Advertisements

ಮನೆಯನ್ನ ಎಷ್ಟು ಸ್ವಚ್ಛವಾಗಿ ಇಟ್ಟುಕೊಳ್ತಿರೋ ಅಷ್ಟು ಸ್ವಚ್ಚವಾಗಿ ಈ ಊರನ್ನ ಇಟ್ಟುಕೊಂಡಿದ್ದಾರೆ ಇಲ್ಲಿನ ಜನ.. ಈ ಊರು ಇರೋದು ನಮ್ಮಲ್ಲೆ! ಎಲ್ಲಿ ಗೊತ್ತಾ?

Kannada Mahiti

ಏಷ್ಯಾದಲ್ಲಿಯೇ ಸ್ವಚ್ಛತೆಂಗೆ ಹೆಸರಾದ ಈ ಗ್ರಾಮ ಏಲ್ಲಿದೆ ಗೊತ್ತಾ? ಈ ಗ್ರಾಮದ ವೈಶಿಷ್ಟ್ಯತೆ ಹಾಗೂ ಗ್ರಾಮಸ್ಥರ ನಡೆ ಬಗ್ಗೆ ಸವಿವರವಾಗಿ ಹೇಳ್ತೀವಿ ನೋಡಿ.. ಸ್ವಚ್ಛ ಭಾರತ ಎನ್ನುವ ಸುಂದರ ಪರಿಕಲ್ಪನೆಯನ್ನು ಇಟ್ಟುಕೊಂಡವರು ಪ್ರಧಾನಿ ನರೇಂದ್ರ ಮೋದಿ. ತನ್ಮೂಲಕ ದೇಶವನ್ನು ಸ್ವಚ್ಛತೆಯತ್ತ ಕೊಂಡೊಯ್ಯಬೇಕು ಎಂಬ ಕನಸು ಕಂಡಿದ್ರು. ಇವರ ಕನಸಿಗೆ ಪೂರಕವೆಂಬಂತಹ ವಾತವರಣ ಈ ಗ್ರಾಮದಲ್ಲಿದೆ. ಅಷ್ಟಕ್ಕೂ ಈ ಗ್ರಾಮ ದೂರದ ಯಾವುದೋ ದೇಶದಲ್ಲಿಲ್ಲ, ನಮ್ಮದೇ ದೇಶದ ಮೇಘಾಲಯ ರಾಜ್ಯದಲ್ಲಿದೆ. ಮೇಘಾಲಯದ ಮಾವಲಿನ್‌ನಂಗ್ ಎನ್ನುವ ಗ್ರಾಮವೇ ಏಷ್ಯಾದಲ್ಲಿಯೇ ಅತೀ ಹೆಚ್ಚು ಸ್ವಚ್ಛವಾಗಿರುವ ಎಂಬ ಬಿರುದಿಗೆ ಪಾತ್ರವಾಗಿರೋದು. ಈಗಲೂ ಸಹ ಅದೇ ಬಿರುದನ್ನು ಕಾಪುಟ್ಟುಕೊಂಡಿರುವುದು. ಇಲ್ಲಿ 95 ಮನೆಗಳಿವೆ ಅಷ್ಟಕ್ಕೆ ಅಷ್ಟೂ ಜನರ ಮನೆಯಲ್ಲಿ ವಿದ್ಯಾವಂತರಿದ್ದಾರೆ.

[widget id=”custom_html-3″]

Advertisements

ಇನ್ನೊಂದು ಈ ಗ್ರಾಮದ ವಿಶೇಷತೆಯಂದ್ರೆ, ಈ ಮಾವಲಿನ್‌ನಂಗ್ ಗ್ರಾಮದಲ್ಲಿ ಬಿದಿರಿನ ತೊಟ್ಟಿಯನ್ನು ಕಸದ ಬುಟ್ಟಿಯಾಗಿ ಉಪಯೋಗಿಸಲಾಗುತ್ತೆ. ಪ್ರತಿಯೊಂದು ಮರದ ಕೆಳಗೆ ಸಹ ಈ ಬಿದಿರಿನ ತೊಟ್ಟಿಯನ್ನು ಇಟ್ಟಿದ್ದಾರೆ. ಇದರಿಂದ ಎಲೆಗಳು ನೇರವಾಗಿ ತೊಟ್ಟಿಗೆ ಉದುರುತ್ತುವೆ. ಹೀಗೆ ಉದುರುವ ಎಲೆಗಳನ್ನು ಗೊಬ್ಬರವಾಗಿ ಉಪಯೋಗಿಸಿಕೊಳ್ಳುತ್ತಾರೆ. ಜೊತೆಗೆ ಜನರು ಸಹ ತಮ್ಮ ತಮ್ಮ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳೋದರ ಜೊತೆಗೆ ರಸ್ತೆಯನ್ನು ಸಹ ಸ್ವಚ್ಛವಾಗಿಟ್ಟುಕೊಳ್ಳುತ್ತಾರೆ. ರಸ್ತೆಯನ್ನು ಗುಡಿಸುತ್ತಾರೆ. ಹಾಗೆಯೇ ಗಿಡ ನೆಡುವುದು, ಪ್ರಕೃತಿಯನ್ನು ಪೋಷಿಸುವುದು ಇಲ್ಲಿಯ ಜನರ ಜೀವನಶೈಲಿಯಾಗಿಬಿಟ್ಟಿದೆ.
ಮಾವಲಿನ್‌ನಂಗ್ ಗ್ರಾಮದ ಪ್ರಮುಖ ಬೆಳೆ ಎಂದರೆ ಅದು ಕೃಷಿ. ಇಲ್ಲಿ ಜನ ಹೆಚ್ಚಾಗಿ ಕೃಷಿಯನ್ನು ಅವಲಂಬಿಸಿದ್ದಾರೆ. ಅದರಲ್ಲೂ ಪ್ರಮುಖವಾಗಿ ಅಡಿಕೆಯನ್ನು ಬೆಳೆಯುತ್ತಾರೆ.

[widget id=”custom_html-3″]

ಇನ್ನು ಮಾನ್ಸೂನ್ ಕಾಲದಲ್ಲಿಯಂತು ಈ ಪ್ರದೇಶಕ್ಕೆ ಭೇಟಿ ಕೊಟ್ಟರೇ ಮತ್ತೆ ವಾಪಸ್ ಬರುವ ಮನಸ್ಸೇ ಆಗಲ್ಲ ಎಂಬ ರೀತಿ ಇಲ್ಲಿಯ ವಾತವರಣವಿರುತ್ತೆ . ಇನ್ನು ಈ ಒಂದು ಮಾವಲಿನ್‌ನಂಗ್‌ಗ್ರಾಮದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಸಹ ಮೆಚ್ಚುಗೆ ವ್ತಕ್ತಪಡಿಸಿದ್ದು ಗ್ರಾಮಸ್ಥರನ್ನು ಕೊಂಡಾಡಿದ್ದಾರೆ. ಪ್ರಧಾನಮಂತ್ರಿ ಸ್ವಚ್ಛಾ ಭಾರತ ಕಲ್ಪನೆಗೆ ಈ ಯೋಜನೆ ಒತ್ತು ಉತ್ತಮ ಉದಾಹರಣೆ ಎಂಬ ಅನೇಕ ಶ್ಲಾಘನೆಗಳು ಮಾವಲಿನ್‌ನಂಗ್ ಗ್ರಾಮಕ್ಕಿದೆ. ಇನ್ನು ಮೋದಿಯವರು ಮನ್‌ಕಿಭಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಮೇಲಂತು ಮೊದಲಿಗಿಂತ ಒಂದು ಪಟ್ಟು ಹೆಚ್ಚೆ ಸುದ್ದಿಯಲ್ಲಿ ಈ ಗ್ರಾಮವಿದೆ. ಆದರೂ ತಾವೂ ಸ್ವಚ್ಛವಾಗಿದ್ದು, ತಮ್ಮ ಗ್ರಾಮ, ನೆಲ, ಜಲವನ್ನು ಸ್ವಚ್ಛವಾಗಿಟ್ಟುಕೊಂಡಿರುವ ಈ ಗ್ರಾಮದ ಜನರಿಗೆ ಒಂದು ಮೆಚ್ಚುಗೆಯನ್ನಂತು ವ್ಯಕ್ತಪಡಿಸ್ಲೇಬೇಕು..