Advertisements

ಶಾಕಿಂಗ್ – ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್ ಸೀಸನ್ 4ರ ವಿನ್ನರ್ ಅಪಘಾತದಲ್ಲಿ ನಿಧನ

News

ಕನ್ನಡದ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಖ್ಯಾತ ರಿಯಾಲಿಟಿ ಶೋ ‘ಪ್ಯಾಟೆ  ಹುಡ್ಗೀರ್ ಹಳ್ಳಿ ಲೈಫ್’ ತುಂಬಾ ಫೇಮಸ್ ಆಗಿದ್ದ ಕಾರ್ಯಕ್ರಮ. ಅಕುಲ್ ಬಾಲಾಜಿ ನೇತೃತ್ವದಲ್ಲಿ ನಡೆಯುತ್ತಿದ್ದ ಈ ರಿಯಾಲಿಟಿ ಶೋನ ಸೀಸನ್ 4ರಲ್ಲಿ ಮೆಬಿನಾ ಮೈಕಲ್ ವಿನ್ನರ್ ಆಗಿದ್ದರು.

ಆದರೆ ಈಗ ಕಾರು ಅಪಘಾತದಲ್ಲಿ ನಿಧನರಾಗಿದ್ದಾರೆ ಎಂಬ ಸುದ್ದಿ ಬಂದಿದೆ. ಹೌದು, ನೆನ್ನೆ ಸಂಜೆ 4.30ರ ಸಮಯದಲ್ಲಿ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಿಹಳ್ಳಿ ರಾಷ್ಟ್ರೀಯ ಹೆದ್ದಾರಿ ಬಳಿ ಅಪಘಾತ ಸಂಭವಿಸಿದೆ. ಮೆಬಿನಾ ಮೈಕಲ್ ಕಾರಿನಲ್ಲಿ ಬೆಂಗಳೂರಿನಿಂದ, ಕೊಡಗಿನ ಸೋಮವಾರ ಪೇಟೆಗೆ ತೆರಳುತ್ತಿದ್ದು, ಹಾಸನ ಕಡೆಯಿಂದ ಯುಟರ್ನ್ ಆಗುತ್ತಿದ್ದ ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದ ಪರಿಣಾಮ, ಕಾರಿನಲ್ಲಿದ್ದ ಮೆಬಿನಾ ಮೈಕಲ್ನಿಧನರಾಗಿದ್ದಾರೆ.

ಇನ್ನು ಕಾರಿನಲ್ಲಿದ್ದವರು ರಿಯಾಲಿಟಿ ಶೋ ಕಾರ್ಯಕ್ರಮದ ತಂಡದವರು ಎಂದು ಹೇಳಲಾಗಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಮತ್ತೊಬ್ಬರು ಅಲ್ಲೇ ಸಾವಿಗೀಡಾಗಿದ್ದಾರೆ. ಆದಿಚುಂಚನಗಿರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಕಳುಹಿಸಿದ್ದು, ದಾರಿ ಮಧ್ಯೆ ಮೆಬಿನಾ ಮೈಕಲ್ ತೀರಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಇನ್ನು ಪ್ಯಾಟೆ  ಹುಡ್ಗೀರ್ ಹಳ್ಳಿ ಲೈಫ್ ಸೀಸನ್ ೪ರಲ್ಲಿ ಸ್ಫರ್ಧಿಯಾಗಿದ್ದ ಮೆಬಿನಾ ಮೈಕಲ್ ಅತೀ ಹೆಚ್ಚು ಬರಿ ಮಹಾರಾಣಿಯಾಗಿ ಆಯ್ಕೆಯಾಗಿದ್ದವರು. ಇನ್ನು ಈ ಶೋನ ವಿನ್ನರ್ ಆಗಿದ್ದ ಮೆಬಿನಾ ವಿನ್ನರ್ ಆಗಿ ೭ಬಿ ಲಕ್ಷ ಬಹುಮಾನ ಪಡೆದುಕೊಂಡಿದ್ದರು.