Advertisements

ಮೀನ ರಾಶಿಯಲ್ಲಿ ಜನಿಸಿದವರ ಗುಣ ಸ್ವಭಾವ ಹೇಗಿರುತ್ತೆ ? ಗುರು ಅನುಗ್ರಹ ಹೇಗಿದೆ ?ಭವಿಷ್ಯದಲ್ಲಿ ಏನೆಲ್ಲಾ ನಡೆಯಬಹುದು ನೋಡಿ..

Astrology

ನಮಸ್ಕಾರ ಸ್ನೇಹಿತರೇ, ಸನಾತನವಾದ ಹಿಂದೂ ಧರ್ಮದಲ್ಲಿ ಜ್ಯೋತಿಷ್ಯ ಶಾಸ್ತ್ರಕ್ಕೆ ಬಹಳ ಪ್ರಾಮುಖ್ಯತೆ ಇದೆ. ಒಬ್ಬ ವ್ಯಕ್ತಿ ಜನಿಸಿದ ವೇಳೆ ಆತ ಜನಿಸಿದ ಘಳಿಗೆ, ಹುಟ್ಟಿದ ದಿನದ ಆಧಾರದ ಮೇಲೆ ಜ್ಯೋತಿಷ್ಯ ಶಾಸ್ತ್ರದ ನಿಯಮಗಳ ಅನುಸಾರ ನಾಮಕರಣ ಮಾಡಲಾಗುತ್ತದೆ. ಇನ್ನು ವ್ಯಕ್ತಿಯ ನಕ್ಷತ್ರ, ರಾಶಿಗಳಿಗೆ ಅನುಗುಣವಾಗಿ ಹೆಸರನ್ನ ಇಡಲಾಗುತ್ತದೆ. ಇನ್ನು ಜನ್ಮ ರಾಶಿಯು ಯಾವುದೇ ವ್ಯಕ್ತಿಯ ಜೀವನದಲ್ಲಿ ಮುಂದೆ ನಡೆಯಬಹುದಾದ ಘಟನೆಗಳು ಸೇರಿದಂತೆ, ಆತನ ಗುಣ ಸ್ವಭಾವಗಳು ಹಾಗೂ ಸ್ವಭಾವವನ್ನ ನಿರ್ಧಾರ ಮಾಡುತ್ತದೆ. ಹಾಗಾದ್ರೆ ದ್ವಾದಶ ರಾಶಿಗಳಲ್ಲಿ ಕೊನೆಯ ರಾಶಿಯಾದ ಮೀನರಾಶಿಯಲ್ಲಿ ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತೆ ನೋಡೋಣ ಬನ್ನಿ..

Advertisements

ಮೀನಾ ರಾಶಿಯನ್ನ ಮೋಕ್ಷ ಪ್ರಧಾನವಾದ ರಾಶಿಯೆಂದು ಹೇಳಲಾಗಿದೆ. ಜಲತತ್ವವನ್ನ ಹೊಂದಿರುವ ರಾಶಿ ಇದಾಗಿದ್ದು ಕಾಲ ಪುರುಷನ ಕಾಲುಗಳನ್ನ ಪ್ರತಿನಿಧಿಸುತ್ತದೆ. ಇನ್ನು ಮೀನುಗಳು ವಿರುದ್ಧ ದಿಕ್ಕಿನಲ್ಲಿರುವುದೇ ಈ ರಾಶಿಯ ಸಂಕೇತವಾಗಿದೆ. ಮೀನರಾಶಿಯಲ್ಲಿ ಹುಟ್ಟಿದವರ ಕಣ್ಣುಗಳು ಮೀನಿನ ಆಕಾರದಲ್ಲಿರುತ್ತವೆ. ಇವರು ನೋಡಲು ಸುಂದರವಾಗಿದ್ದು ನೋಡಲು ಎತ್ತರ ಕೂಡ ಇರುತ್ತಾರೆ. ಮಿನ ರಾಶಿಯ ಅಧಿಪತಿ ಗುರು ಆಗಿರುವುದರಿಂದ ಈ ರಾಶಿಯಲ್ಲಿ ಜನಿಸಿದವರು ತಮ್ಮ ತಂದೆ ತಾಯಿಯಲ್ಲಿ, ಹಿರಿಯರಲ್ಲಿ ಹಾಗೂ ಗುರುಗಳಲ್ಲಿ ಪ್ರೀತಿ, ಭಕ್ತಿಯ ಜೊತೆಗೆ ಅಪಾರ ನಂಬಿಕೆ ಉಳ್ಳವರಾಗಿರುತ್ತಾರೆ.

ಇನ್ನು ಇವರು ಯಾರ ಜೊತೆಗೂ ಅಷ್ಟಾಗಿ ಸೇರುವುದಿಲ್ಲ, ಹಾಗೂ ಅವರನ್ನ ದೂರ ಕೂಡಮಾಡುವುದಿಲ್ಲ. ಕೆಲ ವ್ಯಕ್ತಿಗಳ ಜೊತೆ ಮಾತ್ರ ಹೆಚ್ಚಾಗಿ ಬೆರೆಯುತ್ತಾರೆ. ಆಧ್ಯಾತ್ಮದ ಕಡೆ ಹೆಚ್ಚು ಒಲವು ಹೊಂದಿರುವ ಇವರು ಜೀವನದಲ್ಲಿ ಚೆನ್ನಾಗಿದ್ದರೂ ಕೂಡ ವೈರಾಗ್ಯದ ಕಡೆ ಅವರನ್ನ ಕೈಬೀಸಿ ಕರೆಯುತ್ತದೆ. ಮೋಕ್ಷವನ್ನ ಬಯಸುವ ಈ ರಾಶಿಯವರು ಕೆಲವೊಂದು ಸಲ ಜೀವನ ಸಾಕೆನಿಸಿ ಮುಕ್ತಿ ಸಿಕ್ಕರೆ ಸಾಕೆಂದು ಅವರಿಗನಿಸುತ್ತದೆ. ಈ ರಾಶಿಯಲ್ಲಿ ಜನಿಸಿದ ಅನೇಕರು ಭಗ್ನ ಪ್ರೇಮಿಗಳಾಗಿರುತ್ತಾರೆ. ತಾಯಿ ಪ್ರೀತಿಯಿಂದ ವಂಚಿತರಾಗುತ್ತಾರೆ.

ಇನ್ನು ಈ ರಾಶಿಯಲ್ಲಿ ಜನಿಸಿದವರು ಮನೋವೈದ್ಯರು, ರಾಜಕಾರಣಿಗಳು, ಸಾಹಿತಿಗಳು, ಸಂಗೀತ ಪ್ರಿಯರು ಜೊತೆಗೆ ಧಾರ್ಮಿಕ ಮನೋಭಾವದವರು ಆಗಿರುತ್ತಾರೆ. ಇನ್ನು ಈ ರಾಶಿಯವರಿಗೆ ಯಶಸ್ಸು ಅಷ್ಟು ಸುಲಭವಾಗಿ ದೊರಕುವುದಿಲ್ಲ. ಗುರುಬಲ ಹೆಚ್ಚಾಗಿರುವ ಇವರು ತಮ್ಮ ಸ್ವಂತ ಪ್ರಯತ್ನದಿಂದಲೇ ಉನ್ನತ ಸ್ಥಾನಕ್ಕೆ ಇರುತ್ತಾರೆ. ಜೀವನದಲ್ಲಿ ಸುಖವಾಗಿ ಬೆಳೆದರೂ ಕೂಡ ಇವರು ಮಾನಸಿಕವಾಗಿ ನೋವು ಅನುಭವಿಸುತ್ತಾರೆ. ಜೀವನದಲ್ಲಿ ಏನನ್ನಾದರೂ ಸಾಧಿಸಲೇಬೇಕು ಎನ್ನುವ ಛಲ ಹೊಂದಿರುವ ಇವರು ಹಿಡಿದ ಯಾವುದೇ ಕೆಲಸವನ್ನ ಸಂಪೂರ್ಣವಾಗಿ ಮಾಡದೆ ಬಿಡುವುದಿಲ್ಲ. ‘ಪರೋಪಕಾರಾರ್ಥಮ್ ಇದಂ ಶರೀರಂ’ ಎಂಬಂತೆ ಪರೋಪಕಾರಿ ಮನೋಭಾವವನ್ನ ಹೊಂದಿರುವ ಇವರು ತಮ್ಮನ್ನ ನಂಬಿದವರನ್ನ ಎಂದಿಗೂ ಕೈ ಬಿಡುವುದಿಲ್ಲ.