Advertisements

ತಂದೆಯ ಆಟೋದಲ್ಲೇ ಸನ್ಮಾನ ಕಾರ್ಯಕ್ರಮಕ್ಕೆ ಬಂದ ಮಿಸ್ ಇಂಡಿಯಾ !

Entertainment

ಸ್ನೇಹಿತರೇ, ಬಹುತೇಕರು ತಾವು ಜೀವನದಲ್ಲಿ ಅತ್ತ್ಯನ್ನತ ಮಟ್ಟಕ್ಕೆ ಹೋದಾಗ, ಹಣ ಹೆಸರು ಬಂದಾಗ ತಾವು ಬಂದ ದಾರಿಯನ್ನೇ ಮರೆತುಬಿಡುತ್ತಾರೆ. ಆದರೆ ಯಾವತ್ತು ಕೂಡ ನಾವು ಬೆಳೆದು ಬಂದ ದಾರಿಯನ್ನ ಮರೆಯಬಾರದು ಎಂದು ಹಿರಿಯರು ಹೇಳುತ್ತಾರೆ. ಈಗ ಈ ಮಾತಿಗೆ ತಕ್ಕ ನಿದರ್ಶನವಾಗಿದ್ದಾರೆ ೨೦೨೦ರ ಮಿಸ್ ಇಂಡಿಯಾ ರನ್ನರ್ ಆಪ್ ಆಗಿರುವ ಮಾನ್ಯ ಸಿಂಗ್. ಹೌದು, ಮಾನ್ಯ ಅವರ ತಂದೆ ಆಟೋ ಚಾಲಕ ವೃತ್ತಿಯನ್ನ ಮಾಡುತ್ತಿದ್ದು, ಸನ್ಮಾನ ಕಾರ್ಯಕ್ರಮವೊಂದಕ್ಕೆ ತನ್ನ ತಂದೆಯ ಆಟೋದಲ್ಲಿಯೇ ಬಂದ ಮಾನ್ಯ ಸಿಂಗ್ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Advertisements

ಉತ್ತರಪ್ರದೇಶದ ಕುಶಿನಗರದಲ್ಲಿ ಹುಟ್ಟಿದ ಈಕೆಯ ವಯಸ್ಸು ಈಗಿನ್ನು ಕೇವಲ ೧೯ ವರ್ಷ. ಇವರ ತಂದೆ ಓಂ ಪ್ರಕಾಶ್ ಸಿಂಗ್ ಆಟೋ ಚಾಲಕರಾಗಿದ್ದು ಇವರ ತಾಯಿ ಮನೋರಮಾ ಸಿಂಗ್ ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಮಾಡುತ್ತಾರೆ. ಮಾನ್ಯ ಸಿಂಗ್ ಗೆ ಸಹೋದರ ಕೂಡ ಇದ್ದಾನೆ. ಇನ್ನು ೨೦೨೦ರ VLCC ಫೆಮಿನಾ ಮಿಸ್ ಇಂಡಿಯಾ ರನ್ನರ್ ಆಪ್ ಆಗಿ ಆಯ್ಕೆಯಾಗಿರುವ ಮಾನ್ಯ ಸಿಂಗ್ ಮುಂಬೈನ ಠಾಕೂರ್ ಕಾಲೇಜಿನಲ್ಲಿ ಆಯೋಜನೆ ಮಾಡಿದ್ದ ಸನ್ಮಾನ ಕಾರ್ಯಕ್ರಮದ ಸಮಾರಂಭಕ್ಕೆ ತನ್ನ ತಂದೆಯ ಆಟೋದಲ್ಲಿಯೇ ತಾಯಿಯ ಜೊತೆಯಾಗಿ ಬಂದಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ತಾವು ಜೀವನದಲ್ಲಿ ಎಷ್ಟೇ ಎತ್ತರದ ಮಟ್ಟಕ್ಕೆ ಹೋದರೂ ಕೂಡ ತಾವು ನಡೆದು ಬಂದ ಹಾದಿಯನ್ನ ಮರೆಯಲೇಬಾರದು ಎಂಬುದನ್ನ ಪೂರಕವಾಗಿ ಮಾಡಿ ತೋರಿಸಿದ್ದಾರೆ ಮಿಸ್ ಇಂಡಿಯಾ ರನ್ನರ್ ಆಪ್ ಆಗಿರುವ ಮಾನ್ಯ ಸಿಂಗ್. ಆಟೋ ಚಾಲಕರೊಬ್ಬರ ಮಗಳು ಮಿಸ್ ಇಂಡಿಯಾ ಆಗುವುದು ಎಂದರೆ ಅದು ಅಷ್ಟೊಂದು ಸುಲಭದ ಮಾತಲ್ಲ ಅಲ್ಲವೇ..ಇನ್ನು ಕಪ್ಪು ಡ್ರೆಸ್ ನಲ್ಲಿ ಕಂಗೊಳಿಸುತ್ತಿದ್ದ ಮಾನ್ಯ ಸಿಂಗ್ ತಂದೆಯ ಆಟೋದಲ್ಲಿ ಬಂದು ಸನ್ಮಾನ ಸಮಾರಂಭಕ್ಕೆ ಹೋಗಿದ್ದಾರೆ. ಇನ್ನು ಇದೆ ಸಮಾರಂಭದಲ್ಲಿ ಮಾನ್ಯ ಅವರ ತಂದೆ ತಾಯಿಯನ್ನು ಕೂಡ ಸನ್ಮಾನಿಸಿ ಗೌರವಿಸಲಾಗಿದೆ.