Advertisements

ಹಳೇ ಬಟ್ಟೆ ಹಾಕಿ ಊಟ ಮಾಡುತ್ತಿದ್ದ ವ್ಯಕ್ತಿನಾ ಅವಮಾನ ಮಾಡಿ ಆಚೆ ಓಡಿಸಿದರು.. ಆಮೇಲೆ ಆ ವ್ಯಕ್ತಿ ಮಾಡಿದ ಕೆಲಸ ಮುಖಕ್ಕೆ ಹೊಡೆದಾಗಿದೆ..

Kannada Mahiti

ನಮಸ್ತೆ ಸ್ನೇಹಿತರೆ, ಆಂಧ್ರಪ್ರದೇಶದ ಗುಂಟೂರಿನಲ್ಲಿ ವಾಸಮಾಡುತ್ತಿರುವ ಸುಂದರ್ ರೆಡ್ಡಿ ಎಂಬ ವ್ಯಕ್ತಿಯೊಬ್ಬರ ಜೀವನದಲ್ಲಿ ನಡೆದಂತ ಒಂದು ನಿಜ ಘಟನೆಯ ಬಗ್ಗೆ ಈ ಮಾಹಿತಿಯಲ್ಲಿ ನೋಡೊಣ. ಸ್ನೇಹಿತರೊಬ್ಬರು ಒಂದು ದಿ‌ನ ಸುಂದರ್ ರೆಡ್ಡಿಯವರ ಮನೆಗೆ ಬಂದು ನನ್ನ ಮಗನ ಮದುವೆ ಮುಂದಿನ ಭಾನುವಾರದಂದು ನಡೆಯಲಿದೆ. ನೀವು ನಿಮ್ಮ ಕುಟುಂಬ ಸಮೇತರಾಗಿ ತಪ್ಪದೇ ಮದುವೆಗೆ ಬರಬೇಕು ಎಂದು ಹೇಳಿದರು.. ಹಾಗ ಸುಂದರ್ ರೆಡ್ಡಿ ಸರಿ ಬರ್ತೀನಿ ಎಂದು ಸ್ನೇಹಿತರಿಗೆ ಹೇಳಿ ಕಳುಹಿಸಿದರು. ಭಾನುವಾರ ಬಂತು. ಸ್ನೇಹಿತ ಹೆಳಿದಂತೆ ಆತನ ಮಗನ ಮದುವೆಗೆ ಹೋದ ಸುಂದರ್ ರೆಡ್ಡಿ ವಧು ವರರಿಗೆ ಆಶಿರ್ವಾದ ಮಾಡಿದರು.. ಸ್ವಲ್ಪ ಸಮಯ ಕಲ್ಯಾಣ ಮಂಟಪದಲ್ಲೇ ಕೂತ ಸುಂದರ್ ರೆಡ್ಡಿಗೆ ಯಾಕೋ ಹೊಟ್ಟೆ ಹಸಿವು ಶುರುವಾಗುತ್ತದೆ.

Advertisements

ಇನ್ನು ಏಗೋ ಕಲ್ಯಾಣ ಮಂಟಪದಲ್ಲೇ ಇದ್ದೀನಿ ಇಲ್ಲೇ ಊಟ ಮಾಡಿ ಹೋಗೋಣ ಎಂದು ಊಟದ ಮನೆಗೆ ಹೋಗಿ ಬಂತಿಯಲ್ಲಿ ಸುಂದರ್ ರೆಡ್ಡಿ ಕೂತಿದ್ದಾರೆ.. ಸುಂದರ್ ರೆಡ್ಡಿ ಚೇರಿನ ಮೇಲೆ ಊಟಕ್ಕೆ ಕೂತಿದ್ದೆ ತಡ ಅಲ್ಲೇ ಇದ್ದ ಅಪರಿಚಿತ ವ್ಯಕ್ತಿಯೊಬ್ಬರು ಓಡಿ ಬಂದು ಎದ್ದೇಳು ಮೇಲೆ ನಿಮ್ಮನ್ನೆಲ್ಲ ಯಾರು ಛತ್ರದ ಒಳಗೆ ಬಿಟ್ಟಿದ್ದು.. ಛತ್ರಗಳಲ್ಲಿ ಮದುವೆ ನಡೆಯುತ್ತಿದ್ದಾರೆ ಸಾಕು ಹೋಸಿ ಊಟಕ್ಕೆ ಓಡಿ ಬಂದು ಬಿಡ್ತೀರಾ ನಿಮಗೆ ನಾಚಿಕೆ ಏನು ಆಗುವುದಿಲ್ವಾ ಎಂದು ಹೇಳಿ ಸುಂದರ್ ರೆಡ್ಡಿಗೆ ಊಟ ಹಾಕಲು ಇಟ್ಟಿದ್ದ ಬಾಳೆ ಎಲೆಯನ್ನು ಎತ್ತಿಕೊಂಡು ಸುಂದರ್ ರೆಡ್ಡಿಯನ್ನು ಎಳೆದುಕೊಂಡು ಆಚೆಗೆ ಕರೆದುಕೊಂಡು ಬಂದರು.

ಆದರೆ ಸುಂದರ್ ರೆಡ್ಡಿ ಪಕ್ಕದಲ್ಲೇ ಕೂತಿದ್ದ ಬೇರೆ ಜನಗಳಿಗೆ ಮಾತ್ರ ತುಂಬಾ ಚೆನ್ನಾಗಿ ಊಟವನ್ನು ಬಡಿಸಲಾಗುತ್ತಿತ್ತು. ಸುಂದರ್ ರೆಡ್ಡಿಗೆ ತನಗೆ ಏಕೆ ಈ ವ್ಯಕ್ತಿ ಈ ರೀತಿ ಅವಮಾನ ಮಾಡಿ ಮಂಟಪದಿಂದ ಹೊರಗೆ ಹೋಡಿಸಿದ ಎಂದು ಲೇಟಾಗಿ ಅರ್ಥವಾಯಿತು.. ಮದುವೆಗೆ ಹೋದಾಗ ಸುಂದರ್ ರೆಡ್ಡಿ ಹಳೆಯ ಬಟ್ಟೆಯನ್ನು ಹಾಕಿಕೊಂಡು ಹೋಗಿದ್ದರು. ಇದೇ ಹಳೆಯ ಬಟ್ಟೆ ಆ ಅಪರಿಚಿತ ವ್ಯಕ್ತಿ ಸುಂದರ್ ರೆಡ್ಡಿಯನ್ನು ಊಟದ ಬಂತಿಯಿಂದ ಎದ್ದು ಹೊರಗಡೆ ಹೋಗುವಂತೆ ಮಾಡಿಸಿತ್ತು. ಇದನ್ನು ಅರ್ಥ ಮಾಡಿಕೊಂಡ ಸುಂದರ್ ರೆಡ್ಡಿ ಮದುವೆ ಮಂಟಪದಿಂದ ವಾಪಸ್ ತನ್ನ ಮನೆಗೆ ಹೋಗಿ ಒಂದು ಹೊಸ ಬಟ್ಟೆ ಮತ್ತು ಒಡವೆಗಳನ್ನು ಹಾಕಿಕೊಂಡು ಪುನಃ ಕಲ್ಯಾಣ ಮಂಟಪಕ್ಕೆ ಬಂದು ತಾನು ಈ ಹಿಂದೆ ಕೂತಿದ್ದ ಅದೇ ಬಂತಿಯಲ್ಲಿ ಸುಂದರ್ ರೆಡ್ಡಿ ಊಟಕ್ಕೆ ಕೂತರು.‌.

ಈ ಬಾರಿ ಸುಂದರ್ ರೆಡ್ಡಿಯನ್ನು ಮೇಲೆ ಎದ್ದೇಳುವಂತೆ ಯಾರು ಕೂಡ ಹೇಳಲಿಲ್ಲ. ಮದುವೆಯಲ್ಲಿ ಮಾಡಿಸಿದ ಹಲವು ತರಹದ ತಿಂಡಿ ತಿನಿಸುಗಳನ್ನು ಸುಂದರ್ ರೆಡ್ಡಿ ಮುಂದೆ ಇದ್ದ ಬಾಳೆ ಎಲೆಯಲ್ಲಿ ಬಟ್ಟರು ತಂದು ಬಡಿಸಿದರು.. ಎಷ್ಟು ಹೊತ್ತು ಕಳೆದರು ಸುಂದರ್ ರೆಡ್ಡಿ ಎಲೆಯ ಮೇಲಿದ್ದ ಯಾವ ತಿಂಡಿಯೂ ಸಹ ತಿನ್ನಲಿಲ್ಲ. ಇದನ್ನು ಗಮನಿಸಿದ ಅವಮಾನ ಮಾಡಿದ ವ್ಯಕ್ತಿ ಸುಂದರ್ ರೆಡ್ಡಿಯ ಹತ್ತಿರ ಬಂದು ಯಾಕೆ ಸರ್ ಊಟ ಮಾಡುತ್ತಿಲ್ಲ ದಯವಿಟ್ಟು ಊಟ ಮಾಡಿ ಎಂದು ಹೇಳುತ್ತಾನೆ.. ಹಳೆಯ ಬಟ್ಟೆ ಹಾಕಿಕೊಂಡು ಬಂದಾಗ ತನ್ನನ್ನು ಊಟ ಮಾಡಬೇಡ ಎದ್ದು ಹೋಗು ಎಂದು ರೇಗಾಡಿದ್ದ ಅದೇ ವ್ಯಕ್ತಿ ಪುನಃ ಹೊಸ ಬಟ್ಟೆ ಮತ್ತು ಒಡವೆಗಳನ್ನು ಹಾಕಿಕೊಂಡು ಬಂದಾಗ ಇಷ್ಟು ಚೆನ್ನಾಗಿ ಸತ್ಕರಿಸುತ್ತಿರುವುದನ್ನು ನೋಡಿದ ಸುಂದರ್ ರೆಡ್ಡಿ..

ನಗುತ್ತಾ ಬಂತಿಯಿಂದ ಮೇಲೆ ಎದ್ದು ಆ ವ್ಯಕ್ತಿ ಮುಖಕ್ಕೆ ಹೊಡೆಯುವ ಹಾಗೆ ಈ ರೀತಿ ಹೇಳುತ್ತಾರೆ ಸುಂದರ್ ರೆಡ್ಡಿ. ಒಬ್ಬ ಮನುಷ್ಯನಿಗೆ ತುಂಬಾ ಅವಶ್ಯಕತೆ ಇರುವುದು ಅನ್ನ.. ಆದರೆ ನೀವು ಒಬ್ಬ ವ್ಯಕ್ತಿ ಹಾಕಿರುವ ಬಟ್ಟೆ ಹಾಗು ಅವನ ಸಿರಿತನ ನೋಡಿ ಅವನಿಗೆ ಊಟ ಹಾಕಬೇಕೋ ಅಥವಾ ಬೇಡವೋ ಎಂದು ತಿರ್ಮಾನ ಮಾಡುತ್ತೀರಾ.. ನಾನು ಹಳೆ ಬಟ್ಟೆ ಹಾಕಿಕೊಂಡು ಊಟಕ್ಕೆ ಕೂತಿದ್ದಾಗ ನನ್ನನ್ನು ಬಂತಿಯಿಂದ ಎದ್ದೇಳಿಸಿ ಹೊರಗಡೆ ಕಳುಹಿಸಿದ್ದಿರಾ.. ಆದರೆ ನಾನು ಹೊಸ ಬಟ್ಟೆ ಹಾಗು ಒಡವೆ ಹಾಕಿಕೊಂಡು ಬಂದಾಗ ಈ ರೀತಿ ರಾಜ ಮರ್ಯಾದೆಯಿಂದ ಸತ್ಕರಿಸುತ್ತಿದ್ದೀರಾ. ಇದು ತಪ್ಪು ಈ ರೀತಿ ಮುಂದೆ ಯಾರಿಗೂ ಸಹ ಮಾಡಬೇಡಿ.. ಹೊಟ್ಟೆ ಹಸಿವಿನಿಂದ ಊಟಕ್ಕೆ ಕೂತವರನ್ನು ಎದ್ದು ಕಳಹಿಸಿದರೆ. ನಿನಗೂ ಸಹ ಮುಂದೆ ಒಂದು ಹೊತ್ತಿನ ಊಟಕ್ಕೆ ಕಷ್ಟ ಪಡಬೇಕಾಗುತ್ತದೆ ಎಂದು ಹೇಳಿ ಸುಂದರ್ ರೆಡ್ಡಿ ಹೊರಟು ಹೋಗುತ್ತಾರೆ..