇದು ಆದಷ್ಟು ವೈರಲ್ ಆಗಲು ನಾನು ಬಯಸುತ್ತನೆ ಎಂದು ಮಾನ್ಯ ಹೇಳಿದ್ದಾರೆ. ನಟಿ ಮಾನ್ಯ ಹೇಳುವ ಹಾಗೆ..ನನ್ನ ಚಿಕ್ಕವಯಸ್ಸಿನಲ್ಲೇ ನಾನು ತಂದೆಯನ್ನ ಕಳೆದುಕೊಂಡೆ. ಓದಿನಲ್ಲಿ ಹೆಚ್ಚು ಆಸಕ್ತಿ ಇದ್ದರೂ ಕೂಡ ಕುಟುಂಬವನ್ನ ನೋಡಿಕೊಳ್ಳಬೇಕಾದ ಕಾರಣ ಶಾಲೆಯನ್ನು ಬಿಟ್ಟೆ. ಹಸಿವಿನ ಬಗ್ಗೆ ತಿಳಿದಿದ್ದ ನಾನು ತುಂಬಾ ಕಷ್ಟ ಪಟ್ಟು ಕೆಲಸ ಮಾಡಿದೆ. ೪೦ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ನಟಿಸಿ ಅದರಿಂದ ಸಂಪಾದನೆ ಮಾಡಿದ ಎಲ್ಲಾ ಹಣವನ್ನ ನನ್ನ ತಾಯಿಗೆ ನೀಡಿದೆ.

ಬಳಿಕ ತುಂಬಾ ಕಷ್ಟಪಟ್ಟು ಓದಲು ಶುರು ಮಾಡಿದ ನಾನು ಸ್ಯಾಟ್ ಎಕ್ಸಾಮ್ ಬರೆದು, ನ್ಯೂಯಾರ್ಕ್‍ನ ಕೊಲಂಬಿಯಾ ಕಾಲೇಜಿನಲ್ಲಿ ಪ್ರವೇಶ ಪಡೆದುಕೊಂಡೆ. ನಾನು ಚಿಕ್ಕ ವಯಸಸ್ಸಿನಲ್ಲಿದ್ದಾಗ ಇಷ್ಟಪಟ್ಟದ್ದನ್ನ ಓದಲು ಆಗದ ನನಗೆ ಮೊಟ್ಟ ಮೊದಲ ಬಾರಿಗೆ ಶಾಲೆಯಲ್ಲಿ ಕಾಲಿಟ್ಟಾಗ ನನ್ನ ಕಣ್ಣೀರಿನ ಕೋಡಿಯೇ ಅರಿದಿತ್ತು. ಏಕೆಂದರೆ ಅದು ನನಗೆ ಶಾಲೆಗೆ ಕಾಲಿಟ್ಟ ಆನಂದದ ಕಣ್ಣೀರಾಗಿತ್ತು. ಇನ್ನು ನನಗೆ ವಿಶ್ವವಿದ್ಯಾನಿಲಯದ್ಲಲಿ ಪ್ರವೇಶ ಪಡೆಯುವುದು ಸುಲಭವಾಗಿತ್ತಾದರೂ ಗಣಿತ ಶಾಸ್ತ್ರದಲ್ಲಿ ಪದವಿ ಪಡೆಯುವುದು ಹಾಗೂ ಅದರಲ್ಲಿ ನನಗೆ ಸ್ಕಾಲರ್ ಶಿಪ್ ಲಭಿಸಿದ್ದು ನನ್ನ ಜೀವನದ ಕಷ್ಟದ ದಿನಗಳಾಗಿದ್ದವು ಎಂದು ಮಾನ್ಯ ಬರೆದುಕೊಂಡಿದ್ದಾರೆ.

ನಂಗೆ ಆರೋಗ್ಯ ಸೇರಿದಂತೆ ಕೆಲವೊಂದು ವಿಷಯಗಳಲ್ಲಿ ಸಮಸ್ಯೆಗಳು ಇದ್ದು..ಎಷ್ಟೋ ಬಾರಿ ನಾನು ಓದುವುದನ್ನೇ ಬಿಟ್ಟುಬಿಡಬೇಕು ಎಂದುಕೊಂಡೆ. ಆದರೆ ದೇವರನ್ನ ನಂಬಿದ್ದ ನಾನು ಅದೇ ಸಮಯದಲ್ಲಿ ನನ್ನನ್ನ ನಾನೇ ಸಮಾಧಾನ ಪಡಿಸಿಕೊಂಡು ಮತ್ತೆ ನನ್ನ ಗುರಿಯ ಕಡೆಗೆ ಎದ್ದು ನಿಲ್ಲುತ್ತಿದ್ದೆ. ನಮ್ಮ ಜ್ನ್ಯಾನವನ್ನ ಕಸಿದುಕೊಳ್ಳಲು ಯಾರ ಕೈನಿಂದಲೂ ಸಾಧ್ಯವಿಲ್ಲ. ನಿಮಗೆ ಶಿಕ್ಷಣ ರೆಕ್ಕೆಯನ್ನ ಕೊಟ್ಟು ಹಾರುವಂತೆ ಮಾಡುತ್ತದೆ. ಯಾವಾಗಲು ಒಂದು ನಿಮ್ಮ ನೆನಪಿನಲ್ಲಿರಲಿ. ನಿಮಗೆ ನೀವೇ ಸ್ಪೆಷಲ್ ಎಂದು. ನಾನು ಹಂಚಿಕೊಂಡ ಈ ಸ್ಟೋರಿಯಿಂದ ಯಾರಿಗಾದ್ರೂ ಒಬ್ಬರಿಗೆ ಪ್ರೋತ್ಸಾಹ ದೊರೆತರೆ ಅಷ್ಟೇ ಸಾಕು. ಅದೇ ನನ್ನ ಉದ್ದೇಶ. ಕೊನೆಯದಾಗಿ ಲವ್ ಯೂ ಆಲ್ ಎಂದು ಭಾವನಾತ್ಮಕವಾಗಿ ತಮ್ಮ ವೈಕ್ತಿಕ ಜೀವನದ ಬಗ್ಗೆ ಬರೆದುಕೊಂಡಿದ್ದು ಪೋಸ್ಟ್ ಮಾಡಿದ್ದಾರೆ ನಟಿ ಮಾನ್ಯ.