Advertisements

ಪೇಸ್ಬುಕ್ ಸೃಷ್ಟಿ ಮಾಡುವುದಕ್ಕು ಮುನ್ನ ಮಾರ್ಕ್ ಜುಕರ್ ಬರ್ಗ್ ಎಂಥ ಕೆಲಸ ಮಾಡ್ತಿದ್ರು ಗೊತ್ತಾ? ಪೇಸ್ಬುಕ್ ಗೆ ನೀಲಿ ಬಣ್ಣಾನೇ ಯಾಕ್ ಇದೆ ನೋಡಿ..

Kannada Mahiti

ಇವತ್ತು ನಾವೆಲ್ಲ ಅತೀ ಹೆಚ್ಚಾಗಿ ಸಾಮಾಜಿಕ ಜಾಲತಾಣದ ಮೇಲೆ ಅವಲಂಬಿತವಾಗಿದ್ದೇವೆ. ಅದರಲ್ಲೂ ಫೇಸ್‌ಬುಕ್‌ನ್ನು ಹೆಚ್ಚಾಗಿ ನೆಚ್ಚಿಕೊಳ್ತೇವೆ.. ಅಲ್ವಾ.. ಆದರೆ ಈ ಫೇಸ್‌ಬುಕ್‌ನ್ನು ಕಂಡುಹಿಡಿದ ಜುಕರ್ ಬರ್ಗ್ ಯಾರು.. ಅಷ್ಟಕ್ಕೂ ಫೇಸ್‌ಬುಕ್ ನೀಲಿಬಣ್ಣವೇ ಯಾಕಿದೆ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರವನ್ನು ಎಳೆಎಳೆಯಾಗಿ ಹೇಳ್ತಾ ಹೋಗ್ತೀವಿ.. ಮಾರ್ಕ್ ಜುಕರ್ ಬರ್ಗ್ ಅವರಿಗೆ ಚಿಕ್ಕ ವಯಸ್ಸಿನಿಂದಲೇ ಕಂಪ್ಯೂಟರ್ ಅಂದ್ರೆ ಬಹಳ ಇಷ್ಟವಿತ್ತಂತೆ, ಅವರ ಕಂಪ್ಯೂಟರ್ ಆಸಕ್ತಿ ಕಂಡು ಅವರು ತಂದೆ ತನಗೆ ಗೊತ್ತಿದ್ದ ಬೇಸಿಕ್ ಕಂಪ್ಯೂಟರ್ ಶಿಕ್ಷಣವನ್ನು ಹೇಳಿಕೊಟ್ಟಿದ್ದರು. ನಂತರ ಮಗನ ಆಸಕ್ತಿಯನ್ನು ಕಂಡು ಉತ್ತಮ ಕಂಪ್ಯೂಟರ್ ಶಿಕ್ಷಕರ ಬಳಿ ಸೇರಿಸಿದ್ರು, ಆ ವೇಳೆ ಜುಕರ್ ಅತ್ಯಂತ ಆಸಕ್ತಿಯಿಂದ ಕಂಪ್ಯೂಟರ್ ಅಭ್ಯಸಿಸಿದ್ರು. ಇವರು ಬಿಡುವಿನ ವೇಳೆಯಲ್ಲಿ ಇತರೆ ಮಕ್ಕಳಂತೆ ಆಟವಾಡುವುದನ್ನು ಬಿಟ್ಟು ಕಂಪ್ಯೂಟರ್ ಮೇಲೆ ಜಾಸ್ತಿ ಅವಲಂಬಿತವಾಗಿದ್ರು.

[widget id=”custom_html-3″]

Advertisements

ಇನ್ನೊಂದು ವಿಶೇಷ ಅಂದ್ರೆ 11ನೇ ವಯಸ್ಸಿನಲ್ಲಿ ಝುಕ್‌ನೆಟ್ ಎಂಬ ಸಾಫ್ಟ್ವೇರ್ ಕಂಡುಹಿಡಿದ್ರು. ಆದರೆ ಈ ಸಾಫ್ಟ್ವೇರ್ ಅವರ ಅಪ್ಪನ ಡೆಂಟಲ್ ಕ್ಲಿನಿಕ್‌ಗೆ ಮಾತ್ರ ಸೀಮಿತವಾಗಿತ್ತು. ನಂತರ ಹೈ ಸ್ಕೂಲ್‌ಗೆ ಹೋದಾಗ ಸಿನೋಪ್ಸ್ ಮಿಡೀಯಾ ಫ್ಲೇರ್ಸ್ ಎನ್ನೋ ಒಂದು ಆಡಿಯೋ ಸಾಫ್ಟ್ ವೇರ್ರ್ ಕಂಡುಹಿಡಿದ್ರು, ಈ ಸಾಫ್ಟ್ ವೇರ್ ಎಷ್ಟರಮಟ್ಟಿಗೆ ಸದ್ದು ಮಾಡಿತು ಅಂದ್ರೆ ದೊಡ್ಡ ದೊಡ್ಡ ಕಂಪನಿಗಳು ಇವರ ಸಾಫ್ಟ್ ವೇರ್ ಕೊಂಡುಕೊಳ್ಳಲು ಮುಗಿಬಿದ್ರು. ಬಾಲ್ಯದಲ್ಲಿಯೇ ಕಂಪ್ಯೂಟರ್‌ನಲ್ಲಿ ನುರಿತನಾಗಿದ್ರು ಓದುವುದನ್ನು ಮಾತ್ರ ಜುಕರ್ ನಿಲ್ಲಿಸಿರಲಿಲ್ಲ, ಮುಂದೆ ಹೈಯರ್ ಸ್ಟಡೀಸ್‌ಗೆ ಯುನಿವರ್ಸಿಟಿಗೆ ಸೇರಿಕೊಂಡಾಗ ಅಲ್ಲಿ ಯುವ ಮನಸ್ಸುಗಳನ್ನು ಅರ್ಥ ಮಾಡಿಕೊಂಡು ಫೇಸ್‌ಮೇಶ್ ಎಂಬ ವೆಬ್‌ಸೈಟ್ ಕಂಡುಹಿಡಿದ್ರು, ಈ ವೆಬ್‌ಸೈಟ್ ಮುಖಾಂತರ ಹುಡುಗಿಯರ ಫೋಟೋ ಹಾಕಿ ಯಾರು ಜಾಸ್ತಿ ಚೆನ್ನಾಗಿದ್ದಾರೆ ಅಂತ ಪೊಲೀಂಗ್ ಸಹ ಮಾಡುತ್ತಿದ್ದರು.

[widget id=”custom_html-3″]

ಮುಂದೆ ಇದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿ ನಮ್ಮ ಅನುಮತಿಯಿಲ್ಲದೇ ನಮ್ಮ ಫೋಟೊ ಅಪ್‌ಲೋಡ್ ಮಾಡಿದ್ದಾರೆ ಅಂತ ಹೆಣ್ಣುಮಕ್ಕಳು ಜುಕರ್ ವಿ’ರು’ದ್ಧ ಕಿ’ಡಿ’ಕಾರಿದ್ರು, ಇದರಿಂದ ಆ ವೆಬ್‌ಸೈಟ್ ಡಿಲೀಟ್ ಮಾಡೋದರ ಜೊತೆಗೆ ಎಲ್ಲರೆದುರು ಮುಕ್ತವಾಗಿ ಕ್ಷಮೆಯಾಚಿಸುತ್ತಾರೆ. ನಂತರ ಜುಕರ್ ಹೊಸ ಹೊಸ ವೆಬ್‌ಸೈಟ್ ಕಂಡುಹಿಡಿಯುವ ಹವ್ಯಾಸವನ್ನು ನಿಲ್ಲಿಸಲಿಲ್ಲ, ದ ಫೇಸ್‌ಬುಕ್ ಎಂಬ ವೆಬ್‌ಸೈಟ್‌ನ್ನು ಕಂಡುಹಿಡಿದು ಅದರಲ್ಲಿ ಯುನಿವರ್ಸಿಟಿಯ ಸಂಪೂರ್ಣ ವಿವರವನ್ನು ಹಾಕಲು ಶುರು ಮಾಡುತ್ತಾರೆ, ಮುಂದೆ ಇದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿ ದ ಫೇಸ್‌ಬುಕ್‌ಗೆ ಸಿಕ್ಕಾಪಟ್ಟೆ ಬೇಡಿಕೆ ಬಂತು. ನಂತರ ಇದನ್ನು ಇನ್ನಷ್ಟು ನವೀಕರಿಸುವ ಸಲುವಾಗಿ ಜುಕರ್ ಅಧ್ಯಯನದಲ್ಲಿ ತೊಡಗಿಕೊಳ್ತಾರೆ, ಇದರ ಪರಿಣಾಮವಾಗಿ ವಿದ್ಯೆಯನ್ನು ಅರ್ಧದಲ್ಲಿಯೇ ನಿಲ್ಲಿಸ್ತಾರೆ..

ನಿರಂತರವಾಗಿ ಕೆಲಸ ಮಾಡಿದ ಪರಿಣಾಮವೇ ಫೇಸ್‌ಬುಕ್ ಎನ್ನುವ ವೆಬ್‌ಸೈಟ್ ಕಂಡುಹಿಡಿತಾರೆ, ಇದೇ ಫೇಸ್‌ಬುಕ್ ಈಗ ನಾವು ನೀವು ಉಪಯೋಗಿಸುತ್ತಿರುವ ಫೇಸ್‌ಬುಕ್. ವಿಶ್ವದ ಯಾವುದೇ ಮೂಲೆಯಲ್ಲಿರುವ ಜನರು ಇಂಟರ್‌ರ್ನೆಟ್ ಸಹಾಯದಿಂದ ಈ ಫೇಸ್‌ಬುಕ್ ಉಪಯೋಗಿಸಬಹುದು. ಫೇಸ್‌ಬುಕ್‌ನ್ನು ಕೊಂಡುಕೊಳ್ಳಲು ಎಷ್ಟೋ ಕಂಪನಿಗಳು ಮುಂದೆ ಬಂದರೂ ಸಹ ಬಹು ದೂರದೃಷ್ಠಿಯಿರುವ ಜುಕರ್ ಯಾವುದೇ ಕಾರಣಕ್ಕೂ ಫೇಸ್‌ಬುಕ್‌ನ್ನು ಮಾರಾಟ ಮಾಡಲು ಒಪ್ಪಿಕೊಳ್ಳಲ್ಲ, ಇನ್ನು ಯಾವತ್ತಾದರೂ ಫೇಸ್‌ಬುಕ್ ನೀಲಿ ಬಣ್ಣ ಯಾಕಿದೆ ಅಂತ ಯೋಚಿಸಿದ್ದೀರಾ.. ಮಾರ್ಕ್ ಜುಕನ್ ಬರ್ಗ್ ಅವರಿಗೆ ಕೆಂಪು ಹಾಗೂ ಹಸಿರು ಬಣ್ಣ ಸರಿಯಾಗಿ ಕಾಣದಿರುವುದರಿಂದ ಅವರಿಗೆ ಕಲರ್ ಬ್ರೈಡ್‌ನೆಸ್ ಇರೋದ್ರಿಂದ ಅವರು ಫೇಸ್‌ಬುಕ್‌ಗೆ ನೀಲಿ ಬಣ್ಣ ಕೊಟ್ಟಿದ್ದಾರೆ. ಸ್ನೇಹಿತರೇ ಇದಿಷ್ಟು ಬಿಲೇನಿಯರ್ ಮಾರ್ಕ್ ಜುಕರ್ ಬಗೆಗಿನ ಗೊತ್ತಿಲ್ಲದ ರೋಚಕ ಸಂಗತಿಗಳು…